Homeಕರ್ನಾಟಕಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

ಕೊರೋನಾ ಆಹಾರ ಸಹಾಯವಾಣಿ 155214ಕೆಲಸ ಮಾಡುತ್ತಿದೆಯೇ?: ನಾನುಗೌರಿ.ಕಾಂಗೆ ಆಘಾತ ತಂದ ಅನುಭವ

ಸ್ವಯಂಪ್ರೇರಣೆಯಿಂದ ಸರ್ಕಾರದ ಸಹಾಯವಾಣಿಯನ್ನು ಪ್ರಚಾರ ಮಾಡಿದ ನಾನುಗೌರಿ.ಕಾಂಗೆ ಆಘಾತ ಕಾದಿತ್ತು.

- Advertisement -
- Advertisement -

ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ನಾನುಗೌರಿ.ಕಾಂ ಸರ್ಕಾರವನ್ನು ಪ್ರಶ್ನೆ ಮಾಡುವುದಷ್ಟೇ ಮಾಡಬಾರದು ಎಂದು ಭಾವಿಸಿದೆ. ಇಂತಹ ಹೊತ್ತಿನಲ್ಲಿ ಸರ್ಕಾರದ ಜೊತೆಗೂ ನಿಂತು ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಜನರಿಗೆ ನೆರವು ಒದಗಿಸುತ್ತಿರುವ ಹಲವು ಸಂಸ್ಥೆಗಳಿಗೂ ಮತ್ತು ಸಾಮಾನ್ಯ ಬಡಜನರಿಗೂ ನಡುವೆ ಸೇತುವೆಯಂತೆ ಕೆಲಸ ಮಾಡಲು ಪ್ರಯತ್ನ ನಡೆಸಿದೆ. ಆದರೆ, ಅದೇ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ದೀರ್ಘ ಕಾಲ ನೆರವು ಸಿಗಬೇಕೆಂದರೆ ಸರ್ಕಾರವೇ ಕೆಲಸ ಮಾಡಬೇಕಾಗುತ್ತದೆ.

ಆ ಹಿನ್ನೆಲೆಯಲ್ಲಿ ನಾನುಗೌರಿ.ಕಾಂನಿಂದ ಸರ್ಕಾರದ ಸಹಾಯವಾಣಿ 155214ಗೆ ಕರೆ ಮಾಡಿ ಅದು ಕೆಲಸ ಮಾಡುತ್ತಿದೆಯೇ  ಎಂದು ಪರಿಶೀಲಿಸಲಾಯಿತು ಮತ್ತು ಫೋನ್‌ ಕರೆ ಸ್ವೀಕರಿಸಿದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಆ ನಂಬರ್‌ ಅನ್ನು ಹಾಕಿ ಪೋಸ್ಟರ್‌ ಮಾಡಿ ಸಾಮಾನ್ಯ ಜನರು ಮತ್ತು ಸ್ವಯಂಸೇವಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.

ಜೊತೆಗೆ ಉತ್ತರಹಳ್ಳಿಯ ಅಂಬೇಡ್ಕರ್‌ ನಗರದಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಅಗತ್ಯವಿದ್ದ ನೆರವಿಗಾಗಿ ಪ್ರಯತ್ನ ಮಾಡುತ್ತಿದ್ದ ಸ್ಥಳೀಯರಿಗೂ ಈ ಹೆಲ್ಪ್‌ಲೈನ್‌ ನಂಬರ್‌ ನೀಡಿ ಸಂಪರ್ಕಿಸಲು ಹೇಳಲಾಯಿತು. ಅವರ ಅನುಭವವು ನಮ್ಮಲ್ಲಿ ನಿರಾಶೆಯನ್ನು ಮೂಡಿಸಿತು.

ಉತ್ತರಹಳ್ಳಿಯ ಆಸುಪಾಸಿನಲ್ಲೇ ವಾಸಿಸುವ ಬರಹಗಾರ, ಸಾಮಾಜಿಕ ಚಿಂತಕ ಶ್ರೀಪಾದ್‌ ಅವರ ಅನುಭವವು ಕೆಳಕಂಡಂತಿದೆ.

ದಿನಾಂಕ : 29.3.2020 ರಂದು 155214 ಸಹಾಯವಾಣಿಗೆ ಕರೆ ಮಾಡಿ ಉತ್ತರಹಳ್ಳಿಯ ಅಂಬೇಡ್ಕರ್ ನಗರದ ಸಾವಿತ್ರಿ ಬಾ ಫುಲೆ ಕಾಲನಿ ಸ್ಲಂಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಅನಾಥರಾಗಿವೆ ಮತ್ತು ಅವರಿಗೆ ತುರ್ತಾಗಿ ಆಹಾರದ ಪೂರೈಕೆ ಮಾಡಬೇಕು ಎಂದು ಮನವಿ ಸಲ್ಲಿಸಿಲಾಯಿತು. ಆ ಸಹಾಯವಾಣಿಯವರೂ ನಮ್ಮ ಕೋರಿಕೆಗೆ ಪ್ರತಿಕ್ರಿಯಿಸಿ ಸಂಜೆಯ ಒಳಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು. ಆದರೆ ರಾತ್ರಿಯವರೆಗೂ ಯಾವುದೇ ಸಹಾಯ ದೊರಕಲಿಲ್ಲ.

ನಂತರ ಪರಿಚಯದ ಸರಕಾರಿ ಅಧಿಕಾರಿಯೊಬ್ಬರಿಗೆ ಈ ಕುರಿತು ಗಮನ ಸೆಳೆಯಲಾಯಿತು. ಅವರೂ ಸಹ ಭರವಸೆ ನೀಡಿದರು.

ಇದನ್ನೂ ಓದಿ: ಊರಿಗೆ ಬಂದ ವಲಸೆ ಕಾರ್ಮಿಕರಿಗೆ ಅಲ್ಲೂ ಅವಮಾನ

ದಿನಾಂಕ 30.3.2020ರಂದು ಮರಳಿ ವಿಚಾರಿಸಲಾಗಿ ಇಲ್ಲಿಯವರೆಗೂ (ಸಂಜೆ 6.30) ಯಾವುದೇ ಬಗೆಯ ಪರಿಹಾರ ದೊರಕಿಲ್ಲ. ಅಲ್ಲಿನ ಕುಟುಂಬಗಳು ಆಹಾರ ಪೂರೈಕೆ ಇಲ್ಲದೆ ಕಂಗಾಲಾಗಿದ್ದಾರೆ. ದಾನಿಗಳ ಮೂಲಕ ತಾತ್ಕಾಲಿಕವಾಗಿ ಸಣ್ಣ ಪ್ರಮಾಣದ ದಿನಸಿ ವಸ್ತುಗಳನ್ನು ಕೊಡಲಾಗಿದೆ. ಆದರೆ ಅದು ಸಾಕಾಗುವುದಿಲ್ಲ.

155214 ಸಹಾಯವಾಣಿ ಹೊಣೆ ಹೊತ್ತ ಬಿಬಿಎಂಪಿ ತುರ್ತು ಪರಿಸ್ಥಿತಿಯಂತಹ ಈ ದಿನಗಳಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ ಆ ರೀತಿ ಮಾಡುತ್ತಿಲ್ಲ. ಇವರನ್ನು ಫಾಲೋ ಅಪ್ ಅಪ್ ಮಾಡುವುದೆ ಒಂದು ಕೆಲಸವಾದರೆ ಅದು ಕಷ್ಟದ ಕೆಲಸ.

ಸಾರ್ವಜನಿಕವಾಗಿ ಹೊಣೆಗಾರಿಕೆಯನ್ನು ನಿಭಾಯಿಸಲು ಕರಾರುವಕ್ಕಾದ ಕಾರ್ಯಯೋಜನೆ ಮತ್ತು ಪ್ರತಿಕ್ರಿಯೆ ತುಂಬಾ ಅವಶ್ಯಕ. ಆದರೆ ಈ ಉತ್ತರ ಹಳ್ಳಿ ಸ್ಲಂ ಗಳ ವಿಷಯದಲ್ಲಿ ಮೇಲೆ ತಿಳಿಸಿದ ಸಹಾಯವಾಣಿಯಿಂದ ತುರ್ತು ಸಹಾಯ ದೊರಕಿಲ್ಲ.

ಇದನ್ನೂ ಓದಿ: ಕೊರೊನಾ ವೈರಸ್‌ ವಿರುದ್ಧ ಭಾರತ ಮೊದಲೇ ಸಜ್ಜಾಗಿತ್ತು: ಕೇಂದ್ರ ಸರ್ಕಾರ

ಇನ್ನೊಂದು ಉದಾಹರಣೆ ಈ ರೀತಿ ಇದೆ. ಕೆ.ಆರ್‌.ಪುರದಾಚೆಗಿನ ನಲ್ಲಿ ಸುಮಾರು 150ರಿಂದ 200 ಜನ ವಲಸೆ ಕಾರ್ಮಿಕರಿದ್ದು ನಾಳೆ ಅವರಲ್ಲಿರುವ ಆಹಾರ ಪದಾರ್ಥಗಳು ಕೊನೆಯಾಗಲಿದ್ದು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದರು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮೂಲಕ ಅವರು ನಾನುಗೌರಿ.ಕಾಂಅನ್ನು ಸಂಪರ್ಕಿಸಿದರು. ಅವರಿಗೆ ಸದರಿ ಹೆಲ್ಪ್‌ಲೈನ್‌ ನಂಬರ್‌ಅನ್ನು ಸಂಪರ್ಕಿಸಲು ತಿಳಿಸಲಾಯಿತು. ಸುಮಾರು 20 ಸಾರಿ ಕರೆ ಮಾಡಿದರೂ ಆ ನಂಬರ್‌ಅನ್ನು ಯಾರೂ ಸ್ವೀಕರಿಸಲಿಲ್ಲವೆಂದು ಆ ವಲಸೆ ಕಾರ್ಮಿಕರಲ್ಲೊಬ್ಬರಾದ ಕಿಶನ್‌ (ಹೆಸರು ಬದಲಿಸಲಾಗಿದೆ) ತಿಳಿಸಿದರು.

ನಾನುಗೌರಿ.ಕಾಂ ಕಳಿಸಿದ ಪೋಸ್ಟರ್‌ಅನ್ನು ಷೇರ್‌ ಮಾಡಿದ ವಿಜಯ್‌ಕುಮಾರ್‌ ಸೀತಪ್ಪ ಅವರ ಸ್ನೇಹಿತರೊಬ್ಬರು ಸದರಿ ನಂಬರ್‌ಗೆ ಕರೆ ಮಾಡಿದರೆ ಅವರಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂತೆಂದು ತಿಳಿಸಿದ್ದಾರೆ.

ಹೀಗಾದಲ್ಲಿ ವಲಸೆ ಕಾರ್ಮಿಕರ ಗತಿಯೇನು? ನೂರಾರು ಕಿ.ಮೀ ನಡೆದಾದರೂ ಸರಿ, ನಮ್ಮೂರಿನಲ್ಲಿ ಇದ್ದರೆ ಕ್ಷೇಮ ಎಂದು ಅವರು ಹೊರಡುವುದು ಸಹಜ ತಾನೇ? ಈ ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರ ನೀಡಬೇಕು. ಅಧಿಕಾರಿಗಳು ನೆರವು ನೀಡುವುದಾದಲ್ಲಿ ಮೇಲಿನ ಎಲ್ಲಾ ವಿವರಗಳನ್ನೂ (ಹೆಸರುಗಳು, ಫೋನ್‌ ನಂಬರ್‌ ಸಮೇತ) ನೀಡುತ್ತೇವೆ ಮತ್ತು ಸರ್ಕಾರದ ಸಕಾರಾತ್ಮಕ ಕೆಲಸವನ್ನು ಮತ್ತಷ್ಟು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತೇವೆ.

ಸಂಬಂಧಿಸಿದ ಅಧಿಕಾರಿಯನ್ನು ಉತ್ತರಹಳ್ಳಿಯಲ್ಲಿ ಸಂಪರ್ಕ ಮಾಡಿದರೂ ಪರಿಹಾರ ಸಿಗದೇ ಇದ್ದುದರಿಂದ ಇದನ್ನು ವರದಿ ಮಾಡುವ ಅಗತ್ಯವಿದೆಯೆಂದು ಭಾವಿಸಿ ಈ ವರದಿ ಬರೆಯಲಾಗಿದೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಉದ್ದೇಶದಿಂದ ಈ ವರದಿಯನ್ನು ಷೇರ್‌ ಮಾಡಬೇಕೆಂದು ಕೋರುತ್ತೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...