‘ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುತ್ತಿದ್ದಾರೆ’ ಮತ್ತು ಹಮಾಸ್ ಅನ್ನು ಬೆಂಬಲಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗೆ ವೀಸಾ ರದ್ದುಗೊಳಿಸಿದ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಸ್ವಯಂ ಗಡೀಪಾರು ಮಾಡಿ ದೇಶ ತೊರೆದಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಗರ ಯೋಜನೆಯಲ್ಲಿ ಪಿಹೆಚ್‌ಡಿ ವಿದ್ಯಾರ್ಥಿಯಾಗಿದ್ದ ಭಾರತೀಯ ಪ್ರಜೆ ರಂಜನಿ ಶ್ರೀನಿವಾಸನ್ ಅವರು ಎಫ್-1 ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕ ಪ್ರವೇಶಿಸಿದ್ದರು ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ (ಡಿಹೆಚ್‌ಎಸ್) ಶುಕ್ರವಾರ (ಮಾ.14) ಹೇಳಿಕೆಯಲ್ಲಿ ತಿಳಿಸಿದೆ.
ರಂಜನಿ ಶ್ರೀನಿವಾಸನ್ ಅವರು ಗಾಝಾದ ಹಮಾಸ್ ಗುಂಪನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಮೆರಿಕ ವಿದೇಶಾಂಗ ಇಲಾಖೆ ಮಾರ್ಚ್ 5ರಂದು ಅವರ ವೀಸಾವನ್ನು ರದ್ದುಗೊಳಿಸಿತ್ತು. ಮಾರ್ಚ್ 11 ರಂದು ರಂಜನಿ ಅವರು ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಹೋಮ್ ಆ್ಯಪ್ ಬಳಸಿ ಸ್ವಯಂ-ಗಡೀಪಾರು ಮಾಡಿಕೊಂಡಿರುವುದಾಗಿ ಇಲಾಖೆ ತಿಳಿಸಿದೆ.
‘ಹಿಂಸೆ ಮತ್ತು ಭಯೋತ್ಪಾದನೆ’ಯನ್ನು ಪ್ರತಿಪಾದಿಸಿದ್ದಕ್ಕಾಗಿ ವಿದ್ಯಾರ್ಥಿ ವೀಸಾ ರದ್ದುಗೊಳಿಸಲ್ಪಟ್ಟ ಕೊಲಂಬಿಯಾ ವಿವಿ ವಿದ್ಯಾರ್ಥಿಗಳಲ್ಲಿ ಒಬ್ಬರು ಸಿಬಿಪಿ ಹೋಮ್ ಆ್ಯಪ್ ಬಳಸಿಕೊಂಡು ಸ್ವಯಂ-ಗಡಿಪಾರು ಮಾಡಿಕೊಂಡಿದ್ದಾರೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಂಜನಿ ಅವರು ದೇಶ ತೊರೆದ ವಿಡಿಯೋ ಹಂಚಿಕೊಂಡಿರುವ ಅವರು,”ಅಮೆರಿಕದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ನೀಡಲಾಗುತ್ತಿರುವುದು ಒಂದು ಸೌಭಾಗ್ಯ. ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವಾಗ ಆ ಸವಲತ್ತನ್ನು ರದ್ದುಗೊಳಿಸಬೇಕು ಮತ್ತು ನೀವು ಈ ದೇಶದಲ್ಲಿ ಇರಬಾರದು. ಕೊಲಂಬಿಯಾ ವಿಶ್ವವಿದ್ಯಾಲಯದ ಭಯೋತ್ಪಾದಕ ಬೆಂಬಲಿಗರಲ್ಲಿ ಒಬ್ಬರು ಸ್ವಯಂ ಗಡೀಪಾರು ಮಾಡಲು ಸಿಬಿಪಿ ಹೋಮ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ನೋಡಿ ನನಗೆ ಸಂತೋಷವಾಗಿದೆ” ಎಂದು ಬರೆದುಕೊಂಡಿದ್ದಾರೆ.
It is a privilege to be granted a visa to live & study in the United States of America.
When you advocate for violence and terrorism that privilege should be revoked and you should not be in this country.
I’m glad to see one of the Columbia University terrorist sympathizers… pic.twitter.com/jR2uVVKGCM
— Secretary Kristi Noem (@Sec_Noem) March 14, 2025
ಎಫ್-1 ವೀಸಾದ ಅವಧಿ ಮೀರಿ ತಂಗಿದ್ದ ಪ್ಯಾಲೇಸ್ತೀನ್ ವಿದ್ಯಾರ್ಥಿಯೊಬ್ಬರನ್ನು ಬಂಧಿಸಲಾಗಿದೆ” ಎಂದು ಡಿಹೆಚ್‌ಎಸ್ ಹೇಳಿಕೆ ತಿಳಿಸಿದೆ.
ಜನವರಿ 26, 2022ರಂದು ಹಾಜರಾತಿ ಕೊರತೆಯಿಂದಾಗಿ ವಿದ್ಯಾರ್ಥಿ ವೀಸಾ ಅವಧಿ ಮುಗಿದಿದೆ. ಆ ನಂತರವೂ ದೇಶದಲ್ಲಿ ಉಳಿದಿದ್ದಕ್ಕಾಗಿ, ವೆಸ್ಟ್ ಬ್ಯಾಂಕ್‌ನ ಪ್ಯಾಲೆಸ್ತೀನ್ ಮೂಲದ ಲೆಕಾ ಕೊರ್ದಿಯಾ ಎಂಬ ಕೊಲಂಬಿಯಾ ವಿವಿ ವಿದ್ಯಾರ್ಥಿಯನ್ನು ಐಸಿಇ ಹೆಚ್‌ಎಸ್‌ಐ ನ್ಯೂಯಾರ್ಕ್ ಅಧಿಕಾರಿಗಳು ಬಂಧಿಸಿದ್ದಾರೆ.
ಏಪ್ರಿಲ್ 2024 ರಲ್ಲಿ, ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಮಾಸ್ ಪರ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧಿಸಲ್ಪಟ್ಟವರಲ್ಲಿ ಕೊರ್ದಿಯಾ ಕೂಡ ಒಬ್ಬರು.
ಗಾಝಾದಲ್ಲಿ ಇಸ್ರೇಲ್ ನಡೆಸಿರುವ ಮತ್ತು ಪ್ರಸ್ತುತ ನಡೆಸುತ್ತಿರುವ ಆಕ್ರಮಣದ ವಿರುದ್ಧದ ಕ್ಯಾಂಪಸ್ ಪ್ರತಿಭಟನೆಗಳಲ್ಲಿ ಭಾಗವಹಿಸುವುದಕ್ಕೆ ಅಮೆರಿಕದ ಟ್ರಂಪ್ ಆಡಳಿತ ಅವಕಾಶ ನೀಡುತ್ತಿಲ್ಲ. ಈ ಪ್ರತಿಭಟನೆಗಳನ್ನು ಹಮಾಸ್‌ಗೆ ಬೆಂಬಲ ನೀಡುವುದಕ್ಕೆ ಸಮ ಎಂದು ಟ್ರಂಪ್ ಆಡಳಿತ ಪರಿಗಣಿಸಿದೆ.
ಭಾರತೀಯರು ಸೇರಿದಂತೆ ಗಣನೀಯ ಸಂಖ್ಯೆಯ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಹೊಂದಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಲವಾರು ಬಾರಿ ಗಾಝಾ ಆಕ್ರಮಣದ ವಿರುದ್ದ ಪ್ರತಿಭಟನೆಗಳು ನಡೆದಿವೆ. ಆದರೆ, ಟ್ರಂಪ್ ಆಡಳಿತ ಬಂದ ಬಳಿಕ ಕ್ಯಾಂಪಸ್ ಪ್ರತಿಭಟನೆಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕಳೆದ ಗುರುವಾರ (ಮಾ.13) ತಡರಾತ್ರಿ ಹೊರಡಿಸಿದ ಆದೇಶದಲ್ಲಿ ಟ್ರಂಪ್ ಆಡಳಿತವು ಕೊಲಂಬಿಯಾ ವಿವಿಯ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್ ಅಧ್ಯಯನ ವಿಭಾಗವನ್ನು (MESAAS) ‘ಅಕಾಡೆಮಿಕ್ ರಿಸೀವರ್‌ಶಿಪ್’ಗೆ ಒಳಪಡಿಸಬೇಕೆಂದು ಒತ್ತಾಯಿಸಿದೆ. ಅಂದರೆ, ಈ ವಿಭಾಗಗಳನ್ನು ವಿವಿಯ ಹೊರತಾಗಿ ಹೊರಗಿನ ಪ್ರಾಧಿಕಾರವು ನಿಯಂತ್ರಣವನ್ನು ತೆಗೆದುಕೊಳ್ಳಲಿದೆ. ಆಗಾಗ, ವಿಭಾಗಗಳನ್ನು ದುರುಪಯೋಗ ಮಾಡಿಕೊಳ್ಳುವುತ್ತಿರುವುದಕ್ಕೆ ಶಿಕ್ಷೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.
ಮಾರ್ಚ್ 20ರೊಳಗೆ ಅಕಾಡೆಮಿಕ್ ರಿಸೀವರ್‌ಶಿಪ್ ವ್ಯವಸ್ಥೆ ರಚಿಸುವ ಯೋಜನೆ ರೂಪಿಸುವಂತೆ ವಿವಿಗೆ ಸೂಚಿಸಲಾಗಿದೆ. ಅನುಸರಿಸಲು ವಿಫಲವಾದರೆ ವಿವಿ ಮತ್ತು ಸರ್ಕಾರದ ನಡುವಿನ ಆರ್ಥಿಕ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪತ್ರ ಆದೇಶ ಎಚ್ಚರಿಸಿದೆ.
ಕೊಲಂಬಿಯಾ ವಿವಿ 2023 ಮತ್ತು 2024ರಲ್ಲಿ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿದ್ದ ಆಕ್ರಮಣದ ವಿರುದ್ದ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಗಳ ಕೇಂದ್ರ ಬಿಂದುವಾಗಿತ್ತು. ಇದರ ವಿರುದ್ದ ಕ್ಯಾಂಪಸ್‌ಗಳಾದ್ಯಂತ ನಡೆದ ದಮನ ಕಾರ್ಯಾಚರಣೆ ನಡೆಸಿದ್ದ ಪೊಲೀಸರು 3,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಯಹೂದಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಕಿರುಕುಳ ತಡೆಯುವಲ್ಲಿ ವಿವಿ ವಿಫಲವಾಗಿದೆ ಎಂದು ಆರೋಪಿಸಿ, ವಿವಿಗೆ ಸರ್ಕಾರದ ನೀಡಲು ಉದ್ದೇಶಿಸಿದ್ದ ಸುಮಾರು 400 ಮಿಲಿಯನ್ ಡಾಲರ್ ಆರ್ಥಿಕ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಕಳೆದವಾರ ಟ್ರಂಪ್ ಆಡಳಿತ ಘೋಷಿಸಿತ್ತು.
ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿರುವ ಡೊನಾಲ್ಡ್ ಟ್ರಂಪ್, “ಅಮೆರಿಕದ ನಾಗರಿಕರು, ಸಂಸ್ಕೃತಿ, ಸರ್ಕಾರ, ಸಂಸ್ಥೆಗಳು ಮತ್ತು ಸ್ಥಾಪಕ ತತ್ವಗಳಿಗೆ’ ಪ್ರತಿಕೂಲ ವರ್ತನೆಗಳನ್ನು ಹೊಂದಿರುವ ಅಥವಾ ನಮ್ಮ ರಾಷ್ಟ್ರೀಯ ಭದ್ರತೆಗೆ ಇರುವ ಬೆದರಿಕೆಗಳನ್ನು ಬೆಂಬಲಿಸುವ ವಿದೇಶಿಯರನ್ನು ತಕ್ಷಣ ದೇಶದಿಂದ ಹೊರಹಾಕುವಂತೆ ಸೂಚಿಸಿದ್ದಾರೆ.
ಕೊಲಂಬಿಯಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ನ ಪ್ರಕಾರ, ರಂಜನಿ ಶ್ರೀನಿವಾಸನ್ ಅಹಮದಾಬಾದ್‌ನ ಸಿಇಪಿಟಿ ವಿಶ್ವವಿದ್ಯಾಲಯದಿಂದ ಡಿಸೈನಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಕ್ರಿಟಿಕಲ್ ಕನ್ಸರ್ವೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಫುಲ್‌ಬ್ರೈಟ್ ನೆಹರು ಮತ್ತು ಇನ್‌ಲ್ಯಾಕ್ಸ್ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.
ಪ್ಯಾಲೆಸ್ಟೀನಿಯನ್ನರನ್ನು ಪೂರ್ವ ಆಫ್ರಿಕಾಕ್ಕೆ ಸ್ಥಳಾಂತರಿಸಲು ಬಯಸುತ್ತಿರುವ ಅಮೆರಿಕ, ಇಸ್ರೇಲ್


