ಪ್ರಾಚೀನ ಸಿಂಧೂ ಕಣಿವೆಯ ಲಿಪಿಯು ಶತಮಾನಕ್ಕೂ ಹೆಚ್ಚು ಕಾಲ ಬಿಡಿಸಲಾಗದ ಒಗಟಾಗಿ ಉಳಿದಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಚೆನ್ನೈನಲ್ಲಿ ಹೇಳಿದ್ದು, ಲಿಪಿಗಳನ್ನು ಅರ್ಥೈಸುವಲ್ಲಿ ಯಶಸ್ವಿಯಾಗುವ ತಜ್ಞರು ಅಥವಾ ಸಂಸ್ಥೆಗಳಿಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ಅವರು ಘೋಷಿಸಿದ್ದಾರೆ. ಸಿಂಧೂ ಕಣಿವೆ ಲಿಪಿ
ಸಿಂಧೂ ನಾಗರಿಕತೆಯ ಆವಿಷ್ಕಾರದ ಶತಮಾನೋತ್ಸವದ ಅಂಗವಾಗಿ 3 ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸ್ಟಾಲಿನ್, “ಒಂದು ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಸಿಂಧೂ ಕಣಿವೆಯ ನಾಗರಿಕತೆಯ ಲಿಪಿ 100 ವರ್ಷಗಳ ನಂತರವೂ ನಿಗೂಢವಾಗಿಯೇ ಉಳಿದಿದೆ. ಪುರಾತತ್ವಶಾಸ್ತ್ರಜ್ಞರು, ತಮಿಳು ಕಂಪ್ಯೂಟರ್ ಸಾಫ್ಟ್‌ವೇರ್ ತಜ್ಞರು ಮತ್ತು ಪ್ರಪಂಚದಾದ್ಯಂತದ ಕಂಪ್ಯೂಟರ್ ತಜ್ಞರು ಲಿಪಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಂಶೋಧನೆಗೆ ಉತ್ತೇಜನ ನೀಡಲು ಸರ್ಕಾರ ಒಂದು ಮಿಲಿಯನ್ ಡಾಲರ್ ನೀಡಲಿದೆ’’ ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತಮಿಳು ಸಂಸ್ಕೃತಿಯ ಪ್ರಾಚೀನತೆಯನ್ನು ಎತ್ತಿ ಹಿಡಿಯಲು ಶ್ರಮಿಸುತ್ತಿರುವ ನಾಣ್ಯಶಾಸ್ತ್ರಜ್ಞರು ಮತ್ತು ಶಾಸನಶಾಸ್ತ್ರಜ್ಞರನ್ನು ಗೌರವಿಸಲು ಮತ್ತು ಪ್ರೋತ್ಸಾಹಿಸಲು ಸರ್ಕಾರ ಎರಡು ಪ್ರಶಸ್ತಿಗಳನ್ನು ಸ್ಥಾಪಿಸುತ್ತದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಸಿಂಧೂ ಕಣಿವೆ ಲಿಪಿ
ಸಿಂಧೂ ಕಣಿವೆ ನಾಗರೀಕತೆಯಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾದ ಮುದ್ರೆಗಳಲ್ಲಿನ ಚಿಹ್ನೆಗಳು ತಮಿಳುನಾಡಿನ ಪುರಾತತ್ತ್ವ ಶಾಸ್ತ್ರದ ಉತ್ಖನನದ ಸಮಯದಲ್ಲಿ ಕಂಡುಬಂದ ಚಿಹ್ನೆಗಳೊಂದಿಗೆ 60 ಪ್ರತಿಶತದಷ್ಟು ಹೋಲಿಕೆಯನ್ನು ಹೊಂದಿವೆ ಎಂದು ಸೂಚಿಸಿದ ಸ್ಟಾಲಿನ್, ಸಿಂಧೂ ಕಣಿವೆಯ ನಾಗರಿಕತೆಯ ಕುಂಡಗಳಲ್ಲಿ ಇರುವ ಚಿಹ್ನೆಗಳು, ತಮಿಳುನಾಡಿನ ಮಣ್ಣಿನ ಪಾತ್ರೆಗಳಲ್ಲಿ ಕಂಡುಬರುವ ಚಿಹ್ನೆಗಳಿಗೆ 90% ಸಾಮ್ಯತೆಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.
“ಆರ್ಯನ್ ಮತ್ತು ಸಂಸ್ಕೃತ ಭಾರತದ ಮೂಲ ಸಂಸ್ಕೃತಿ ಎಂದು ಹಲವರು ವಾದಿಸುತ್ತಿದ್ದರು. ಆದರೆ, ಜಾನ್ ಮಾರ್ಷಲ್ ಅವರ ಆವಿಷ್ಕಾರವು ಈ ಗ್ರಹಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಸಿಂಧೂ ಕಣಿವೆ ನಾಗರೀಕತೆಯು ಆರ್ಯರ ನಾಗರಿಕತೆಗಿಂತ ಹಿಂದಿನದು ಮತ್ತು ಸಿಂಧೂ ಕಣಿವೆಯಲ್ಲಿ ಮಾತನಾಡುವ ಭಾಷೆ ದ್ರಾವಿಡವಾಗಿರಬಹುದು ಎಂಬ ಅವರ ವಾದವು ಮತ್ತಷ್ಟು ಬಲಗೊಂಡಿದೆ,” ಎಂದು ಸ್ಟಾಲಿನ್ ಹೇಳಿದ್ದಾರೆ.
ಸಿಂಧೂ ಕಣಿವೆಯಲ್ಲಿ ದ್ರಾವಿಡ ಸಂಕೇತವಾಗಿರುವ ಗೂಳಿಗಳಿವೆ ಎಂದು ಸ್ಟಾಲಿನ್ ಹೇಳಿದ್ದಾರೆ. “ಎತ್ತುಗಳು ಸಿಂಧೂ ಕಣಿವೆಯಿಂದ ತಮಿಳುನಾಡಿನ ಅಲಂಗನಲ್ಲೂರ್ (ಜಲ್ಲಿಕಟ್ಟು ನಡೆಯುವ ಸ್ಥಳ) ವರೆಗೆ ಹರಡಿವೆ. ಪುರಾತನ ತಮಿಳು ಸಾಹಿತ್ಯವು ಗೂಳಿಗಳನ್ನು ಪಳಗಿಸುವ ಬಗ್ಗೆ ಮಾತನಾಡುತ್ತದೆ ಮತ್ತು ಇದನ್ನು ಕೊಲ್ಲೆರು ತಝುವುತಲ್ ಎಂದು ಕರೆಯಲಾಗುತ್ತದೆ. ಸಿಂಧೂ ಕಣಿವೆಯ ಚಿಹ್ನೆಗಳಲ್ಲಿಯೂ ಸಹ ಅದನ್ನು ಪಳಗಿಸಲು ಪ್ರಯತ್ನಿಸಿದ ಯುವಕರನ್ನು ಎತ್ತುವ ಗೂಳಿಗಳ ಚಿತ್ರಗಳಿವೆ” ಎಂದು ಅವರು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಹಣಕಾಸು ಮತ್ತು ಪುರಾತತ್ವ ಸಚಿವ ತಂಗಂ ತೆನ್ನರಸು ಮತ್ತು ಹಣಕಾಸು ಕಾರ್ಯದರ್ಶಿ ಟಿ.ಉದಯಚಂದ್ರನ್ ಅವರು ರಾಜ್ಯದಲ್ಲಿ ಇರುವುದು ತಮಿಳುನಾಡಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಿಂಧೂ ನಾಗರೀಕತೆ, ಅತ್ಯಂತ ಪ್ರಾಚೀನವಾದ ನಾಗರೀಕತೆಯಾಗಿದ್ದು, ಅದು ಅದರ ನಗರ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಈ ನಾಗರೀಕತೆಯ ಲಿಪಿಯನ್ನು ಇನ್ನೂ ಓದಲು ಸಾಧ್ಯವಾಗಿಲ್ಲ.
ಇದನ್ನೂಓದಿ: ಉತ್ತರ ಪ್ರದೇಶ 2027ರ ಚುನಾವಣೆಗೆ ಚಟುವಟಿಕೆ ಪ್ರಾರಂಭಿಸಿದ ಸಮಾಜವಾದಿ ಪಕ್ಷ!
ಉತ್ತರ ಪ್ರದೇಶ 2027ರ ಚುನಾವಣೆಗೆ ಚಟುವಟಿಕೆ ಪ್ರಾರಂಭಿಸಿದ ಸಮಾಜವಾದಿ ಪಕ್ಷ!


