Homeಅಂತರಾಷ್ಟ್ರೀಯನ್ಯೂಜಿಲೆಂಡ್ ನಲ್ಲಿ ವೀಸಾ ನಿಯಮಗಳ ಬದಲಾವಣೆ: ಭಾರತೀಯ ವಲಸಿಗ ಕಾರ್ಮಿಕರ ಮೇಲೆ ಇದರ ಪರಿಣಾಮವೇನು?

ನ್ಯೂಜಿಲೆಂಡ್ ನಲ್ಲಿ ವೀಸಾ ನಿಯಮಗಳ ಬದಲಾವಣೆ: ಭಾರತೀಯ ವಲಸಿಗ ಕಾರ್ಮಿಕರ ಮೇಲೆ ಇದರ ಪರಿಣಾಮವೇನು?

- Advertisement -
- Advertisement -

ವೆಲ್ಲಿಂಗ್ಟನ್: ನಿರಂತರವಾಗಿ ಕಾರ್ಮಿಕರ ಕೊರತೆಗಳ ಮಧ್ಯೆ, ವಲಸೆ ಕಾರ್ಯವಿಧಾನಗಳನ್ನು ಸುಗಮಗೊಳಿಸಲು ನ್ಯೂಜಿಲೆಂಡ್ ತನ್ನ ವೀಸಾ ಮತ್ತು ಉದ್ಯೋಗದ ಅವಶ್ಯಕತೆಗೆ ಅನುಗುಣವಾಗಿ ಗಮನಾರ್ಹವಾದ ಮಾರ್ಪಡುಗಳೊಂದಿಗೆ ಹೊಸ ನಿಯಮಗಳನ್ನು ಹೊರಡಿಸಿದೆ. ಈ ನಿಯಮ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ವಲಸೆ ದಾರಿಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.

ಕಾರ್ಮಿಕರ ಕೊರತೆಯನ್ನು ನಿವಾರಿಸಲು, ನ್ಯೂಜಿಲೆಂಡ್ ಸರ್ಕಾರವು ವಲಸಿಗರಿಗೆ ಕೆಲಸದ ಅನುಭವದ ಮಾನದಂಡವನ್ನು ಮೂರರಿಂದ ಎರಡು ವರ್ಷಗಳವರೆಗೆ ಇಳಿಕೆ ಮಾಡಿದೆ. ಈ ಕ್ರಮವು ಸಮರ್ಥ ಕೆಲಸಗಾರರಿಗೆ ನ್ಯೂಜಿಲೆಂಡ್‌ನಲ್ಲಿ ತಮ್ಮ ಕೌಶಲ್ಯಕ್ಕೆ ಅನುಗುಣವಾಗಿ ಹೆಚ್ಚು ಸುಲಭದ ಉದ್ಯೋಗವನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಈ ಹೊಸ ನಿಯಮಗಳು ನ್ಯೂಜಿಲೆಂಡ್‌ನಲ್ಲಿ ಉದ್ಯೋಗಾವಕಾಶಗಳನ್ನು ಬಯಸುವ ಭಾರತೀಯ ವಲಸಿಗರಿಗೆ ಸಹಾಯ ಮಾಡುವ ನಿರೀಕ್ಷೆಯಿದೆ.

ಋತುಮಾನಕ್ಕನುಗುಣವಾದ ಕೆಲಸಗಾರರಿಗೆ ನ್ಯೂಜಿಲೆಂಡ್‌ನಲ್ಲಿ ಉಳಿಯಲು ದೇಶವು ಎರಡು ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಅನುಭವಿಗಳಾದ ಋತುಮಾನಕ್ಕನುಗುಣದ ಕೆಲಸಗಾರರಿಗೆ ಮೂರು ವರ್ಷಗಳ ಬಹುಪ್ರವೇಶ ವೀಸಾ ಮತ್ತು ಕಡಿಮೆ ಕುಶಲ ಕೆಲಸಗಾರರಿಗೆ ಏಳು ತಿಂಗಳ ಏಕಪ್ರವೇಶ ವೀಸಾವನ್ನು ಪರಿಚಯಿಸಲಾಗಿದೆ. ಕಾಲಕ್ಕನುಗುಣವಾದ ಕಾರ್ಮಿಕರ ಬೇಡಿಕೆಗಳನ್ನು ಸರಿಹೊಂದಿಸಲು ಈ ನಿಯಮಗಳನ್ನು ಮಾಡಲಾಗಿದೆ.

ಇದಲ್ಲದೆ, ಮಾನ್ಯತೆ ಪಡೆದ ಉದ್ಯೋಗದಾತರ ಕೆಲಸದ ವೀಸಾ (AEWV) ಮತ್ತು ನಿರ್ದಿಷ್ಟ ಉದ್ದೇಶದ ಕೆಲಸದ ವೀಸಾ (SPWV) ಗಾಗಿ ಸರಾಸರಿ ವೇತನ ಮಾನದಂಡಗಳನ್ನು ಸರ್ಕಾರವು ತೆಗೆದುಹಾಕಿದೆ. ಹೊಸ ನಿಯಮಗಳ ಅಡಿಯಲ್ಲಿ ಉದ್ಯೋಗದಾತರು ಉದ್ಯೋಗಾವಕಾಶಗಳನ್ನು ಒದಗಿಸುವಾಗ ಮಾರುಕಟ್ಟೆ ದರದ ಪ್ರಕಾರ ಸಂಬಳವನ್ನು ನೀಡಲು ನಿರ್ಬಂಧಿತರಾಗಿದ್ದರೂ, ಅವರು ಇನ್ನು ಮುಂದೆ ಪೂರ್ವನಿರ್ಧರಿತ ಸಂಬಳದ ಮಾನದಂಡವನ್ನು ಪೂರೈಸುವ ಅಗತ್ಯವಿಲ್ಲ. ಇದು ಉದ್ಯೋಗದಾತರಿಗೆ ಸಮಾನವಾದ ಕಾರ್ಮಿಕರ ಸಂಭಾವನೆಯನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ.

ತಮ್ಮ ಮಕ್ಕಳನ್ನು ನ್ಯೂಜಿಲೆಂಡ್‌ಗೆ ಕರೆತರಲು ಬಯಸುವ ವಲಸಿಗರಿಗೆ, AEWV ಹೊಂದಿರುವವರು ಈಗ ವಾರ್ಷಿಕವಾಗಿ ಕನಿಷ್ಠ NZ$55,844 ಗಳಿಸಬೇಕು. ಈ ಕನಿಷ್ಠ ಮಿತಿಯನ್ನು 2019ರಿಂದ ಬದಲಾಯಿಸಲಾಗಿಲ್ಲ, ವಲಸೆ ಕುಟುಂಬಗಳು ದೇಶದಲ್ಲಿ ವಾಸಿಸುತ್ತಿರುವಾಗ ಆರ್ಥಿಕವಾಗಿ ತಮ್ಮನ್ನು ತಾವು ಆರ್ಥಿಕವಾಗಿ ಸಬಲರಾಗುವುದನ್ನು ಖಚಿತಪಡಿಸಿಕೊಳ್ಳುವುದೇ ಈ ಉದ್ದೇಶದ ಹಿಂದೆ ಆಡಗಿದೆ.

ಇದಲ್ಲದೆ, ಆಸ್ಟ್ರೇಲಿಯನ್ ಮತ್ತು ನ್ಯೂಜಿಲೆಂಡ್ ಸ್ಟ್ಯಾಂಡರ್ಡ್ ಕ್ಲಾಸಿಫಿಕೇಶನ್ ಆಫ್ ಆಕ್ಯುಪೇಷನ್ಸ್ (ANZSCO) ಕೌಶಲ್ಯ ಮಟ್ಟದಲ್ಲಿ 4 ಅಥವಾ 5 ರೊಳಗೆ ಬರುವ ಉದ್ಯೋಗಿಗಳಿಗೆ ನ್ಯೂಜಿಲೆಂಡ್ ಎರಡು ವರ್ಷಗಳ ವೀಸಾ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಿದೆ. ಎರಡು ವರ್ಷಗಳ ವೀಸಾ ಹೊಂದಿರುವ ಈ ಉದ್ಯೋಗಗಳಲ್ಲಿ ಪ್ರಸ್ತುತ ಉದ್ಯೋಗಿಗಳು ಒಂದು ವರ್ಷದ ವಿಸ್ತರಣೆಯನ್ನು ಕೋರಬಹುದಾಗಿದೆ.

ಕೌಶಲ್ಯ ಮಟ್ಟ 4 ಅಥವಾ 5 ಗಾಗಿ ಉದ್ಯೋಗಾವಕಾಶಗಳನ್ನು ಒದಗಿಸುವಾಗ ಉದ್ಯೋಗದಾತರು 21 ದಿನದ ಕಡ್ಡಾಯ ನೇಮಕಾತಿ ಅವಧಿಯನ್ನು ಅನುಸರಿಸುವ ಅಗತ್ಯವಿಲ್ಲ. ಅವರು ಸ್ಥಳೀಯವಾಗಿ ನೇಮಕ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರಿಸಲು ಅರ್ಹ ಅಭ್ಯರ್ಥಿಗಳಿಗಾಗಿ ಜಾಹೀರಾತು ಮತ್ತು ಸಂದರ್ಶನ ಮಾಡಬಹುದಾಗಿದೆ.

ಕಟ್ಟಡದಂತಹ ನಿರ್ಮಾಣ ಉದ್ಯಮದಲ್ಲಿನ ಕಾರ್ಮಿಕರ ಕೊರತೆಯನ್ನು ಪರಿಹರಿಸುವ ಸಲುವಾಗಿ ಸರ್ಕಾರವು  ದೇಶೀಯ ಉದ್ಯೋಗಿಗಳ ಮಾನದಂಡವನ್ನು %35ರಿಂದ % 15ಕ್ಕೆ ಇಳಿಕೆ ಮಾಡಿದೆ.

ಈ ವರ್ಷದಿಂದ ಮಾನ್ಯತೆ ಪಡೆದ ಉದ್ಯೋಗದಾತರು ನ್ಯೂಜಿಲೆಂಡ್ ಒದಗಿಸಿದ ಆನ್‌ಲೈನ್ ತರಬೇತಿ ಮಾನದಂಡಗಳನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ಬದಲಿಗೆ ಉದ್ಯೋಗ ಹಕ್ಕುಗಳು ಮತ್ತು ಜವಾಬ್ದಾರಿಗಳ ಮೇಲೆ ಸುಲಭ ಪ್ರವೇಶದ ಕೊಡುಗೆಯನ್ನು ಅದು ನೀಡಿದೆ.

ಏಪ್ರಿಲ್ 2025ರಿಂದ ವಿದ್ಯಾರ್ಥಿ ವೀಸಾ ಅಥವಾ ಯಾವುದೇ ಇತರ ಕೆಲಸದಿಂದ AEWVಗೆ ಪರಿವರ್ತನೆ ಮಾಡಲು ಬಯಸುವ ವಲಸಿಗರಿಗೆ ಮಧ್ಯಂತರ ಕೆಲಸದ ಹಕ್ಕುಗಳನ್ನು ನೀಡಲಾಗುತ್ತದೆ.

ಭಾ‍‍‍ಷಣದ ವೇಳೆ ಕೈಕೊಟ್ಟ ಟೆಲಿಪ್ರಾಂಪ್ಟರ್, ಪ್ರಧಾನಿ ಮೋದಿ ಕಕ್ಕಾಬಿಕ್ಕಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...