Homeಮುಖಪುಟಖ್ಯಾತ ಪತ್ರಕರ್ತ ಪಿ. ಸಾಯಿನಾಥ್‌ ಅವರಿಗೆ ಪ್ರತಿಷ್ಠಿತ ‘ಫುಕುವೋಕಾ ಗ್ರ್ಯಾಂಡ್ ಪ್ರಶಸ್ತಿ-2021’ ಘೋಷಣೆ

ಖ್ಯಾತ ಪತ್ರಕರ್ತ ಪಿ. ಸಾಯಿನಾಥ್‌ ಅವರಿಗೆ ಪ್ರತಿಷ್ಠಿತ ‘ಫುಕುವೋಕಾ ಗ್ರ್ಯಾಂಡ್ ಪ್ರಶಸ್ತಿ-2021’ ಘೋಷಣೆ

- Advertisement -
- Advertisement -

ಖ್ಯಾತ ಪತ್ರಕರ್ತ ಪಿ. ಸಾಯಿನಾಥ್‌ ಅವರಿಗೆ ಪ್ರತಿಷ್ಠಿತ ‘ಫುಕುವೋಕಾ ಗ್ರ್ಯಾಂಡ್ ಪ್ರಶಸ್ತಿ-2021’ ಘೋಷಣೆಯಾಗಿದೆ. ‘ಫುಕುವೋಕಾ ಪ್ರಶಸ್ತಿ’ಯು ಜಪಾನಿನ ಫುಕುವೊಕಾ ನಗರ ಮತ್ತು ಫುಕುವೋಕಾ ಸಿಟಿ ಇಂಟರ್ನ್ಯಾಷನಲ್ ಫೌಂಡೇಶನ್ ಸ್ಥಾಪಿಸಿದ ಪ್ರಶಸ್ತಿಯಾಗಿದ್ದು, ಏಷ್ಯನ್ ಸಂಸ್ಕೃತಿಯನ್ನು ಸಂರಕ್ಷಿಸುತ್ತಿರುವ ವ್ಯಕ್ತಿಗಳ ಅಥವಾ ಸಂಸ್ಥೆಗಳ ಮಹೋನ್ನತ ಕಾರ್ಯಗಳನ್ನು ಗೌರವಿಸಿ ನೀಡಲಾಗುತ್ತದೆ.

ಪಿ. ಸಾಯಿನಾಥ್‌ ಅವರು ‘ಪರಿ’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಇದು ಭಾರತದ ಗ್ರಾಮೀಣ ಭಾಗದ ಜನರ ಬದುಕು, ಕೃಷಿ ಇತ್ಯಾದಿಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿದೆ. ‘ಬರ ಎಂದರೆ ಎಲ್ಲರಿಗೂ ಇಷ್ಟ’ ಎಂಬ ಪುಸ್ತಕವನ್ನು ಬರೆದಿರುವ ಅವರು ತಮ್ಮ ವೃತ್ತಿಜೀವನದುದ್ದಕ್ಕೂ, ರೈತರ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಈಗ ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಕೂಡಾ ಅವರು ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿ ರಾಜೀನಾಮೆ: ಸರ್ಕಾರ V/s ಟ್ವಿಟರ್ ಸಂಘರ್ಷ ಮುಂದುವರಿಕೆ

“ಪಿ. ಸಾಯಿನಾಥ್‌ ಅವರು ಉತ್ಸಾಹಿ ಪತ್ರಕರ್ತರಾಗಿದ್ದು, ಅವರು ಭಾರತದ ಬಡ ಕೃಷಿ ಗ್ರಾಮಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಗ್ರಾಮೀಣ ಜನರ ಮಾತುಗಳನ್ನು ಆಲಿಸಿ, ಜನರ ಜೀವನ ಶೈಲಿಯ ವಾಸ್ತವತೆಯನ್ನು ಸೆರೆಹಿಡಿದು ‘ಗ್ರಾಮೀಣ ವರದಿ’ಗಳನ್ನು ವರದಿ ಮಾಡುತ್ತಿದ್ದಾರೆ. ಏಷ್ಯಾವು ಪ್ರಕ್ಷುಬ್ಧ ಬದಲಾವಣೆಗಳ ಮೂಲಕ ಸಾಗುತ್ತಿದ್ದಾಗ ಸಾಯಿನಾಥ್‌‌ ಅವರು ಹೊಸ ‘ಜ್ಞಾನ’ವನ್ನು ಪಡೆಯುವುದಕ್ಕಾಗಿ ನಾಗರಿಕ ಸಹಕಾರವನ್ನು ಉತ್ತೇಜಿಸುತ್ತಿದ್ದಾರೆ. ಈ ಕಾರಣಕ್ಕಾಗಿ, ಅವರು ಫುಕುವೊಕಾ ಬಹುಮಾನದ ಗ್ರ್ಯಾಂಡ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ” ಪ್ರಶಸ್ತಿಯ ಪ್ರಕಟಣೆ ಹೇಳಿದೆ.

Image

1990 ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯು ‘ಗ್ರ್ಯಾಂಡ್ ಪ್ರಶಸ್ತಿ’, ‘ಶೈಕ್ಷಣಿಕ ಪ್ರಶಸ್ತಿ’, ಮತ್ತು ‘ಕಲೆ ಮತ್ತು ಸಂಸ್ಕೃತಿ ಪ್ರಶಸ್ತಿ’ ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಪಿ. ಸಾಯಿನಾಥ್ ಅವರಿಗೆ ಘೋಷಣೆಯಾಗಿರುವ ಗ್ರ್ಯಾಂಡ್ ಪ್ರಶಸ್ತಿಯು 5 ಮಿಲಿಯನ್ ಯೆನ್(33.53 ಲಕ್ಷ) ನಗದು ಬಹುಮಾನವನ್ನು ಹೊಂದಿದೆ. ಉಳಿದ ಎರಡು ವಿಭಾಗದ ಪ್ರಶಸ್ತಿಯು 3 ಮಿಲಿಯನ್ ಯೆನ್ ನಗದು ಬಹುಮಾನ ಹೊಂದಿದೆ.

2015 ರಲ್ಲಿ ಇತಿಹಾಸಗಾರ ರಾಮಚಂದ್ರ ಗುಹಾ ಅವರಿ ಶೈಕ್ಷಣಿಕ ವಿಭಾದಲ್ಲಿ ಪ್ರಶಸ್ತಿ ದಕ್ಕಿತ್ತು. ಪುಕುವೋಕಾ ಗ್ರ್ಯಾಂಡ್ ಪ್ರಶಸ್ತಿಯು 2016 ರಲ್ಲಿ ಸಂಗೀತ ನಿರ್ದೇಶಕ ಎ.ಆರ್‌. ರಹಮಾನ್ ಅವರಿಗೆ ಕೂಡಾ ದಕ್ಕಿತ್ತು. 2018 ರಲ್ಲಿ ‘ಕಲೆ ಮತ್ತು ಸಂಸ್ಕೃತಿ’ ವಿಭಾದಲ್ಲಿ ತೀಜನ್ ಬಾಯಿ ಅವರಿಗೆ ಪ್ರಶಸ್ತಿ ದಕ್ಕಿತ್ತು. ಅವರು ಚತ್ತೀಸ್‌ಘಡದ ‘ಪಾಂಡಾವಾಣಿ’ ಎಂಬ ಸಾಂಪ್ರದಾಯಿಕ ಕಲಾ ಪ್ರದರ್ಶನದ ಕಲಾವಿದರಾಗಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಕಾರ್ಯಕ್ರಮಗಳ ಮರುವಿನ್ಯಾಸ ಅಗತ್ಯ: ನೊಬೆಲ್‍ ವಿಜೇತ ಅಭಿಜಿತ್ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...