ಅಮೇರಿಕನ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಸತತ ನಾಲ್ಕನೇ ಬಾರಿಗೆ ಕುಸಿತ ಕಂಡಿದೆ. ಈ ಮೂಲಕ ರುಪಾಯಿ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ. ಇಂದು ಡಾಲರ್ ಮುಂದೆ ರುಪಾಯಿ 79.74 ರೂ. ಗೆ ಕುಸಿದಿದೆ. ಭಾರತೀಯ ಕರೆನ್ಸಿ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಮತ್ತು ವಿನಿಮಯ ದರವು ಪ್ರತಿ ಅಮೇರಿಕನ್ ಡಾಲರ್‌ಗೆ 80 ರೂ.ಗಿಂತ ಕಡಿಮೆಯಾಗಬಹುದು ಎಂದು ವಿಶ್ಲೇಷಕರು ಮತ್ತು ಅರ್ಥಶಾಸ್ತ್ರಜ್ಞರು ಊಹಿಸಿದ್ದಾರೆ.
ಭಾರತೀಯ ಕರೆನ್ಸಿಯು ಪ್ರತಿ ಅಮೇರಿಕನ್ ಡಾಲರ್ ಮುಂದೆ 80 ರಿಂದ 81 ರ ತನಕ ಕುಸಿಯುವ ಸಾಧ್ಯತೆಯಿದೆ ಎಂದು ಆರ್ಥಿಕ ವಿಶ್ಲೇಷಕರು ಊಹಿಸಿದ್ದಾರೆ ಎಂದು ‘ಮನಿಕಂಟ್ರೋಲ್.ಕಾಂ’ ವರದಿ ಮಾಡಿದೆ. 2022 ರಲ್ಲಿ ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ವಿರುದ್ಧ 7% ಕ್ಕಿಂತ ಹೆಚ್ಚು ಕುಸಿದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುಂದಿನ ದಿನಗಳಲ್ಲಿ ಭಾರತೀಯ ಕರೆನ್ಸಿ ಮತ್ತಷ್ಟು ಕುಸಿಯಲಿದೆ ಎಂದು ಮನಿಕಂಟ್ರೋಲ್.ಕಾಂ ವರದಿ ಹೇಳಿದೆ. ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದ, ಹೂಡಿಕೆದಾರರು ಅಮೆರಿಕದಂತಹ ಸುರಕ್ಷಿತ ಮಾರುಕಟ್ಟೆಗೆ ಹೆಚ್ಚಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಕೊರೊನಾ ನಡುವೆಯು ಸೈನ್ಯದ ಮೇಲೆ 7,660 ಕೋಟಿ ಡಾಲರ್ ಖರ್ಚು ಮಾಡಿದ ಭಾರತ; ವಿಶ್ವದಲ್ಲೆ 3ನೇ ಸ್ಥಾನ!
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ, ಪ್ರಪಂಚದಾದ್ಯಂತದ ದೇಶಗಳ ಮೇಲೆ ಹಣದುಬ್ಬರವು ತೀವ್ರವಾಗಿ ಹೊಡೆತ ನೀಡಿದೆ. ಇದು ಹೆಚ್ಚಿನ ದೇಶಗಳ ಕರೆನ್ಸಿಯ ದರದ ಇಳಿಕೆಗೆ ಕಾರಣವಾಗಿದೆ. ಭಾರತವು ಹಣದುಬ್ಬರದಿಂದ ತಪ್ಪಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡರೂ ಪರಿಣಾಮ ಬೀರಿಲ್ಲ ಎಂದು ಮನಿಕಂಟ್ರೋಲ್.ಕಾಂ ವರದಿ ಹೇಳಿದೆ.


