ಅದೃಷ್ಟದ ರೀತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್‌ಸಿಬಿ ತಂಡಕ್ಕೆ ಮತ್ತು ಆತಂಕ ಎದುರಾಗಿದೆ. ಕೋಲ್ಕತ್ತಾದಲ್ಲಿ ಸುರಿಯುತ್ತಿರುವ ಮಳೆಯು ಆರ್‌ಸಿಬಿಯ ಪ್ಲೇಆಫ್ ಪಂದ್ಯಕ್ಕೆ ಅಡ್ಡಿಯುಂಟು ಮಾಡಿದ್ದು ಒಂದು ವೇಳೆ ಮಳೆ ನಿಲ್ಲದಿದ್ದರೆ ಆರ್‌ಸಿಬಿ ಅನಿವಾರ್ಯವಾಗಿ ಟೂರ್ನಿಯಿಂದ ಹೊರಕ್ಕೆ ಬೀಳುವ ಅಪಾಯ ಎದುರಿಸುತ್ತಿದೆ.
ಇಂದು ರಾತ್ರಿ 7.30ಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವರ್ಸಸ್ ಆರ್‌ಸಿಬಿ ನಡುವಿನ ಕ್ವಾಲಿಫೈಯರ್ ಪಂದ್ಯ ಆರಂಭವಾಗಬೇಕಿತ್ತು. ಮಳೆಯ ಕಾರಣದಿಂದ ಇನ್ನು ಟಾಸ್ ಆಗಿಲ್ಲ. ಮಳೆ ಸುರಿಯುತ್ತಿರುವುದರಿಂದ ಟಾಟಾ ಐಪಿಎಲ್ ಸಮಿತಿಯು ನಾಲ್ಕು ನಿಯಮಗಳನ್ನು ಮುಂದಿಟ್ಟಿದೆ. ಅವುಗಳೆಂದರೆ
- ಮಳೆ ನಿಂತರೆ ರಾತ್ರಿ 9.40ಕ್ಕೆ ಪ್ಲೇ ಆಫ್ ಪಂದ್ಯ ಆರಂಭವಾಗುತ್ತದೆ. (ಯಾವುದೇ ಓವರ್‌ಗಳ ಕಡಿತವಿಲ್ಲದೆ)
- ಆಗಲೂ ಮಳೆ ನಿಲ್ಲದೆ ಪಂದ್ಯ ಆರಂಭವಾಗದಿದ್ದರೆ ತಲಾ 5 ಓವರ್‌ಗಳ ಪಂದ್ಯವನ್ನು ರಾತ್ರಿ 11.56ಕ್ಕೆ ಆರಂಭಿಸಲಾಗುತ್ತದೆ.
- ಆಗಲೂ ಮಳೆ ನಿಲ್ಲದಿದ್ದರೆ ಬೆಳಗ್ಗಿನ ಜಾವ 12.50 ಕ್ಕೆ ತಲಾ ಕೇವಲ ಒಂದು ಓವರ್‌ನ ಸೂಪರ್ ಓವರ್ ಪಂದ್ಯ ಆಡಿಸಲಾಗುತ್ತದೆ.
- ಆಗಲೂ ಮಳೆ ನಿಲ್ಲದಿದ್ದರೆ ಪಂದ್ಯ ರದ್ದು ಮಾಡಿ ಗ್ರೂಪ್ ಹಂತದಲ್ಲಿ ಹೆಚ್ಚಿನ ಅಂಕ ಪಡೆದ ತಂಡವನ್ನು ವಿಜೇತ ಎಂದು ಘೋಷಿಸಿ ಮುಂದಿನ ಕ್ವಾಲಿಫೈಯರ್ ಹಂತಕ್ಕೆ ಕಳಿಸಲಾಗುತ್ತದೆ.
Here's the update from the organisers. The rain has ceased and the workers are getting ready to remove the covers. But in case rain returns, these are the conditions @DeccanHerald #IPL2022 #IPLplayoffs #Eliminator pic.twitter.com/Xzz2zdCNqh
— Sidney Kiran (@Gunnersyd) May 25, 2022
ಸದ್ಯ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹಾಗಾಗಿ ಮಳೆಯಿಂದ ಪಂದ್ಯ ರದ್ದುಗೊಂಡರೆ ಆರ್‌ಸಿಬಿ ಮನೆಗೆ ಹೋಗಬೇಕಾಗುತ್ತದೆ. ಲಕ್ನೋ ಮುಂದಿನ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಹಾಗಾಗಿ ಮಳೆ ನಿಲ್ಲಲಿ ಪಂದ್ಯ ನಡೆಯಲಿ ಎಂದು ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.


