ಒಡಿಶಾದ ಬಾಲಸೋರ್ಕ ರಾವಳಿಯಲ್ಲಿ ಮಧ್ಯಮ ವ್ಯಾಪ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ. ಇದು ಭೂಮಿಯಿಂದಲೇ ಆಗಸದ ಗುರಿಯನ್ನು ಹೊಡೆದುರುಳಿಸಬಲ್ಲ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ ಎಂದು ವರದಿಯಾಗಿದೆ.
“ಒಡಿಶಾದ ಬಾಲಸೋರ್‌ನ ಐಟಿಆರ್‌ನಲ್ಲಿ MRSAM ಆರ್ಮಿ ಕ್ಷಿಪಣಿ ವ್ಯವಸ್ಥೆಯ ಹಾರಾಟವನ್ನು ಸುಮಾರು 10.30 ಕ್ಕೆ ಪರೀಕ್ಷಿಸಲಾಯಿತು. ಇದು ದೀರ್ಘ ವ್ಯಾಪ್ತಿಯಲ್ಲಿ ಭಾರಿ ವೇಗದ ವೈಮಾನಿಕ ಗುರಿಯನ್ನು ತಡೆಯಿತು. ಗುರಿಯನ್ನು ಕ್ಷಿಪಣಿಯು ನೇರ ಹೊಡೆತದಿಂದ ನಾಶಪಡಿಸಿತು” ಎಂದು ಡಿಆರ್‌ಡಿಒ ತಿಳಿಸಿದೆ.
ಇದನ್ನೂ ಓದಿ: ಪರಮಾಣು ಸಾಮರ್ಥ್ಯದ ‘ಅಗ್ನಿ ಪ್ರೈಮ್’ ಕ್ಷಿಪಣಿಯ ಯಶಸ್ವಿ ಪ್ರಯೋಗ
ಈ ವ್ಯವಸ್ಥೆಯು ಭಾರತೀಯ ಸೇನೆಯ ಭಾಗವಾಗಿದ್ದು, ಪರೀಕ್ಷೆಯಲ್ಲಿ, ಕ್ಷಿಪಣಿಯು ಬಹಳ ದೂರದಲ್ಲಿರುವ ಗುರಿಯನ್ನು ನೇರವಾಗಿ ಹೊಡೆದಿದೆ ಎಂದು DRDO ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 20 ರಂದು, ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಒಡಿಶಾದ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ಹಲವಾರು ಹೊಸ ಸ್ವದೇಶೀಯ ವ್ಯವಸ್ಥೆಗಳನ್ನು ಮೌಲ್ಯೀಕರಿಸುವ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.
“ಹೆಚ್ಚಿನ ಸ್ವದೇಶಿ ವಸ್ತುಗಳೊಂದಿಗೆ ಮತ್ತು ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಜನವರಿ 20 ರಂದು ಒಡಿಶಾದ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಬೆಳಿಗ್ಗೆ 10.30 ಕ್ಕೆ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಡಿಆರ್‌ಡಿಒ ತಂಡಗಳೊಂದಿಗೆ ನಿಕಟ ಸಮನ್ವಯದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಉಡಾವಣೆ ನಡೆಸಿತು. ಈ ಹಾರಾಟದಲ್ಲಿ, ಕ್ಷಿಪಣಿಯು ಎಲ್ಲಾ ಮಿಷನ್ ಉದ್ದೇಶಗಳನ್ನು ಪೂರೈಸುವ ಮುನ್ಸೂಚನೆಯ ಪಥವನ್ನು ಅನುಸರಿಸಿತು” ಎಂದು ಡಿಆರ್‌ಡಿಒ ಹೇಳಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಭಾರತ-ಚೀನಾ ಸಂಘರ್ಷದ ನಂತರ ಚೀನಾದ ಬೆದರಿಕೆ ಎದುರಿಸಲು ಜಪಾನ್ ಕ್ಷಿಪಣಿಗಳನ್ನು ನಿಯೋಜಿಸಿದೆಯೇ?


