Homeಮುಖಪುಟಪರಮಾಣು ಸಾಮರ್ಥ್ಯದ ‘ಅಗ್ನಿ ಪ್ರೈಮ್‌’ ಕ್ಷಿಪಣಿಯ ಯಶಸ್ವಿ ಪ್ರಯೋಗ

ಪರಮಾಣು ಸಾಮರ್ಥ್ಯದ ‘ಅಗ್ನಿ ಪ್ರೈಮ್‌’ ಕ್ಷಿಪಣಿಯ ಯಶಸ್ವಿ ಪ್ರಯೋಗ

- Advertisement -
- Advertisement -

ಅಗ್ನಿ ಕ್ಷಿಪಣಿ ಸರಣಿಯ ಅತ್ಯಂತ ಮಹತ್ವಾಕಾಂಕ್ಷೆಯ ಹೊಚ್ಚ ಹೊಸ ಕ್ಷಿಪಣಿ ‘ಅಗ್ನಿ ಪ್ರೈಮ್‌’ ಅನ್ನು ಭಾರತವು ಒಡಿಶಾ ಕರಾವಳಿಯ ರಕ್ಷಣಾ ಕೇಂದ್ರದಿಂದ ಯಶಸ್ವಿಯಾಗಿ ಪ್ರಯೋಗಿಸಿದೆ. ಪರಮಾಣು ಸಾಮರ್ಥ್ಯದ ಹೊಸ ಮಾದರಿಯ ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಅಬ್ದುಲ್ ಕಲಾಂ ದ್ವೀಪದ ಉಡಾವಣಾ ಸಂಕೀರ್ಣ IV ರಿಂದ ಸೋಮವಾರ ಬೆಳಿಗ್ಗೆ 10.55 ಗಂಟೆಗೆ ನಡೆಸಲಾಯಿತು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯು, ಕಾರ್ಯಾಚರಣೆಯ ಎಲ್ಲಾ ಉದ್ದೇಶಗಳನ್ನು ಪೂರೈಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

“ಪೂರ್ವ ಕರಾವಳಿಯುದ್ದಕ್ಕೂ ಇರುವ ವಿವಿಧ ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ಮೇಲ್ವಿಚಾರಣೆ ಮಾಡಿವೆ. ಕ್ಷಿಪಣಿ ಪಠ್ಯಪುಸ್ತಕದ ಪಥವನ್ನು ಅನುಸರಿಸಿದ್ದು, ಕಾರ್ಯಚರಣೆಯ ಎಲ್ಲಾ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ” ಎಂದು ಡಿಆರ್‌ಡಿಒ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರ್‌ಎಸ್‌ಎಸ್‌ ಮುಖಂಡ, ಬಂಧನ

‘ಅಗ್ನಿ ಪ್ರೈಮ್‌‌ ’ ಕ್ಷಿಪಣಿಯು ಅಗ್ನಿ ಕ್ಷಿಪಣಿ ಸರಣಿಯ ಇತ್ತೀಚಿನ ಮತ್ತು ಅತ್ಯಾಧುನಿಕ ರೂಪಾಂತರವಾಗಿದೆ. ಇದು 1000 ಕಿ.ಮೀ ಮತ್ತು 2000 ಕಿ.ಮೀ ನಡುವಿನ ವ್ಯಾಪ್ತಿಯ ಸಾಮರ್ಥ್ಯವನ್ನು ಹೊಂದಿರುವ ಕ್ಷಿಪಣಿಯಾಗಿದೆ ಎಂದು ಹೇಳಲಾಗಿದೆ.

ಹೊಸ ಅಗ್ನಿ ಕ್ಷಿಪಣಿಯನ್ನು 4000 ಕಿ.ಮೀ ವ್ಯಾಪ್ತಿಯ ಅಗ್ನಿ- IV ಮತ್ತು 5000 ಕಿ.ಮೀ ಅಗ್ನಿ-ವಿ ಕ್ಷಿಪಣಿಗಳಲ್ಲಿ ಬಳಸುವ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಡಿಆರ್‌ಡಿಒ ನಡೆಸಿದ ಕ್ಷಿಪಣಿಯ ಮೊದಲ ಪರೀಕ್ಷೆ ಇದಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆರು ವಾರಗಳ ಅವಧಿಯಲ್ಲಿ 12 ಕ್ಷಿಪಣಿಗಳನ್ನು ಉಡಾಯಿಸಲಾಗಿತ್ತು.

ಅಗ್ನಿ ಸರಣಿಯ ಮೊದಲ ಕ್ಷಿಪಣಿಯನ್ನು ಮೇ 1989 ರಲ್ಲಿ ಪರೀಕ್ಷಿಸಲಾಯಿತು. 700 ಕಿ.ಮೀ ನಿಂದ 900 ಕಿ.ಮೀ.ವರೆಗಿನ ಸ್ಟ್ರೈಕ್ ಶ್ರೇಣಿಯನ್ನು ಹೊಂದಿದ್ದ ಇದನ್ನು 2004 ರಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇರಿಸಲಾಯಿತು. ಭಾರತವು ಈಗಾಗಲೇ ತನ್ನ ಅಗ್ನಿ ಕ್ಷಿಪಣಿಗಳ ಸರಣಿಗಳಲ್ಲಿ ಒಟ್ಟು ಐದು ಅಗ್ನಿ ವರ್ಗದ ಕ್ಷಿಪಣಿಗಳನ್ನು ಹೊಂದಿದೆ.

ಇದನ್ನೂ ಓದಿ: ಬಿಜೆಪಿ ವಿರುದ್ಧದ ಮೈತ್ರಿಕೂಟ ರಚನೆಯಲ್ಲಿ ಕಾಂಗ್ರೆಸ್ ಪಾತ್ರ ಮಹತ್ವವಾದುದು: ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read