Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

ಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

- Advertisement -
- Advertisement -

ಜಯಂತ್ ಕಾಯ್ಕಿಣಿ, ವಿವೇಕ್ ಶಾನಬಾಗ್ ಮತ್ತು ಎಂ.ಎಸ್. ಶ್ರೀರಾಮ್ ಈ ಮೂವರೂ ಬರಹಗಾರರ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಕುತೂಹಲ. ಈ ಮೂವರೂ ಹಲವು ಘಟ್ಟಗಳಲ್ಲಿ, ಕರ್ನಾಟಕದಿಂದ ದೂರದಲ್ಲಿ-ದೇಶದ ಹಲವೆಡೆಯಲ್ಲಿ, ದೇಶದಿಂದಾಚೆಗೆ ನೆಲೆಸಿದ್ದು, ಬದಲಾಗುತ್ತಿರುವ ಜಗತ್ತನ್ನು ಕರ್ನಾಟಕದ ಸೊಗಡಿನೊಂದಿಗೆ ಖುದ್ದಾಗಿ ನೋಡಿದವರು. ನನ್ನ ಪ್ರೀತಿಯ ಊರಾದ ಮುಂಬಯಿಯಲ್ಲಿ ಇದ್ದವರು(ಹೀಗೆ ನಾನು ಅಂದುಕೊಂಡಿದ್ದು). ನನ್ನ ಸೀಮಿತ ತಿಳಿವಳಿಕೆಯಲ್ಲಿ ವ್ಯಾಸರಾಯ ಬಲ್ಲಾಳರು ಮತ್ತು ಯಶವಂತ ಚಿತ್ತಾಲರ ನಂತರ ಕಾರ್ಪೋರೆಟ್ ಜಗತ್ತನ್ನು ಖುದ್ದಾಗಿ ನೋಡಿ ಬರೆದವರು ಇವರುಗಳೇ. ಕಾಯ್ಕಿಣಿ ಕಟ್ಟಿಕೊಡುವ ಮುಂಬಯಿಯ ವಿವರ ನನ್ನ ಕಣ್ಣನ್ನು ಅರಳಿಸುತ್ತಿದ್ದವು. ಆದರೆ ನನ್ನ ಮುಂಬಯಿ ಮತ್ತು ಕಾಯ್ಕಿಣಿಯವರ ಮುಂಬಯಿಯಲ್ಲಿ ದೊಡ್ಡ ಅಂತರವಿದೆ. ನಾನು ಮುಂಬಯಿ ಸೇರಿದ ವರ್ಷವೇ ಅವರು ಮುಂಬಯಿ ತೊರೆದಿದ್ದೂ ಅದಕ್ಕೆ ಕಾರಣವಿರಬಹುದು.

ನಮ್ಮ(ಭಾರತದ) ಜಗತ್ತು ಒಂದು ಟ್ರಾನ್ಸಿಷನಲ್ ಅವಧಿಯಲ್ಲಿ ಸಾಗುತ್ತಿದೆ, ಸಂಬಂಧಗಳು ಬದಲಾಗುತ್ತಿವೆ. ಹಿಂದೆ ನೋಡಿದ ಭಾರತವೇನೂ ಕಾಣೆಯಾಗಿಲ್ಲ, (ನಮ್ಮಂಥ ’ಆಧುನಿಕ’ ಜಗತ್ತಿನಲ್ಲಿ ಪ್ರವೇಶಿಸುವವರಿಗೆ ಕಣ್ಮರೆಯಾಗಿದ್ದು ನಿಜ.) ಅದರೊಂದಿಗೆ ಹೊಸ ಜಗತ್ತೊಂದು ಸೃಷ್ಟಿಯಾಗಿದ್ದು, ಅದು ಹಲವರಿಗೆ ಮುಚ್ಚಿದ ಬಾಗಿಲ ಜಗತ್ತಿನಂತೆ ಇದೆ. ಪ್ರವೇಶಾವಕಾಶ ಎಲ್ಲರಿಗೂ ಇದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಹೆಚ್ಚಿನವರಿಗೆ ಅದರ ಬಾಗಿಲು ಮುಚ್ಚಿಯೇ ಇದೆ. ಆ ಜಗತ್ತಿನ ಭಾಷೆ ಇಂಗ್ಲಿಷು. ಭಾಷೆಯೊಂದಿಗೆ ಸಂಸ್ಕೃತಿ ಹೇಗೆ ತಗಲುಹಾಕಿಕೊಂಡಿದೆ ಎಂಬುದು ನಮಗೆಲ್ಲ ತಿಳಿದ ವಿಷಯ. ಈ ’ಸೌತ್ ಬಾಂಬೆ’(ಸೊಬೊ)ಯ ಜಗತ್ತನ್ನು ಭೇದಿಸುವುದು ಕಷ್ಟವಿದ್ದರೂ, ಭೇದಿಸಿದವರೂ ಅನೇಕರಿದ್ದಾರೆ. ಈ ಎರಡೂ ಜಗತ್ತುಗಳಲ್ಲಿ ವಿಹರಿಸಿದ ಇವರ ಸಾಹಿತ್ಯ ಓದಲು ಎಂದಿಗೂ ಕುತೂಹಲಕಾರಿಯಾದದ್ದೇ.

ಬೇಟೆಯಲ್ಲ ಆಟವೆಲ್ಲ ಎಂಬ ಎಂ ಎಸ್ ಶ್ರೀರಾಮ್ ಅವರ ಕಥೆಯೂ ಈ ಜಗತ್ತನ್ನು ಭೇದಿಸಿದವರ ಕಥೆ. ಕಾರ್ಪೋರೇಟ್ ಜಗತ್ತಿನ ಹೆಚ್ಚಿನ ಕಥೆಗಳಂತೆ ಈ ಕಥೆಯೂ ಹೊಸ ಜಗತ್ತಿನಲ್ಲಿ ’ಯಶಸ್ವಿ’ಯಾದವರ ಕಥೆ. ಹೊರಗಿನಿಂದ ಕಾಣುವ ನಮ್ಮಂತವರಿಗೆ, ಮೈಸೂರಿನ ಮೂಲದ ಪಾತ್ರಗಳಿಗೆ ತಮ್ಮ ಬೇರುಗಳನ್ನು ಸಂಪೂರ್ಣವಾಗಿ ಕಳಚಿ, ಪೂರ್ಣಪ್ರಮಾಣದಲ್ಲಿ ’ಸೊಬೊ’ ಆಗಬಹುದಲ್ಲ ಎಂದೆನಿಸುತ್ತಾದರೂ, ಇವರ್‍ಯಾರೂ ಬೇರುಗಳನ್ನು ಕಳಚಿಕೊಳ್ಳುವುದಿಲ್ಲ. ಬಹುಶಃ ಆ ಮಟ್ಟದ ಯಶಸ್ವಿಗಳಾಗಿಲ್ಲವೇನೋ, ಅಥವಾ ಎಷ್ಟೇ ಯಶಸ್ಸು ಕಂಡರೂ ಸಂಪೂರ್ಣವಾಗಿ ಬೇರುಗಳನ್ನು ಕಳಚಿಕೊಳ್ಳಲು ಸಾಧ್ಯವಿಲ್ಲವೇನೋ.

ಸಹಜವಾಗಿಯೇ ಎಲ್ಲಾ ಪಾತ್ರಗಳು ಒಂದು ಟ್ರಾನ್ಸ್‌ಫಾರ್ಮೇಷನ್‌ಗೆ ಒಳಗಾಗಿದ್ದಾರೆ. ಅನಿರುದ್ಧ ಒಬ್ಬ ಆರ್ಥಾಡಾಕ್ಸ್ ವ್ಯಕ್ತಿಯಿಂದ ಅಷ್ಟೇನೂ ಆರ್ಥಾಡಾಕ್ಸ್ ಆಗಿರದ ವ್ಯಕ್ತಿಯಾಗಿ ಬದಲಾದರೆ, ಅವನು ಗೆಳೆಯ ಅಖ್ತರ್ ಹುಸೇನ್‌ನ ರೂಪಾಂತರ ಮೇಲ್ನೋಟಕ್ಕೆ ಅವನ ವಿರುದ್ಧದ ದಿಕ್ಕಿನಲ್ಲಿದೆ. ಸುಜಾತಳ ಟ್ರಾನ್ಸ್‌ಫಾರ್ಮೇಷನ್ ಅತ್ಯಂತ ಡ್ರಾಸ್ಟಿಕ್ ಆಗಿದೆ ಮತ್ತು ಆಕೆ ಎಲ್ಲರಿಗಿಂತ ಯಶಸ್ವಿಯಾಗಿದ್ದಾಗಿದೆ. ಅವರ ಆಳದ ಭಾವಗಳು, ದ್ವಂದ್ವಗಳು, ತೋರಿಕೆಗಳೆಲ್ಲವೂ ಸಹಜವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತವೆ. ಸಹಜವಾಗಿ ತೆರೆದುಕೊಳ್ಳದೇ ಇರುವುದು ಈಗಾಗಲೇ ಆ ಸೊಬೊ ಜಗತ್ತಿನಲ್ಲಿರುವವರ ದ್ವಂದ್ವಗಳು. ಅವರನ್ನು ನೋಡಿದಾಗ ಅನಿಸುವುದು ಹಾಗೆಯೇ, ಎಷ್ಟು ಸಾರ್ಟೆಡ್ ಇದಾರಪ್ಪ, ದ್ವಂದ್ವಗಳೇ ಇಲ್ಲ ಎಂದು. ಶಿವಾನಿ ಆ ಲೋಕವನ್ನು ಪ್ರತಿನಿಧಿಸುತ್ತಾಳೆ. ಅವಳು ನನಗೆ ತಿಳಿಯಲಿಲ್ಲ. ಅವಳ ಬಾಯ್‌ಫ್ರೆಂಡ್ ಚಿನ್ಮಯನಿಗೆ ಅನಿಸಿದಂತೆ ಓದುಗನಿಗೂ ಅವಳು ಕ್ರೂರಿ ಎನಿಸುತ್ತಾಳೆ. ವ್ಯವಹಾರದಲ್ಲಿ ಅವಳು ಕ್ರುಎಲ್ ಆಗಿಯೇ ಮುಂದುವರೆಯಬೇಕಾದ ಅವಶ್ಯಕತೆ ಅವಳಿಗಿರಬಹುದು ಆದರೆ ವೈಯಕ್ತಿಕ ಜೀವನದಲ್ಲಿ? ಹೌದು, ಇರಬಹುದು. ಆದರೂ ಅವಳನ್ನು ಅರಿಯುವ, ಅವಳ ಒಳಜಗತ್ತಿನೊಳಗೆ ಇಣುಕುವ ತವಕವನ್ನು ತಣಿಸುವುದಿಲ್ಲ. ಚಿನ್ಮಯ ಮತ್ತು ಶಿವಾನಿ ನಡುವೆ ಇರಬಹುದಾಗಿದ್ದ ಪ್ಯಾಷನ್ ಓದುಗನಿಗೆ ಕಾಣಿಸುವುದಿಲ್ಲ. ಪ್ಯಾಷನ್ ಇಲ್ಲದೇ ಇರುವ ಸಂಬಂಧವಾಗಿದ್ದರೆ, ಪ್ಯಾಷನ್ ಇಲ್ಲದ, ತಣ್ಣನೆಯ ಸಂಬಂಧದ ಬಗ್ಗೆ ಇರುವ ಕುತೂಹಲವೂ ತಣಿಯುವುದಿಲ್ಲ.

ಇಲ್ಲಿಯ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಆ ಒಂದು ತೀವ್ರವಾದ ಪ್ಯಾಷನ್ ಕಾಣಿಸುವುದಿಲ್ಲ. ಅನಿರುದ್ಧ ಕವಿತಾಳ ಸಂಬಂಧದಲ್ಲೂ ಅದು ಉಳಿದಿಲ್ಲ. ಸುಜಾತಾ ಮುಕುಂದನ ಸಂಬಂಧದಲ್ಲಿ ಅದು ಕಾಣಿಸದಿದ್ದರೂ, ಮುಕುಂದ ಮತ್ತು ಶಿವಾನಿಯ ಸಂಬಂಧವನ್ನು ಕೆದಕದೇ ಹೋಗಿದ್ದು ಆಶ್ಚರ್ಯ.

ಸಂಬಂಧಗಳು ಬದಲಾಗುತ್ತಿರುವ ಸಮಯದಲ್ಲಿ ಬದಲಾಗುತ್ತಿರುವ ರಾಜಕೀಯವನ್ನು ಎಲ್ಲೂ ತುರುಕುವ ಪ್ರಯತ್ನ ಮಾಡದೇ, ಈ ಪಾತ್ರಗಳು ಸವೆಸುವ ಪಯಣದಲ್ಲಿಯೇ ರಾಜಕೀಯದಲ್ಲಾದ ಸೂಕ್ಷ್ಮ ಬದಲಾವಣೆಗಳನ್ನು, ಅವುಗಳು ಬೀರುತ್ತಿರುವ ಪರಿಣಾಮಗಳನ್ನೂ ಅಷ್ಟೇ ಆಳವಾಗಿ ಸೂಕ್ಷ್ಮವಾಗಿ ಕಂಡಿದ್ದಾರೆ. ಈ ಟ್ರಾನ್ಸಿಷನ್‌ನ ಪರ್ವ ಎಂದರೆ ಅದರ ಪ್ರಮುಖ ಅಂಶ ಗೊಂದಲ. ಈ ಗೊಂದಲಗೋಜಲುಗಳನ್ನು ಲೀಲಾಜಾಲವಾಗಿ ಹಿಡಿದಿಟ್ಟು, ಕಥೆಯೂ ಒಂದಿಷ್ಟು ಗೊಂದಲಗಳನ್ನು ಸೃಷ್ಟಿಸಿ ನಮ್ಮ ಕಾಲದ ಒಂದು ಅತ್ಯಂತ ಪ್ರಮುಖ ಕೃತಿಯನ್ನು ಶ್ರೀರಾಮ್ ರಚಿಸಿದ್ದಾರೆ. ನಮ್ಮೆಲ್ಲರನ್ನು ಆವರಿಸುವ ಈ ಸುಂದರ ಗೊಂದಲಗೋಜಲುಗಳನ್ನು ಅನಾವರಣಗೊಳಿಸುವ-ಬಿಡಿಸುವ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚೆಚ್ಚು ಮೂಡಲಿ.

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...