2024-25ನೇ ಹಣಕಾಸು ವರ್ಷದಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವು 6.5%ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜಿನಲ್ಲಿ ತೋರಿಸಲಾಗಿದೆ. ಕೊರೊನಾ ಸಮಯಕ್ಕಿಂತ
2020-21ರ ಕೋವಿಡ್-19 ಸಾಂಕ್ರಾಮಿಕ ವರ್ಷದ ನಂತರದ ನಿಧಾನಗತಿಯ ಬೆಳವಣಿಗೆ ದರ ಇದಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ, ದೇಶದ ನೈಜ ಒಟ್ಟು ದೇಶೀಯ ಉತ್ಪನ್ನವು 9.2% ರಷ್ಟಿತ್ತು.
2024-25ರ ನಾಲ್ಕನೇ ತ್ರೈಮಾಸಿಕದಲ್ಲಿ ನೈಜ ಜಿ ಡಿಪಿ 7.4% ರಷ್ಟು ಬೆಳವಣಿಗೆ ಕಂಡಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ಹೇಳಿದೆ. ಜನವರಿ ಮತ್ತು ಮಾರ್ಚ್ ನಡುವಿನ ಬೆಳವಣಿಗೆಯು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 8.4% ರಷ್ಟು ವಿಸ್ತರಣೆಗಿಂತ ಕಡಿಮೆಯಾಗಿದೆ.
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಒಳಗೊಂಡಿರುವ ಭಾರತದ ಪ್ರಾಥಮಿಕ ವಲಯವು 2024-25ರಲ್ಲಿ 4.4% ರಷ್ಟು ಬೆಳವಣಿಗೆ ಕಂಡಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿನ 2.7% ಬೆಳವಣಿಗೆಗಿಂತ ಹೆಚ್ಚಾಗಿದೆ.
ಬೇಡಿಕೆಯ ಪ್ರಮುಖ ಸೂಚಕವಾದ ಖಾಸಗಿ ಅಂತಿಮ ಬಳಕೆ ವೆಚ್ಚವು 25ರ ಆರ್ಥಿಕ ವರ್ಷದಲ್ಲಿ 7.2% ರಷ್ಟು ಏರಿಕೆಯಾಗಿದ್ದು, ಹಿಂದಿನ ವರ್ಷದಲ್ಲಿ ಇದು 5.6% ರಷ್ಟಿತ್ತು. 2025-26 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಆರ್ಥಿಕ ಬೆಳವಣಿಗೆಯ ಅಂಕಿ – ಅಂಶವು ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
2024-25 ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನವು 6.2% ರಷ್ಟು ಬೆಳೆದಿದ್ದು, ಎರಡನೇ ತ್ರೈಮಾಸಿಕದಲ್ಲಿ ಏಳು ತ್ರೈಮಾಸಿಕಗಳ ಕನಿಷ್ಠ ಮಟ್ಟವಾದ 5.4% ರಿಂದ ಚೇತರಿಸಿಕೊಂಡಿದೆ.
ಸೇವಾ ವಲಯದಲ್ಲಿನ ಬಲವಾದ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಸರ್ಕಾರಿ ಬಂಡವಾಳ ವೆಚ್ಚದಿಂದಾಗಿ ಚೇತರಿಕೆ ಕಂಡುಬಂದಿದೆ. ಮೊದಲ ತ್ರೈಮಾಸಿಕದಲ್ಲಿ, ಒಟ್ಟು ದೇಶೀಯ ಬೆಳವಣಿಗೆಯನ್ನು 6.7% ಕ್ಕೆ ದಾಖಲಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯು ಜೂನ್ 4 ಮತ್ತು ಜೂನ್ 6 ರ ನಡುವೆ ಸಭೆ ಸೇರಲಿದೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಸತತ ಮೂರನೇ ಬಾರಿಗೆ ರೆಪೊ ದರವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಕೊರೊನಾ ಸಮಯಕ್ಕಿಂತ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೇರಳದ 104 ಶಾಲೆಗಳನ್ನು ‘ಮಾದಕ ವಸ್ತು ತಾಣ’ಗಳೆಂದು ಗುರುತಿಸಿದ ಅಬಕಾರಿ ಇಲಾಖೆ; ವರದಿ
ಕೇರಳದ 104 ಶಾಲೆಗಳನ್ನು ‘ಮಾದಕ ವಸ್ತು ತಾಣ’ಗಳೆಂದು ಗುರುತಿಸಿದ ಅಬಕಾರಿ ಇಲಾಖೆ; ವರದಿ

