Homeಮುಖಪುಟತಲೆ ಬೋಳಿಸಿಕೊಂಡು ಬಿಜೆಪಿ ತೊರೆಯಲು ಸಿದ್ದರಾದ ತ್ರಿಪುರ ಶಾಸಕ- ಟಿಎಂಸಿ ಸೇರುವ ಸಾಧ್ಯತೆ

ತಲೆ ಬೋಳಿಸಿಕೊಂಡು ಬಿಜೆಪಿ ತೊರೆಯಲು ಸಿದ್ದರಾದ ತ್ರಿಪುರ ಶಾಸಕ- ಟಿಎಂಸಿ ಸೇರುವ ಸಾಧ್ಯತೆ

- Advertisement -
- Advertisement -

ಬಹುಕಾಲದ ಬಿಜೆಪಿ ನಾಯಕ ಮತ್ತು ತ್ರಿಪುರಾದ ಸುರ್ಮಾ ಕ್ಷೇತ್ರದ ಶಾಸಕರಾದ ಆಶಿಸ್ ದಾಸ್ ಮಂಗಳವಾರ ಬಿಜೆಪಿ ನೇತೃತ್ವದ ಸರ್ಕಾರದ “ದುಷ್ಕೃತ್ಯಗಳಿಗಾಗಿ ಪ್ರಾಯಶ್ಚಿತ್ತ” ಎಂದು ಹೇಳಿಕೊಂಡು ತಲೆ ಬೋಳಿಸಿಕೊಂಡು ಪಕ್ಷ ಬಿಡುವುದಾಗಿ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕೋಲ್ಕತ್ತಾದ ಪ್ರಸಿದ್ಧ ಕಲಿಘಾಟ್‌ನ ದೇವಸ್ಥಾನದಲ್ಲಿ ಯಜ್ಞ ಮಾಡಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ “ರಾಜಕೀಯ ಅರಾಜಕತೆ ಮತ್ತು ಅವ್ಯವಸ್ಥೆ” ಯನ್ನು ಬೆಳೆಸುತ್ತಿದೆ ಎಂದು ಆರೋಪಿಸಿರುವ ಆಶಿಶ್ ದಾಸ್, ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ಜನರು ಅತೃಪ್ತರಾಗಿದ್ದಾರೆ ಹೀಗಾಗಿ ನಾನು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ವಾಧಿಕಾರಿ ಸರ್ಕಾರ ಮಾತ್ರ ಹೀಗಿರಲು ಸಾಧ್ಯ: ಯುಪಿ ಸರ್ಕಾರದ ವಿರುದ್ದ ರಾಜಸ್ಥಾನ ಸಿಎಂ

ಈ ಹಿಂದೆ ಮಮತಾ ಬ್ಯಾನರ್ಜಿಯವರನ್ನು ಹಾಡಿ ಹೊಗಳಿದ್ದ ಅವರು, ಮಮತಾ ಅವರನ್ನು ಪ್ರಧಾನಿ ಹುದ್ದೆಗೆ ಸೂಕ್ತ ಎಂದಿದ್ದರು. ಕಳೆದ ಎರಡು ವರ್ಷಗಳಿಂದ ತ್ರಿಪುರಾ ಮುಖ್ಯತ್ರಿ ಬಿಪ್ಲಬ್ ದೇಬ್ ಅವರ ಪ್ರಬಲ ವಿಮರ್ಶಕರಾಗಿ ಶಾಸಕ ಆಶಿಶ್ ದಾಸ್ ಕಾಣಿಸಿಕೊಂಡಿದ್ದಾರೆ.

2023 ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ತ್ರಿಪುರಾ ಮೇಲೆ ಕಣ್ಣಿಟ್ಟಿರುವ ತೃಣಮೂಲ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

“ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ನಾನು ತಲೆ ತಗ್ಗಿಸಿದ್ದೇನೆ. ನಾನು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ ಮತ್ತು ನನ್ನ ಮುಂದಿನ ಹೆಜ್ಜೆಯನ್ನು ಕಾಲವೇ ನಿರ್ಧರಿಸಲಿದೆ. ಆದರೆ ಬಿಜೆಪಿ ನೇತೃತ್ವದ ಆಡಳಿತದಲ್ಲಿ ತ್ರಿಪುರಾ ಅರಾಜಕತೆ ಮತ್ತು ದುರಾಡಳಿತದಿಂದ ತತ್ತರಿಸಿದೆ. ನಾನು ಕಳೆದ ಎರಡು ವರ್ಷಗಳಿಂದ, ಸರ್ಕಾರದ ಎಲ್ಲಾ ತಪ್ಪು ಕೆಲಸಗಳ ವಿಮರ್ಶಕನಾಗಿದ್ದೇನೆ. ನಾನು ಪಕ್ಷ ಮತ್ತು ರಾಜಕೀಯವನ್ನು ಮೀರಿ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ “ಎಂದು ಆಶಿಸ್ ದಾಸ್ ಹೇಳಿದ್ದಾರೆ.

ಆಶಿಶ್ ದಾಸ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.


ಇದನ್ನೂ ಓದಿ: ‘ಮಾ, ಮಟಿ, ಮನುಷ್‌’ ಎಂದು ಮೂರು ಬೆರಳೆತ್ತಿ ದಿಗ್ವಿಜಯ ಸಂಭ್ರಮಿಸಿದ ದೀದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...