Homeಫ್ಯಾಕ್ಟ್‌ಚೆಕ್85 ವ‍ರ್ಷದ RSSನ ವೃದ್ದರೊಬ್ಬರು ಕೊರೊನಾ ಪೀಡಿತ ಯುವಕನಿಗಾಗಿ ತನ್ನ ಬೆಡ್ ಬಿಟ್ಟು ಕೊಟ್ಟಿದ್ದು ನಿಜವೇ?

85 ವ‍ರ್ಷದ RSSನ ವೃದ್ದರೊಬ್ಬರು ಕೊರೊನಾ ಪೀಡಿತ ಯುವಕನಿಗಾಗಿ ತನ್ನ ಬೆಡ್ ಬಿಟ್ಟು ಕೊಟ್ಟಿದ್ದು ನಿಜವೇ?

- Advertisement -
- Advertisement -

ಮಹಾರಾಷ್ಟ್ರದ ನಾಗ್ಪುರದ ಮುನಿಸಿಪಲ್ ಕಾರ್ಪೋರೇಷನ್ ನಡೆಸುವ ಇಂದಿರಾಗಾಂಧಿ ರುಗ್ನಾಲಯ ಆಸ್ಪತ್ರೆಯಲ್ಲಿ 85 ವರ್ಷದ RSS ಕಾರ್ಯಕರ್ತರಾಗಿರುವ ನಾರಾಯಣರಾವ್ ದಾಭಾಡ್ಕರ್ ಎಂಬ ವೃದ್ದರೊಬ್ಬರು ತನಗೆ ಕೋವಿಡ್ ಸೋಂಕು ತಗುಲಿದ್ದರೂ ಸಹ ಅಲ್ಲಿದ್ದ ಮತ್ತೊಬ್ಬ ಕೊರೋನ ಪೀಡಿತ ಯುವಕನಿಗೆ ತನ್ನ ಬೆಡ್ ಬಿಟ್ಟು ಕೊಟ್ಟು ಮನೆಗೆ ತೆರಳಿದ್ದರು. ಆದರೆ ಮೂರು ದಿನದ ನಂತರ ಮರಣ ಹೊಂದಿದ್ದರು. ಅವರ ಮಾನವೀಯತೆಯನ್ನು ಮರೆಯದಿರೋಣ ಎಂಬ ಸಂದೇಶವು ಕಳೆದ ನಾಲ್ಕೈದು ದಿನಗಳಿಂದ ವೈರಲ್ ಆಗುತ್ತಿದೆ.

ಬಿಜೆಪಿ ಪರ ವೆಬ್‌ಸೈಟ್ Opindia ಸೇರಿದಂತೆ ಹಲವು ಪತ್ರಿಕೆಗಳು ಈ ಸುದ್ದಿಯನ್ನು ಬಿತ್ತರಿಸಿದ್ದವು. ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದರು. ಆರ್‌ಎಸ್‌ಎಸ್‌ ಹೇಳಿಕೆಯನ್ನು ಬಿಡುಗಡೆ ಮಾಡಿ ಆ ವೃದ್ದನನ್ನು ಹೊಗಳಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮಂಗಳವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. “ಹಲವು ಕಡೆ ಸುತ್ತಿದ ನಂತರ ನಾರಾಯಣರಾವ್ ದಾಭಾಡ್ಕರ್‌ಗೆ  ಇಂದಿರಾ ಗಾಂಧಿ ರುಗ್ನಾಲಯದಲ್ಲಿ ಬೆಡ್ ಸಿಕ್ಕಿತು. ಆಸ್ಪತ್ರೆಗೆ ಅವರನ್ನು ದಾಖಲಿಸಿದ ನಂತರ ಅಲ್ಲಿ ಒಬ್ಬ ಮಹಿಳೆ ತನ್ನ 40 ವರ್ಷದ ಗಂಡನಿಗೆ ಆಕ್ಸಿಜನ್ ಬೆಡ್ ನೀಡುವಂತೆ ಗೋಳಾಡುತ್ತಿದ್ದಳು. ಅವಳ ಮಕ್ಕಳೂ ಅಳುತ್ತಿದ್ದವು. ಆಗ ಅವರು ನಾನು 85 ವ‍ರ್ಷ ಬದುಕಿದ್ದು ಸಾಕು, ನನ್ನ ಬೆಡ್‌ ಅನ್ನು ಆ ವ್ಯಕ್ತಿಗೆ ನೀಡಿ, ನನ್ನನ್ನು ಇಲ್ಲಿಂದ ಡಿಸ್‌ಚಾರ್ಜ್ ಮಾಡಿ ಎಂದು ಸಿಬ್ಬಂದಿಗೆ ಹೇಳಿದರು. ಆದರೆ ಆ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಅವರ ಸೊಸೆ ನಿಮಗೆ ಚಿಕಿತ್ಸೆ ಅಗತ್ಯವಿದೆ ಎಂದು ಹೇಳಲು ಪ್ರಯತ್ನಿಸಿದರೂ ಕೇಳದೆ ಅವರು ಡಿಸ್ಜಾರ್ಜ್ ಮಾಡಿಸಿಕೊಂಡು ತನ್ನ ಮಗಳೊಂದಿಗೆ ಮನೆಗೆ ಹೋದರು. ಅಲ್ಲಿ ಅವರು ಮೂರು ದಿನಗಳ ನಂತರ ನಿಧನರಾದರು” ಎಂದು ಆರ್‌ಎಸ್‌ಎಸ್‌ ತಿಳಿಸಿದೆ.

ಶಿವರಾಜ್ ಸಿಂಗ್ ಚೌಹಾಣ್ ರವರು ನಾರಾಯಣರಾವ್ ದಾಭಾಡ್ಕರ್ ರವರ ಫೋಟೊದೊಂದಿಗೆ “ನಾನೀಗ 85 ವರ್ಷದವನಾಗಿದ್ದೇನೆ. ಆದರೆ ಆ ಮಹಿಳೆಯ ಪತಿ ಸಾವನಪ್ಪಿದರೆ, ಅವನ ಮಕ್ಕಳು ಅನಾಥರಾಗುವರು. ಹಾಗಾಗಿ ಆ ವ್ಯಕ್ತಿಯ ಪ್ರಾಣ ಉಳಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿ ಸ್ವತಃ ಕೊರೊನಾ ಪೀಡಿತರಾಗಿದ್ದ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಶ್ರೀ ನಾರಾಯಣಜಿಯವರು ತನ್ನ ಬೆಡ್ ಅನ್ನು ಆ ರೋಗಿಗೆ ಕೊಟ್ಟಿದ್ದರು.. ಇನ್ನೊಬ್ಬರ ಜೀವ ಉಳಿಸುತ್ತಾ ಮೂರು ದಿನದ ನಂತರ ನಾರಾಯಣ್ ಜಿ ಯವರು ಇಹಲೋಕ ತ್ಯಜಿಸಿದರು. ಸಮಾಜದ ಮತ್ತು ರಾಷ್ಟ್ರದ ನೈಜ ಸೇವಕರೇ ಇಂತಹ ತ್ಯಾಗ ಮಾಡಬಲ್ಲರು. ನಿಮ್ಮ ಪವಿತ್ರ ಸೇವಾಭಾವಕ್ಕೆ ಪ್ರಣಾಮಗಳು. ತಾವು ಈ ಸಮಾಜಕ್ಕೆ ಪ್ರೇರಣೆಯಾಗಿದ್ದೀರಿ. ದಿವ್ಯಾತ್ಮಕ್ಕೆ ವಿನಮ್ರ ಶೃದ್ಧಾಂಜಲಿ. ಓಂ ಶಾಂತಿ” ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಆಸ್ಪತ್ರೆ ಸಿಬ್ಬಂದಿ ಏನು ಹೇಳುತ್ತಾರೆ?

85 ವರ್ಷದ ನಾರಾಯಣರಾವ್ ದಾಭಡ್ಕರ್ ಅವರು ವೈದ್ಯಕೀಯ ಸಲಹೆಯ ವಿರುದ್ಧವಾಗಿ ಡಿಸ್ಚಾರ್ಜ್ ಮಾಡಿಸಿಕೊಂಡಿದ್ದು ನಿಜ, ಆದರೆ ಅವರು ಬೇರೊಬ್ಬರಿಗಾಗಿ ಹಾಸಿಗೆಯನ್ನು ಬಿಟ್ಟುಕೊಟ್ಟಿದ್ದಾರೆ ಎಂಬ ಹೇಳಿಕೆಯ ಬಗ್ಗೆ ಯಾವುದೇ ಸಾಕ್ಷಿ ಮತ್ತು ಸ್ಪಷ್ಟತೆ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಾಗ್ಪುರದ ಇಂದಿರಾ ಗಾಂಧಿ ಆಸ್ಪತ್ರೆಯ ಇನ್ಚಾರ್ಜ್ ವೈದ್ಯರಾದ ಶೀಲು ಚಿಮುರ್ಕರ್, “ಏಪ್ರಿಲ್ 22 ರಂದು ಸಂಜೆ 5.55 ಕ್ಕೆ ದಾಭಡ್ಕರ್ ಅವರನ್ನು ದಾಖಲಿಸಲಾಯಿತು ಮತ್ತು ತುರ್ತುಚಿಕಿತ್ಸೆಯ ವಾರ್ಡ್‌ನಲ್ಲಿ ಬೆಡ್ ಸಿಕ್ಕಿತು. ಅವರ ಸ್ಥಿತಿ ಹದಗೆಟ್ಟರೆ ಅವರನ್ನು ಉನ್ನತ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ನಾವು ಅವರ ಸಂಬಂಧಿಕರಿಗೆ ತಿಳಿಸಿದ್ದೆವು. ಆದರೆ ಅವರು ಸಂಜೆ 7.55 ಕ್ಕೆ ಡಿಸ್ಚಾರ್ಜ್ ಮಾಡಲು ಕೋರಿದರು. ಆದರೆ ಅವರನ್ನು ಉನ್ನತ ಆಸ್ಪತ್ರೆಗೆ ಕರೆದೊಯ್ಯಬೇಕೆಂದು ಅವರಿಗೆ ಸಲಹೆ ನೀಡಿದೆವು. ಅವರ ಅಳಿಯ ಅಮೋಲ್ ಪಚ್ಪೋರ್ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ನಂತರ, ನಾವು ಅವರಿಗೆ ವೈದ್ಯಕೀಯ ಸಲಹೆಯ ವಿರುದ್ಧ ಡಿಸ್ಚಾರ್ಜ್ ಮಾಡಿದೆವು” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಅವರು ಬೇರೊಬ್ಬರಿಗೆ ಬೆಡ್ ನೀಡಲು ಡಿಸ್ಚಾರ್ಜ್ ಆದರೆ ಎಂದು ಕೇಳಿದಾಗ “ಆ ದಿನ ಕರ್ತವ್ಯದಲ್ಲಿದ್ದ ನಮ್ಮ ಸಿಬ್ಬಂದಿ ಅಂತಹ ಯಾವುದೇ ಘಟನೆಗೆ ಸಾಕ್ಷಿಯಾಗಿಲ್ಲ” ಎಂದು ಚಿಮುರ್ಕರ್ ಹೇಳಿದ್ದಾರೆ.

110 ಕೋವಿಡ್ ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ 92 ಸಕ್ರಿಯ ಹಾಸಿಗೆಗಳಿದ್ದು, ಉಳಿದವುಗಳನ್ನು ಉದ್ದೇಶಿತ ತೀವ್ರ ನಿಗಾ ಘಟಕಕ್ಕೆ ಇಡಲಾಗಿದೆ. ಆ ದಿನ ಆಸ್ಪತ್ರೆಯಲ್ಲಿ ಬೇರೆ ಹಾಸಿಗೆ ಲಭ್ಯವಿರಲಿಲ್ಲವೇ ಎಂದು ಕೇಳಿದಾಗ, “ನಾವು ಪ್ರತಿದಿನ ಕನಿಷ್ಠ ನಾಲ್ಕೈದು ಖಾಲಿ ಹಾಸಿಗೆಗಳನ್ನು ಹೊಂದಿದ್ದೆವು” ಎಂದು ಚಿಮುರ್ಕರ್ ಹೇಳಿದ್ದಾರೆ.

ಆ ನಂತರ ದಿ ಇಂಡಿಯನ್ ಎಕ್ಸ್ ಪ್ರೆಸ್ ವತಿಯಿಂದ ದಾಭಡ್ಕರ್ ಅಳಿಯ ಅಮೋಲ್ ಪಚ್ಪೋರ್‌ಗೆ ಕರೆ ಮಾಡಿದಾಗ, “ನಾನೀಗ ಮಾತನಾಡುವ ಸ್ಥಿತಿಯಲ್ಲಿಲ್ಲ, ಏಕೆಂದರೆ ನಾನು ಸಹ ಕೋವಿಡ್ ಪಾಸಿಟಿವ್ ಆಗಿದ್ದೇನೆ. ಅಂದು ನಡೆದಿದ್ದು ಸರಿಯಾಗಿದೆ. ಅವರು ಇನ್ನೊಬ್ಬರಿಗೆ ಸಹಾಯ ಮಾಡುವ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಮಾತನಾಡಲು ಏನಿದೆ? ಅವರ ಮರಣ ಹೊಂದಿ ನಾಲ್ಕು ದಿನಗಳು ಕಳೆದಿವೆ. ಏನಿದೆಯೋ ಅದು ಸತ್ಯ. ಇಷ್ಟು ಮಾತ್ರ ನಾನು ಹೇಳಬಲ್ಲೆ, ಇನ್ನು ಮುಂದೆ ನಾನು ಮಾತನಾಡಲಾರೆ” ಎಂದಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅವರು ಬೇರೊಬ್ಬರಿಗಾಗ ಬೆಡ್ ಬಿಟ್ಟು ಕೊಟ್ಟರು ಎಂಬುದರಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಅಲ್ಲದೇ ಪ್ರತಿದಿನ ನಾಲ್ಕೈದು ಬೆಡ್‌ಗಳು ಖಾಲಿ ಇದ್ದವು ಎಂದು ನಾಗ್ಪುರದ ಇಂದಿರಾ ಗಾಂಧಿ ಆಸ್ಪತ್ರೆಯ ಇನ್ಚಾರ್ಜ್ ವೈದ್ಯರಾದ ಶೀಲು ಚಿಮುರ್ಕರ್ ಹೇಳಿರುವುದು ಮೇಲಿನ ಆರ್‌ಎಸ್‌ಎಸ್‌ ಪ್ರತಿಪಾದನೆಗೆ ವಿರುದ್ಧವಾಗಿದೆ. ಈ ಕುರಿತು ದಾಭಡ್ಕರ್ ಅಳಿಯ ಅಮೋಲ್ ಪಚ್ಪೋರ್‌ ಸಹ ಸ್ಪಷ್ಟವಾಗಿ ಮಾತನಾಡಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾಗ್ಪುರದ ಇಂದಿರಾ ಗಾಂಧಿ ಜಿಲ್ಲಾಸ್ಪತ್ರೆಯ ಅಧೀಕ್ಷಕರಾಗಿರುವ ಅಜಯ್ ಪ್ರಸಾದ್ ಎಂಬುವವರಿಗೆ ಸಾಮಾಜಿಕ ಕಾರ್ಯಕರ್ತನೊಬ್ಬ ಫೋನ್ ಮಾಡಿ ಮಾತಾಡಿದ್ದಾಗಿಯೂ ಹಲವೆಡೆ ವರದಿಯಾಗಿದೆ. ಅದರಲ್ಲಿ ಅವರು ಇನ್ನೊಬ್ಬರಿಗಾಗಿ ಬೆಡ್ ಬಿಟ್ಟುಕೊಡುವ ಪದ್ದತಿ ನಮ್ಮಲ್ಲಿ ಇಲ್ಲ ಮತ್ತು ಆ ಅಧಿಕಾರವೂ ರೋಗಿಗಳಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಜಾಮಿಯಾ ಮಿಲ್ಲಿಯಾ |’ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ’ದ ಬಗ್ಗೆ ಪ್ರಶ್ನೆ ಕೇಳಿದ ಪ್ರಾಧ್ಯಾಪಕ ಅಮಾನತು

ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ "ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ವಿವರಿಸಿ" ಎಂಬ ಪ್ರಶ್ನೆಯ ಬಗ್ಗೆ ದೂರುಗಳು ಬಂದ ನಂತರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಸಮಾಜ ಕಾರ್ಯ...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಳವಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಯುವತಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತ್ ರಾವ್ ವೃತ್ತದಲ್ಲಿ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ (ಡಿ.24) ಪ್ರತಿಭಟನೆ ನಡೆಯಿತು....

ಕೇಂದ್ರದ ಜಿ ರಾಮ್‌ ಜಿ ಕಾಯ್ದೆ ವಿರುದ್ದ ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆ

ಕೇಂದ್ರದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್) ಕಾಯ್ದೆ, 2025 (ವಿಬಿ-ಜಿ ರಾಮ್‌ ಜಿ) ವಿರುದ್ದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಮೈತ್ರಿಕೂಟವು ಬುಧವಾರ (ಡಿ.24) ರಾಜ್ಯದಾದ್ಯಂತ ಬೃಹತ್...

ಮುಸ್ಲಿಮರನ್ನು ತುಚ್ಛವಾಗಿ ನಿಂದಿಸುತ್ತಿರುವ ಬಿಜೆಪಿ ನಾಯಕಿ ನಾಝಿಯಾ ಇಲಾಹಿ : ಕ್ರಮ ಕೈಗೊಳ್ಳದ ಪೊಲೀಸರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ಎನ್ನಲಾದ ನಾಝಿಯಾ ಇಲಾಹಿ (ನಾಝಿಯಾ ಇಲಾಹಿ ಖಾನ್) ಪದೇ ಪದೇ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಹಂಚಿಕೊಳ್ಳುತ್ತಿದ್ದು, ಪೊಲೀಸರು ಯಾವುದೇ ಕ್ರಮ...

ತೆಲಂಗಾಣ: ಸರಪಂಚ್ ಚುನಾವಣೆಯಲ್ಲಿ ಬೆಂಬಲಿಸದ ದಲಿತ ಕುಟುಂಬದ ಮನೆ ಕೆಡವಿದ ಕಾಂಗ್ರೆಸ್ ಸದಸ್ಯರು

ಕಾಂಗ್ರೆಸ್ ಬೆಂಬಲಿತ ಸರಪಂಚ್ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಪದ್ಮಾವತಿ ಮತ್ತು ಅವರ ಮಗ ಪ್ರಸಾದ್ ರೆಡ್ಡಿ ಎಂಬುವವರು ಸೋಮವಾರ ಕೊಹಿರ್ ಮಂಡಲದ ಸಜ್ಜಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ದಲಿತ ಕುಟುಂಬದ ಮನೆಯನ್ನು...

“ಆತ್ಮಹತ್ಯೆಗೆ ಮುಂದಾದೆ, ಕುಟುಂಬ ನೆನೆದು ಸುಮ್ಮನಾದೆ”: ನೋವು ತೋಡಿಕೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

"ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ" ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಂಗಳವಾರ (2025 ಡಿಸೆಂಬರ್ 24) ಸಂಜೆ ದೆಹಲಿಯ ಇಂಡಿಯಾ ಗೇಟ್ ಎದುರಿನ ಹುಲ್ಲುಹಾಸಿನ ಮೇಲೆ...

ಜಿಬಿಎ ಅಧಿಕಾರಿಗಳಿಂದ ಮನೆಗಳ ನೆಲಸಮ : ತೀವ್ರ ಖಂಡನೆ ವ್ಯಕ್ತಪಡಿಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಗ್ರಾಮದಲ್ಲಿ ಬಡ ಜನರ ಸುಮಾರು 150 ಮನೆಗಳನ್ನು ಏಕಾಏಕಿ ನೆಲಸಮಗೊಳಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕ್ರಮವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ...

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಆಯ್ಕೆ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದ್ದು, ರಾಯಭಾರಿಯಾಗಿ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಚಲನಚಿತ್ರೋತ್ಸವದ ಪೂರ್ವಭಾವಿಯಾಗಿ ಸಂಘಟನಾ...

ಗುಂಪು ಹತ್ಯೆ ಪ್ರಕರಣ ಹಿಂಪಡೆಯಲು ಮುಂದಾದ ಯುಪಿ ಸರ್ಕಾರ : ಹೈಕೋರ್ಟ್ ಮೆಟ್ಟಿಲೇರಿದ ಅಖ್ಲಾಕ್ ಪತ್ನಿ

ದಾದ್ರಿ ಗುಂಪು ಹತ್ಯೆ ಪ್ರಕರಣದ ಬಲಿಪಶು ಮೊಹಮ್ಮದ್ ಅಖ್ಲಾಕ್ ಅವರ ಪತ್ನಿ, ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಮತ್ತು ಗೌತಮ್ ಬುದ್ಧ ನಗರದ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್ ಸಲ್ಲಿಸಿರುವ...

ಉನ್ನಾವೋ ಅತ್ಯಾಚಾರ ಪ್ರಕರಣ: ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ ಜೀವಾವಧಿ ಶಿಕ್ಷೆ ಅಮಾನತು

ಉನ್ನಾವೋ ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಅಪರಾಧಿ, ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಮಂಗಳವಾರ (ಡಿ.23) ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶರಾದ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್...