Homeಕರ್ನಾಟಕಭಾರತದ ಪ್ರಜೆಗಳನ್ನು ಅನುಮಾನದಿಂದ ನೋಡುತ್ತಿದೆಯೇ ಸರ್ಕಾರ?

ಭಾರತದ ಪ್ರಜೆಗಳನ್ನು ಅನುಮಾನದಿಂದ ನೋಡುತ್ತಿದೆಯೇ ಸರ್ಕಾರ?

ನಾನು ಪೌರತ್ವವನ್ನು ಸಾಬೀತುಪಡಿಸಲು ಅಧಿಕಾರಿ ಮುಂದೆ ಹಾಜರಾಗಿ ದಾಖಲೆಗಳನ್ನು ನೀಡಿ ಅದು ಸಾಬೀತಾಗುವವರೆಗೂ ನಾನು ಭಾರತದ ಪ್ರಜೆ ಅಲ್ಲ.

- Advertisement -
- Advertisement -

ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಮಗು ಕೂಡ ನೈಸರ್ಗದತ್ತವಾಗಿ ಭಾರತದ ಪೌರತ್ವ ಪಡೆಯುತ್ತದೆ ಎಂದು ರಾಜ್ಯಶಾಸ್ತ್ರದಲ್ಲಿ ಓದಿದ ನೆನಪು. ಪದವಿ ವ್ಯಾಸಂಗ ಮಾಡುತ್ತಿದ್ದಾಗ ರಾಜ್ಯಶಾಸ್ತ್ರದ ಪ್ರಾಧ್ಯಾಪಕರು ಪೌರತ್ವ ಹೇಗೆ ಬರುತ್ತದೆ ಎಂಬ ಬಗ್ಗೆ ತರಗತಿಯಲ್ಲಿ ಪಾಠ ಮಾಡುವಾಗ ಹೇಳಿದ್ದರು. ಅದರ ಆಧಾರದ ಮೇಲೆ ನಾನು ಇದುವರೆಗೂ ಭಾರತೀಯ ಪೌರನೆಂದು ಹೆಮ್ಮೆಯಿಂದ ಅಂದುಕೊಂಡಿದ್ದೆ. ನಾನು ಈ ದೇಶದ ಪೌರತ್ವವನ್ನು ಹುಟ್ಟಿನ ಕಾರಣದಿಂದ ಪಡೆದಿದ್ದೇನೆ ಎಂದು ಅರ್ಥಮಾಡಿಕೊಂಡಿದ್ದೆ. ಆದರೆ ಈಗ ಅನುಮಾನ ಕಾಡಲು ಶುರುವಾಗಿದೆ. ಹಾಗೆಯೇ ನನ್ನಂಥ ಹಲವರನ್ನೂ ಕೂಡ ಕಾಡತೊಡಗಿದೆ. ಇಲ್ಲಿ ನಾನು ಆಡಳಿತ ಪಕ್ಷ, ವಿರೋಧ ಪಕ್ಷ, ಪ್ರಾದೇಶಿಕ ಪಕ್ಷ, ಅಧಿಕಾರಿ, ನೌಕರ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲರೂ ಪೌರತ್ವ ಸಾಬೀತುಪಡಿಸಲೇಬೇಕು. ಇಲ್ಲಿ ಯಾರನ್ನೂ ಮಾಫ್ ಮಾಡಲು ಬರುವುದಿಲ್ಲ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಮಾಡುವ ಸಂದರ್ಭದಲ್ಲಿ ಅನುಮಾನ ಬಲವಾಗಿ ಕಾಡತೊಡಗಿದೆ. ನಾನು ಪೌರತ್ವವನ್ನು ಸಾಬೀತುಪಡಿಸಲು ಅಧಿಕಾರಿ ಮುಂದೆ ಹಾಜರಾಗಿ ದಾಖಲೆಗಳನ್ನು ನೀಡಿ ಅದು ಸಾಬೀತಾಗುವವರೆಗೂ ನಾನು ಭಾರತದ ಪ್ರಜೆ ಅಲ್ಲ. ನನ್ನಂಥೆ ಈ ದೇಶದ ಎಲ್ಲರೂ ಎರಡು ಅಥವಾ ಅದಕ್ಕಿಂತ ಹೆಚ್ಚು ದಾಖಲೆಗಳನ್ನು ಹಾಜರುಪಡಿಸಿದ ಮೇಲೆಯೇ ಪೌರರಾಗಲು ಸಾಧ್ಯ. ಸರ್ಕಾರಕ್ಕೆ ಈ ದೇಶದ ಪ್ರಜೆಗಳಾದ ಪೌರರ ಮೇಲೆ ಅನುಮಾನ ಬಂದಿದೆಯೇ ಎಂಬುದು ನನ್ನ ಮುಂದಿರುವ ಯಕ್ಷಪ್ರಶ್ನೆ.

ರಾಷ್ಟ್ರೀಯ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಗೆ ನಾನು ಸೇರಿದಂತೆ ಪ್ರತಿಯೊಬ್ಬರು ಸರ್ಕಾರ ನಿಗದಿಪಡಿಸಬಹುದಾದ ದಾಖಲೆಗಳನ್ನು ತೋರಿಸುವುದು ಕಡ್ಡಾಯ. ಅಂದರೆ ನನ್ನ ಪೌರತ್ವವನ್ನು ನಾನು ಸಾಬೀತುಪಡಿಸಬೇಕು. ನನ್ನ ಬಳಿ ಎಲ್ಲಾ ದಾಖಲೆಗಳು ಇರಬಹುದು. ಹಾಗಂತೆ ನಾನು ಪೌರತ್ವ ಪಡೆದಿದ್ದೇನೆ. ನಾನೇಕೆ ತೋರಿಸಬೇಕು ಎಂದು ಸುಮ್ಮನೆ ಕೂರುವುದಿಲ್ಲ. ಅಂದರೆ ಪ್ರತಿಯೊಬ್ಬ ಪೌರನೂ ಸರ್ಕಾರದ ಅಧಿಕಾರಿಗಳಿಂದ ಸಹಿ ಮುದ್ರೆ ಹಾಕಲ್ಪಟ್ಟ ದಾಖಲೆಗಳನ್ನು ತೋರಿಸಲೇಬೇಕು. ಅಲ್ಲಿಯವರೆಗೂ ನಾನು ಭಾರತೀಯ ಪೌರ ಎಂದು ಎದೆತಟ್ಟಿ ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ಅಂದಮೇಲೆ ಭಾರತೀಯರಾದ ನಾವು ಮತ್ತೊಮ್ಮೆ ದೊಡ್ಡ ಕ್ಯೂನಲ್ಲಿ ನಿಲ್ಲಲೇಬೇಕಾದಂತಹ ಅನಿವಾರ್ಯತೆ/ ಅಗತ್ಯತೆ ನಮ್ಮ ಮುಂದೆ ಬರಲಿದೆ.

ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ 14 ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ. ಆ ದಾಖಲೆ ಹೊಂದಿದವರೂ ಅಧಿಕಾರಿಗಳ ಮುಂದೆ ಎಲ್ಲಾ ಕೆಲಸಗಳನ್ನು ಬಿಟ್ಟು ಹಾಜರುಪಡಿಸಿದ್ದಾರೆ. ಆದರೆ ಅವೆಲ್ಲವೂ ಅಧಿಕಾರಿಗಳಿಗೆ ಸೂಕ್ತವೆನಿಸದೇ ಇರುವುದರಿಂದ 19 ಲಕ್ಷ ಮಂದಿ ನೋಂದಣಿ ಪಟ್ಟಿಯಿಂದ ಹೊರಗೆ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ (ಎನ್.ಆರ್.ಸಿ ತುರ್ತು ಜಾರಿ ಇಲ್ಲ ಎಂದು ಸರ್ಕಾರ ಹೇಳಿದೆ.)  ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿತು ಅನ್ನಿ. ಆ ಕೂಡಲೇ ಎಲ್ಲರೂ ದಾಖಲೆಗಳನ್ನು ಹೊಂದಿಸಿಕೊಳ್ಳಬೇಕು. ಇಲ್ಲದವರು ಅಧಿಕಾರಿಗಳ ಬಳಿಗೆ ಅಲೆಯಬೇಕು. ಬೇಗ ದಾಖಲೆ ಬೇಕೆಂದರೆ ಲಂಚ ಕೊಡಬೇಕು. ಇದು ಕೇವಲ ಒಬ್ಬರ ಪ್ರಶ್ನೆಯಲ್ಲ. ಇಡೀ ಕುಟುಂಬದ ದಾಖಲೆಯೇ ಇರಬೇಕಾಗುತ್ತದೆ. ಪತ್ನಿ ಬೇರೆ ರಾಜ್ಯದವರಾಗಿದ್ದರೆ ಅದಕ್ಕೂ ದಾಖಲೆ ಬೇಕು. ಅಪ್ಪ-ಅಮ್ಮಂದಿರ ದಾಖಲೆ ಇರಬೇಕು.

ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳು ನಮ್ಮೆಲ್ಲಾ ದಾಖಲೆಗಳನ್ನು ಪರಿಶೀಲಿಸಿ ಅದು ಪಕ್ಕಾ ದಾಖಲೆ ಎಂದು ಪರಿಗಣಿಸಿದ ಮೇಲೆಯೇ ನನ್ನ ಪೌರತ್ವ ಅಧಿಕೃತಗೊಳ್ಳುವುದು. ಇಲ್ಲದಿದ್ದರೆ ಪೌರತ್ವ ಇಲ್ಲವಾಗುತ್ತದೆ. ಪೌರತ್ವ ಸಾಬೀತುಪಡಿಸಲು ತಿಂಗಳುಗಟ್ಟಲೆ ಅಲೆಯುವಂತಾಗುತ್ತದೆ. ಆ ಕಾರಣಕ್ಕಾಗಿಯೇ ದೇಶಾದ್ಯಂತ ಈ ಎರಡೂ ಕಾಯ್ದೆಗಳ ವಿರುದ್ಧ ಜನರು ಗಟ್ಟಿ ದನಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು. ಬಹುತೇಕರು ಮುಸ್ಲಿಮರಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ನಂಬಿದ್ದಾರೆ ಮತ್ತು ತಿಳಿದುಕೊಂಡಿದ್ದಾರೆ. ಇದು ತಪ್ಪು ಗ್ರಹಿಕೆ. ನನ್ನ ಪೌರತ್ವವನ್ನು ಸಾಬೀತುಪಡಿಸಲು ಎಲ್ಲರಂತೆ ಸರದಿ ಸಾಲಿನಲ್ಲಿ ನಿಲ್ಲಲೇಬೇಕು.

ಅದೇ ಕಾರಣಕ್ಕೆ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ಪರ ಮತ ಚಲಾಯಿಸಿದ ಬಿಜೆಪಿ ಮಿತ್ರಪಕ್ಷಗಳೆಲ್ಲವೂ ಒಂದೊಂದೇ ಕಾಯ್ದೆಯಾದ ಮೇಲೆ ವಿರೋಧ ವ್ಯಕ್ತಪಡಿಸುತ್ತಿವೆ. ಈಗ ಬಂದಿರುವ ತಿಳುವಳಿಕೆ ಮತ್ತು ಎಚ್ಚರ ಮತ ಚಲಾಯಿಸುವ ಸಂದರ್ಭದಲ್ಲಿ ಇದ್ದಿದ್ದರೆ ಮಸೂದೆ ಅಂಗೀಕಾರವಾಗುತ್ತಲೇ ಇರಲಿಲ್ಲ. ಮಿತ್ರಪಕ್ಷಗಳ ಮುಖಂಡರು ತಮ್ಮ ಮೇಲಿನ ಹಗರಣಗಳು-ಆರೋಪಗಳಿಂದ ಸದ್ಯಕ್ಕೆ ಬಚಾವಾಗುವ ಸಲುವಾಗಿ ಆತುರಾತುರವಾಗಿ ಪೌರತ್ವ ತಿದ್ದುಪಡಿ ಮಸೂದೆಯ ಪರ ಮತ ಚಲಾಯಿಸುವಂತೆ ಸದಸ್ಯರ ಮೇಲೆ ಒತ್ತಡ ಹೇರಿದವು. ಊರು ಹಾಳಾದ ಮೇಲೆ ದಡ್ಡಿ ಬಾಗಿಲು ಹಾಕಿದರು ಎಂಬಂತೆ ಕಾಯ್ದೆಯಾದ ಕೂಗಿಕೊಂಡರೆ ಬಂದ ಫಲವೇನು ಅಲ್ಲವೇ?

ದೇಶದಲ್ಲಿ ಜಿಡಿಪಿ ಕುಸಿದಿದೆ. ಆರ್ಥಿಕ ಹಿಂಜರಿತವಿದೆ. ಉದ್ದಿಮೆಗಳು ಮುಚ್ಚಿಹೋಗಿವೆ. ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಉದ್ಯೋಗಗಳು ಕಡಿತವಾಗಿವೆ. ಜನರ ಕೊಳ್ಳುವ ಶಕ್ತಿ ಕುಗ್ಗಿದೆ. ಉತ್ಪಾದನೆ ಕುಂಟಿತವಾಗಿದೆ. ನಿರುದ್ಯೋಗ ಸಮಸ್ಯೆ ದೇಶವನ್ನು ಬಾಧಿಸುತ್ತಿದೆ. ಗುಂಪುಹಲ್ಲೆ- ಹತ್ಯೆಗಳು, ಅತ್ಯಾಚಾರ-ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸನ್ನಿವೇಶದಲ್ಲಿ ದೇಶವನ್ನು ಕಿತ್ತುತಿನ್ನುತ್ತಿರುವ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕಾದ ಸರ್ಕಾರ ಅನಗತ್ಯ ಕಾಯ್ದೆಗಳನ್ನು ಜಾರಿಗೆ ತಂದು ಜನರ ನೆಮ್ಮದಿಗೆ ಭಂಗ ತರುವಂತಹ ಕಾರ್ಯ ಮಾಡುವುದು ಸರಿಯಾದ ಕ್ರಮವಲ್ಲ.

ಸಣ್ಣರಾಜ್ಯ ಅಸ್ಸಾಂನಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲು 10 ಸಾವಿರ ಕೋಟಿ ರೂಪಾಯಿ ವೆಚ್ಚ  ವೆಚ್ಚವಾಗಿದೆ ಎಂದು ವರದಿಗಳು ಹೇಳುತ್ತವೆ. ಇದು ನಿಜವೇ ಆದರೆ ದೊಡ್ಡ ರಾಜ್ಯಗಳಲ್ಲಿ ಇದಕ್ಕೆ ಎಷ್ಟು ಕೋಟಿಗಳು ಬೇಕಾಗಬಹುದು. ಒತ್ತೆ ಕೇಂದ್ರಗಳ ನಿರ್ಮಾಣಕ್ಕೆ ಹಣ ಎಷ್ಟು ಬೇಕು. ಅವರಿಗೆ ನಿತ್ಯವೂ ಊಟ ಹಾಕಲು ಬೇಕಾಗುವ ವೆಚ್ಚ ಎಷ್ಟು ಎಂದು ಅಂದಾಜಿಸಲು ಕೂಡ ಸಾಧ್ಯವಿಲ್ಲ. ಜನ ಹೇಗೋ ಕಷ್ಟವೋ ಸುಖವೋ ಅಂತು ಅವರೇ ಸ್ವಂತ ಬಲದಿಂದ ದುಡಿದು ತಿನ್ನುತ್ತಿದ್ದಾರೆ. ಅದಕ್ಕೂ ಕಲ್ಲು ಬೀಳುವುದಿಲ್ಲವೇ? ಸರ್ಕಾರ ಯೋಚಿಸಿ ಕಾಯ್ದೆಯನ್ನು ಹಿಂಪಡೆಯುವುದು ಒಳ್ಳೆಯದು.

(ಲೇಖಕರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು. ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...