Homeಅಂಕಣಗಳುಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು

- Advertisement -
- Advertisement -

ಪಿಕೆ ಟಾಕೀಸ್ 15/ ಜಾಗತಿಕ ಸಿನಿಮಾ/ ಬೆಲ್ಜಿಯಂ/ ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne)

ಟು ನೈಟ್ಸ್, ಒನ್ ನೈಟ್ (2014, ಫ್ರೆಂಚ್, Two nights, One night): ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ತಾಯಿ ಸ್ಯಾಂಡ್ರಾ. ಆಕೆ ಖಿನ್ನತೆಯಿಂದ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮೊದಲೇ ಅವಳಿಗೆ ಆಘಾತಕಾರಿಯಾದ ಸುದ್ದಿ ಕಾದಿರುತ್ತದೆ.

ಅದು, ಆರ್ಥಿಕ ಹಿಂಜರಿತದ ಕಾರಣಕ್ಕೆ, ಶುಕ್ರವಾರದಂದು ಅವಳ ಫ್ಯಾಕ್ಟರಿಯಲ್ಲಿ ತೀರ್ಮಾನಿಸಿದಂತೆ, ಸ್ಯಾಂಡ್ರಾಳನ್ನು ಕೆಲಸದಿಂದ ಕಿತ್ತುಹಾಕಬೇಕಿರುತ್ತದೆ. ಅವಳ ಸಹೋದ್ಯೋಗಿಗಳು ಚಲಾಯಿಸುವ ಮತಗಳ ಮೇಲೆ ಸ್ಯಾಂಡ್ರಾಳ ಭವಿಷ್ಯವೇ ನಿರ್ಧಾರವಾಗಲಿರುತ್ತದೆ.

ಸ್ಯಾಂಡ್ರಾ ಮನೆಯಲ್ಲೂ ಆರ್ಥಿಕವಾಗಿ ಎಲ್ಲವೂ ಸರಿಯಿರುವುದಿಲ್ಲ. ಕೆಲಸವನ್ನು ಮರುಪಡೆಯಲು ಪ್ರಯತ್ನಿಸುವಂತೆ ಗಂಡ ಹೇಳುತ್ತಾನೆ. ಅದರಂತೆ ಸ್ಯಾಂಡ್ರಾ ತನಗೆ ಉಳಿದಿರುವ ಶನಿವಾರ ಮತ್ತು ಭಾನುವಾರದ ರಜಾದಿನಗಳಂದು ತನ್ನೆಲ್ಲ ಸಹೋದ್ಯೋಗಿಗಳನ್ನು ಒಬ್ಬೊಬ್ಬರಂತೆ ಭೇಟಿಯಾಗಿ, ತನ್ನ ಕೆಲಸ ಉಳಿಯುವ ಸಲುವಾಗಿ ತನ್ನ ಪರವಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಳ್ಳುವುವೇ ಈ ಸಿನಿಮಾದ ಕಥಾನಕ.

ಸ್ಯಾಂಡ್ರಾಳ ಸಹೋದ್ಯೋಗಿಗಳಿಗೆ ತಲಾ ಸಾವಿರ ಯೂರೋ ಬೋನಸ್ ಹಣವನ್ನು ಗಳಿಸಿಕೊಳ್ಳುವ ಅವಕಾಶ, ತಾವು ಮತ ಚಲಾಯಿಸಿ ಸ್ಯಾಂಡ್ರಾ ಉದ್ಯೋಗ ಕಳೆದುಕೊಳ್ಳುವುದರಲ್ಲಿ ಅಡಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ಸಹೋದ್ಯೋಗಿಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗಲೂ ವಿವಿಧ ಬಗೆಯ ಸನ್ನಿವೇಶಗಳನ್ನು ಸ್ಯಾಂಡ್ರಾ ಎದುರಿಸಬೇಕಾಗುತ್ತದೆ.

ಕೆಲವರು ಸ್ಯಾಂಡ್ರಾಳ ಸ್ಥಿತಿಯನ್ನು ನೋಡಿ ಮರುಕಪಟ್ಟು, ಆಕೆ ಕೆಲಸಕ್ಕೆ ಹಿಂದಿರುಗಲು ಸಹಾಯವಾಗುವಂತೆ ಮತ ಚಲಾಯಿಸಲು ಒಪ್ಪಿಕೊಂಡರೆ, ಮತ್ತೆ ಕೆಲವರು ಸಾವಿರ ಯೂರೋಗಳನ್ನು ಕಳೆದುಕೊಳ್ಳಬೇಕಾಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಇನ್ನು ಕೆಲವರು ತಮ್ಮ ಸಾವಿರ ಯೂರೋಗಳನ್ನು ಕಿತ್ತುಕೊಳ್ಳುವ ಹುನ್ನಾರವಿದು ಎಂದುಕೊಂಡು ಸ್ಯಾಂಡ್ರಾಳ ಮೇಲೆ ಸಿಟ್ಟಾಗುತ್ತಾರೆ ಮತ್ತು ರೇಗಾಡುತ್ತಾರೆ.

ಟು ನೈಟ್ಸ್, ಒನ್ ನೈಟ್

ಫ್ಯಾಕ್ಟರಿಯಲ್ಲಿ ಸೋಮವಾರ ಬೆಳಿಗ್ಗೆ ಸ್ಯಾಂಡ್ರಾಳ ಸಹೋದ್ಯೋಗಿಗಳು ಮತ ಚಲಾಯಿಸುವುದರೊಂದಿಗೆ ಸ್ಯಾಂಡ್ರಾ ಹೊರಹೋಗುತ್ತಾಳೆ. ಸಿನಿಮಾ ಅಂತ್ಯವಾಗುತ್ತದೆ.

ಫ್ಯಾಕ್ಟರಿಗಳಲ್ಲಿ ವರ್ಷವೆಲ್ಲ ದುಡಿದು ನೌಕರರು ಬೋನಸ್ ಹಣಕ್ಕಾಗಿ ಕಾಯುತ್ತಿರುವಾಗ, ಸಹೋದ್ಯೋಗಿಯನ್ನು ಕೆಲಸದಿಂದ ವಜಾ ಮಾಡಲು ಮತ ಚಲಾಯಿಸಿದರೆ ಮಾತ್ರ ಬೋನಸ್ ಹಣವನ್ನು ನೀಡುವ ಷರತ್ತಿನಿಂದ, ಪರಸ್ಪರರಲ್ಲಿಯೇ ಭೇದ ಮೂಡಿಸಿ, ಮಾನವೀಯ ಕಾಳಜಿಗಳನ್ನು ಮರೆಯುವಂತೆ ಮಾಡುವ ಆಡಳಿತ ವರ್ಗದ ಕ್ರೌರ್ಯವನ್ನು ಸಿನಿಮಾ ಸಶಕ್ತವಾಗಿ ಹಿಡಿದಿಡುತ್ತದೆ. ಫ್ಯಾಕ್ಟರಿ ತನ್ನ ನೌಕರರನ್ನು ಕುರಿತು ತೋರಿಸುವ ನಿರ್ಲಕ್ಷ್ಯ ಮತ್ತು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ವೀಕ್ಷಕರಿಗೆ ಮನಮುಟ್ಟುವಂತೆ ಕಥಾನಕವನ್ನು ನಿರ್ದೇಶಕ ಹೆಣೆದಿದ್ದಾರೆ.

ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿರುವ ಮಾರಿಯಾನ್ ಕೊಟಿಯಾಡ್ ಮುಖ್ಯವಾಹಿನಿ ಸಿನಿಮಾಗಳಲ್ಲಿ ಪ್ರಖ್ಯಾತಿ ಪಡೆದಿರುವವರು. ಈ ಸಿನಿಮಾದಲ್ಲಿ ಅವರು ಯಾವುದೇ ವಿಧವಾದ ಮೇಕಪ್ ಇಲ್ಲದೆ ಕಾಣಿಸಿಕೊಂಡು, ಅದ್ಬುತ ನಟನೆಯನ್ನು ನೀಡಿದ್ದಾರೆ.

ಖಿನ್ನತೆಯನ್ನು ನಿಜವಾದ ಕಾಯಿಲೆಯೆಂದು ಎಷ್ಟೋ ದೇಶಗಳಲ್ಲಿ ಗುರುತಿಸದೆ ಇರುವುದರ ಬಗ್ಗೆ ಕೂಡ ಈ ಸಿನಿಮಾ ದ್ವನಿ ಎತ್ತುತ್ತದೆ.

ಯಂಗ್ ಅಹ್ಮೆದ್ (2019, ಫ್ರೆಂಚ್, Young Ahmed): ತಂದೆಯನ್ನು ಕಳೆದುಕೊಂಡಿರುವ ಹದಿಮೂರು ವರ್ಷದ ಅಹ್ಮೆದ್ ತಾಯಿ ಮತ್ತು ಸಹೋದರಿಯ ಜೊತೆ ಬೆಲ್ಜಿಯಂನ ಹಳ್ಳಿಯೊಂದರಲ್ಲಿ ಬದುಕುತ್ತಿರುವ ಮುಸ್ಲಿಂ ಸಮುದಾಯದ ಹುಡುಗ.

ಅಹ್ಮೆದ್ ಅಲ್ಲಿನ ಹದಿಹರೆಯುದ ಹುಡುಗರು ತೊಡಗಿಸಿಕೊಳ್ಳುವಂತೆ ವಿಡಿಯೋ, ಮೊಬೈಲ್ ಆಟಗಳನ್ನು ಆಡುವುದನ್ನು ಬಿಟ್ಟು, ಇಸ್ಲಾಂ ಮೂಲಭೂತವಾದಕ್ಕೆ ತಿರುಗಿ ಅದರಂತೆಯೇ ವರ್ತಿಸುತ್ತಾನೆ. ತನ್ನ ತಾಯಿ ಮತ್ತು ಅಕ್ಕನಿಗೆ ಸರಿಯಾದ ಬಟ್ಟೆಗಳನ್ನು ಧರಿಸುವಂತೆ ಸಲಹೆ ನೀಡಲು ಪ್ರಾರಂಭಿಸುತ್ತಾನೆ. ಹೆಂಗಸರು
ಅಥವಾ ಹುಡುಗಿಯರನ್ನು ಮುಟ್ಟುವುದು ತಪ್ಪೆಂದು ಹೇಳುತ್ತಾನೆ.

ಶಾಲೆಯಲ್ಲಿ ಶಿಕ್ಷಕಿಯೊಬ್ಬರ ಪಾಠಗಳನ್ನು ಬೇಕಂತಲೇ ತಪ್ಪಿಸಿಕೊಳ್ಳುತ್ತಾನೆ. ಕಾರಣ ಶಿಕ್ಷಕಿಗೆ ’ಜ್ಯೂ’ ಬಾಯ್‌ಫ್ರೆಂಡ್ ಇರುವುದು. ಅದಕ್ಕಾಗಿ ಆಕೆಯನ್ನು ದ್ವೇಷಿಸುತ್ತಾನೆ.

ಅಹ್ಮೆದ್‌ನ ಸೋದರ ಸಂಬಂಧಿಯೊಬ್ಬ ಇಸ್ಲಾಂ ಜಿಹಾದಿಯಾಗಿರುತ್ತಾನೆ. ಅಲ್ಲದೆ ಅವನ ಹೆಸರಿನಲ್ಲಿರುವ ವೆಬ್‌ಸೈಟಿನಲ್ಲಿ ನಾಯಕನಂತೆ ರಂಜಿಸಿ ಬರೆದಿರುತ್ತಾರೆ. ಅದೇ ಊರಿನಲ್ಲಿ ಮೂಲಭೂತವಾದಿ ಇಮಾಮ್ ಜೊತೆಯಲ್ಲಿ ಅಹ್ಮೆದ್‌ನ ಗೆಳೆತನ. ’ಸೆಕ್ಯುಲರಿಸಂನಿಂದ ಇಸ್ಲಾಂ ದುರ್ಬಲಗೊಂಡು, ಇಸ್ಲಾಂ ಧರ್ಮವೇ ಮಾಯವಾಗುತ್ತದೆ. ಇದೇ ಕಾರಣದಿಂದ ಇಸ್ಲಾಂ ಧರ್ಮವನ್ನು ಉಳಿಸುವುದ್ದಕ್ಕಾಗಿ ಜವಾಬ್ದಾರಿಯನ್ನು ನಿರ್ವಹಿಸಿಬೇಕೆಂದು’ ಇಮಾಮ್ ಬ್ರೈನ್ ವಾಶ್ ಮಾಡುತ್ತಿರುತ್ತಾನೆ.

ಯಂಗ್ ಅಹ್ಮೆದ್

ಅದರಂತೆ ಅಹ್ಮೆದ್ ದಿನಚರಿ ಬದಲಾಗುತ್ತದೆ. ಒಂಟಿಯಾಗಿರುವುದು, ನಮಾಜ್ ಮಾಡುವುದು ಇಲ್ಲವೇ ಇಮಾಮ್‌ನ ಸಂಘದಲ್ಲಿ ಇರುವುದು ಅಷ್ಟೇ! ಇಸ್ಲಾಂಅನ್ನು ಉಳಿಸಬೇಕೆಂದು ’ಜ್ಯೂಯಿಶ್’ ಬಾಯ್‌ಫ್ರೆಂಡ್ ಇರುವ ಶಿಕ್ಷಕಿಯನ್ನು ಕೊಲ್ಲುವ ಪ್ರಯತ್ನಮಾಡುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಈ ಹಲ್ಲೆಗಾಗಿ ಬಾಲಾಪರಾಧ ಕೇಂದ್ರದಲ್ಲಿ ಬಂಧಿಯಾಗುತ್ತಾನೆ.

ಬಾಲಾಪರಾಧ ಕೇಂದ್ರದಲ್ಲಿಯೇ ಐದು ಬಾರಿ ನಮಾಜ್ ಮಾಡುತ್ತಾ, ತನ್ನಲ್ಲಿ ಪರಿವರ್ತನೆಯಾಗುತ್ತಿದೆ ಎಂದು
ತೋರಿಸಿಕೊಳ್ಳುತ್ತಾನೆ. ಆದರೆ ಅವನಲ್ಲಿ ಬಿತ್ತಲಾಗಿದ್ದ ವಿಷ ಹಾಗೆಯೇ ಉಳಿದುಕೊಂಡಿರುತ್ತದೆ. ಈ ಕೇಂದ್ರದಲ್ಲಿ ಮನೋಶಾಸ್ತ್ರಜ್ಞರ ಸಹಾಯದಿಂದ, ತೋಟದ ಕೆಲಸದ ನಿಮಿತ್ತ ಅಹ್ಮೆದ್‌ನನ್ನು ಹೊರಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಭೇಟಿಯಾಗುವ ಹುಡುಗಿಯಿಂದ ಅಹ್ಮೆದ್‌ನಲ್ಲಿ ಬದಲಾವಣೆಗಳಾಗುತ್ತಾ ಸಿನಿಮಾ ಕೊನೆಮುಟ್ಟುತ್ತದೆ.

ಹದಿಹರೆಯದವರ ದುರ್ಬಲ ಮನಸ್ಸುಗಳನ್ನು ಹೇಗೆ ಮೂಲಭೂತವಾದಿಗಳು ತಮ್ಮ ತಕ್ಕೆಗೆ ತೆಗೆದುಕೊಂಡು, ಅವರ ಬದುಕನ್ನೇ ಅಲ್ಲೋಲಕಲ್ಲೋಲಗೊಳಿಸುತ್ತಾರೆ ಎಂಬುದನ್ನು ಚಿತ್ರಿಸಿರುವ ಸಿನಿಮಾದಲ್ಲಿ ಮಹತ್ವದ ಪ್ರಶ್ನೆಗಳನ್ನೂ ಎತ್ತಲಾಗಿದೆ. ಮನಸ್ಸೆಲ್ಲ ವಿಷ ತುಂಬಿಕೊಂಡು ಮಾಡಿರುವ ತಪ್ಪುಗಳಿಗೆ ಶಿಕ್ಷಿಸಬೇಕಾ ಇಲ್ಲವಾ ಆಥವಾ ಪರಿವರ್ತನೆ ಸಾಧ್ಯವೇ ಎನ್ನುವ ಅತಿ ದೊಡ್ಡ ಪ್ರಶ್ನೆಯನ್ನು ನಿರ್ದೇಶಕರು ಪ್ರೇಕ್ಷಕರಿಗೆ ತೇಲಿಬಿಡುತ್ತಾರೆ.

ಡಾರ್‌ಡೆನ್ ಸಹೋದರರು (Jean Pierre Dardenne & Luc Dardenne): ಡಾರ್‌ಡೆನ್ ಸಹೋದರಿಗೆ ವಯಸ್ಸಿನಲ್ಲಿ ಮೂರು ವರ್ಷಗಳ ಅಂತರ. ಈ ಜೋಡಿ ನಿರ್ದೇಶಕರು ಮುಂದುವರೆದ ಸಮಾಜದಲ್ಲಿ ವಿವಿಧ ಕಾರಣಗಳಿಂದ ಒಂಟಿಯಾಗಿರುವ ಮನಸ್ಸುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವ ಪ್ರಯತ್ನವನ್ನು ತಮ್ಮ ಸಿನಿಮಾಗಳಲ್ಲಿ ಶೋಧಿಸಿದ್ದಾರೆ.

ಇವರ ’ಕಿಡ್ ವಿತ್ ಅ ಬೈಕ್’ (2011), ’ದಿ ಚೈಡ್’ (2005) ಮತ್ತು ’ಯಂಗ್ ಅಹ್ಮೆದ್’ ಚಿತ್ರಗಳಲ್ಲಿ ಮಕ್ಕಳ ಮನೋಲೋಕವನ್ನು ಅನ್ವೇಷಿಸಿ ಹಿಡಿದಿಟ್ಟಿದ್ದಾರೆ.

ಇವರ ಸಿನಿಮಾಟೋಗ್ರಾಫಿಯ ಶೈಲಿ ಕೂಡ ವಿಭಿನ್ನವಾದದ್ದು. ಸಾಂಪ್ರದಾಯಿಕವಾಗಿ ಚಿತ್ರಿಸುವಂತೆ ಫುಲ್, ಮಿಡ್ ಮತ್ತು ಕ್ಲೋಸ್‌ಅಪ್ ಶಾಟ್‌ಗಳನ್ನು ಬಳಸದೆ, ಪಾತ್ರಗಳು ತಮ್ಮ ದಿನನಿತ್ಯದಲ್ಲಿ ವ್ಯವಹರಿಸುವಂತೆಯೇ ಅಥವಾ ಮತ್ತೊಂದು ಪಾತ್ರದೊಂದಿಗೆ ಸಂಭಾಷಿಸುತ್ತಿದ್ದಾಗ ಕ್ಯಾಮರಾ ಒಂದೇ ಕಡೆ ನಿಂತು, ಎಲ್ಲದಕ್ಕೂ ಸಾಕ್ಷಿಯೆಂಬಂತೆ ಗಮನಿಸುತ್ತದೆ.

ಡಾರ್‌ಡೆನ್ ಸಹೋದರರು

ಇವರ ಸಿನಿಮಾಗಳಲ್ಲಿ ಕ್ಯಾಮರಾ ಚಲನೆಯೂ ಗಮನಾರ್ಹವಾದದ್ದು. ಪಾತ್ರವೊಂದು ಎಡಬದಿಯಿಂದ ಬೇರೆಕಡೆಗೆ ಹೋಗುವ ಸನ್ನಿವೇಶದಲ್ಲಿ, ಮಧ್ಯೆದಲ್ಲಿ ನಿಂತು ಕ್ಯಾಮರಾವನ್ನು ಎಡಗಡೆಯಿಂದ ಪ್ಯಾನ್ ಮಾಡಿ ಬಲಭಾಗಕ್ಕೆ ತಿರುಗಿಸುತ್ತಾರೆ. ಮತ್ತು ದೃಶ್ಯಗಳನ್ನು ಪದೇ ಪದೇ ತುಂಡರಿಸದೆ, ನಿರಂತರವಾಗಿ ನಡೆವ ಸಂಭಾಷಣೆಗಳಲ್ಲಿ ಪ್ರೇಕ್ಷಕ ಮುಳುಗಿ, ಇದು ಸಿನಿಮಾ ಎಂಬುದನ್ನು ಮರೆತು, ನಿಜವಾಗಿ ನಡೆಯುತ್ತಿರುವ ಸನ್ನಿವೇಶಗಳೇನೋ ಎಂದು ಭಾಸವಾಗುವಂತೆ ಮಾಡಿ, ಪ್ರೇಕ್ಷಕನನ್ನು ಅದಕ್ಕೆ ಮೂಕಸಾಕ್ಷಿಯನ್ನಾಗಿಸುತ್ತಾರೆ.

ಡಾರ್‌ಡೆನ್ ಸಹೋದರರು ಹಲವಾರು ಸಾಕ್ಷ್ಯಚಿತ್ರಗಳನ್ನು ಕೂಡ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇದೇ ಕಾರಣದಿಂದಲೇ ಇವರ ಸಿನಿಮಾಟೋಗ್ರಾಫಿಯ ಶೈಲಿ ಫೀಚರ್ ಫಿಲ್ಮ್‌ಗಳಲ್ಲಿ ಕೂಡ ನೈಜತೆಯನ್ನು ಸೆರೆಹಿಡಿಯಲು ಪ್ರಯತ್ನಿಸುತ್ತದೆ.


ಇದನ್ನೂ ಓದಿ: ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...