Homeಮುಖಪುಟ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ...

‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ‘ಚಾರ್ಲಿ’ ಸಿನಿಮಾಕ್ಕೆ ಭಾರೀ ಜನಸ್ಪಂದನೆ ಮೂಡಿ ಬಂತು. ‘ಚಾರ್ಲಿ’ ಎಂಬ ನಾಯಿಯ ಸುತ್ತ ಹೆಣೆದ ಈ ಸಿನಿಮಾವನ್ನು ನೋಡಿ ಅನೇಕರು ಭಾವುಕರಾದರು. ಇದನ್ನೆಲ್ಲ ನೋಡುತ್ತಿದ್ದಾಗ, ‘ಚಾರ್ಲಿ’ ಎಂಬ ನಾಯಿ ಮಾರಾಟದ ಸರಕಾಗಿದೆ ಎನಿಸುತ್ತಿತ್ತು. ‘ಚಾರ್ಲಿ’ ಎಂಬ ನಾಯಿಯ ಕಥೆಗೆ ಜನ ನೀಡುತ್ತಿದ್ದ ವಿಪರೀತ ಸ್ಪಂದನೆಯ ನಡುವೆ- ‘ಕರುಪ್ಪಿ’ ಎಂಬ ನಾಯಿ ತೀವ್ರವಾಗಿ ಕಾಡತೊಡಗಿತ್ತು.

ಯಾವುದು ಉತ್ತಮ ಕಲಾಕೃತಿ? ಅದರ ಲಕ್ಷಣಗಳೇನು? ಎಂಬ ಪ್ರಶ್ನೆಗಳು ಇಂದು ಮೊನ್ನೆಯದ್ದಲ್ಲ. ಪ್ರತಿಯೊಂದು ಕಲಾ ಮಾಧ್ಯಮವು ತನ್ನದೇ ಆದ ಪರಿಭಾಷೆಗಳನ್ನು, ಕಲಾಭಿವ್ಯಕ್ತಿಯ ದಾರಿಗಳನ್ನು ಹೊಂದಿದ್ದರೂ ಕಲಾ ಮೀಮಾಂಸೆಯ ಒಟ್ಟು ಉದ್ದೇಶ- ರಸಾನುಭವ, ಅನುಭೂತಿ. ನಮ್ಮನ್ನು ಇನ್ನಿಲ್ಲದಂತೆ ಕಾಡುವ, ಪದಗಳಲ್ಲಿ ವಿವರಿಸಲಾಗದ ಅವ್ಯಕ್ತ ಭಾವನೆಗಳನ್ನು ಸೃಷ್ಟಿಸುವ ಮಾಧ್ಯಮಗಳನ್ನು- ಉತ್ತಮ ಕಲಾಕೃತಿ ಎನ್ನಬಹುದೇನೋ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳಿನ ಮಾರಿ ಸೆಲ್ವರಾಜ್ ಸಿನಿಮಾಗಳ ಕುರಿತು ಧ್ಯಾನಿಸುತ್ತಾ ಹೋದಂತೆ ಕಲಾ ಮೀಮಾಂಸೆಯ ಪರಿಭಾಷೆಗಳನ್ನೂ ಪಕ್ಕದಲ್ಲಿಟ್ಟು ನೋಡುವುದು ಅನಿವಾರ್ಯವಾಗುತ್ತದೆ. ಸೆಲ್ವರಾಜ್‌ ದೃಶ್ಯ ಕಲಾ ಮಾಧ್ಯಮದಲ್ಲಿ ಕ್ರಿಯಾಶೀಲವಾಗಿರುವ ಸೃಜನಶೀಲ ವ್ಯಕ್ತಿ. ಅವರ ಸಿನಿಮಾಗಳು ಮೂರರಲ್ಲಿ ಮತ್ತೊಂದಾಗದೆ ವಿಶಿಷ್ಟ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿಯೂ, ವಿನೂತನ ಪ್ರತಿರೋಧದ ಹೆಜ್ಜೆಗಳಾಗಿಯೂ ದಾಖಲಾಗುತ್ತಿವೆ.

ನಿರ್ದೇಶಕ ಮಾರಿ ಸೆಲ್ವರಾಜ್‌

ಸಾಹಿತಿ ದೇವನೂರ ಮಹಾದೇವ ಅವರ ಮಾತಿಗಳಿಗೆ ಹೆಚ್ಚು ತೂಕ ಏಕೆ? ಎಂದು ಪ್ರಶ್ನಿಸಿಕೊಂಡರೆ, ಅವರು ಯಾವುದಾದರೂ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡುವಾಗ ಬಳಸುವ ರೂಪಕತೆಗಳೇ ಇದಕ್ಕೆ ಕಾರಣವೆಂದು  ಹೇಳಿಬಿಡಬಹುದು. ಯಾರಿಗೂ ಹೊಳೆಯದ ರೂಪಕಗಳು ದೇವನೂರರಲ್ಲಿ ಮೂಡುತ್ತವೆ. ಅವರ ಪ್ರತಿಕ್ರಿಯೆಗಳು ಸಾಂಸ್ಕೃತಿಕ ಇತಿಹಾಸಕ್ಕೆ ತಳುಕುಹಾಕಿಕೊಂಡು ಸೃಜನಶೀಲವಾಗಿರುತ್ತವೆ. ಮಾರಿ ಸೆಲ್ವರಾಜ್‌ ಅವರ ಕಲಾಕೃತಿಗಳಿಗೂ ಇದೇ ಮಾತು ಅನ್ವಯಿಸಬಹುದೇನೋ.

ಮಾರಿ ಸೆಲ್ವರಾಜ್ ನಿರ್ದೇಶಿಸಿರುವ ‘ಪರಿಯೇರುಮ್ ಪೆರುಮಾಳ್‌- ಬಿ.ಎ. ಬಿ.ಎಲ್‌’, ‘ಕರ್ಣನ್‌’ ಸಿನಿಮಾಗಳಲ್ಲಿ ಬಳಕೆಯಾಗಿರುವ ರೂಪಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಮಾತುಗಳಲ್ಲಿ ವಿವರಿಸಲಾಗದ ಅನುಭೂತಿ ನಮ್ಮದಾಗುತ್ತದೆ. ‘ಪರಿಯೇರುಮ್‌ ಪರುಮಾಳ್‌’ (ಕುದುರೆಯೇರಿ ಬರುವ ಪೆರುಮಾಳ್‌) ಎಂಬುದೇ ಒಂದು ರೀತಿಯ ರೂಪಕ. ‘ಕರ್ಣನ್‌’- ಸಿನಿಮಾವಂತೂ ಹೆಸರು ಮತ್ತು ಅದಕ್ಕಂಟಿದ ಜಾತಿ ಐಡೆಂಟಿಗಳ ಕುರಿತು ಢಾಳಾಗಿ ಚರ್ಚಿಸುತ್ತದೆ.

‘ಪರಿಯೇರುಮ್‌ ಪೆರುಮಾಳ್‌’ ರೂಪಕಗಳು

ಸೆಲ್ವರಾಜ್‌ ಅವರ ಸಿನಿಮಾಗಳಲ್ಲಿ ಹಲವು ರೂಪಕಗಳು ಅಲ್ಲಲ್ಲಿ ಬಳಕೆಯಾದರೂ ಪ್ರಧಾನ ರೂಪಕವೊಂದು ಇಡೀ ಸಿನಿಮಾದುದ್ದಕ್ಕೂ ಹರಿಯುವುದನ್ನು ಕಾಣಬಹುದು. ಪರಿಯೇರುಮ್‌ ಪೆರುಮಾಳ್‌ನಲ್ಲಿ ‘ಕರುಪ್ಪಿ’ (ಕಪ್ಪು ನಾಯಿ) ಪ್ರಧಾನ ರೂಪಕವಾಗಿದೆ. ಕಾರಣವಿಲ್ಲದೆ ಕೊಲೆಯಾಗುವ ಮುಗ್ಧ ಜನರ ಪ್ರತಿನಿಧಿಯಾಗಿ ‘ಕರುಪ್ಪಿ’ ನಿಲ್ಲುತ್ತದೆ. ಇಲ್ಲಿ ಕೊಲೆಯಾಗಿದ್ದು ‘ಕರುಪ್ಪಿ’ಯೋ ‘ಕಥಾನಾಯಕ’ನೋ ಎಂಬ ದುಗುಡವನ್ನು ಕಥೆಯ ಆರಂಭದಲ್ಲೇ ನಿರ್ದೇಶಕ ಬಿಟ್ಟು ಹೊರಡುತ್ತಾರೆ.

ಜಾತಿ ಕಾರಣಕ್ಕೆ ದೌರ್ಜನ್ಯಕ್ಕೊಳಗಾಗುವ, ಆದರೆ ತನ್ನ ಗೆಳತಿಗೆ ಈ ಕಾರಣವನ್ನು ಕೊನೆಯವರೆಗೂ ಹೇಳದೇ ಇರುವ ‘ಕಥಾನಾಯಕ’ ಯಾರಿಗೂ ಕೇಡು ಬಯಸದ ಮುಗ್ಧ ಜೀವಿ. ಗೆಳತಿ ಮುನಿಸಿಕೊಂಡು ಕ್ಲಾಸ್‌ ರೂಮ್‌ನಿಂದ ಹೊರ ನಡೆದಾಗ, ಅನಾಥನಂತೆ ಕುಳಿತ ಪೆರುಮಾಳ್‌ ಹತ್ತಿರ ಧಾವಿಸುತ್ತಾ ಬರುವ ‘ಕರುಪ್ಪಿ’ ಒಂದು ಅಮೂರ್ತ ಕಲ್ಪನೆ. ‘ನಾಯಾರ್‌’ ಹಾಡಿನಲ್ಲಿ ತೋರಿಸಲಾಗುವ ಕ್ರಿಮಿ, ಕೀಟ, ಗಾಯಗೊಂಡ ನಾಯಿ, ಹಾವು, ಚೇಳು- ಇವೆಲ್ಲವೂ ಕಥಾ ನಾಯಕನ ತಬ್ಬಲಿತನವನ್ನು ತೀವ್ರವಾಗಿ ತೋರಿಸುವ ರೂಪಕಗಳು.

ಜಾತಿಯ ಕಾರಣಕ್ಕೆ ಮಾರ್ಯಾದೆ ಹತ್ಯೆಗಳನ್ನು ಮಾಡುತ್ತ ಬರುತ್ತಿರುವ ಮುದುಕ, ಕೊನೆಗೆ ಪೆರುಮಾಳ್‌ನನ್ನು ಕೂಡ ಹೊಡೆದು ರೈಲಿನ ಕಂಬಿಯ ಮೇಲೆ ಮಲಗಿಸಿರುತ್ತಾನೆ. ಸಾವಿನ ದವಡೆಯಲ್ಲಿ ಮಲಗಿರುವ ಆತನತ್ತ ಓಡೋಡಿ ಬರುವ ನೀಲಿ ಬಣ್ಣದ ನಾಯಿ- ತೀವ್ರವಾಗಿ ಕಾಡುತ್ತದೆ. ಸಿನಿಮಾದ ಆರಂಭದಲ್ಲಿ ಕರುಪ್ಪಿಯನ್ನು ರೈಲಿನ ಅಳಿಗೆ ಕಟ್ಟಿ ಕೊಲ್ಲಲಾಗಿರುತ್ತದೆ. ಕರುಪ್ಪಿಯಂತೆಯೇ ಪೆರುಮಾಳ್‌ನನ್ನು ಕೊಲ್ಲಲು ಯತ್ನಿಸುವ ದೃಶ್ಯ ಹಾಗೂ ಎಚ್ಚರದ ಸೂಚಕವಾಗಿ ಓಡೋಡಿ ಬರುವ ಕರುಪ್ಪಿ- ನಮ್ಮನ್ನು ಸದಾ ಕಾಡುವ ರೂಪಕಗಳು.

‘ಕರ್ಣನ್‌’ ರೂಪಕಗಳು

ತುಳುನಾಡಿನ ದಲಿತ ಆತ್ಮಕಥೆಗಳನ್ನು ‘ಪಾಡ್ದನಾಗಳು’ ಎಂದು ಕರೆಯಲಾಗಿದೆ. ಇಲ್ಲಿನ ಭೂತಗಳನ್ನು ದಲಿತ ಪೂರ್ವಜರು ಎಂದು ಗುರುತಿಸಲಾಗಿದೆ. ಇಂತಹದ್ದೇ ದೈವ ಕಲ್ಪನೆಯನ್ನು ‘ಕರ್ಣನ್‌’ ಸಿನಿಮಾದಲ್ಲಿ ತರಲಾಗಿದೆ. ಇಡೀ ಸಿನಿಮಾದುದ್ದಕ್ಕೂ ಚಲಿಸುವ ಪ್ರಧಾನ ರೂಪಕವಿದು. ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಿದ್ದು ಹೊರಳಾಗಿ, ಯಾರ ಸಹಾಯವೂ ಸಿಗದೆ ಸಾವಿಗೀಡಾದ ಮಗು- ದೈವ ರೂಪ ಪಡೆಯುತ್ತದೆ. ದಲಿತರು ವಾಸವಿರುವ ಈ ಊರಿನ ಮುಂದೆ ಬಸ್‌ ನಿಲ್ಲಿಸದೆ ಇರುವುದು ಕ್ರಾಂತಿಯ ಮೂಲ. ಜಾತಿ ವಾದಿಗಳ ಅಸಹನೆ, ಕಿರುಕುಳ ಎಲ್ಲವನ್ನೂ ಪ್ರಶ್ನಿಸಿ, ಇಡೀ ವ್ಯವಸ್ಥೆಗೆ ಪ್ರತಿರೋಧ ತೋರುವಾಗಲೆಲ್ಲ- ಆ ದೈವದ ರೂಪ ತೆರೆಯ ಮೇಲೆ ಬಂದು ಖುಷಿಪಟ್ಟು ಹೋಗುತ್ತದೆ. ಬಸ್ಸನ್ನು ಛಿದ್ರ ಛಿದ್ರ ಮಾಡಿದಾಗ, ಇಡೀ ಊರೇ ಒಂದಾಗಿ ಹೋರಾಟಕ್ಕೆ ಸಜ್ಜಾದಾಗ, ಕಥಾ ನಾಯಕ ಕತ್ತಿ ಹಿಡಿದು ಕುದುರೆ ಏರಿ ಬರುವ ಮುನ್ನ… ಹೀಗೆ ಅನೇಕ ಸಂದರ್ಭಗಳಲ್ಲಿ ಈ ದೈವ ಪ್ರವೇಶಿಸುತ್ತದೆ.

ಬಸ್‌ ನಿಲ್ಲಿಸದ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತ, ಆನೆ ಮೇಲೆ ಏರಿ ಬರುವ ಊರಿನ ಜನ, ಜನಜಂಗುಳಿಯನ್ನು ಹಾದಿಹೋಗಲಾರದೆ ನಿಂತಿರುವ ವಾಹನಗಳು, ತಲೆ ಇಲ್ಲದ ಬುದ್ಧನ ವಿಗ್ರಹ, ಬುದ್ಧನ ಶಿರದ ಮೇಲೆ ಉದಯಿಸಿದಂತೆ ಭಾಸವಾಗುವ ಸೂರ್ಯ, ಕಾಲಿಗೆ ಕಟ್ಟು ಬಿಗಿದ ಕತ್ತೆ ಕುಂಟುತ್ತಾ ನಡೆಯುವುದು, ದೇವರ ಕತ್ತಿ, ಕೋಳಿ ಮರಿಗಳನ್ನು ಕದ್ದು ಹೊತ್ತುಯ್ಯುವ ರಣಹದ್ದು, ಪ್ರತಿರೋಧದ ಸೂಚಕವಾಗಿ ಕತ್ತೆಯ ಕಾಲಿನ ಕಟ್ಟು ಬಿಚ್ಚುವುದು… ಹೀಗೆ ಅನೇಕ ರೂಪಕಗಳನ್ನು ಕರ್ಣನ್‌ನಲ್ಲಿ ಬಳಸಲಾಗಿದೆ.

ತಲೆಗೆ ಮುಂಡಾಸು ಕಟ್ಟಿ ಮಾತನಾಡಿದ ಕಾರಣಕ್ಕೆ ಕೋಪಾದ್ರಿಕ್ತನಾದ ಪೊಲೀಸ್‌ ಅಧಿಕಾರಿ, ವಯಸ್ಸಾದವರನ್ನು ಥಳಿಸುವುದು, ಪತಂಗವೊಂದು ಆ ಭೀಕರ ದೃಶ್ಯಗಳ ಸುತ್ತ ಹಾರಾಡುವುದು, ವಿಷಯ ತಿಳಿದ ಊರಿನ ಜನ ಪೊಲೀಸ್‌ ಠಾಣೆಗೆ ನುಗ್ಗಿ ಪ್ರತಿರೋಧ ತೋರುವಾಗ ಬಾಬಾ ಸಾಹೇಬರ ಫೋಟೋಕ್ಕೆ ಕೈ ತಗುಲಿ, ಆ ಫೋಟೋ ಅತ್ತಂದಿತ್ತ ಅಲ್ಲಾಡುವುದು- ಇವೆಲ್ಲವೂ ವಿಶಿಷ್ಟ ಅನುಭೂತಿಯನ್ನು ಕಟ್ಟಿಕೊಡುತ್ತವೆ.

ಮಾರಿ ಸೆಲ್ವರಾಜ್‌ ಕಥೆಯನ್ನು ಕೇವಲ ಕಥೆಯಾಗಿ ಹೇಳುವುದಿಲ್ಲ. ಹಲವು ರೂಪಕಗಳನ್ನು ತನ್ನ ಸಿನಿಮಾಗಳಲ್ಲಿ ಸಶಕ್ತವಾಗಿ ಬಳಸುತ್ತಾ ಹೋಗುತ್ತಾರೆ. ಸಿನಿಮಾದಲ್ಲಿ ಇಡೀ ಕಥೆಗೆ ಒಂದು ತೂಕವಿದ್ದರೆ, ಅದರ ಅಂದವನ್ನು ಹೆಚ್ಚಿಸುವ ರೂಪಕಗಳಿಗೆ ಮತ್ತೊಂದು ತೂಕವಿರುತ್ತದೆ.

ಇದನ್ನೂ ಓದಿರಿ: ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ಸಂತೋಷ್‌ ನಾರಾಯಣ್ ಸಂಗೀತ

ಮುಖ್ಯವಾಗಿ ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ‘ಪರಿಯೇರುಮ್ ಪೆರುಮಾಳ್‌’ ಮತ್ತು ‘ಕರ್ಣನ್‌’ ಸಿನಿಮಾಕ್ಕೆ ಸಂತೋಷ್ ನಾರಾಯಣ್‌ ನೀಡಿರುವ ಸಂಗೀತದಿಂದಾಗಿ ರೂಪಕಗಳ ಕಲಾತ್ಮಕತೆ ಹೆಚ್ಚಿದೆ. ಸೆಲ್ವರಾಜ್‌ ಅವರ ದೃಶ್ಯಗಳ ತೀವ್ರತೆಯನ್ನು ಇಮ್ಮಡಿಗೊಳಿಸುವಲ್ಲಿ ಸಂತೋಷ್ ನಾರಾಯಣ್ ಅವರ ಸಂಗೀತವೂ ಬಹುಮುಖ್ಯ ಪಾತ್ರ ವಹಿಸಿದೆ. ಸಾಂಸ್ಕೃತಿಕ ಬೆಸುಗೆಯನ್ನು ಒಳಗೊಂಡ ಕಥನದೊಳಗೆ ದೇಸಿ ಹಾಗೂ ರ್‍ಯಾಪ್‌‌ ಮಿಶ್ರಿತ ಸಂಗೀತವನ್ನು ಸಂತೋಷ್ ನಾರಾಯಣ್‌ ರಚಿಸಿದ್ದಾರೆ. ಪರಿಯೇರು‌ಮ್‌ ಪೆರುಮಾಳ್‌ನ ‘ಕರುಪ್ಪಿ’, ‘ನಾಯಾರ್‌‌’ ಹಾಡುಗಳು, ‘ಕರ್ಣನ್‌’ನ ‘ಮಂಜನೆತ್ತಿ’, ‘ಕಂಡವರ ಸೊಲ್ಲುಂಗ’, ‘ಉತ್ರಾದಿಂಗ ಯಪ್ಪೊ’ ಹಾಡುಗಳು ಸೆಲ್ವರಾಜ್ ಅವರ ಆಶಯವನ್ನು ಗಟ್ಟಿಗೊಳಿಸಿವೆ.

ಕೊನೆಯದಾಗಿ, ‘ಚಾರ್ಲಿ’ ಥರದ ಮಧ್ಯಮ ವರ್ಗ ಕೇಂದ್ರಿತ ನಾಯಿ ಕಥೆಯಲ್ಲಿ ರೂಪಕತೆಯನ್ನು ಹುಡುಕಬಾರದು. ಭಾವುಕತೆಯೇ ಬಂಡವಾಳವಾಗುವ ಸಿನಿಮಾಗಳಲ್ಲಿ ಕಲಾತ್ಮಕತೆಯನ್ನು, ದಟ್ಟ ಅನುಭೂತಿಯನ್ನು ನಿರೀಕ್ಷಿಸಲಾಗದು ಎಂಬುದು ನಿಜ. ಆದರೆ ಸಿನಿಮಾವೊಂದು ಅಷ್ಟೇ ಆಗಿ ನಿಲ್ಲಬಾರದೆಂಬುದು ಇಲ್ಲಿನ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...