Homeಮುಖಪುಟಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿ ರಾಜೀನಾಮೆ: ಸರ್ಕಾರ V/s ಟ್ವಿಟರ್ ಸಂಘರ್ಷ ಮುಂದುವರಿಕೆ

ಟ್ವಿಟರ್ ಇಂಡಿಯಾದ ಕುಂದುಕೊರತೆ ಅಧಿಕಾರಿ ರಾಜೀನಾಮೆ: ಸರ್ಕಾರ V/s ಟ್ವಿಟರ್ ಸಂಘರ್ಷ ಮುಂದುವರಿಕೆ

- Advertisement -
- Advertisement -

ಟ್ವಿಟರ್ ಇಂಡಿಯಾದ ಹಂಗಾಮಿ ಕುಂದುಕೊರತೆ ಅಧಿಕಾರಿ ಧರ್ಮೇಂದ್ರ ಚತುರ್ ಕಂಪನಿ ತ್ಯಜಿಸಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಸರ್ಕಾರ ಮತ್ತೆ ಟ್ವಿಟರ್ ವಿರುದ್ಧ ಮುಗಿ ಬೀಳುವ ಸಾಧ್ಯತೆಗಳಿವೆ.

ಹೊಸ ಐಟಿ ನಿಯಮಗಳ ಪ್ರಕಾರ, ಭಾರತೀಯ ಬಳಕೆದಾರರಿಂದ ದೂರುಗಳನ್ನು ಪರಿಹರಿಸಲು ಮೈಕ್ರೊ-ಬ್ಲಾಗಿಂಗ್ ತಾಣಗಳು ಒಬ್ಬ ಕುಂದುಕೊರತೆ ಪರಿಶೀಲನಾ ಅಧಿಕಾರಿಯನ್ನು ಹೊಂದಿರಬೇಕು. ಈಗ  ಟ್ವಿಟರ್‌ನ ಈ ಅಧಿಕಾರಿ ಪದತ್ಯಾಗ ಮಾಡಿದ ಕಾರಣಕ್ಕೆ ಟ್ವಿಟರ್ ಇಂಡಿಯಾದಲ್ಲಿ ಆ ಸ್ಥಾನ ಖಾಲಿ ಉಳಿದಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ದಿ ಟೆಲೆಗ್ರಾಫ್‍ ಇಂಡಿಯಾ ವರದಿ ಮಾಡಿದೆ.

ಇತ್ತೀಚೆಗೆ ಟ್ವಿಟರ್ ಇಂಡಿಯಾದ ಹಂಗಾಮಿ ಕುಂದುಕೊರತೆ ಅಧಿಕಾರಿಯಾಗಿ ನೇಮಕಗೊಂಡಿದ್ದ ಧರ್ಮೇಂದ್ರ ಚತುರ್ ಅವರು ಈ ಹುದ್ದೆ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು-2021ರ ಪ್ರಕಾರ ಕಂಪನಿಯ ವೆಬ್‌ಸೈಟ್ ಇನ್ನು ಮುಂದೆ ಅವರ ಹೆಸರನ್ನು ತೋರಿಸುವಂತಿಲ್ಲ.

ಈ ಬೆಳವಣಿಗೆ ಬಗ್ಗೆ ಟ್ವಿಟರ್ ಪ್ರತಿಕ್ರಿಯಿಸಲು ನಿರಾಕರಿಸಿದೆ. ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಕುರಿತಂತೆ ಸರ್ಕಾರ ಮತ್ತು ಟ್ವಿಟರ್  ನಡುವೆ ಸಂಘರ್ಷ ನಡೆಯುತ್ತಿರುವ  ಸಮಯದಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಹೊಸ ಐಟಿ ನಿಯಮಗಳನ್ನು ಟ್ವಿಟರ್ ಉದ್ದೇಶಪೂರ್ವಕವಾಗಿ ಧಿಕ್ಕರಿಸುತ್ತಿದೆ ಮತ್ತು ದೇಶದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂದು ಸರ್ಕಾರ ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಮೇ 25ರಿಂದ ಜಾರಿಗೆ ಬಂದ ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಗಳು  ಬಳಕೆದಾರರಿಂದ ಅಥವಾ ಸಂತ್ರಸ್ತರಿಂದ ದೂರುಗಳನ್ನು ಪರಿಹರಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸ್ಥಾಪಿಸಬೇಕಿದೆ.

50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಮಹತ್ವದ ಸಾಮಾಜಿಕ ಮಾಧ್ಯಮ ಕಂಪನಿಗಳು ಬಳಕೆದಾರರ ಅಥವಾ ಸಂತ್ರಸ್ತರ ದೂರುಗಳನ್ನು ಪರಿಹರಿಸಲು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು ಮತ್ತು ಅಂತಹ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು.

ಹೊಸ ಐಟಿ ನಿಯಮ ಪ್ರಕಾರ, ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಕುಂದುಕೊರತೆ ಅಧಿಕಾರಿಯನ್ನು ನೇಮಿಸುವುದು ಕಡ್ಡಾಯವಾಗಿದ್ದು, ಇವರೆಲ್ಲರೂ ಭಾರತದಲ್ಲಿ ವಾಸವಿರಬೇಕು.

ಜೂನ್ 5ರಂದು ಸರ್ಕಾರ ನೀಡಿರುವ ಅಂತಿಮ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಟ್ವಿಟರ್, ಹೊಸ ಐಟಿ ನಿಯಮಗಳನ್ನು ಪಾಲಿಸಲು ಉದ್ದೇಶಿಸಿದೆ ಮತ್ತು ಮುಖ್ಯ ಅನುಸರಣೆ ಅಧಿಕಾರಿಯ ವಿವರಗಳನ್ನು ಹಂಚಿಕೊಳ್ಳಲಿದೆ ಎಂದು ಹೇಳಿದೆ. ಈ ಮಧ್ಯೆ, ಟ್ವಿಟರ್  ಧರ್ಮೇಂದ್ರ ಚತುರ್‌ರನ್ನು ಭಾರತದ ಹಂಗಾಮಿ ನಿವಾಸಿ (ರೆಸಿಡೆಂಟ್‍) ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿತ್ತು.

ಈಗ ಅವರ ಪದತ್ಯಾಗದ ನಂತರ ಕಾನೂನು ಸಮಸ್ಯೆಗಳನ್ನು ಟ್ವಿಟರ್ ಎದುರಿಸಬೇಕಾಗಬಹುದು.

ಟ್ವಿಟರ್ ಈಗ ಭಾರತದ ಕುಂದುಕೊರತೆ ಅಧಿಕಾರಿಯ ವಿವರ ತೋರಿಸಬೇಕಾದ ಸ್ಪೇಸ್‍ನಲ್ಲಿ  ಅಮೆರಿಕಾ ವಿಳಾಸ ಮತ್ತು ಇಮೇಲ್ ಐಡಿಯೊಂದಿಗೆ ಕಂಪನಿ ಹೆಸರನ್ನು ಡಿಸ್‍ಪ್ಲೇ ಮಾಡುತ್ತಿದೆ.

ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಕಂಪನಿಯು ಒಂದು ಹಂತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಮತ್ತು ಅದರ ಬಳಕೆದಾರರು ವೇದಿಕೆಯಲ್ಲಿ ಪೋಸ್ಟ್ ಮಾಡಿದ ಎಲ್ಲಾ ವಿಷಯಗಳಿಗೆ ಕಾನೂನುಬದ್ಧವಾಗಿ ಕಂಪನಿಯೇ ಜವಾಬ್ದಾರಿ ಹೊರಬೇಕಾಗುತ್ತದೆ.


ಇದನ್ನೂ ಓದಿ; ಕಾನೂನು ಉಲ್ಲಂಘನೆ: ಸಚಿವ ರವಿಶಂಕರ್‌ ಪ್ರಸಾದ್ ಟ್ವಿಟರ್‌ ಅಕೌಂಟ್‌ಗೆ ಒಂದು ಗಂಟೆ ನಿರ್ಬಂಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...