Homeಅಂತರಾಷ್ಟ್ರೀಯಚೀನಾವನ್ನು ಎದುರಿಸಲು ಭಾರತಕ್ಕೆ ಅಮೆರಿಕಾ ಸಹಕಾರ ಅಗತ್ಯ: ಕೆನ್ನೆತ್ ಜಸ್ಟರ್

ಚೀನಾವನ್ನು ಎದುರಿಸಲು ಭಾರತಕ್ಕೆ ಅಮೆರಿಕಾ ಸಹಕಾರ ಅಗತ್ಯ: ಕೆನ್ನೆತ್ ಜಸ್ಟರ್

"ಅಮೆರಿಕವನ್ನು ಬಿಟ್ಟರೆ ಜಗತ್ತಿನ ಬೇರೆ ಯಾವುದೇ ದೇಶವು ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ರಕ್ಷಣಾ ಬಲವೃದ್ಧಿಗೆ ಭಾರತದೊಂದಿಗೆ ಸಹಕಾರವನ್ನು ಹೊಂದಿಲ್ಲ"

- Advertisement -
- Advertisement -

“ಭಾರತ-ಚೀನಾ ಗಡಿಯಲ್ಲಿ ಚೀನಾದಿಂದ ಎದುರಾಗುತ್ತಿರುವ ಬೆದರಿಕೆಯನ್ನು ಎದುರಿಸಲು ಭಾರತ ಹಾಗೂ ಅಮೆರಿಕ ನಡುವೆ ನಿಕಟ ಹೊಂದಾಣಿಕೆ ಅತಿಮುಖ್ಯವಾಗಿದೆ” ಎಂದು ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಹೇಳಿದ್ದಾರೆ.

ಭಾರತದಲ್ಲಿ ಅಧಿಕಾರಾವಧಿ ಮುಗಿದಿರುವ ರಾಯಭಾರಿ ತಮ್ಮ ವಿದಾಯ ಭಾಷಣದಲ್ಲಿ, “ಯಾವುದೇ ದೇಶ ಭಾರತೀಯರು ಹಾಗೂ ಭಾರತದ ಭದ್ರತೆಗೆ ಹೆಚ್ಚಿನ ಸಹಕಾರವನ್ನು ನೀಡುತ್ತಿಲ್ಲ. ಭಾರತವು ಗಡಿಯಲ್ಲಿ ಚೀನಾದಿಂದ ನಿರಂತರವಾಗಿ ಬಿಕ್ಕಟ್ಟು ಎದುರಿಸುತ್ತಿರುವುದರಿಂದ ನಿಕಟ ಹೊಂದಾಣಿಕೆ ಮಹತ್ವದ್ದಾಗಿದೆ” ಎಂದು ಹೇಳಿದರು.

“ಭಾರತವು ತನ್ನ ಮಿಲಿಟರಿ ಉತ್ಪನ್ನಗಳನ್ನು ದೇಶದಲ್ಲೇ ಉತ್ಪಾದಿಸಲು ಬಯಸುತ್ತಿದೆ. ಈ ಪ್ರಯತ್ನದಲ್ಲಿ ಅಮೆರಿಕವು ಭಾರತದೊಂದಿಗೆ ಇನ್ನೂ ಹೆಚ್ಚು ಭಾಗಿಯಾಗಲು ಎದುರು ನೋಡುತ್ತಿದೆ. ರಕ್ಷಣಾ ಮತ್ತು ಭದ್ರತಾ ಸಹಕಾರ ಬಲಪಡಿಸಲು ಭಾರತ ಹಾಗೂ ಅಮೆರಿಕ ಬದ್ಧವಾಗಿದೆ. ಹೊರಗಿನ ಬೆದರಿಕೆಗಳಿಂದ ರಾಷ್ಟ್ರವನ್ನು ಸುರಕ್ಷಿತವಾಗಿರಿಸಲು ಕಳೆದ ನಾಲ್ಕು ವರ್ಷಗಳಲ್ಲಿ ಎರಡೂ ದೇಶಗಳು ಉದ್ದೇಶಪೂರ್ವಕವಾಗಿಯೇ ಸಹಕಾರವನ್ನು ವೃದ್ಧಿಸಿಕೊಂಡಿದೆ” ಎಂದು ಹೇಳಿದರು.

ಇದನ್ನೂ ಓದಿ: ಅಮೆರಿಕಾ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ – ಜೋ ಬೈಡೆನ್

“ನಮ್ಮ ದೇಶವು ಭಾರತದೊಂದಿಗೆ ಬೇರ್ಪಡಿಸಲು ಸಾಧ್ಯವಾಗದಂತಹ ಸಂಬಂಧವನ್ನು ಹೊಂದಿದೆ. ಅಮೆರಿಕವನ್ನು ಬಿಟ್ಟರೆ ಜಗತ್ತಿನ ಬೇರೆ ಯಾವುದೇ ದೇಶವು ಭಯೋತ್ಪಾದನೆ ವಿರುದ್ಧ ಹೋರಾಡಲು ಮತ್ತು ರಕ್ಷಣಾ ಬಲವೃದ್ಧಿಗೆ ಭಾರತದೊಂದಿಗೆ ಸಹಕಾರವನ್ನು ಹೊಂದಿಲ್ಲ” ಎಂದು ತಿಳಿಸಿದ್ದಾರೆ ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ಜೂನ್ ತಿಂಗಳಿನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಿಂದ ಉಭಯ ದೇಶಗಳ ಸಂಬಂಧ ಹದಗೆಡುತ್ತಾ ಬಂದಿದೆ. ಇದರ ಸುದುಪಯೋಗ ಪಡೆದುಕೊಳ್ಳಲು ಬಯಸುತ್ತಿರುವ ಅಮೆರಿಕ, ಮಧ್ಯಪ್ರವೇಶಿಸಲು ಹವಣಿಸುತ್ತಿದೆ. ಈ ಹಿಂದೆಯೂ ಅಮೆರಿಕ ಅಧ್ಯಕ್ಷ ಟ್ರಂಪ್ ಈ ಕುರಿತು ಆಶಯ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: 1 ಮಿಲಿಯನ್ ವಂಚನೆ: ನೀರವ್ ಮೋದಿ ಸಹೋದರನ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...