ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿ-ಚಂಡೀಗಡ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಟ್ರಕ್ ಡ್ರೈವರ್‌ಗಳೊಂದಿಗಿನ ತಮ್ಮ ರಾತ್ರಿಯ “ಯಾತ್ರೆ” ಮತ್ತು ಅವರೊಂದಿಗೆ ನಡೆಸಿದ ಸಂಭಾಷಣೆಯ ವಿಡಿಯೋವನ್ನು ಸೋಮವಾರ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ರಾಹುಲ್ ಗಾಂಧಿ ಕಳೆದ ಸೋಮವಾರ ದೆಹಲಿಯಿಂದ ಚಂಡೀಗಡಕ್ಕೆ ಪ್ರಯಾಣ ಬೆಳೆಸಿದರು. ಆ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದವು.
ತಮ್ಮ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್ ಅನ್ನು ಧರಿಸಿರುವ ರಾಹುಲ್ ಗಾಂಧಿ, ಟ್ರಕ್‌ನೊಳಗೆ ಕುಳಿತು, ಚಾಲಕನೊಂದಿಗೆ ಪ್ರಯಾಣಿಸುತ್ತಿರುವುದನ್ನು ಮತ್ತು ಧಾಬಾದಲ್ಲಿ ಚಾಲಕರೊಂದಿಗೆ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
6 घंटो की दिल्ली-चंडीगढ़ यात्रा में ट्रक ड्राइवरों के साथ दिलचस्प बातचीत!
24 घंटे सड़कों पर बिताकर, वो भारत के हर कोने को जोड़ते हैं।
पूरा वीडियो यूट्यूब पर:https://t.co/2O2eYxuj0P pic.twitter.com/ZBDe7UaYot
— Rahul Gandhi (@RahulGandhi) May 29, 2023
”ಆರು ಗಂಟೆಗಳ ದೆಹಲಿ-ಚಂಡೀಗಡ ಪ್ರಯಾಣದಲ್ಲಿ ಟ್ರಕ್ ಡ್ರೈವರ್‌ಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆ! 24 ಗಂಟೆಗಳ ಕಾಲ ರಸ್ತೆಯಲ್ಲಿ ಕಳೆಯುವ ಅವರು ಭಾರತದ ಪ್ರತಿಯೊಂದು ಮೂಲೆಯನ್ನು ಒಂದುಗೂಡಿಸುತ್ತಾರೆ” ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ತಮ್ಮ ಪ್ರಯಾಣದ ಸಮಯದಲ್ಲಿನ 35 ಸೆಕೆಂಡ್ ವಿಡಿಯೋವನ್ನು ಹಂಚಿಕೊಂಡಿದ್ದು, ಇನ್ನು ತಮ್ಮ ಪ್ರಯಾಣದ ಸಂಪೂರ್ಣ ವಿಡಿಯೋದ ಲಿಂಕ್‌ನ್ನು ತಮ್ಮ ಯೂಟ್ಯೂಬ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
”ಭಾರತ್ ಜೋಡೋ ಯಾತ್ರೆಯಂತೆಯೇ ಜನರೊಂದಿಗೆ ತಮ್ಮ ಸಂವಾದವನ್ನು ಮುಂದುವರೆಸುತ್ತಾ, ರಾಹುಲ್ ಗಾಂಧಿಯವರು NH-44ರ ಮುರ್ಥಾಲ್‌ನಲ್ಲಿರುವ ಧಾಬಾದಲ್ಲಿ ಟ್ರಕ್ ಡ್ರೈವರ್‌ಗಳ ಗುಂಪನ್ನು ಭೇಟಿಯಾಗಿ ಮಾತನಾಡಿದರು ಮತ್ತು ಅಲ್ಲಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದರು, ಶಿಮ್ಲಾಗೆ ತೆರಳುತ್ತಿದ್ದರು” ಎಂದು ಕಾಂಗ್ರೆಸ್ ಹೇಳಿದೆ.
ಮೂರು ಕೋಟಿ ಭಾರತೀಯರು ನೇರವಾಗಿ ಟ್ರಕ್ ಉದ್ಯಮದಲ್ಲಿ ಉದ್ಯೋಗದಲ್ಲಿದ್ದಾರೆ ಮತ್ತು ಪ್ರತಿ ವರ್ಷ ಒಂಬತ್ತು ಲಕ್ಷ ಹೊಸ ಟ್ರಕ್ ಡ್ರೈವರ್‌ಗಳಿಗೆ ಬೇಡಿಕೆಯಿದೆ ಎಂದು ವರದಿಗಳು ಸೂಚಿಸುತ್ತವೆ ಎಂಬ ಕಥೆಯನ್ನು ಸಂಪೂರ್ಣ ವಿಡಿಯೋ ವಿವರಿಸುತ್ತದೆ.
ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ, ಮಧ್ಯಪ್ರದೇಶದಲ್ಲೂ ಪುನರಾವರ್ತನೆ: 150 ಸ್ಥಾನ ಗೆಲ್ಲುತ್ತೇವೆ ಎಂದ ರಾಹುಲ್ ಗಾಂಧಿ
ಯುಪಿಯ ಲೋಧಿ ಯುವಕ ಪ್ರೇಮ್ ರಾಜ್‌ಪೂತ್ ಮಾತನಾಡುತ್ತಾ, ”ಸುಮಾರು 98 ಪ್ರತಿಶತದಷ್ಟು ಟ್ರಕ್ ಡ್ರೈವರ್‌ಗಳು, ತಮ್ಮ ಕುಟುಂಬ ಸದಸ್ಯರು ತಮ್ಮ ವೃತ್ತಿಗೆ ಸೇರಲು ಬಯಸುವುದಿಲ್ಲ. ಅವರಲ್ಲಿ ಹೆಚ್ಚಿನವರು ಪೊಲೀಸರಿಂದ ಕಿರುಕುಳ, ಕಡಿಮೆ ಮತ್ತು ಅನಿಯಮಿತ ಆದಾಯ ಬರುತ್ತದೆ” ಎಂದು ದೂರು ಹೇಳಿರುವುದು ವಿಡಿಯೋ ಹೇಳಿದೆ.
ಆಗ ರಾಹುಲ್ ಗಾಂಧಿ ಅವರು ಮುಂದಿನ ಕಾಂಗ್ರೆಸ್ ಸರ್ಕಾರವು ಅವರ ದುಃಸ್ಥಿತಿಯನ್ನು ಸುಧಾರಿಸಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು ಎಂದು ಪಕ್ಷವು ಹೇಳಿದೆ.
ರಾಹುಲ್ ಗಾಂಧಿಯವರು ಜನರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಸಾಮಾನ್ಯ ಭಾರತೀಯರ ಧ್ವನಿಯನ್ನು ನಿಯಮಿತವಾಗಿ ಕೇಳುತ್ತಿದ್ದಾರೆ. ಹಳೆ ದೆಹಲಿ ಮತ್ತು ಮುಖರ್ಜಿ ನಗರ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಭೇಟಿಯಿಂದ ಹಿಡಿದು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಮತ್ತು ಬ್ಲಿಂಕಿಟ್ ಬೈಕ್ ಸವಾರಿ ಮಾಡುವವರೆಗೆ, ಅವರು ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಜನರನ್ನು ಆಲಿಸುವ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.



Cool person.