Homeಮುಖಪುಟಕಾಂಗ್ರೆಸ್ ಕಮ್ಯೂನಿಸ್ಟರು ದೇಶದ್ರೋಹಿಗಳು : ಸೊಗಡು ಶಿವಣ್ಣ

ಕಾಂಗ್ರೆಸ್ ಕಮ್ಯೂನಿಸ್ಟರು ದೇಶದ್ರೋಹಿಗಳು : ಸೊಗಡು ಶಿವಣ್ಣ

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನಿರಾಶ್ರಿತರಾಗಿರುವ ಜನರಿಗೆ ಅನುಕೂಲ ಮಾಡಿಕೊಡುತ್ತದೆ. ಆದರೆ ಕಾಂಗ್ರೆಸ್ ಮುಖಂಡರು, ಕಮ್ಯೂನಿಸ್ಟರು ಮತ್ತು ಎಸ್.ಡಿ.ಪಿ.ಐ ನವರ ಸಿಎಎ ಕಾಯ್ದೆಯನ್ನು ವಿರೋಧಿಸುತ್ತಾ ದೇಶದ್ರೋಹಿಗಳಾಗಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಅಖಂಡ ಭಾರತ. ಇಲ್ಲಿ ಮುಸ್ಲಿಮರು ಇರಲಿಲ್ಲ. ಘೋರಿ, ಘಜ್ನಿಯಂತಹ ರಾಜರು ಈ ದೇಶ ಆಳ್ವಿಕೆ ಮಾಡಿ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮತಾಂತರ ಮಾಡಿದ್ದಾರೆ. ಮುಸ್ಲಮಾನ ಬಂಧುಗಳು ಕಾಂಗ್ರೆಸ್, ಕಮ್ಯೂನಿಸ್ಟ್ ಮತ್ತು ಎಸ್.ಡಿ.ಪಿ.ಐ ಹಿಂದೆ ಹೋಗಬಾರದು. ಅವರು ಅಪಾಯಕಾರಿಗಳು ಎಂಬುದನ್ನು ತಿಳಿಯಬೇಕು ಎಂದು ತಿಳಿಸಿದ್ದಾರೆ.

ಈ ದೇಶದಲ್ಲಿ ಇಟಲಿಯ ಸೋನಿಯಾ ಗಾಂಧಿ ಅವರಿಗೆ ಭಾರತದ ಪೌರತ್ವದ ನೀಡಲಾಗಿದೆ. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಆಶ್ರಯ ನೀಡಲಾಗಿದೆ. ಆದರೆ ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ಸಿದ್ದರಾಮಯ್ಯ ಅವರಿಗೆ ಮಾನಮರ್ಯಾದೆ ಇದ್ದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಬಾರದು. ಪ್ರತಿಭಟನೆಗೆ ಕುಮ್ಮಕ್ಕು ನೀಡಬಾರದು ಎಂದು ತಾಕೀತು ಮಾಡಿದರು.

ಸ್ವಾತಂತ್ರ್ಯ ಬಂದು 72 ವರ್ಷ ಸಂದಿದೆ. ಕಾಂಗ್ರೆಸ ಪಕ್ಷದವರೇ ಪೌರತ್ವ ಕಾಯ್ದೆಯನ್ನು ಮಾಡಿದ್ದು. ಆದರೆ ಅದನ್ನು ಜಾರಿಗೆ ತರಲು ಕಾಂಗ್ರೆಸ್‌ನವರಿಗೆ ಸಾಮರ್ಥ್ಯವಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಈ ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ. ಅದು ಅವರ ತಾಕತ್ತು. ಕಾಂಗ್ರೆಸ್ ಮುಸ್ಲಿಮರನ್ನು ಮುಂದು ಮಾಡಿಕೊಂಡು ಪ್ರತಿಭಟನೆ ಮಾಡುತ್ತಿದೆ. ಕಮ್ಯುನಿಸ್ಟರು ದೇಶದ್ರೋಹಿಗಳು ಎಂದು ವಾಗ್ದಾಳಿ ನಡೆಸಿದರು.

ಅಖಂಡ ಭಾರತದ ಪರಿಕಲ್ಪನೆ ನಮ್ಮದು. ಇಲ್ಲಿ ಹಿಂದೂಗಳನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅದೇ ಕಾರಣಕ್ಕೆ ಅಖಂಡ ಭಾರತದಲ್ಲಿ ನಿರಾಶ್ರಿತರಾಗಿರುವ ಭಾರತೀಯರನ್ನು ರಕ್ಷಿಸಲು ಈ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಏಕೆ ವಿರೋಧ ಮಾಡುತ್ತಾರೆ. ವಿರೋಧಿಸುವವರೆಲ್ಲರೂ ದೇಶದ್ರೋಹಿಗಳು. ಈ ದೇಶದ ಮುಸ್ಲಿಮರಿಗೆ ಏನೂ ಆಗುವುದಿಲ್ಲ. ಯಾರು ಹೊರದೇಶಗಳಿಂದ ಬಂದಿರುತ್ತಾರೋ ಅವರಿಗೆ ಮಾತ್ರ ಪೌರತ್ವ ಕಾಯ್ದೆ ಅನ್ವಯವಾಗುತ್ತದೆ ಎಂದು ತಿಳಿಸಿದರು.

ತುಮಕೂರು ನಗರದಲ್ಲಿ ಟರ್ಕಿ ದೇಶದ ಕುಟುಂಬವೊಂದು ನೆಲೆಸಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಅದು ಎಲ್ಲಿ ವಾಸವಾಗಿದೆ ಎಂಬುದನ್ನು ಹುಡುಕಿಸುತ್ತಿದ್ದೇನೆ. ವಿದೇಶಿಗರು ತುಮಕೂರಿನಲ್ಲೂ ವಾಸವಾಗಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಕಾಯ್ದೆ ತಂದಿದ್ದೇವೆ. ಇದೇ ವೇಳೆ ಮಾಜಿ ಶಾಸಕರು ಮುಸ್ಲಿಮರನ್ನು ಸೇರಿಸಿಕೊಂಡು ಸಭೆ ನಡೆಸಿದ್ದಾರೆ. ಹೀಗೆ ಸಭೆ ನಡೆಸುವುದು ಅಪಾಯಕಾರಿ. ಕಾಂಗ್ರೆಸ್ ನವರು ಸಭೆ ಮಾಡಬಾರದು ಎಂದು ತಮ್ಮದೇ ವಾದಸರಣಿಯನ್ನು ಮಾಧ್ಯಮದವರ ಮುಂದಿಟ್ಟರು.

ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸೊಗಡು ಶಿವಣ್ಣ ಸಮರ್ಪಕ ಉತ್ತರ ನೀಡಲಿಲ್ಲ. ಶ್ರೀಲಂಕಾಕ್ಕೂ ನಮಗೂ ಏನು ಸಂಬಂಧ ಎಂದ ಅವರು? ಕಾಂಗ್ರೆಸ್ ನವರು, ಕಮ್ಯುನಿಸ್ಟರು, ಎಸ್ಎಫ್ಐ, ಎಸ್.ಡಿ.ಪಿಐನವರು ದೇಶದ್ರೋಹಿಗಳು ಎಂದು ಪುನರುಚ್ಛರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...