Homeಮುಖಪುಟಜ್ಯೋತಿರಾಧಿತ್ಯ ಸಿಂಧಿಯಾರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಶ್ರೇಯವೇ?

ಜ್ಯೋತಿರಾಧಿತ್ಯ ಸಿಂಧಿಯಾರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಶ್ರೇಯವೇ?

- Advertisement -
- Advertisement -

ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮೂಲಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತೆ ಕಾಂಗ್ರೆಸ್‌ಗೆ ಮರಳುವ ಸುದ್ಧಿ ಈಗ ಓಪನ್ ಸೀಕ್ರೆಟ್.

ಆದರೆ ಕಾಂಗ್ರೆಸ್ ಯಾವ ಕಾರಣಕ್ಕೂ ಸಿಂಧಿಯಾರನ್ನು ಮರಳಿ ಮನೆ ಸೇರಿಸದಿರುವುದು ಕಾಂಗ್ರೆಸ್ ಪಾಲಿಗೆ ಒಳಿತು.

ಕಮಲ್ ನಾಥ್ ಬಹಳ ಸಜ್ಜನ ರಾಜಕಾರಣಿಯೆಂದೇನೂ ನಾನು ಹೇಳಲಾರೆ. ಆದರೆ ಕಳೆದ ಅಸೆಂಬ್ಲಿ ಚುನಾವಣೆಯ ಬಳಿಕ ಕಮಲ್‌ನಾಥ್‌ಗೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಹುದ್ದೆ ನೀಡಿದ್ದು ಅವರ ಸೀನಿಯಾರಿಟಿಯ ದೃಷ್ಟಿಯಿಂದ ಮತ್ತು ಪಕ್ಷಕ್ಕೆ ಅವರು ನೀಡಿದ ಸೇವೆಯ ದೃಷ್ಟಿಯಿಂದ ಅತ್ಯಂತ ಸೂಕ್ತ ಆಯ್ಕೆಯಾಗಿತ್ತು. ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಅತೀ ಮುಖ್ಯ ಕಾರಣವೇ ತನಗೆ ಮುಖ್ಯಮಂತ್ರಿ ಪಟ್ಟ ನೀಡದಿದ್ದುದು.

ಕಮಲ್‌ನಾಥ್ ಜ್ಯೋತಿರಾಧಿತ್ಯರ ಅಪ್ಪ ಮಾಧವ್ ರಾವ್ ಅವರ ಸಮಕಾಲೀನ ನಾಯಕ. ಅವರು ರಾಜಕೀಯ ಬದುಕಿನ ಅರ್ಧದಷ್ಟು ರಾಜಕೀಯ ಅನುಭವವೂ ಜ್ಯೋತಿರಾಧಿತ್ಯರಿಗಿಲ್ಲ. ಕಾಂಗ್ರೆಸ್ ದೇಶದೆಲ್ಲೆಡೆ ಸೋತು ನಿರಾಶೆಯ ಛಾಯೆಯಲ್ಲಿದ್ದಾಗ ಮಧ್ಯಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅಧಿಕಾರ ಹಿಡಿದುದು ಕಾಂಗ್ರೆಸ್ ಪಾಲಿಗೆ ಕತ್ತಲ ಕಾಲದ ಕೋಲ್ಮಿಂಚಾಗಿತ್ತೆಂದರೂ ಸರಿಯೇ. ಅಷ್ಟು ಕಷ್ಟಪಟ್ಟು ಬಿಜೆಪಿಯನ್ನು ಉರುಳಿಸಿ ಅಧಿಕಾರ ಹಿಡಿದಿರುವಾಗ ತನ್ನ ಅಧಿಕಾರ ದಾಹಕ್ಕಾಗಿ ಸರಕಾರವನ್ನು ಉರುಳಿಸಿದ್ದು ಅಕ್ಷಮ್ಯ. ಬಿಜೆಪಿ ಅನೈತಿಕ ಮಾರ್ಗದಲ್ಲಿ  ಅಧಿಕಾರಕ್ಕೇರಲು ಬಾಗಿಲು ತೆರೆದುಕೊಟ್ಟದ್ದೇ ಜ್ಯೋತಿರಾಧಿತ್ಯ.

ಇದೊಂದು ಅವಧಿಗೆ ಕಮಲ್‌ನಾಥ್‌ರಿಗೆ ಒಳ್ಳೆಯ ಆಡಳಿತ ನೀಡಲು ಅವಕಾಶ ಮಾಡಿಕೊಟ್ಟಿದ್ದರೆ ಜ್ಯೋತಿರಾಧಿತ್ಯ ಕಳೆದುಕೊಳ್ಳುವುದೇನೂ‌ ಇರಲಿಲ್ಲ.  ನಾಳೆ ಇನ್ನೊಮ್ಮೆ  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನ ಸಹಜ ಆಯ್ಕೆ ಜ್ಯೋತಿರಾಧಿತ್ಯ ಎಂಬ ಬಗ್ಗೆ ಖುದ್ದು ಜ್ಯೋತಿರಾಧಿತ್ಯರಿಗೂ ಗೊತ್ತಿತ್ತು. ಅದಾಗ್ಯೂ ದಿಡೀರ್ ಮುಖ್ಯಮಂತ್ರಿಯಾಗಬೇಕೆಂಬ ದುರಾಶೆಗೆ ಪಕ್ಷದ ಬಿಡಿ ಸ್ವತಃ ತನ್ನ ಭವಿಷ್ಯದ ಬಗ್ಗೆಯೂ ಯೋಚಿಸದ ಜ್ಯೋತಿರಾಧಿತ್ಯರನ್ನು ಕಾಂಗ್ರೆಸ್ ಮತ್ತೆ ಯಾವ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳದಿರುವುದು ಕಾಂಗ್ರೆಸ್ ಪಾಲಿಗೆ ಅತ್ಯಂತ ಕ್ಷೇಮಕರ.

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿರಬಹುದು, ಆದರೆ ಜ್ಯೋತಿರಾಧಿತ್ಯ ಮತ್ತೆ ಮಾತೃಪಕ್ಷಕ್ಕೆ ಮರಳುವ ಬಗ್ಗೆ ಯೋಚಿಸಲು ಅದೊಂದೇ ಕಾರಣ ಖಂಡಿತಾ ಅಲ್ಲ. ಬಿಜೆಪಿ ಕೊರೋನಾದ ವಿಷಮಕಾಲದಲ್ಲಿ ಮಾಡಿದ ಚೀಪ್  ಪಾಲಿಟಿಕ್ಸ್‌‌ನಿಂದಾಗಿ ಮತ್ತು ಈಗಿನದು ಜನತೆಯ ಆಯ್ಕೆಯ ಸರಕಾರವಲ್ಲದಿರುವುದರಿಂದ ಅದು ಮುಂದಿನ ಅವಧಿಗೆ ಈಗ ಪಡೆದ ಅಧಿಕಾರ ಉಳಿಸಿಕೊಳ್ಳುವುದು ಬಹಳ ಕಷ್ಟ.

ಈಗಿಂದೀಗಲೇ ಕಾಂಗ್ರೆಸ್ ಸೇರಿದರೆ ಮುಂದೆ ತನ್ನ ಸ್ಥಾನವನ್ನು ಭದ್ರಗೊಳಿಸಬಹುದೆಂಬ ದೂರಾಲೋಚನೆಯೇ ಜ್ಯೋತಿರಾಧಿತ್ಯರನ್ನು ಇಂತಹ ನಿರ್ಧಾರಕ್ಕಿಳಿಸಿದೆ. ಅವರನ್ನು ಮತ್ತೆ ಸೇರಿಸಿಕೊಳ್ಳುವುದರಿಂದ ನಿಷ್ಟಾವಂತ ಕಾಂಗ್ರೆಸಿಗರಿಗೆ ಅನ್ಯಾಯ ಮಾಡಿದಂತಾಗಬಹುದು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿದರೂ ಅನ್ಯಾಯವಾಗಿ ಅವರು ಕೈ ತಪ್ಪಿಸಿದ ಅಧಿಕಾರ ಮತ್ತೆ ದಕ್ಕದು. ಅವರು ತನ್ನೊಂದಿಗೆ ಬಿಜೆಪಿಗೆ ಕೊಂಡೊಯ್ದ ಎಲ್ಲಾ ಶಾಸಕರೂ ಮತ್ತೆ ಕಾಂಗ್ರೆಸ್‌ಗೆ ಮರಳುವ ಸಾಧ್ಯತೆ ತೀರಾ ಕಡಿಮೆ. ಜ್ಯೋತಿರಾಧಿತ್ಯ ಕಾಂಗ್ರೆಸ್ ತೊರೆದಿದ್ದೂ ಅಧಿಕಾರ ಮೋಹದಿಂದ, ಮತ್ತೆ ಮರಳುತ್ತಿರುವುದೂ ಭವಿಷ್ಯದ ಅಧಿಕಾರ ಮೋಹಕ್ಕಾಗಿಯಷ್ಟೆ.

ನಾಳೆ ಅವರು ಮತ್ತೆ ಇನ್ನೇನಾದರೂ ಕಾರಣ ಮುಂದಿಟ್ಟು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಲಾರರು ಎನ್ನಲು ಯಾವ ಖಚಿತತೆಯೂ ಇಲ್ಲ.

ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತಗಳಿಂದ ಜ್ಯೋತಿರಾಧಿತ್ಯ ಸೋತಿರುವುದು ಅವರು ತನ್ನ ಕ್ಷೇತ್ರದಲ್ಲೇ ಹಿಂದಿನಷ್ಟು ಪ್ರಭಾವಿಯಾಗುಳಿದಿಲ್ಲ ಎನ್ನುವುದನ್ನು ತೋರಿಸುತ್ತದೆ. ರಾಜ ಕುಟುಂಬ ಎನ್ನುವ ಕಾರಣಕ್ಕೆ ಅವರಿಗೆ ಮಣೆ ಹಾಕುವುದು ಪ್ರಜಾಪ್ರಭುತ್ವ ಕಾಲದ ಅತ್ಯಂತ ಅಸಹ್ಯ ನಡೆಯಾಗಬಹುದು.

ಜ್ಯೋತಿರಾಧಿತ್ಯ  ಮಾಧವ ರಾವ್ ಸಿಂಧಿಯಾ ಅವರ ಮಗನಲ್ಲದಿರುತ್ತಿದ್ದರೆ ಅವರು ರಾಜಕೀಯದಲ್ಲಿ ಏನೂ‌ ಆಗಿರುತ್ತಿರಲಿಲ್ಲ. ಅಷ್ಟಕ್ಕೂ ಅವರು ಇತರ ನಾಯಕರಂತೆ ಪಕ್ಷಕ್ಕಾಗಿ ದುಡಿದು ಮೇಲೇರಿದವರಲ್ಲ. ಅವರಪ್ಪನ ದಿಡೀರ್ ಸಾವು ಅವರನ್ನು ಉತ್ತರಾಧಿಕಾರಿಯಾಗಿಸಿತ್ತು. ರಾಹುಲ್ ಗಾಂಧಿಯವರು ಜ್ಯೋತಿರಾಧಿತ್ಯರನ್ನು ತನ್ನ ಆಪ್ತ ಬಳಗದಲ್ಲಿಟ್ಟುಕೊಂಡಿದ್ದರೂ ಅವರು ಪಕ್ಷದ ನಾಯಕತ್ವಕ್ಕೆ ನಿಷ್ಟೆ ತೋರಿಸದೇ ಬಿಜೆಪಿಗೆ ಹಾರಿ ಇತರ್ಯಾವುದೇ ನಾಯಕರು ಪಕ್ಷ ತೊರೆದು ಮಾಡಿರುವುದಕ್ಕಿಂತ ಅತೀ ಹೆಚ್ಚು ಹಾನಿಯನ್ನೂ ಪಕ್ಷಕ್ಕೆ ಮಾಡಿದರು.

ಜ್ಯೋತಿರಾಧಿತ್ಯ ಮರುಸೇರ್ಪಡೆಯಿಂದ ಸದ್ಯಕ್ಕೆ ಬಿಜೆಪಿಗೆ ಟಾಂಗ್ ಕೊಡಲು ಕಾಂಗ್ರೆಸ್‌ಗೆ ಅಸ್ತ್ರ‌ ಸಿಗಬಹುದೇ ಹೊರತು ಹೆಚ್ಚಿನ ಲಾಭವೇನೂ ಆಗದು. ಮತ್ತು ಅದೊಂದು ಕಾಂಗ್ರೆಸ್‌ನೊಳಗೆ ಕೆಟ್ಟ ಬೆಳವಣಿಗೆಗೆ ನಾಂದಿಯಾಗಬಹುದು..


ಇದನ್ನೂ ಓದಿ: ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅರ್ನಾಬ್‌ಗೆ ನೋಟಿಸ್‌ ನೀಡಿದ ಮುಂಬೈ ಪೊಲೀಸ್‌ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...