Homeಅಂತರಾಷ್ಟ್ರೀಯಪ್ಯಾಲೆಸ್ಟೀನಿಯನ್ನರನ್ನು  ಪೂರ್ವ ಆಫ್ರಿಕಾಕ್ಕೆ ಸ್ಥಳಾಂತರಿಸಲು ಬಯಸುತ್ತಿರುವ ಅಮೆರಿಕ, ಇಸ್ರೇಲ್

ಪ್ಯಾಲೆಸ್ಟೀನಿಯನ್ನರನ್ನು  ಪೂರ್ವ ಆಫ್ರಿಕಾಕ್ಕೆ ಸ್ಥಳಾಂತರಿಸಲು ಬಯಸುತ್ತಿರುವ ಅಮೆರಿಕ, ಇಸ್ರೇಲ್

- Advertisement -
- Advertisement -

ಗಾಜಾದಿಂದ ಸುಡಾನ್, ಸೊಮಾಲಿಯಾ ಮತ್ತು ಅದರ ಬೇರ್ಪಟ್ಟ ಪ್ರದೇಶವಾದ ಸೊಮಾಲಿಲ್ಯಾಂಡ್‌ಗೆ ಪ್ಯಾಲೆಸ್ತೀನಿಯನ್ನರನ್ನು ಬಲವಂತವಾಗಿ ಸ್ಥಳಾಂತರಿಸುವ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ಗಳು ಮೂರು ಪೂರ್ವ ಆಫ್ರಿಕಾದ ಸರ್ಕಾರಗಳೊಂದಿಗೆ ಚರ್ಚಿಸಿವೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರದ ವರದಿಯಲ್ಲಿ ಸುಡಾನ್ ಅಧಿಕಾರಿಗಳು ಅಮೆರಿಕದ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವುದಾಗಿ ಹೇಳಿಕೊಂಡರೆ, ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್‌ನ ಅಧಿಕಾರಿಗಳು ಯಾವುದೇ ಸಂಪರ್ಕಗಳ ಬಗ್ಗೆ ತಿಳಿದಿಲ್ಲ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಹಸ್ಯ ರಾಜತಾಂತ್ರಿಕ ಉಪಕ್ರಮದ ಬಗ್ಗೆ ಚರ್ಚಿಸಲು ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು, ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್‌ನೊಂದಿಗಿನ ಸಂಪರ್ಕಗಳನ್ನು ದೃಢಪಡಿಸಿದರು ಮತ್ತು ಅಮೆರಿಕದ ಅಧಿಕಾರಿಗಳು ಸುಡಾನ್ ಅನ್ನು ಸಹ ದೃಢಪಡಿಸಿದರು. ಪ್ರಯತ್ನಗಳು ಎಷ್ಟು ಪ್ರಗತಿ ಸಾಧಿಸಿವೆ ಅಥವಾ ಚರ್ಚೆಗಳು ಯಾವ ಮಟ್ಟದಲ್ಲಿ ನಡೆದವು ಎಂಬುದು ಸ್ಪಷ್ಟವಾಗಿಲ್ಲ ಎಂದು ಅದು ಹೇಳಿದೆ.

ಪ್ಯಾಲೆಸ್ಟೀನಿಯನ್ನರನ್ನು ಬಲವಂತವಾಗಿ ಸ್ಥಳಾಂತರಿಸುವ ಮತ್ತು ಗಾಜಾ ಪಟ್ಟಿಯನ್ನು “ಸ್ವಾಧೀನಪಡಿಸಿಕೊಳ್ಳುವ” ಕಲ್ಪನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇದನ್ನು ಪ್ಯಾಲೆಸ್ಟೀನಿಯನ್ನರು ಮತ್ತು ಮಧ್ಯಪ್ರಾಚ್ಯದ ದೇಶಗಳು ಸಂಪೂರ್ಣವಾಗಿ ತಿರಸ್ಕರಿಸಿವೆ. ಅನೇಕರು ಇದನ್ನು ಜನಾಂಗೀಯ ಶುದ್ಧೀಕರಣ ಎಂದು ಬಣ್ಣಿಸಿದ್ದಾರೆ.

ಟ್ರಂಪ್ ಅವರು ನೆತನ್ಯಾಹು ಜೊತೆಗೆ ಗಾಜಾ ಯೋಜನೆಯನ್ನು ಮಂಡಿಸಿದ ಕೆಲವು ದಿನಗಳ ನಂತರ, ಅಮೆರಿಕ ಮತ್ತು ಇಸ್ರೇಲ್‌ನಿಂದ ಮೂರು ಸಂಭಾವ್ಯ ತಾಣಗಳಿಗೆ ಪ್ರತ್ಯೇಕ ಸಂಪರ್ಕವು ಕಳೆದ ತಿಂಗಳು ಪ್ರಾರಂಭವಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಈ ಚರ್ಚೆಗಳಲ್ಲಿ ಇಸ್ರೇಲ್ ಮುಂಚೂಣಿಯಲ್ಲಿದೆ ಎಂದು ಅದು ವರದಿ ಮಾಡಿದೆ.

ಈ ವರದಿ ಕುರಿತಂತೆ ಅಮೆರಿಕ ಅಥವಾ ಇಸ್ರೇಲ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದರೆ ಪ್ಯಾಲೆಸ್ಟೀನಿಯನ್ನರ “ಸ್ವಯಂಪ್ರೇರಿತ” ವಲಸೆ ಎಂದು ದೀರ್ಘಕಾಲದಿಂದ ಪ್ರತಿಪಾದಿಸುತ್ತಿರುವ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಈ ವಾರ ಇಸ್ರೇಲ್ ಇವರ ಸ್ಥಳಾಂತರಕ್ಕೆ ದೇಶಗಳನ್ನು ಗುರುತಿಸಲು ಕೆಲಸ ಮಾಡುತ್ತಿದೆ ಎಂದು ಅದು ಹೇಳಿದೆ. ಇಸ್ರೇಲ್ ತನ್ನ ರಕ್ಷಣಾ ಸಚಿವಾಲಯದೊಳಗೆ “ಬಹಳ ದೊಡ್ಡ ವಲಸೆ ಇಲಾಖೆ”ಯನ್ನು ಸಿದ್ಧಪಡಿಸುತ್ತಿದೆ ಎಂದು ಕೂಡ ಅದು ವರದಿ ಮಾಡಿದೆ.

ದೋಹಾ ಇನ್‌ಸ್ಟಿಟ್ಯೂಟ್ ಫಾರ್ ಗ್ರಾಜುಯೇಟ್ ಸ್ಟಡೀಸ್‌ನ ಅಸೋಸಿಯೇಟ್ ಪ್ರೊಫೆಸರ್ ಟ್ಯಾಮರ್ ಕ್ವಾರ್ಮೌಟ್  ಅವರು ಅಲ್ ಜಜೀರಾ ಜೊತೆ ಮಾತನಾಡಿ, ಪ್ಯಾಲೆಸ್ಟೀನಿಯನ್ನರ ಸ್ಥಳಾಂತರವು “ದಾಟಿ ಹೋಗಬಾರದ ಕೆಂಪು ರೇಖೆ” ಎಂದು ಹೇಳಿದ್ದಾರೆ.

ಪ್ರಪಂಚದಾದ್ಯಂತದ ಸರ್ಕಾರಗಳು ಈ “ಅತಿರೇಕದ” ಪ್ರಸ್ತಾವನೆಯನ್ನು ನಿಲ್ಲಿಸುವ ಜವಾಬ್ದಾರಿಯನ್ನು ಹೊಂದಿವೆ ಮತ್ತು “ಈ ಯಾವುದೇ ಸನ್ನಿವೇಶಗಳಲ್ಲಿ ಇಸ್ರೇಲ್‌ನೊಂದಿಗೆ ತೊಡಗಿಸಿಕೊಳ್ಳಬಾರದು” ಎಂದು ಅವರು ಹೇಳಿದರು. ವಿಶೇಷವಾಗಿ ಪ್ಯಾಲೆಸ್ಟೀನಿಯನ್ನರನ್ನು ವಸಾಹತುಶಾಹಿ ಪರಂಪರೆಯಿಂದ ಹೋರಾಡುತ್ತಲೇ ಇರುವ ಆಫ್ರಿಕನ್ ದೇಶಗಳಿಗೆ ಸ್ಥಳಾಂತರಿಸುವುದು ಖಂಡನೀಯ ಎಂದಿದ್ದಾರೆ.

ವಸಾಹತುಶಾಹಿ ಪರಂಪರೆಯಿಂದಾಗಿ ಸುಡಾನ್ ಮತ್ತು ಸೊಮಾಲಿಯಾ ಇನ್ನೂ ಯುದ್ಧಗಳಿಂದ ಜರ್ಜರಿತಗೊಂಡಿವೆ ಎಂದು ಕಾರ್ಮೌಟ್ ಹೇಳಿದ್ದಾರೆ.

ಮಾನ್ಯತೆಗೆ ಬದಲಾಗಿ ಅಮೆರಿಕಕ್ಕೆ ಸಹಾಯಕವಾಗಬಹುದಾದ ಹಲವಾರು ಕ್ಷೇತ್ರಗಳ ಕುರಿತು ಸೊಮಾಲಿಲ್ಯಾಂಡ್‌ನೊಂದಿಗೆ ಅಮೆರಿಕವು ಸಂಭಾಷಣೆ ನಡೆಸುತ್ತಿದೆ ಎಂದು ಈ ಪ್ರಯತ್ನಗಳಲ್ಲಿ ಭಾಗಿಯಾಗಿರುವ ಅಮೆರಿಕದ ಅಧಿಕಾರಿಯೊಬ್ಬರು ಎಪಿಗೆ ದೃಢಪಡಿಸಿದ್ದಾರೆ.

ಏತನ್ಮಧ್ಯೆ, ಪ್ಯಾಲೆಸ್ಟೀನಿಯನ್ ಸ್ವ-ಆಡಳಿತಕ್ಕೆ ಸೊಮಾಲಿಯಾ ಬಲವಾದ ಬೆಂಬಲವನ್ನು ನೀಡುತ್ತಿರುವಾಗ ಪ್ಯಾಲೆಸ್ಟೀನಿಯನ್ನರಿಗೆ ಆತಿಥ್ಯ ವಹಿಸಲು ಸೊಮಾಲಿಯಾ ಏಕೆ ಬಯಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ನೈರೋಬಿಯಲ್ಲಿ ವಕೀಲ ಮತ್ತು ಸಂಘರ್ಷ ಸಂಶೋಧಕ ಸಾಂಬು ಚೆಪ್ಕೋರಿರ್ ಎಪಿಗೆ ತಿಳಿಸಿದ್ದಾರೆ.

ಸೂಕ್ಷ್ಮ ರಾಜತಾಂತ್ರಿಕ ವಿಷಯದ ಕುರಿತು ಚರ್ಚಿಸಲು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ಸುಡಾನ್ ಅಧಿಕಾರಿಗಳು, ಟ್ರಂಪ್ ಆಡಳಿತವು ಪ್ಯಾಲೆಸ್ಟೀನಿಯನ್ನರನ್ನು ಸ್ವೀಕರಿಸುವ ಬಗ್ಗೆ ಮಿಲಿಟರಿ ನೇತೃತ್ವದ ಸರ್ಕಾರವನ್ನು ಸಂಪರ್ಕಿಸಿದೆ ಎಂದು ದೃಢಪಡಿಸಿದರು.

ಸುಡಾನ್ ಸರ್ಕಾರ ಈ ವಿಚಾರವನ್ನು ತಿರಸ್ಕರಿಸಿದೆ ಎಂದು ಇಬ್ಬರೂ ಅಧಿಕಾರಿಗಳು ತಿಳಿಸಿದ್ದಾರೆ. “ಈ ಸಲಹೆಯನ್ನು ತಕ್ಷಣವೇ ತಿರಸ್ಕರಿಸಲಾಯಿತು” ಎಂದು ಒಬ್ಬ ಅಧಿಕಾರಿ ಹೇಳಿದ್ದಾರೆ.

ಈ ಕುರಿತು ರಾಯಿಟರ್ಸ್‌ನ ಪ್ರತಿಕ್ರಿಯೆಗೆ ಶ್ವೇತಭವನ ಮತ್ತು ಯುಎಸ್ ವಿದೇಶಾಂಗ ಇಲಾಖೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಸೊಮಾಲಿಯಾ ಮತ್ತು ಸೊಮಾಲಿಲ್ಯಾಂಡ್‌ನ ಮಾಹಿತಿ ಸಚಿವರು ರಾಯಿಟರ್ಸ್‌ನ ಪ್ರತಿಕ್ರಿಯೆ ಕೋರಿದ ದೂರವಾಣಿ ಕರೆಗಳಿಗೆ ಉತ್ತರಿಸಲಿಲ್ಲ.

12 ಮಿಲಿಯನ್ ಸ್ವಂತ ಜನರನ್ನು ಸ್ಥಳಾಂತರಿಸಿರುವ ಮತ್ತು ಕ್ಷಾಮವನ್ನು ಎದುರಿಸುತ್ತಾ, ವಿನಾಶಕಾರಿ ಅಂತರ್ಯುದ್ಧವನ್ನು ಎದುರಿಸುತ್ತಿರುವ ದೇಶವಾದ ಸುಡಾನ್‌ನ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿಲ್ಲ. ಈ ತಿಂಗಳ ಆರಂಭದಲ್ಲಿ  ಅರಬ್ ನಾಯಕರು ಗಾಜಾಗೆ 53 ಬಿಲಿಯನ್ ಡಾಲರ್‌ಗಳ ಈಜಿಪ್ಟ್ ಪುನರ್ನಿರ್ಮಾಣ ಯೋಜನೆಯನ್ನು ಘೋಷಿಸಿದ್ದಾರೆ. ಇದು ಪ್ಯಾಲೆಸ್ಟೀನಿಯನ್ನರನ್ನು ಎನ್ಕ್ಲೇವ್‌ನಿಂದ ಸ್ಥಳಾಂತರಿಸುವುದನ್ನು ತಪ್ಪಿಸುತ್ತದೆ. ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಮಧ್ಯಪ್ರಾಚ್ಯ ರಿವೇರಿಯಾ”ದ ದೃಷ್ಟಿಕೋನಕ್ಕೆ ವ್ಯತಿರಿಕ್ತವಾಗಿದೆ. ಈ ಘೋಷಣೆಯ ಯೋಜನೆಯಲ್ಲಿ ಸುಡಾನ್ ಮತ್ತು ಸೊಮಾಲಿಯಾ ಎರಡೂ ರಾಷ್ಟ್ರಗಳ ನಾಯಕರು ಸೇರಿದ್ದರು.

ಟ್ರಂಪ್ ಅವರ ಯೋಜನೆಯು ತಮ್ಮ ನೆಲೆಯಿಂದ ಶಾಶ್ವತವಾಗಿ ಓಡಿಸಲ್ಪಡುವ ಬಗ್ಗೆ ದೀರ್ಘಕಾಲದ ಪ್ಯಾಲೆಸ್ಟೀನಿಯನ್ ಭಯವನ್ನು ಬಲಪಡಿಸಿದೆ ಮತ್ತು ಅಂತರರಾಷ್ಟ್ರೀಯವಾಗಿ ವ್ಯಾಪಕ ತಿರಸ್ಕಾರವನ್ನು ಎದುರಿಸಿದೆ.

ಹಾವೇರಿ | ನರ್ಸ್ ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣ ; ಆರೋಪಿ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...