Homeಮುಖಪುಟಕದ್ದ ಭೂಮಿಯಲ್ಲಿ ಇಸ್ರೇಲ್ ನಿರ್ಮಾಣ, ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು- ನಟ ಚೇತನ್ ಆಗ್ರಹ

ಕದ್ದ ಭೂಮಿಯಲ್ಲಿ ಇಸ್ರೇಲ್ ನಿರ್ಮಾಣ, ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು- ನಟ ಚೇತನ್ ಆಗ್ರಹ

- Advertisement -
- Advertisement -

”ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು” ಎಂದು ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಅಹಿಂಸಾ ಅವರು ಆಗ್ರಹಿಸಿದ್ದಾರೆ.

”ಪ್ಯಾಲೆಸ್ತೀನ್‌ನ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದರಿಂದ ಮತ್ತು ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದ್ದರಿಂದ ಇಸ್ರೇಲ್‌- ಪ್ಯಾಲೆಸ್ತೀನ್‌ನಲ್ಲಿ ಭಾರಿ ಹಿಂಸಾಚಾರ ಮತ್ತು ಸಾವುನೋವುಗಳು ಸಂಭವಿಸಿವೆ. ಈಗ ಪ್ರಧಾನಿ ಮೋದಿ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ, ಇಸ್ರೇಲ್ ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೊನಿ. ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಪ್ಯಾಲೆಸ್ತೀನ್‌ ನ್ಯಾಯದ ಪರವಾಗಿ ನಿಲ್ಲಬೇಕು” ಎಂದು ಚೇತನ್‌ ಹೇಳಿದ್ದಾರೆ.

”ಪ್ಯಾಲೆಸ್ತೀನ್‌ರಿಗೆ ನ್ಯಾಯವು ಅತ್ಯಗತ್ಯವಾಗಿರುತ್ತದೆ. ಆದರೆ, ಪ್ಯಾಲೆಸ್ತೀನ್‌ನ ಹಮಾಸ್ ಸಶಸ್ತ್ರ ಗುಂಪು ಸತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂರವಾಗಿದೆ ಮತ್ತು ಇದು ಖಂಡನೀಯ. ಪುರುಷರ ಆಕ್ರಮಣಕಾರಿ ಯುದ್ಧಗಳಿಗೆ ಮಹಿಳೆಯರ ದೇಹಗಳು ಯಾವಾಗಲೂ ಸಹಾಯಕ ಯುದ್ಧಭೂಮಿಗಳಾಗಿವೆ. ಇಂತಹ ಘರ್ಷಣೆಗಳ ಸಮಯದಲ್ಲಿ ಅವಮಾನವು ನ್ಯಾಯವನ್ನು ಮೀರಿಸುತ್ತದೆ ಎಂಬುದನ್ನು ಇಂತಹ ಘೋರ ಯುದ್ಧದ ಅಪರಾಧಗಳು ನಮಗೆ ನೆನಪಿಸುತ್ತವೆ” ಎಂದು ನಟ ಚೇತನ್ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಹಮಾಸ್ ಎಂದರೆ ಯಾರು? ಪ್ಯಾಲೆಸ್ತೀನ್‌ನ ಸಶಸ್ತ್ರ ಗುಂಪಿನ ಬಗ್ಗೆ ಇಲ್ಲಿದೆ ಮಾಹಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Yes you are telling correct., but now this PM not to support any islamic countries and religion. He against Muslim and he support always opposition of Muslims. We are do not expect PM support to any Muslim countries, he is already coming from RSS background.

LEAVE A REPLY

Please enter your comment!
Please enter your name here

- Advertisment -

ನಾಲ್ವರು ಬಾಲಕರಿಂದ ಬಾಲಕಿಗೆ ಕಿರುಕುಳ ಆರೋಪ : ‘ಉತ್ತಮ ಸಂಸ್ಕಾರ ಕಲಿಸಿಲ್ಲ’ ಎಂದು ತಾಯಂದಿರನ್ನು ಬಂಧಿಸಿದ ಪೊಲೀಸರು!

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಾಲ್ವರು ಬಾಲಕರ ವಿರುದ್ಧ ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪೊಲೀಸರು ಬಾಲಕರ ತಾಯಂದಿರನ್ನು 'ಪ್ರಿವೆಂಟಿವ್ ಅರೆಸ್ಟ್' ಮಾಡಿದ್ದಾರೆ ಎಂದು indianexpress.com ಶನಿವಾರ (ಡಿ.20) ವರದಿ...

ಎಸ್‌ಐಆರ್‌: ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಲ್ಲಿ 1 ಲಕ್ಷ ಮತದಾರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಡಿಲೀಟ್

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಕೊಳತ್ತೂರು ಕ್ಷೇತ್ರದಿಂದ 1,03,812 ಕ್ಕೂ ಹೆಚ್ಚು ಮತದಾರರ ಹೆಸರು ತೆಗೆದುಹಾಕಲಾಗಿದೆ. ಇದು ತಮಿಳುನಾಡಿನಲ್ಲಿ ರಾಜ್ಯಾದ್ಯಂತ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಮತದಾರರ ಪಟ್ಟಿಯಲ್ಲಿನ ಅತಿದೊಡ್ಡ ಮತದಾರರ...

ಅಸ್ಸಾಂ : 15 ಮಂದಿಗೆ 24 ಗಂಟೆಯೊಳಗೆ ದೇಶ ತೊರೆಯಲು ಆದೇಶ : ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡ ಕುಟುಂಬಸ್ಥರು

ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು 15 ಘೋಷಿತ ವಿದೇಶಿಯರಿಗೆ 24 ಗಂಟೆಗಳ ಒಳಗೆ ರಾಜ್ಯ ತೊರೆಯುವಂತೆ ಆದೇಶಿಸಿದ ಬಗ್ಗೆ ವರದಿಯಾಗಿದೆ. ಬುಧವಾರ (ಡಿ.17) ಜಿಲ್ಲಾಡಳಿತ ಈ ಆದೇಶ ನೀಡಿತ್ತು. ಆದರೆ, ಇದುವರೆಗೆ (ಡಿ.20) ಈ 15...

ಸಿರಿಯಾದ ಐಸಿಸ್ ಅಡಗುತಾಣಗಳ ಮೇಲೆ ಅಮೆರಿಕ ವಾಯುದಾಳಿ

ಕಳೆದ ವಾರ ಅಮೆರಿಕದ ಸಿಬ್ಬಂದಿ ಮೇಲೆ ನಡೆದ ಮಾರಕ ದಾಳಿಗೆ ಪ್ರತೀಕಾರವಾಗಿ ಅಮೆರಿಕವು ಮಧ್ಯ ಸಿರಿಯಾದಾದ್ಯಂತ ಡಜನ್‌ಗಟ್ಟಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಆಪರೇಷನ್ ಹಾಕೈ...

16 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ‘ಮನರೇಗಾ’ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರ್ಕಾರ: ವರದಿ

ಯುಪಿಎ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರನ್ನು ಬದಲಿಸಲು ಪ್ರಯತ್ನಿಸುವ 'ವಿಕ್ಷಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ–ಜಿ...

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು...

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...