Homeಮುಖಪುಟಜಮ್ಮು ಸೇನಾನೆಲೆಯ ಬಳಿ ಕಾಣಿಸಿಕೊಂಡ ಡ್ರೋಣ್‌ಗಳು: ಸೇನೆಯಿಂದ ಫೈರಿಂಗ್

ಜಮ್ಮು ಸೇನಾನೆಲೆಯ ಬಳಿ ಕಾಣಿಸಿಕೊಂಡ ಡ್ರೋಣ್‌ಗಳು: ಸೇನೆಯಿಂದ ಫೈರಿಂಗ್

- Advertisement -
- Advertisement -

ಜಮ್ಮು ವಿಮಾನ ನಿಲ್ಧಾಣದಲ್ಲಿ ಸ್ಪೋಟ ಸಂಭವಿಸಿದ 24 ಗಂಟೆಯೊಳಗೆ ಜಮ್ಮು ಸೇನಾನೆಲೆಯ ಬಳಿ ಎರಡು ಡ್ರೋಣ್‌ಗಳು ಕಾಣಿಸಿಕೊಂಡಿದ್ದು ಸೇನಾಪಡೆಗಳು ಡ್ರೋಣ್‌ಗಳತ್ತ ಗುಂಡು ಹಾರಿಸಿವೆ. ಗುಂಡಿನ ದಾಳಿಯಲ್ಲಿ ಸೇನಾಪಡೆಗಳು ಡ್ರೋನ್‌ಗಳನ್ನು ಹೊಡೆದುರಳಿಸಿವೆ ಎಂದು ಹೇಳಲಾಗುತ್ತಿದ್ದು, ಅಧಿಕೃತವಾದ ಮಾಹಿತಿ ತಿಳಿದುಬಂದಿಲ್ಲ.

ಶನಿವಾರ ಮಧ್ಯರಾತ್ರಿಯ ಜಮ್ಮು ವಿಮಾನ ನಿಲ್ಧಾಣದ ಮೇಲಿನ ದಾಳಿಯಾಗಿ 24 ಗಂಟೆ ಕಳೆಯುವ ಮುನ್ನ ಜಮ್ಮುವಿನ ಭಾರತೀಯ ಭೂಸೇನೆಯ ನೆಲೆಯ ಸಮೀಪ ಮತ್ತೊಮ್ಮೆ ಡ್ರೋಣ್‌ಗಳನ್ನು ಹಾರಿಬಿಡಲಾಗಿದೆ. ಭಾನುವಾರದ ದಾಳಿಯ ನಂತರ ತೀವ್ರ ಕಟ್ಟೆಚ್ಚರವಹಿಸಿದ್ದ ಸೇನಾ ಪಡೆಗಳು ಸಂಭವನೀಯ ದಾಳಿಯನ್ನು ಸೋಮವಾರ ಬೆಳಗಿನ ಜಾವ ತಡೆದಿದ್ದಾರೆ. ಇಂದು ಕಾಣಿಸಿಕೊಂಡ ಡ್ರೋಣ್‌ಗಳು ಸ್ಫೋಟಕಗಳನ್ನು ಹೊತ್ತಿದ್ದವೇ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಯಾವ ಭಾಗದಿಂದ ಡ್ರೋಣ್‌ಗಳು ಹಾರಿ ಬಂದಿದ್ದವು ಎಂದು ಸೇನಾಪಡಗಳು ತನಿಖೆ ನಡೆಸುತ್ತಿದ್ದು, ರಾಷ್ಟ್ರೀಯ ತನಿಖಾ ದಳ (NIA) ದ ಅಧಿಕಾರಿಗಳು  ಮತ್ತು ಬಾಂಬ್ ನಿಷ್ಕ್ರೀಯ ದಳದ ತಜ್ಞರು ಕೂಡ ಡ್ರೋಣ್‌ಗಳ ತನಿಖೆಯಲ್ಲಿ ತೊಡಗಿದ್ದಾರೆ.

“ಮತ್ತೊಮ್ಮೆ ಡ್ರೋನ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಬಾರಿ ಉಗ್ರರು ಸೇನಾ ಶಿಬಿರವನ್ನ ಗುರಿಯಾಗಿಸಿಕೊಂಡಿದ್ದರು. ಜಮ್ಮು ಏರ್ ಫೋರ್ಸ್ ಸ್ಟೇಶನ್ ಮೇಲಿನ ಡ್ರೋನ್ ದಾಳಿ ಬಳಿಕ ಇಂದು ಮಿಲಿಟರಿ ಸ್ಟೇಶನ್ ಗುರಿ ಮಾಡಿಕೊಂಡಿದ್ದರು. ಕಡಿಮೆ ತೂಕದ ಸ್ಪೋಟಕಗಳನ್ನು ಹೊತ್ತಿದ್ದ ಡ್ರೋಣ್‌ಗಳಿವು ಎಂದು ಶಂಕಿಸಲಾಗಿದೆ. ಭಾರಿ ಪ್ರಮಾಣದ ಭಯೋತ್ಪಾದಕ ದಾಳಿಯನ್ನು ಕೂದಲೆಳೆಯ ಅಂತರದಲ್ಲಿ ತಡೆಯಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಬೆಳಗಿನ ಜಾವ ಮೂರು ಗಂಟೆಗೆ ಕಾಲೂಚಕ್ ಮಿಲಿಟರಿ ಸ್ಟೇಶನ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆಗಿದ್ದ ಸೇನೆ, 20 ರಿಂದ 25 ಸುತ್ತು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ಬಳಿಕ ಡ್ರೋನ್ ಮಾಯವಾಗಿದ್ದು ಸ್ಥಳೀಯ ನಿವಾಸಿಗಳು ಆತಂಕ ಪಡಬೇಕಾಗಿಲ್ಲ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ.


ಇದನ್ನೂ ಓದಿ : ಜಮ್ಮು ವಾಯುಪಡೆ ವಿಮಾನ ನಿಲ್ಧಾಣದ ಮೇಲೆ ಡ್ರೋಣ್ ದಾಳಿ: ಭಾರತದ ಭದ್ರತಾ ವ್ಯವಸ್ಥೆಗೆ ಹೆಚ್ಚಿದ ಆತಂಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...