Homeಮುಖಪುಟಅಂತರಾಷ್ಟ್ರೀಯ ಪುರುಷರ ದಿನ ಆಚರಿಸಬೇಕು: ಹೇಳಿಕೆ ನೀಡಿ ಟೀಕೆಗೊಳಗಾದ ಬಿಜೆಪಿ ಸಂಸದೆ!

ಅಂತರಾಷ್ಟ್ರೀಯ ಪುರುಷರ ದಿನ ಆಚರಿಸಬೇಕು: ಹೇಳಿಕೆ ನೀಡಿ ಟೀಕೆಗೊಳಗಾದ ಬಿಜೆಪಿ ಸಂಸದೆ!

- Advertisement -
- Advertisement -

ಇಂದು ಮಾರ್ಚ್ 8, ಅಂತರಾಷ್ಟ್ರೀಯ ಮಹಿಳಾ ದಿನ. ವಿಶ್ವದೆಲ್ಲೆಡೆ ಮಹಿಳೆಯರ ಸ್ಥಿತಿಗತಿ ಮತ್ತು ಹಕ್ಕೊತ್ತಾಯಗಳ ಕುರಿತು ಚರ್ಚೆಯಾಗುತ್ತಿದೆ. ಆದರೆ ಇಂದು ಬಿಜೆಪಿ ರಾಜ್ಯಸಭಾ ಸಂಸದರಾದ ಸೋನಾಲ್ ಮಾನ್‌ಸಿಂಗ್ “ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಬೇಕೆಂದು ಒತ್ತಾಯಿಸುತ್ತೇನೆ” ಎಂದು ಹೇಳಿಕೆ ನೀಡುವ ಮೂಲಕ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

ಈಗಾಗಲೇ ನವೆಂಬರ್ 19 ಅನ್ನು ಅಂತರಾಷ್ಟ್ರೀಯ ಪುರುಷರ ದಿನ ಎಂದು ಗುರುತಿಸಲಾಗಿದೆ ಮತ್ತು 1992ರಿಂದಲೂ ಆಚರಿಸಲಾಗುತ್ತಿದೆ. ಇದು ನಿಮಗೆ ಗೊತ್ತಿಲ್ಲವೇ ಎಂದು ಹಲವರು ಪ್ರಶ್ನಿಸಿದರೆ ಇನ್ನು ಕೆಲವರು ಪುರುಷರ ದಿನದ ಬಗ್ಗೆ ಚಿಂತೆ ಬಿಡಿ. ಮೊದಲು ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರಗಳನ್ನು ನಿಲ್ಲಿಸುವುದರ ಬಗ್ಗೆ ಚರ್ಚಿಸಿ ಎಂದು ಹಲವು ನೆಟ್ಟಿಗರು ಕಿಡಿಕಾರಿದ್ದಾರೆ.

ನನಗೆ ಗೊಂದಲವಾಗಿದೆ. ಇಂದು ಮಹಿಳಾ ದಿನವೋ ಅಥವಾ ಬಿಪ್ಲಬ್‌ ದಿನವೋ? ಎಂದು ಕಾಜೋಲ್ ಶ್ರೀನಿವಾಸನ್ ಎಂಬುವವರು ತಮಾಷೆ ಮಾಡಿದ್ದಾರೆ.

ನಿಮ್ಮ ಮಾತು ಸರಿ… ಹಾಗಾದರೆ ಅದಕ್ಕಾಗಿ ಬ್ರಾಂಡ್ ಅಂಬಾಸಿಡರ್ ಯಾರು? ಚಿನ್ಮಯಾನಂದ್, ಕುಲದೀಪ್ ಸೆಂಗಾರ್, ಎಂ.ಜೆ.ಅಕ್ಬರ್, ರಂಜನ್ ಗೊಗೊಯ್ ಅಥವಾ ಸ್ವತಃ ಸಾಹೇಬ್? ಎಂದು ಮಿ.ಫಿಕ್ಸಿಟ್ ಎಂಬುವವರು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವು ಪೋಸ್ಟ್‌ಗಳು ಈ ಕೆಳಗಿನ ರೀತಿ ಇವೆ.

ಇನ್ನು ಕೆಲವರು ಪುರುಷರ ದಿನ ಬೇಕೆಂದು ಒತ್ತಾಯಿಸಿದ್ದಾಕ್ಕಿ ಮಾನ್‌ಸಿಂಗ್‌ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ: ’ಸ್ಪಂದಿಸದ ಅಧಿಕಾರಿಗಳ ತಲೆಗೆ ಕೋಲಿನಿಂದ ಹೊಡೆಯಿರಿ’: ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...