Homeಕರೋನಾ ತಲ್ಲಣಮಧ್ಯಪ್ರದೇಶ: 'ಇದು ಪ್ರಯೋಗ' ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

ಮಧ್ಯಪ್ರದೇಶ: ‘ಇದು ಪ್ರಯೋಗ’ ಎಂದು ಹೇಳದೆ ಸಾರ್ವಜನಿಕರಿಗೆ ಲಸಿಕೆ ನೀಡಿದ ಖಾಸಗಿ ಆಸ್ಪತ್ರೆ!

ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸುತ್ತಾರೆ ಎಂದು ನನ್ನ ಸ್ನೇಹಿತ ಹೇಳಿದ. ಹಾಗಾಗಿ ನಾನು ಅರ್ಜಿಯೊಂದಕ್ಕೆ ಸಹಿ ಹಾಕಿದ್ದೆ. ಅನಂತರ ನನಗೆ ಲಸಿಕೆ ನೀಡಲಾಗಿತ್ತು. ಕೆಲವೇ ದಿನಗಳಲ್ಲಿ ನನಗೆ ವಾಂತಿ ಆರಂಭವಾಗಿ, ಜ್ವರ ಬಂತು. ಕೆಲಸಕ್ಕೂ ಹೋಗಲು ಸಾಧ್ಯವಾಗಲಿಲ್ಲ- ದಿನಗೂಲಿ ಕೆಲಸಗಾರ ಜಿತೇಂದ್ರ

- Advertisement -
- Advertisement -

ಜನರ ಒಪ್ಪಿಗೆ ಇಲ್ಲದೆ ಅವರಿಗೆ ಕೊರೊನಾ ವೈರಸ್ ಲಸಿಕೆ ನೀಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, “ಇದು ಪ್ರಯೋಗ ಎಂದು ನಮಗೆ ಯಾರೂ ಹೇಳಿಲ್ಲ” ಎಂದು ಹಲವು ಜನರು ಆರೋಪಿಸಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆಸಿದ ಲಸಿಕೆ ಪ್ರಯೋಗಗಳಲ್ಲಿ ಪಾಲ್ಗೊಳ್ಳಲು ಜನರನ್ನು ದಾರಿ ತಪ್ಪಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದ್ದು, “ನಮಗೆ ಯಾರೂ ಕೂಡ ಲಸಿಕೆ ಪ್ರಯೋಗದ ಕುರಿತು, ಅದರ ಅಪಾಯದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಚುಚ್ಚುಮದ್ದು ಕೊರೊನಾವನ್ನು ತಡೆಗಟ್ಟುತ್ತದೆ ಎಂದು ಮಾತ್ರ ಹೇಳಿದ್ದಾರೆ. ಇಂತಹ ಪ್ರಯೋಗಕ್ಕೆ ಕಡ್ಡಾಯವಾಗಿರುವ ಒಪ್ಪಿಗೆಯ ಅರ್ಜಿಯನ್ನೂ ನೀಡಿಲ್ಲ” ಎಂದು ಜನರು ಆರೋಪಿಸಿದ್ದಾರೆ.

“ಈ ಲಸಿಕೆ ತೆಗೆದುಕೊಳ್ಳುವುದರಿಂದ ಉಂಟಾಗುವು ಯಾವುದೇ ಅಡ್ಡ ಪರಿಣಾಮದ ಬಗ್ಗೆ ಯಾರೂ ನನಗೆ ಮಾಹಿತಿ ನೀಡಿಲ್ಲ. ಒಪ್ಪಿಗೆ ಫಾರ್ಮ್ ಅನ್ನು ಯಾರೂ ನನಗೆ ಕೊಟ್ಟಿಲ್ಲ. ಆಸ್ಪತ್ರೆಯಿಂದ ನನಗೆ ಯಾವತ್ತೂ ಕರೆ ಬಂದಿಲ್ಲ. ಈ ಚುಚ್ಚುಮದ್ದನ್ನು ತೆಗೆದುಕೊಂಡರೆ ನನಗೆ ಕೊರೊನಾ ಬರುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ದರು” ಎಂದು ಭೋಪಾಲ್‌ನ ರೇಖಾ ಹೇಳಿದ್ದಾರೆ.

ಇದನ್ನೂ ಓದಿ: ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ: ಭೈರಪ್ಪನವರಿಗೆ ತಿರುಗೇಟು ನೀಡಿದ ದೇವನೂರು

“ಇದು ಒಂದು ಪ್ರಯೋಗ ಎಂದು ಯಾರೂ ನಮಗೆ ಹೇಳಲಿಲ್ಲ. ಕೊರೋನ ಲಸಿಕೆ ನೀಡುತ್ತಿದ್ದೇವೆ, ನಿಮಗೆ ಏನಾದರೂ ಸಮಸ್ಯೆಯಾದರೆ ನಮಗೆ ಕರೆ ಮಾಡಿ ಎಂದು ಆಸ್ಪತ್ರೆಯವರು ನಮಗೆ ಹೇಳಿದ್ದರು” ಎಂದು ಡಿಸಂಬರ್ 8 ರಂದು ಮೊದಲ ಡೋಸ್ ಪಡೆದಿದ್ದ ಶಂಕರ ನಗರದ ಸಾವಿತ್ರಿ ಹೇಳಿದ್ದಾರೆ.

“ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ನಡೆಸುತ್ತಾರೆ ಎಂದು ನನ್ನ ಸ್ನೇಹಿತ ಹೇಳಿದ. ಹಾಗಾಗಿ ನಾನು ಅರ್ಜಿಯೊಂದಕ್ಕೆ ಸಹಿ ಹಾಕಿದ್ದೆ. ಅನಂತರ ನನಗೆ ಲಸಿಕೆ ನೀಡಲಾಗಿತ್ತು. ಕೆಲವೇ ದಿನಗಳಲ್ಲಿ ನನಗೆ ವಾಂತಿ ಆರಂಭವಾಗಿ, ಜ್ವರ ಬಂತು. ಕೆಲಸಕ್ಕೂ ಹೋಗಲು ಸಾಧ್ಯವಾಗಲಿಲ್ಲ. ಇದೊಂದು ಟ್ರಯಲ್ ಎಂದು ಯಾರೂ ಹೇಳಲಿಲ್ಲ” ಎಂದು ದಿನಗೂಲಿ ಕೆಲಸ ಮಾಡುತ್ತಿರುವ ಜಿತೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ಈ ಕುರಿತು ಪ್ರತಿಕ್ರಿಯಿಸಿದ ಕಾಲೇಜ್ ಆಫ್ ಮೆಡಿಕಲ್ ಸೈಯನ್ಸ್ ಡೀನ್ ಡಾ. ಎ.ಕೆ ದೀಕ್ಷಿತ್, “ನಾವು ಎಲ್ಲ ನಿಯಮಗಳನ್ನು ಪಾಲಿಸಿದ್ದೇವೆ. ಐಸಿಎಂಆರ್ ಮಾರ್ಗಸೂಚಿಯ ಅನ್ವಯ ಟ್ರಯಲ್ಸ್ ನಡೆಸಿದ್ದೇವೆ. ಟ್ರಯಲ್ಸ್‌ನಲ್ಲಿ ಭಾಗವಹಿಸಿದವರಿಗೆ ಅರ್ಧಗಂಟೆ ಮೊದಲೇ ಆಪ್ತ ಸಮಾಲೋಚನೆ ನಡೆಸಿದ್ದೆವು. ಆಗ ಅವರಿಗೆ ಡೋಸ್‌ಗಳು ಹಾಗೂ ಅದರ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸಲಾಗಿತ್ತು” ಎಂದು ಹೇಳಿದ್ದಾರೆ.

ಈ ವಿಚಾರವನ್ನು ತನಿಖೆ ನಡೆಸಲಾಗುವುದು ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದು, “ಈ ಆರೋಪದ ಹಿಂದೆ ರಾಜಕೀಯ ಹುನ್ನಾರವಿದೆ. ನಮ್ಮ ವಿಜ್ಞಾನಿಗಳು ಲಸಿಕೆಯನ್ನು ತಯಾರಿಸಿದ್ದಾರೆ. ತುಕ್ಡೇ ತುಕ್ಟೇ ಗ್ಯಾಂಗ್ ಇದನ್ನು ವಿರೋಧಿಸುತ್ತಿದೆ” ಎಂದು  ಆರೋಪಿಸಿದ್ದಾರೆ.


ಇದನ್ನೂ ಓದಿ: JNU ಹಿಂಸಾಚಾರಕ್ಕೆ ಒಂದು ವರ್ಷ: ಒಂದೂ ಅರೆಸ್ಟ್ ಇಲ್ಲ, ಚಾರ್ಜ್‌ಶೀಟ್ ಇಲ್ಲ, ಆಂತರಿಕ ತನಿಖೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...