Homeಮುಖಪುಟಭಾರತದ 'ಮೆಟ್ರೋ ಮ್ಯಾನ್' ಈಗ ಕೇರಳ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ

ಭಾರತದ ‘ಮೆಟ್ರೋ ಮ್ಯಾನ್’ ಈಗ ಕೇರಳ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ

- Advertisement -
- Advertisement -

“ಭಾರತದ ‘ಮೆಟ್ರೋ ಮ್ಯಾನ್’ ಎಂದೇ ಜನಪ್ರಿಯವಾಗಿರುವ ಇ.ಶ್ರೀಧರನ್ ಅವರು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ” ಎಂದು ಬಿಜೆಪಿ ಗುರುವಾರ ಪ್ರಕಟಿಸಿದೆ. 88 ವರ್ಷದ ಶ್ರೀಧರನ್ ಕಳೆದ ವಾರವಷ್ಟೆ ಬಿಜೆಪಿಗೆ ಸೇರಿದ್ದರು.

ರಾಜ್ಯ ಬಿಜೆಪಿಯ ಅಧ್ಯಕ್ಷ ಕೆ.ಸುರೇಂದ್ರನ್, ಪ್ರಸ್ತುತ ರಾಜ್ಯವ್ಯಾಪಿ ನಡೆಯುತ್ತಿರುವ ರಾಜಕೀಯ ಪ್ರವಾಸ ‘ವಿಜಯ್ ಯಾತ್ರಾ’ದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಪಕ್ಷವು ಶೀಘ್ರದಲ್ಲೇ ಇತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ” ಎಂದು ಅವರು ಹೇಳಿದರು.

ದೆಹಲಿ ಮೆಟ್ರೋ ಸೇರಿದಂತೆ ದೇಶಾದ್ಯಂತ ಇದೇ ರೀತಿಯ ಅನೇಕ ಯೋಜನೆಗಳ ಹಿಂದಿನ ಎಂಜಿನಿಯರ್‌‌ ಇ.ಶ್ರೀಧರನ್‌‌ ಕೇರಳದಲ್ಲಿ ಚುನಾವಣೆಗೆ ಮುಂಚೆಯೇ ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕೊಡದಿದ್ದರೆ ಮೋದಿಜಿಯನ್ನು ಮನೆಗೆ ಕಳಿಸುತ್ತೇವೆ: ನೋ ಜಾಬ್, ನೋ ವೋಟ್ ಟ್ವಿಟರ್ ಟ್ರೆಂಡಿಂಗ್

“ನಾನು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ, ಕೇವಲ ಅಧಿಕೃತ ಔಪಚಾರಿಕತೆ ಕಾರ್ಯಗಳಷ್ಷೇ ಉಳಿದಿವೆ. ಪಕ್ಷದ ಸಿದ್ದಾಂತಗಳನ್ನು ನಾನು ನಂಬಿದ್ದು, ರಾಷ್ಟ್ರೀಯವಾಗಿ ರಾಜಕೀಯ ಪಕ್ಷಗಳ ಕುರುಡು ವಿರೋಧಕ್ಕೆ ನಾನು ವಿರೋಧಿಯಾಗಿದ್ದೇನೆ. ಪಕ್ಷವು ಬಯಸಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ” ಎಂದು ಶ್ರೀಧರನ್ ತಮ್ಮ ಊರಾದ ಮಲಪುರಂನಲ್ಲಿ ತಿಳಿಸಿದ್ದರು.

ದೇಶದ ಅತಿದೊಡ್ಡ ಮೆಟ್ರೋ ಮತ್ತು ರೈಲ್ವೆ ಯೋಜನೆಗಳಿಗೆ ಗಣನೀಯ ಸೇವೆ ಸಲ್ಲಿಸಿರುವ ಅವರು ಭಾರತದ “ಮೆಟ್ರೋ ಮ್ಯಾನ್” ಎಂದೇ ಜನಪ್ರಿಯರಾಗಿದ್ದಾರೆ. ಅವರು 2011 ರಲ್ಲಿ ದೆಹಲಿ ಮೆಟ್ರೊ ಮುಖ್ಯಸ್ಥರಾಗಿ ನಿವೃತ್ತರಾದರು. ಜೈಪುರ, ಲಕ್ನೋ ಮತ್ತು ಕೊಚ್ಚಿಯಂತಹ ದೇಶದ ಇತರ ಮೆಟ್ರೋ ಯೋಜನೆಗಳಲ್ಲಿ ಇವರು ಎಂಜಿನಿಯರ್ ಆಗಿ ತೊಡಗಿಸಿಕೊಂಡಿದ್ದರು. ಅವರಿಗೆ 2001 ರಲ್ಲಿ ಪದ್ಮಶ್ರೀ ಮತ್ತು 2008 ರಲ್ಲಿ ಪದ್ಮವಿಭೂಷಣ ನೀಡಲಾಗಿತ್ತು.


ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...