Homeಮುಖಪುಟಈ ಬೀದಿಗಳಲ್ಲೆವೂ ಮಹಿಳೆಯರವು, ಹಗಲು ಮತ್ತು ಇರುಳು : ಸ್ತ್ರೀವಾದಿ ಚಿಂತಕಿ ವೋಲ್ಗಾ ಪ್ರತಿಪಾದನೆ

ಈ ಬೀದಿಗಳಲ್ಲೆವೂ ಮಹಿಳೆಯರವು, ಹಗಲು ಮತ್ತು ಇರುಳು : ಸ್ತ್ರೀವಾದಿ ಚಿಂತಕಿ ವೋಲ್ಗಾ ಪ್ರತಿಪಾದನೆ

- Advertisement -
- Advertisement -

ಮಹಿಳೆಯರು ಇಂಥ ಬಟ್ಟೆಗಳನ್ನು ಹಾಕಿಕೊಳ್ಳಬಾರದು, ರಾತ್ರಿವೇಳೆ ಹೆಣ್ಣು ಮಕ್ಕಳು ಹೊರಗೆ ಬರಬಾರದು ಎನ್ನುವ ವಾದಕ್ಕೆ ನಮ್ಮದು ಪ್ರತಿವಾದ ಇದೆ. ಅದೆಂದರೆ ರಾತ್ರಿವೇಳೆ ಪುರುಷರನ್ನೇ ಮನೆಯಲ್ಲಿ ಕೂಡಿಹಾಕಿ ರಾತ್ರಿಗಳನ್ನು, ಬೀದಿಗಳನ್ನು ನಾವು ವಶಪಡಿಸಿಕೊಳ್ಳಬೇಕು. ಏಕೆಂದರೆ ‘ಈ ಬೀದಿಗಳಲ್ಲೆವೂ ನಮ್ಮವು ಹಗಲು ಮತ್ತು ಇರುಳು’ ಎಂದು ಖ್ಯಾತ ಸ್ತ್ರೀವಾದಿ ಚಿಂತಕಿ ವೋಲ್ಗಾರವರು ಪ್ರತಿಪಾದಿಸಿದ್ದಾರೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.

ಹೈದರಾಬಾದ್ ನ ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಮತ್ತು ಹೋರಾಟಗಾರ್ತಿಯಾದ ಅವರು, ‘ಮಹಿಳಾ ಬದುಕಿನ ಪಲ್ಲಟಗಳು’ ವಿಷಯದ ಕುರಿತು ಮಾತನಾಡಿ, ಈ ಶೀರ್ಷಿಕೆ ನಾವು ಬದುಕಿತ್ತಿರುವ ಸನ್ನಿವೇಶದಲ್ಲಿ ಅತ್ಯಂತ ಅಗತ್ಯದ ವಿಷಯವಾಗಿದೆ. ಮಹಿಳೆಯರು ಹೋರಾಟದಲ್ಲಿ ಚಾರಿತ್ರಿಕ ಏಳುಬೀಳುಗಳನ್ನು ಅನುಭವಿಸಿದ್ದಾರೆ. ಆದರೆ ಅದು ನಿರಂತರವಾಗಿ ನಡೆಯುತ್ತಲೇ ಇದೆ ಎಂದರು.

8 ಗಂಟೆಯ ಕೆಲಸಕ್ಕಾಗಿ, ವೋಟಿನ ಹಕ್ಕಿಗಾಗಿ, ಆಹಾರಕ್ಕಾಗಿ ನಡೆದ ದಿಟ್ಟ, ಧೀರೋಧಾತ್ತ ಹೋರಾಟ ನಡೆಸಿದ್ದಕ್ಕಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಲಾಯಿತು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ವರ್ಷ. ಮಹಿಳಾ ದೃಷ್ಟಿಯಿಂದ ಇದು ವಿಶೇಷವಾಗಿದ್ದು. ಏಕೆಂದರೆ ಪ್ರಪಂಚ ಮಹಿಳೆಯರನ್ನು ಮನುಷ್ಯರೆಂದು ಗುರುತಿಸಲು ಸಾಧ್ಯವಾಯಿತು. ಇದು ಹೋರಾಟದಿಂದ ಸಾಧ್ಯವಾಗಿದೆ ಎಂದರು.

ಸ್ತ್ರೀಯರಿಗೆ ಓದುವ ಅವಕಾಶ ಇತ್ತೀಚೆಗೆ ಮಾತ್ರ ದೊರೆಯಿತು. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಬೇಕು ಎನ್ನುವ ವಾದದ ಹಿಂದೆ ಒಂದು ಸ್ವಾರ್ಥವಿತ್ತು. ಮಹಿಳೆ ಶಿಕ್ಷಣ ಕಲಿತರೆ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಮತ್ತು ಮಕ್ಕಳಿಗೆ ಪಾಠ ಹೇಳಿಕೊಡುತ್ತಾಳೆ ಎನ್ನುವುದಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲಾ ವಿವಿಗಳಲ್ಲಿ ಮಹಿಳಾ ಅಧ್ಯಯನ ಮತ್ತು ಸ್ತ್ರೀವಾದಿ ವಿಭಾಗಗಳನ್ನು ಹುಟ್ಟಿಹಾಕಬೇಕು. ಆಗ ಮಾತ್ರ ಮಹಿಳಾ ವಿಚಾರಗಳು ಹರಡಲು ಸಾಧ್ಯವಾಗುತ್ತದೆ ಎಂದರು.

ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳು ನೂರಾರು. ಆಂಧ್ರ ಪ್ರದೇಶದಲ್ಲಿ ಮಹಿಳೆಯರಿಗೆ ರಾತ್ರಿ ಶಾಲೆಗಳನ್ನು ತೆರೆಯುತ್ತಿದ್ದರು. ಅದರಲ್ಲಿ ಸರಾಯಿ ಅಂಗಡಿಗಳನ್ನು ಮಹಿಳೆಯರು ಮುಚ್ಚಿಸುವ ಪಾಠವೊಂದಿತ್ತು. ಅದನ್ನು ಓದಿಕೊಂಡ ಮಹಿಳೆಯರು ಅದೇ ರೀತಿಯ ದೊಡ್ಡ ಹೋರಾಟ ಮಾಡುತ್ತಾರೆ. ಈ ಹೋರಾಟವನ್ನು ಮಾಡಿದವರು ವಿದ್ಯಾವಂತರಲ್ಲ, ಗ್ರಾಮೀಣ ಹೆಣ್ಣು ಮಕ್ಕಳು. ಅವರು ಪೊಲೀಸರ ಮಧ್ಯೆ ಹೋರಾಟ ನಡೆಸಿದರು. ಸೆರೆಮನೆಯಲಿದ್ದು ಶ್ರಮಿಸಿದ್ದಾರೆ ಮತ್ತು ಕಲಿತಿದ್ದಾರೆ. ಮಹಿಳಾ ಸಂಘಗಳು ಬೆಳೆದರೆ ಸರ್ಕಾರದ ವಿರುದ್ಧ ನಿಲ್ಲುತ್ತಾರೆ ಎಂದು ಸರ್ಕಾರಗಳು ದಬ್ಬಾಳಿಕೆ ಆರಂಭಿಸಿದರೂ ಮಹಿಳೆಯರು ದಿಟ್ಟತೆಯಿಂದ ಹೋರಾಡಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಬೀಹಾ ಭೂಮಿಗೌಡರವರು ಉದ್ಘಾಟನಾ ಭಾಷಣದಲ್ಲಿ ಮಹಿಳಾ ಬದುಕು ಪಲ್ಲಟಗಳು ವಿಷಯದ ಕುರಿತ ವಿಚಾರ ಸಂಕಿರಣದ ಉದ್ಘಾಟನೆಯನ್ನು ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಸಂತೋಷವಾಗಿದೆ, ನನಗೆ ಹೆಮ್ಮೆಯಾಗಿದೆ.
ಇಂದಿಗೆ ಎಂಟು ವರ್ಷಗಳ ಹಿಂದೆ ಮಹಿಳಾ ಬದುಕಿನ ದೌರ್ಜನ್ಯಗಳು, ಆಯಾಮಗಳು ಎಂಬ ವಿಷಯದ ಕುರಿತು ಮಂಗಳೂರಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೆವು. ಅಲ್ಲಿಂದ ನಮ್ಮ ಈ ವೇದಿಕೆ ಆರಂಭಗೊಂಡಿದೆ ಎಂದರು.

2012ರ ನಿರ್ಭಯ ಪ್ರಕರಣ ಮತ್ತು ಅದಕ್ಕೂ ಮುಂಚೆ ಮಂಗಳೂರಿನ ಹೋಮ್‌ಸ್ಟೇ ಮೇಲೆ ಅಮಾನುಷ ದಾಳಿಗೆ ವಿರುದ್ಧವಾಗಿ ನಾವು ಮಾರ್ಚ್ 2013ರಲ್ಲಿ ಈ ವೇದಿಕೆಯನ್ನು ಹುಟ್ಟುಹಾಕಿದೆವು. ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ ಮತ್ತು ಧಾರವಾಡದಲ್ಲಿ ಇದುವರೆಗೂ ವೇದಿಕೆಯು ಪ್ರತಿ ವರ್ಷ ಮಹಿಳಾ ದಿನ ಆಚರಿಸಿದೆ. ಅಲ್ಲಿಂದ ಇಲ್ಲಿಯವರೆಗೂ ನಡದು ಬಂದಿದ್ದೇವೆ ಎಂದರು.

ನಿರ್ಭಯಾ ಅತ್ಯಚಾರದ ಅಪರಾಧಿಗಳು ಇಂದು ಜೈಲಿನಲ್ಲಿದ್ದಾರೆ. ಗಲ್ಲಿಗೆ ಹೋಗುತ್ತಿದ್ದಾರೆ. ಆದರೆ ತಮ್ಮ ಕೃತ್ಯದ ಬಗ್ಗೆ ಅವರಿಗೆ ಪಶ್ಚಾತಾಪವಿಲ್ಲ ಎನ್ನುವುದು ದುಃಖದ ಸಂಗತಿ ಎಂದರು.

ಮಹಿಳೆಯರನ್ನು ಭೋಗದ ಸರಕನ್ನಾಗಿ ನೋಡುವುದು, ಅವರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವುದು ಚಿಂತೆಯ ಸಂಗತಿಯಾಗಿದೆ. ಇದಕ್ಕೆ ಸಮಾಜ, ನ್ಯಾಯಾಲಯ ಮತ್ತು ಮಹಿಯರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಹುಡುಕಾಟ, ನಿರಂತರ ಶೋಧ ನಮ್ಮದಾಗಿದೆ.
ನಮ್ಮ ಈ ಪ್ರಯತ್ನದೊಂದಿಗೆ ಈ ಸಮಾಜದ ಯುವ ಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಸಂಗತಿ. ದುಡಿಯುವ ವರ್ಗದ ಮಹಿಳೆಯರಿಂದ ಹಿಡಿದು ಬೌಧ್ಧಿಕ ವರ್ಗದವರೆಗೂ ಎಲ್ಲಾ ಸ್ಥರದ ಜನತೆ ಈ ಒಕ್ಕೂಟಕ್ಕೆ ಬೆಂಬಲ ನೀಡುತ್ತಿರುವುದು ನಮ್ಮ ಶಕ್ತಿಯನು ಹಿಮ್ಮಡಿಗೊಳಿಸಿದೆ ಎಂದರು.

2013ರಿಂದ 2020ಕ್ಕೆ ಬರುವಷ್ಟರಲ್ಲಿ ಕಾಲದ ಚಕ್ರ ಸ್ವಲ್ಪ ನಮ್ಮ ಕಡೆ ತಿರುಗಿದೆ. ಆರಂಭದ ವರ್ಷಗಳಲ್ಲಿ ಇದ್ದ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ತಿಳಿವಾಗಿದೆ. ಹಿಂದೆ ಮಹಿಳೆಯರ ಪರವಾಗಿ ಒಂದು ಕಾರ್ಯಕ್ರಮ ಮಾಡಲು ವಿ.ವಿಯ ಕುಲಪತಿಗಳನ್ನು ಮನವೊಲಿಸಬೇಕಿತ್ತು, ಅವರ ಬಳಿ ಬೇಡಿಕೊಳ್ಳಬೇಕಿತ್ತು. ಆದರೆ ಈಗ ಅಷ್ಟು ಕಷ್ಟವಾಗುತ್ತಿಲ್ಲ. ನಿರ್ಧಾರ ತೆಗೆದುಕೊಳ್ಳುವ ಹಲವು ಜಾಗಗಳಲ್ಲಿ ಮಹಿಳೆಯರೇ ಬಂದಿರುವುದು ಪರಿಸ್ಥಿತಿಯನ್ನು ಅಲ್ಪ ಸುಧಾರಿಸಿದೆ ಎಂದು ತಿಳಿಸಿದರು.

ಎಳೆಯ ತಲೆಮಾರು, ಯುವಜನತೆ ನಮಗೆ ತುಂಬಾ ಪೂರಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರಗಳು ತರಗತಿಯ ಒಳಗೆ ನಮಗೆ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ಒಕ್ಕೂಟದ ಹೆಸರು ಈಗ ಸ್ವಲ್ಪ ನಮ್ಮ ಬದುಕಿನ ಭಾಗ ಅನ್ನುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಸಮಾವೇಶ ನಡೆಯುವ ಜಿಲ್ಲೆಯ ಸ್ಥಳೀಯ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ವೇದಿಕೆ ಪ್ರತಿ ವರ್ಷ ಕಾರ್ಯಕ್ರಮ ರೂಪಿಸುತ್ತಿದೆ. ಮಂಡ್ಯ ಜಿಲ್ಲೆಯು ಕೈಗಾರೀಕರಣದ ಹೊಡೆತಕ್ಕೆ ಸಿಲುಕಿದೆ. ಕೃಷಿ ಬಿಕ್ಕಟ್ಟು ಎದುರಾಗಿದೆ. ಇದೆಲ್ಲದರಿಂದ ಮಹಿಳೆಯರು ನಲುಗಿದ್ದಾರೆ. ಪುರುಷ ಪ್ರಧಾನ ಮತ್ತು ಊಳಿಗಮಾನ್ಯ ಮನಸ್ಥಿತಿ ಇನ್ನೂ ಇಲ್ಲಿ ಜೀವಂತವಾಗಿದೆ. ಇವುಗಳನ್ನು ಎದರಿಸುವ ಬಗೆ ಕುರಿತು ಇಂದು ವಿಚಾರ ಸಂಕಿರಣ ನಡೆಯಲಿದೆ ಎಂದರು.

ಜನರನ್ನು ಗಾಢವಾಗಿ ಪ್ರಭಾವಿಸಿದ ಮಹಿಳೆಯರ ಪಡಿಯಚ್ಚು ನಿರ್ಮಾಣದಲ್ಲಿ, ಮಹಿಳೆಯರು ಗೌರವಿಸುವ ಆದರೆ ಅವರದಲ್ಲದ ಪುರಾಣಗಳನ್ನು ಒದುವುದು, ಅರ್ಥಮಾಡಿಕೊಳ್ಳುವುದು, ಅದನ್ನು ಒಡೆದು ಪುನರ್‌ರಚಿಸುವುದಕ್ಕೆ ಭಾರತೀಯ ಎಲ್ಲಾ ಭಾಷೆಯ ಮಹಿಳಾ ಲೇಖಕರು ಶ್ರಮಿಸಿದ್ದಾರೆ. ದೇಹಮೂಲದಿಂದ ಮಾತ್ರ ಪ್ರಕಟಗೊಳ್ಳುತ್ತಿದ್ದ ಮಹಿಳೆಯ ವ್ಯಕ್ತಿತ್ವವನ್ನು ಮನೋಮೂಲದಿಂದ ಅರ್ಥ ಮಾಡಿಕೊಳ್ಳುವಂತೆ ಶ್ರಮಿಸುತ್ತಿದ್ದಾರೆ. ಆ ಆಶಯಕ್ಕೆ ಜಯ ಸಿಗಲಿ ಎಂದರು.

ರೈತನಾಯಕಿ ಸುನಂದಾ ಜಯರಾಂ ಸಂವಿಧಾನದ ಪೀಠಿಕೆ ಓದಿ ಚಾಲನೆ ನೀಡಿದರು. ಹೆಣ್ಣೋಟದ ಹೆಗ್ಗಳಿಕೆ ಪುಸ್ತಕ ಬಿಡುಗಡೆಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...