Homeಮುಖಪುಟಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಲೈವ್ ಪ್ರಸಾರದಲ್ಲೆ ‘ಝೀನ್ಯೂಸ್’ ಅನ್ನು ‘ಕೆಟ್ಟ ಚಾನಲ್’ ಎಂದು ಕರೆದ ಭಾರತೀಯ ಕ್ರಿಕೆಟ್ ಅಭಿಮಾನಿ

ಝೀ ನ್ಯೂಸ್‌ಗೆ ಅವರ ಚಾನೆಲ್‌ನಲ್ಲೆ ಪಾಠ ಮಾಡಿರುವ ಯುವಕನಿಗೆ ಅಭಿನಂಧನೆಗಳ ಮಹಾಪೂರ ಹರಿದು ಬಂದಿದೆ

- Advertisement -
- Advertisement -

ಲೈವ್‌‌‌ ಇದೆ ಎಂದು ಖಚಿತಪಡಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬರು ಝೀ ನ್ಯೂಸ್‌ ಅನ್ನು “ನೀವು ಭಾರತದ ಅತ್ಯಂತ ಕೆಟ್ಟ ಚಾನೆಲ್” ಎಂದು ತರಾಟೆಗೆ ಪಡೆದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ಭಾರತ-ಇಂಗ್ಲೇಂಡ್‌ ಟಿ20 ವಿಶ್ವಕಪ್‌ ಸಮಿಫೈನಲ್‌‌‌ ಪಂದ್ಯದ ನಡೆದಿದೆ. ಕನಿಷ್ಠ ಪಕ್ಷ ಇಲ್ಲಾದರೂ ಕೋಮುವಾದ ಮಾಡಬೇಡಿ ಎಂದು ಅವರು ಕ್ಯಾಮರಾ ಮುಂದೆ ಹೇಳಿದ್ದು, ಅದು ಝೀ ನ್ಯೂಸ್‌ನಲ್ಲೆ ಲೈ‌ವ್‌ ಪ್ರಸಾರವಾಗಿದೆ.

ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಝೀ ನ್ಯೂಸ್‌ಗೆ ಪಾಠ ಮಾಡಿರುವ ಯುವಕನಿಗೆ ಅಭಿನಂಧನೆಗಳ ಮಹಾಪೂರ ಹರಿದು ಬಂದಿದೆ. ಝೀ ನ್ಯೂಸ್‌ ದೇಶದ ಪ್ರಮುಖ ಸುದ್ದಿ ವಾಹಿನಿಯಾಗಿದ್ದು, ಅದು ತನ್ನ ಕೋಮುವಾದಿ ಕಾರ್ಯಕ್ರಮಗಳಿಗೆ ಪ್ರಸಿದ್ದವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2022 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ ವಿರುದ್ಧ ಸೋತ ನಂತರ ಅಡಿಲೇಡ್‌ನಿಂದ ಈ ಲೈವ್‌ ಅನ್ನು ಝೀ ನ್ಯೂಸ್ ‌ಪ್ರಸಾರ ಮಾಡಿತ್ತು. ಪಂದ್ಯದ ಬಗ್ಗೆ ಝೀ ಟಿವಿಯು ಅಲ್ಲಿ ಅಭಿಮಾನಿಗಳ ಜೊತೆಗೆ ಅಭಿಪ್ರಾಯವನ್ನು ಕೇಳುತ್ತಿತ್ತು. ಈ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: ಪತ್ರಕರ್ತರಿಗೆ ಲಂಚ| ಸಿಎಂ ಮಾಧ್ಯಮ ಸಲಹೆಗಾರರ ಸರ್ಕಾರಿ ಕಾರಿನಲ್ಲೇ ತಲುಪಿತ್ತೇ ಲಕ್ಷ, ಲಕ್ಷ ಹಣ?

“ನೋಡಿ, ಮೊದಲನೆಯದಾಗಿ ಇದು ಒಂದು ಆಟವಾಗಿದೆ. ನಮ್ಮ ಕೈಯಲ್ಲೋ, ಇನ್ನೊಬ್ಬ ಕೈಯ್ಯಲ್ಲೊ…ಎಲ್ಲವೂ ಸರಿ, ಬಿಡಿ” ಭಾರತೀಯ ಅಭಿಮಾನಿ ಝೀ ನ್ಯೂಸ್‌ ಕ್ಯಾಮೆರಾದ ಮುಂದೆ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಅವರು, “ಇದು ಲೈವ್ ಆಗುತ್ತಿದೆಯೇ?” ಎಂದು ಅವರು ಕೇಳಿದ್ದು, ವರದಿಗಾರ ಹೌದು ಲೈವ್‌ ಆಗುತ್ತಿದೆ ಎಂದು ಹೇಳಿದ್ದಾರೆ. “ಸರಿ, ಇದು ಝೀ ಟಿವಿ, ಮೊದಲನೆಯದಾಗಿ ನಿಮಗೆ ಹೇಳಲು ಇಚ್ಛಿಸುವುದೇನೆಂದರೆ, ನಿಮಗೆ ಅಭ್ಯಂತರವಿಲ್ಲದಿದ್ದರೆ, ಕನಿಷ್ಠ ಇಲ್ಲಾದರೂ ಹಿಂದೂ-ಮುಸ್ಲಿಂ ಮಾಡಬೇಡಿ” ಎನ್ನುತ್ತಿದ್ದಂತೆ ವರದಿಗಾರ ಕ್ಯಾಮರಾವನ್ನು ತಿರುಗಿಸುತ್ತಾರೆ.

ಈ ವೇಳೆ ಯುವಕ, “ನೀವು ಭಾರತದ ಅತ್ಯಂತ ಕೆಟ್ಟ ಚಾನೆಲ್‌‌” ಎಂದು ಕಿರುಚಿ ಹೇಳಿದ್ದಾರೆ. ಅವರು ಮಾತು ಝೀ ಟಿವಿಯಲ್ಲಿ ಲೈವ್‌ ಪ್ರಸಾರವಾಗಿದೆ.

ಝೀ ನ್ಯೂಸ್ ಆಗಾಗ್ಗೆ ದ್ವೇಷದ ಭಾಷಣವನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ‘ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ’ವು ಝೀ ಟಿವಿಗೆ ಮುಸ್ಲಿಂ ಜನಸಂಖ್ಯೆಯ ಮೇಲಿನ ಕಾರ್ಯಕ್ರಮವನ್ನು ತೆಗೆದುಹಾಕುವಂತೆ ಕೇಳಿಕೊಂಡಿತ್ತು. ಜೊತಗೆ ಚಾನೆಲ್‌ ಅಜೆಂಡಾಕ್ಕಾಗಿ ಇದನ್ನು ಮಾಡುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

ಘಟನೆ ನಂತರ ನ್ಯೂಸ್ ಲಾಂಡ್ರಿ ಯುವಕನನ್ನು ಮಾತನಾಡಿಸಿದೆ. ವೂಲ್‌ವರ್ತ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಮತ್ತು ಕಳೆದ ಏಳು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಸಾಹಿಲ್ ಸರೋಯಾ, “ನನ್ನ ದೇಶದ ಮಾಧ್ಯಮಗಳ ಸ್ಥಿತಿ ನನ್ನನ್ನು ಅಸಮಾಧಾನಗೊಳಿಸಿದೆ” ಎಂದು ಹೇಳಿದ್ದಾರೆ.

“ನಾನು ಪ್ರತಿ ತಿಂಗಳು ಭಾರತಕ್ಕೆ ಹೋಗಲು ಸಾಧ್ಯವಿಲ್ಲ… ನಾನು ಮಾಡಬಹುದಾದ ಎಲ್ಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ತಲುಪುವುದಿಲ್ಲ. ಹಾಗಾಗಿ ನಿನ್ನೆ ನಾನು ಅಲ್ಲಿ ಝೀ ನ್ಯೂಸ್ ಮೈಕ್ ಅನ್ನು ನೋಡಿದೆ, ಆ ವೇಳೆ ಅವರು ಲೈವ್ ಆಗಿದ್ದರು. ಝೀಟಿವಿ ಏನು ಮಾಡುತ್ತಿದೆ ಮತ್ತು ಹೇಗೆ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ವೀಕ್ಷಕರಿಗೆ ಬಹಿರಂಗಪಡಿಸುವುದು ಅಥವಾ ಹೇಳುವುದು ನನ್ನ ಏಕೈಕ ಉದ್ದೇಶವಾಗಿತ್ತು.” ಎಂದು ಸಾಹಿಲ್ ಹೇಳಿದ್ದಾರೆ.

“ನಾನು ಅನೇಕ ವಿಷಯಗಳನ್ನು ಸಭ್ಯ ರೀತಿಯಲ್ಲಿ ಹೇಳಲು ಬಯಸಿದ್ದೆ. ಆದರೆ ವರದಿಗಾರ ನನ್ನನ್ನು ತಳ್ಳಿದ್ದರಿಂದ ನನಗೆ ಕೆಟ್ಟದು ಅನಿಸಿತು, ಹಾಗಾಗಿ ನಾನು ಅಲ್ಲಿಂದ ಹೊರಟೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜನಮತಗಣನೆಯಲ್ಲಿ ಚಿಲಿಯ ಹೊಸ ಸಂವಿಧಾನ ಸೋತದ್ದೇಕೆ? ಮಾಧ್ಯಮಗಳ ಪಾತ್ರವೇನು?

ಭಾರತದ ಮಾಧ್ಯಮದ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಆಸ್ಟ್ರೇಲಿಯಾದ ಮಾಧ್ಯಮಕ್ಕೆ ಭಾರತದ ಮಾಧ್ಯಮಗಳನ್ನು ಹೋಲಿಸುವುದಿಲ್ಲ. ಆದರೆ ನಮ್ಮ ಮಾಧ್ಯಮಗಳು ಅತ್ಯಂತ ಕೆಳಮಟ್ಟಕ್ಕೆ ಹೋಗಿವೆ ಮತ್ತು ಇಲ್ಲಿನ ಜನರು ಟಿವಿಯಲ್ಲಿ ಸರ್ಕಸ್ ಆಡುವ ಆಂಕರ್‌ಗಳನ್ನು ಗೇಲಿ ಮಾಡುತ್ತಾರೆ ಎಂದು ಹೇಳಿದ್ದಾರೆ.

“ಭಾರತದ ಮಾಧ್ಯಮಗಳು ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ. ನನ್ನ ಬಾಲ್ಯದಲ್ಲಿ ಜನರು ಈ ವಿಷಯಗಳ ಬಗ್ಗೆ ಎಂದಿಗೂ ಜಗಳವಾಡಿಲ್ಲ. ಆದರೆ ಈಗ ಎಲ್ಲೆಡೆ, ಹಿಂದೂ-ಮುಸ್ಲಿಂ, ಹಿಂದೂ-ಮುಸ್ಲಿಂ ಎಂದು ಜಗಳಗಳಾಗುತ್ತಿವೆ. ಇದಕ್ಕೆಲ್ಲಾ ಕಾರಣ ಈ ಪ್ರೊಪಗಾಂಡ ವಾಹಿನಿಗಳು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯರು ಈಗಲೂ ಧರ್ಮದ ಆಧಾರದಲ್ಲಿ ಸ್ನೇಹಿತರನ್ನು ಹೊಂದುವುದಿಲ್ಲ ಮತ್ತು ವ್ಯವಹಾರ ಗಳನ್ನೂ ಮಾಡುವುದಿಲ್ಲ
    ಜಾತಿ ಧರ್ಮಗಳ ಆಧಾರದಲ್ಲಿ ವಿಭಜನೆ ಆಗುತ್ತಿರುವುದು ರಾಜಕಾರಣಿ ಮತ್ತು ಮಾಧ್ಯಮಗಳಿಂದ ಮಾತ್ರ.
    ನಿರ್ಲಕ್ಷವೇ ಪರಿಹಾರ

LEAVE A REPLY

Please enter your comment!
Please enter your name here

- Advertisment -

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...

ಮುಂಬೈ: 2 ದಿನಗಳಿಂದ ಹೊತ್ತಿ ಉರಿಯುತ್ತಿರುವ ಪೊವೈ ಬೆಟ್ಟಗಳು: ನಿವಾಸಿಗಳಿಂದ ಅಧಿಕಾರಿಗಳ ನಿಷ್ಕ್ರಿಯತೆಯ ಆರೋಪ 

ಮುಂಬೈನ ಪೊವೈ ಬೆಟ್ಟಗಳ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಕಳೆದ ಎರಡು ದಿನಗಳಿಂದ ಉರಿಯುತ್ತಿದೆ ಎಂದು ವರದಿಯಾಗಿದೆ. ನಿವಾಸಿಗಳು ಬೆಂಕಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರಿಕ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಯು ಸಿಕ್ಕಿಲ್ಲ...

‘ದಲಿತ ಕ್ರೈಸ್ತ’ರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು: ಮಾನವ ಹಕ್ಕುಗಳ ಕಾರ್ಯಕರ್ತ ವಿನ್ಸೆಂಟ್ ಕಥಿರ್

"ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು, ಇದರಿಂದಾಗಿ ಜಾತಿ ಹಿಂಸಾಚಾರದ ಬಲಿಪಶುಗಳು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಪ್ರಕಾರ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದು" ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ...

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಚರ್ಚೆ

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು...

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...

ಭಾರತೀಯರ ಅಡುಗೆ ಮನೆ ತಲುಪಿದ ಯುದ್ಧದ ಪರಿಣಾಮ : ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಲ್ಬಣ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ಪ್ರಧಾನಿ ಮೋದಿಯವರ ಕೈಯಲ್ಲಿ ಭದ್ರವಾಗಿದೆ ಎಂದು ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿರುವಾಗಲೇ,...

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...