Homeಮುಖಪುಟಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

ಭ್ರಷ್ಟಾಚಾರ ತನಿಖೆಗೆ ಅಡ್ಡಿ ಏಕೆ? : ಹೆಚ್.ಕೆ.ಪಾಟೀಲ್‍ರವರ ಸಂದರ್ಶನ

"ಶೆರೆ ಅಂಗಡಿಯೂ ತೆರೆದಿರುವಾಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಓಡಾಡಿದರೆ ತೊಂದರೆ ಅನ್ನುತ್ತೆ ಅನ್ನೋದು ಸರಿಯಾ?"

- Advertisement -
- Advertisement -

ಪತ್ರಿಕೆ: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ಸ್ಪೀಕರ್ ತಡೆ ನೀಡಬಹುದಾ?

ಎಚ್.ಕೆ.ಪಾಟೀಲ್ : ಅವರು ನೀವು ಇದರ ಪರಿಶೀಲನೆ ಮಾಡಬೇಡಿ ಎಂದು ಹೇಳಕ್ಕೆ ಆಗಲ್ಲ. ಕೊರೊನಾ ಸೋಂಕಿನ ಕಾರಣಕ್ಕೆ ನಿಮ್ಮ ಹಿತದೃಷ್ಟಿಯಿಂದ ಅದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ಹಾಗೆ ಹೇಳಿದ್ದಾರೆ. ಆದರೆ ಶೆರೆ ಅಂಗಡಿ ಓಪೆನ್ ಮಾಡಿದ್ದಾರೆ. ಬಸ್ಸುಗಳು, ರೈಲುಗಳನ್ನು ಓಡಿಸ್ತಿದಾರೆ. ವ್ಯಾಪಾರ ನಡೀತಿದೆ. ದೇವಸ್ಥಾನಗಳು, ಮಸೀದಿ, ಚರ್ಚ್‍ಗಳಿಗೆ ಅವಕಾಶ ಕೊಡ್ತೀವಿ ಅಂತಿದಾರೆ. ಸಾರ್ವಜನಿಕರಿಗೆ ಚಿಕಿತ್ಸೆ ಹೇಗೆ ನಡೀತಿದೆ, ಎಲ್ಲವೂ ಸರಿಯಾಗಿದೆಯಾ, ಸರ್ಕಾರ ಯಾವ ಅನುಕೂಲಗಳನ್ನ ಕಲ್ಪಿಸಿದೆ ಅಂತ ಶಾಸನಸಭೆಯ ಸದಸ್ಯರು ಇರುವ ಸಮಿತಿಗೆ ಮಾತ್ರ ತೊಂದರೆ ಆಗಿಬಿಡುತ್ತದಾ? ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕು.

ಪತ್ರಿಕೆ: ಹಾಗಾದರೆ ನಿಮಗೆ ಬಂದಿರುವ ಭ್ರಷ್ಟಾಚಾರದ ಕುರಿತ ದೂರಿನ ತನಿಖೆ ಮಾಡಲು ಏನೂ ಅಡ್ಡಿಯಿಲ್ಲ ಅಲ್ಲವಾ?

ಎಚ್.ಕೆ.ಪಾಟೀಲ್: ನಾವು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ಸಂಬಂಧಪಟ್ಟ ದೂರುಗಳ ಆಧಾರದ ಮೇಲೆ ಪರಿಶೀಲನೆ ಮಾಡಿ ವರದಿ ಕೊಡಿ ಎಂದು ಕೇಳಿದ್ದೇವೆ. ಅವರು ನಮಗೆ ಇದುವರೆಗೂ ಏನನ್ನೂ ಕೊಟ್ಟಿಲ್ಲ. ಇಂದು ನಮ್ಮ ಸಮಿತಿ ಸಭೆ ಇತ್ತು. ಅಲ್ಲಿ ಇದನ್ನ ಗಮನಕ್ಕೆ ತೆಗೆದುಕೊಂಡಿದೀವಿ, ಮುಂದಿನ ಮಂಗಳವಾರದ ಒಳಗೆ ಅವರು ಉತ್ತರ ಕೊಡಲಿಲ್ಲ ಅಂದರೆ ಮುಂದಿನ ಕ್ರಮಕ್ಕೆ ಮುಂದಾಗ್ತೀವಿ.

ಪತ್ರಿಕೆ: ಅಂದರೆ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡ್ತೀವಿ ಅಂದಿದ್ರಲ್ಲಾ, ಅದಕ್ಕೆ ಮುಂದಾಗ್ತೀರಾ?

ಎಚ್.ಕೆ.ಪಾಟೀಲ್: ಇಲ್ಲಾ, ಇವತ್ತು ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಒಂದು ತೀರ್ಮಾನಕ್ಕೆ ಬಂದಿದೀವಿ. ಈ ಬಗ್ಗೆ ನಾನು ಸಭಾಧ್ಯಕ್ಷರಿಗೆ ಪತ್ರ ಬರೆಯುತ್ತಿದ್ದೀನಿ. ಅವರೂ ನಾನು ಜೊತೆ ಸೇರಿ ಸಭೆ ಮಾಡಿ ಈ ವಿಚಾರದಲ್ಲಿ ಏನೇ ಅಡೆತಡೆಗಳಿದ್ದರೂ ಅದನ್ನ ಬಗೆಹರಿಸಿಕೊಂಡು, ಸಾರ್ವಜನಿಕರ ಹಿತದಿಂದ ಕೆಲಸ ನಿರ್ವಹಿಸಬೇಕು ಅಂತ. ಅದಕ್ಕೆ ಅವರು ಹೇಗೆ ಸ್ಪಂದಿಸ್ತಾರೆ ಅನ್ನೋದನ್ನು ಗಮನಿಸಿ ಮುಂದಕ್ಕೆ ಹೋಗ್ಬೇಕಾಗತ್ತೆ.

ಪತ್ರಿಕೆ: ಲಾಕ್‍ಡೌನ್ ಸಂದರ್ಭ ಇದ್ದುದರಿಂದ ವಿಧಾನಮಂಡಲದ ಇಂತಹ ಸಮಿತಿಗಳೂ ಸಭೆ ಸೇರ್ತಿರ್ಲಿಲ್ಲ ಅಲ್ವಾ? ಇದಕ್ಕಾಗಿಯೇ ಸೇರಿದ್ರಾ?

ಎಚ್.ಕೆ.ಪಾಟೀಲ್: ಕೊರೊನಾ ಬಂದು, ವಿಧಾನಮಂಡಲದ ಅಧಿವೇಶನವೂ ಮುಂದಕ್ಕೆ ಹೋದ ನಂತರ ಸಮಿತಿ ಸಭೆಗಳು ನಡೆಯುತ್ತಿರಲಿಲ್ಲ. ಈಗ 3 ವಾರದ ಹಿಂದಿನವರೆಗೂ ಅದೇ ಪರಿಸ್ಥಿತಿ ಇತ್ತು. ಅದಾದ ನಂತರ ಸಭೆ ಸೇರ್ತಿದೀವಿ. ಎಲ್ಲಾ ಸಮಿತಿಗಳೂ ಸೇರಿರದೇ ಇರಬಹುದು. ಕೆಲವು ಸಮಿತಿಗಳ ಸಭೆಗಳು ನಡೀತಿದಾವೆ.

ಪತ್ರಿಕೆ: ನೀವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದವರು. ಇದೀಗ ವಲಸೆ ಕಾರ್ಮಿಕರ ಸಮಸ್ಯೆಯನ್ನು ನೋಡಿದ್ದೀರಿ. ದೇಶದಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಆದ ಸಮಸ್ಯೆಗಳ ಕಾರಣದಿಂದ ಈ ವಲಸೆ ಸಮಸ್ಯೆ ಸೃಷ್ಟಿಯಾಯಿತು ಅಲ್ವಾ?

ಎಚ್.ಕೆ.ಪಾಟೀಲ್: ಗುಳೆ ಹೋದ ಕಾರ್ಮಿಕರಿಗಾಗಿ ನಾವೆಲ್ಲರೂ ಏನು ಮಾಡಿದ್ದೇವೆ ಅಂತ ನೋಡಬೇಕು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತ ನೋಡದೇ ಇಂತಹ ಜನರೇ ದೇಶ ಕಟ್ಟಿದವರು ಅನ್ನೋದನ್ನ ಮರೀಬಾರದು. ಅವರಲ್ಲಿ ಹೆಚ್ಚಿನವರು ಕಟ್ಟಡ ಕಾರ್ಮಿಕರಿದ್ದಾರೆ. ಅವರ ಹೆಸರಿನಲ್ಲೇ ಸಾವಿರಾರು ಕೋಟಿ ರೂ. ಹಣ ಕಲ್ಯಾಣನಿಧಿಯಲ್ಲಿದೆ. ಅವರದ್ದೇ ಹಣವನ್ನು ಅವರಿಗೆ ಖರ್ಚು ಮಾಡೋಕೆ ಏನು ಸಮಸ್ಯೆ? ಕರ್ನಾಟಕದಲ್ಲೇ 9,000 ಕೋಟಿ ರೂ ಇದೆ. ಇದನ್ನು ಬಳಸಿಕೊಂಡು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಅವರುಗಳು ತಮ್ಮೂರಿಗೆ ಹೊರಡ್ತಾರೆ ಅಂತ ಅದನ್ನ ತಡೆಯೋಕೆ ಹೋಗೋದು ಮಾನವೀಯತೆಯಾ? ಆ ಕೆಲಸವನ್ನು ಈ ಸರ್ಕಾರ ಮಾಡಿತು.

ಪತ್ರಿಕೆ: ಆದರೆ ವಿರೋಧ ಪಕ್ಷವಾಗಿ ನಿಮ್ಮ ಪಕ್ಷ ಈ ಕಾರ್ಮಿಕರ ಪರವಾಗಿ ಇಷ್ಟೇನಾ ಮಾಡೋಕೆ ಸಾಧ್ಯವಿದ್ದದ್ದು? ವಿರೋಧ ಪಕ್ಷಗಳು ಇನ್ನೂ ಕ್ರಿಯಾಶೀಲರಾಗಿ ಇರಬೇಕಿತ್ತು ಅಲ್ವಾ?

ಎಚ್.ಕೆ.ಪಾಟೀಲ್: ನಮ್ಮ ಪಕ್ಷದ ವತಿಯಿಂದ ನಮ್ಮ ಕೆಲಸ ಮಾಡಿದ್ದೇವೆ. ನಾನು ಹಲವಾರು ಪತ್ರಗಳನ್ನು ಸರ್ಕಾರಕ್ಕೆ ಬರೆದಿದ್ದೇನೆ. ವಲಸೆ ಕಾರ್ಮಿಕರಿಗೆ ಮೂರು ಪಟ್ಟು ಟಿಕೆಟ್ ಹಣ ತೆಗೆದುಕೊಂಡು ಬಸ್ಸುಗಳನ್ನು ಓಡಿಸ್ತಿದ್ದಾರೆ ಅಂತ ಗೊತ್ತಾದಾಗ ಕೆಪಿಸಿಸಿ ಅಧ್ಯಕ್ಷರು ಒಂದು ಕೋಟಿ ರೂ. ಚೆಕ್ ಬರೆದು ಖುದ್ದಾಗಿ ಬಸ್‍ಸ್ಟಾಂಡಿಗೆ ಹೋದರು. ನಾವೆಲ್ಲರೂ ಜೊತೆಗಿದ್ದೆವು. ಆ ನಂತರವೇ ಸರ್ಕಾರ ಉಚಿತವಾಗಿ ಬಸ್ಸು ಬಿಡ್ತೀನಿ ಅಂತ ಹೇಳಿದ್ದು.

ಪತ್ರಿಕೆ: ಇದನ್ನೇ ಅನುಸರಿಸಿ ಕೇಂದ್ರದ ಮೇಲೂ ಒತ್ತಡ ತಂದು ಉಚಿತ ರೈಲು ಬರುವ ಹಾಗೆ ಮಾಡಿದ್ವಿ ಅಂತ ಕಾಂಗ್ರೆಸ್‍ನವರು ಹೇಳಿಕೊಂಡಿರಿ. ಆದರೆ ಆ ಭರವಸೆ ನೀಡಿದ ಕೇಂದ್ರ ಸರ್ಕಾರವು ಉಚಿತ ರೈಲನ್ನು ಬಹಳ ಕಾಲ ಓಡಿಸಲೇ ಇಲ್ಲ. ವಿಚಾರ ಕೋರ್ಟಿಗೆ ಹೋಗುವತನಕ ಎಚ್ಚೆತ್ತುಕೊಳ್ಳಲಿಲ್ಲ. ಕಾಂಗ್ರೆಸ್‍ನವರೂ ಫಾಲೋಅಪ್ ಮಾಡಲಿಲ್ಲ.

ಎಚ್.ಕೆ.ಪಾಟೀಲ್: ನೋಡಿ, ಒಂದು ಆಡಳಿತ ಪಕ್ಷಕ್ಕೆ ನೀವು ಇಂತಹ ಸಂದರ್ಭದಲ್ಲಿ ಉಚಿತವಾಗಿ ಬಸ್ಸು, ರೈಲು ಓಡಿಸಬೇಕು ಅಂತ ವಿರೋಧ ಪಕ್ಷ ಹೇಳುವ ಸಂದರ್ಭವೇ ಬರಬಾರದು. ಒಂದು ವೇಳೆ ವಿರೋಧಪಕ್ಷ ಹೇಳಿದರೆ ಅದನ್ನು ತಿದ್ದುಕೊಂಡು ಮುಂದುವರೆಯಬೇಕು. ಆದರೆ ಈ ಸರ್ಕಾರವು ಹಾಗೆ ಮಾಡಲಿಲ್ಲ.


ಇದನ್ನು ಓದಿ: ರಾಜ್ಯದಲ್ಲಿ ಅಸಂವಿಧಾನಾತ್ಮಕವಾಗಿ ಇನ್ನೊಬ್ಬ ಮುಖ್ಯಮಂತ್ರಿಯಿದ್ದಾರೆ: ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...