Homeಅಂತರಾಷ್ಟ್ರೀಯಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

ಇರಾನ್‌ನ ದಾಳಿಗೂ ಮೊದಲು ದೇಶ ತೊರೆದ ಇಸ್ರೇಲ್ ಪ್ರಧಾನಿಯ ಅಧಿಕೃತ ವಿಮಾನ!

- Advertisement -
- Advertisement -

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ ‘ವಿಂಗ್ ಆಫ್ ಝಿಯಾನ್’ ಎಂದು ಕರೆಯಲ್ಪಡುವ ಪ್ರಧಾನಿ ನೆತನ್ಯಾಹು ಅವರ ಸರ್ಕಾರಿ ವಿಮಾನವು ಶುಕ್ರವಾರ ಮಧ್ಯಾಹ್ನ ಅಥೆನ್ಸ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ ಎಂದು ಟಿಆರ್‌ಟಿ ವಲ್ಡ್‌ ವರದಿ ಮಾಡಿದೆ. ಇಸ್ರೇಲ್ ಮೇಲೆ ಇರಾನ್‌ ಪ್ರತಿಕಾರದ ದಾಳಿ ನಡೆಸಲಿದೆ ಎಂಬ ಸುದ್ದಿಗಳ ನಡುವೆ ‘ವಿಂಗ್ ಆಫ್ ಝಿಯಾನ್’ ದೇಶದಿಂದ ಹೊರಗೆ ಹೋಗಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು ದೇಶ ತೊರೆದಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಇರಾನ್‌ನ ದಾಳಿಗೂ ಮೊದಲು

ಅಂತಾರಾಷ್ಟ್ರೀಯ ಭೇಟಿಗಳ ಸಮಯದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರ ಸರ್ಕಾರಿ ವಿಮಾನವಾಗಿ ಸೇವೆ ಸಲ್ಲಿಸುವ ಈ ವಿಮಾನವು “ಇರಾನಿನ ಪ್ರತೀಕಾರದ ದಾಳಿಯ ಭಯದ ನಡುವೆ” ಶುಕ್ರವಾರ ಬೆಳಿಗ್ಗೆ ಅಥೆನ್ಸ್‌ಗೆ ಹೊರಟಿದೆ ಎಂದು ದಿ ಜೆರುಸಲೆಂ ಪೋಸ್ಟ್ ವರದಿ ಹೇಳಿದೆ. ಏಪ್ರಿಲ್ 2024 ರಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯ ಸಮಯದಲ್ಲಿ, ಈ ವಿಮಾನವನ್ನು ಉತ್ತರ ನೆಗೆವ್‌ನಲ್ಲಿರುವ ನೆವಾಟಿಮ್ ವಾಯುನೆಲೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ವಿಂಗ್ ಆಫ್ ಝಿಯಾನ್ ಗ್ರೀಸ್‌ಗೆ ತೆರಳಿದ ಸ್ವಲ್ಪ ಸಮಯದ ನಂತರ, ಇಸ್ರೇಲ್ ಸೇನಾ ವಕ್ತಾರ ಬ್ರಿಗೇಡಿಯರ್-ಜನರಲ್ ಎಫೀ ಡೆಫ್ರಿನ್ ಶುಕ್ರವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇರಾನ್ ಇಸ್ರೇಲ್ ಕಡೆಗೆ 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದೆ ಎಂದು ಹೇಳಿದ್ದರು.

ಅದಾಗ್ಯೂ, ವಿಂಗ್ ಆಫ್ ಜಿಯಾನ್ ವಿಮಾನದಲ್ಲಿ ಶುಕ್ರವಾರ ಗ್ರೀಸ್‌ನ ಇಸ್ರೇಲಿ ರಾಯಭಾರಿ ನೋಮ್ ಕಾಟ್ಜ್ ಅವರನ್ನು ಕರೆದೊಯ್ಯಲಾಗಿದ್ದು, ನಂತರ ಅಥೆನ್ಸ್‌ನಲ್ಲಿರುವ ವಿಮಾನ ಮಾಹಿತಿ ಪ್ರದೇಶದಲ್ಲಿ (ಎಫ್‌ಐಆರ್) ಇರಿಸಲಾಗಿದೆ ಎಂದು ಸುದ್ದಿ ಏಜನ್ಸಿ ಅನಡೋಲು ಹೇಳಿದೆ. ಈ ರಾಯಭಾರಿ ವಿಮಾನದಲ್ಲಿದ್ದ ಏಕೈಕ ಪ್ರಯಾಣಿಕ ಎಂದು ವರದಿ ಹೇಳಿದೆ.

ಇರಾನ್ ಮೇಲೆ ನಡೆಸಿದ ಬೃಹತ್ ದಾಳಿಯ ನಂತರ ಇಸ್ರೇಲ್ ತನ್ನ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಾಣಿಜ್ಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದರ ನಂತರ ಝಿಯಾನ್ ವಿಮಾನವು ನೋಮ್ ಕಾಟ್ಜ್ ಅವರನ್ನು ಅಥೆನ್ಸ್‌ಗೆ ಕರೆತಂದಿತು ಎಂದು ವಿದೇಶಾಂಗ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ಗ್ರೀಸ್ ವರದಿ ಮಾಡಿದೆ.

ಗ್ರೀಸ್-ಇಸ್ರೇಲ್ ಮಿಲಿಟರಿ ಸಹಕಾರ ಒಪ್ಪಂದದ ಪ್ರಕಾರ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎರಡೂ ದೇಶಗಳ ವಿಮಾನಗಳನ್ನು ಆಯಾ ಮಿಲಿಟರಿ ವಿಮಾನ ನಿಲ್ದಾಣಗಳಲ್ಲಿ ಅಗತ್ಯವಿರುವಷ್ಟು ಕಾಲ ಸ್ಥಳಾಂತರಿಸಲು ಮತ್ತು ಉಳಿಯಲು ಅನುಮತಿಸುತ್ತದೆ ಎಂದು ವರದಿ ಹೇಳಿದೆ.

ಅದಾಗ್ಯೂ, ಇರಾನಿನ ಪ್ರದೇಶದೊಳಗೆ ಇಸ್ರೇಲ್ ಮಿಲಿಟರಿ ದಾಳಿಗಳನ್ನು ಪ್ರಾರಂಭಿಸಿದ ಕೆಲವೇ ಗಂಟೆಗಳ ನಂತರ ‘ವಿಂಗ್ ಆಫ್ ಝಿಯಾನ್’ ಬಗ್ಗೆ ಊಹಾಪೋಹಗಳು ಹರಡಿದವು. ಎಕ್ಸ್‌ನಲ್ಲಿರುವ ಬಳಕೆದಾರರು ವಿಮಾನಯಾನ ಮೇಲ್ವಿಚಾರಣಾ ಸೇವೆ FlightRadar24 ನಿಂದ ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ಗ್ರೀಸ್‌ನಲ್ಲಿ ವಿಮಾನದ ಮಾರ್ಗ, ಸಮಯ ಮತ್ತು ಅಂತಿಮವಾಗಿ ಇಳಿದ ಮಾರ್ಗಗಳನ್ನು ಟ್ರ್ಯಾಕ್ ಮಾಡಿದ್ದಾರೆ.

ಆದಾಗ್ಯೂ, ಈ ವಿಮಾನದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬದ ಯಾರಾದರೂ ಇದ್ದರೊ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಟಿಆರ್‌ಟಿ ವರದಿ ಹೇಳಿದೆ. ಭದ್ರತಾ ಪ್ರೋಟೋಕಾಲ್‌ಗಳು ಮತ್ತು ಸಂಭಾವ್ಯ ರಾಜತಾಂತ್ರಿಕ ಅಥವಾ ಮಿಲಿಟರಿ ಯೋಜನೆ ಸೇರಿದಂತೆ ಕ್ರಮದ ಹಿಂದಿನ ಹಲವಾರು ಸಂಭಾವ್ಯ ಕಾರ್ಯತಂತ್ರದ ಉದ್ದೇಶಗಳು ಇದರಲ್ಲಿ ಇರಬಹುದು ಎಂದು ಕೂಡಾ ವಿಶ್ಲೇಷಿಸಲಾಗುತ್ತಿದೆ.

ಜೊತೆಗೆ ಪೂರ್ವಭಾವಿ ಸುರಕ್ಷತಾ ಕ್ರಮವಾಗಿ ಹೀಗೆ ಮಾಡಲಾಗಿದೆ ಎಂದೂ ಕೂಡಾ ಹೇಳಲಾಗುತ್ತಿದ್ದು, ಇರಾನಿನ ಪ್ರತೀಕಾರದ ಅಪಾಯ ಹೆಚ್ಚಾದ ಕಾರಣ, ಇಸ್ರೇಲಿ ಅಧಿಕಾರಿಗಳು ಹಿರಿಯ ನಾಯಕತ್ವವನ್ನು ರಕ್ಷಿಸಲು ಈ ಭದ್ರತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರುತ್ತಿರಬಹುದು ಎಂದೂ ಕೂಡಾ ಹೇಳಲಾಗಿದೆ.

ಅಥೆನ್ಸ್‌ನಲ್ಲಿ ನೆತನ್ಯಾಹು ಅವರ ವಿಮಾನವನ್ನು ಇರಿಸುವುದು ಇಸ್ರೇಲ್‌ನ ವಾಯು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಸಂಭಾವ್ಯ ಕ್ಷಿಪಣಿ ಅಥವಾ ಡ್ರೋನ್ ದಾಳಿ ವಲಯಗಳಿಂದ ಅದನ್ನು ತೆಗೆದುಹಾಕುವ ಲೆಕ್ಕಾಚಾರದ ಭಾಗವಾಗಿ ಇದನ್ನು ಮಾಡಿರಬಹುದು ಎಂದೂ ಕೂಡಾ ಹೇಳಲಾಗುತ್ತಿದೆ.

ಜೊತೆಗೆ, ಮುನ್ನೆಚ್ಚರಿಕೆ ಕ್ರಮವಾಗಿ ನೆತನ್ಯಾಹು ಅವರ ಕುಟುಂಬದ ಸದಸ್ಯರೊಂದಿಗೆ ಅಥೆನ್ಸ್‌ಗೆ ಪ್ರಯಾಣಿಸಿರಬಹುದು ಎಂಬ ಊಹಾಪೋಹವೂ ಇದೆ. ಪ್ರತೀಕಾರದ ಬೆದರಿಕೆ ಇರುವ ಸಂದರ್ಭಗಳಲ್ಲಿ, ರಾಷ್ಟ್ರೀಯ ನಾಯಕರು ಪ್ರಮುಖ ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಇದು ಮೊದಲೇನಲ್ಲ, ವಿಶೇಷವಾಗಿ ಗುಪ್ತಚರವು ಅಪಾಯವನ್ನು ಗುರುತಿಸಿದ್ದರೆ ಇದನ್ನು ಮಾಡಲಾಗುತ್ತದೆ ಎಂದು ಟಿಅರ್‌ಟಿ ವಲ್ಡ್‌ ಹೇಳಿದೆ.

ಇಸ್ರೇಲಿ ಅಧಿಕಾರಿಗಳು ವಿಮಾನದಲ್ಲಿ ಪ್ರಧಾನಿ ಮತ್ತು ಅವರ ಆಂತರಿಕ ವಲಯದ ಅವರ ಇರುವಿಕೆಯನ್ನು ದೃಢೀಕರಿಸದಿದ್ದರೂ, ಹಾರಾಟದ ಸಮಯ ಮತ್ತು ಈಗ ವಿಮಾನ ಇರುವ ಸ್ಥಳವು ಪ್ರಧಾನ ಮಂತ್ರಿ ಮತ್ತು ಅವರ ಆಂತರಿಕ ವಲಯವನ್ನು ರಕ್ಷಿಸುವ ಭದ್ರತಾ ಕಾರ್ಯತಂತ್ರದ ಭಾಗವಾಗಿ ಇದನ್ನು ಮಾಡಲಾಗಿದೆ ಎಂಬ ಊಹಾಪೋಹಗಳು ಹರಡಿವೆ.

ಇಸ್ರೇಲ್ ಮೇಲೆ ಇರಾನ್‌ನ ಪ್ರತಿದಾಳಿ ನಡೆಯಲಿದೆ ಎಂದು ಖಚಿತವಾದ್ದರಿಂದ ಪ್ರಧಾನಿ ನೆತನ್ಯಾಹು ಮತ್ತು ಅಮೇರಿಕನ್ ಮಿಲಿಟರಿ ಅಥವಾ ಗುಪ್ತಚರ ಅಧಿಕಾರಿಗಳ ನಡುವೆ ಉನ್ನತ ಮಟ್ಟದ, ವೈಯಕ್ತಿಕ ಸಮನ್ವಯಕ್ಕಾಗಿ ಅಥೆನ್ಸ್ ಅನ್ನು ತಟಸ್ಥ ಮತ್ತು ಸುರಕ್ಷಿತ ಸ್ಥಳವಾಗಿ ಆಯ್ಕೆ ಮಾಡಿರಬಹುದು ಎಂಬ ಊಹಾಪೋಹಗಳೂ ಹರಡಿವೆ. ಪ್ರಧಾನಿ ನೆತನ್ಯಾಹು ಅವರ ಸ್ಥಳ ಅಥವಾ ಹಾರಾಟದ ಉದ್ದೇಶವನ್ನು ದೃಢೀಕರಿಸುವ ಯಾವುದೇ ಅಧಿಕೃತ ಹೇಳಿಕೆಯಿಲ್ಲದೆ, ಅಥೆನ್ಸ್‌ನಲ್ಲಿ ಪ್ರಧಾನಿಯ ವಿಮಾನ ನಿಲುಗಡೆಯಾಗಿದ್ದರ ಹಿಂದಿನ ನಿಜವಾದ ಉದ್ದೇಶದ ಬಗ್ಗೆ ಪ್ರಶ್ನೆಗಳು ಮುಂದುವರೆದಿವೆ. ಇರಾನ್‌ನ ದಾಳಿಗೂ ಮೊದಲು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಗಾಝಾ ಸಂಘರ್ಷದಲ್ಲಿ ಭಾರತ ಒಂಟಿಯಾಗಿ ನಿಂತಿದೆ: ಮಲ್ಲಿಕಾರ್ಜುನ ಖರ್ಗೆ

ಗಾಝಾ ಸಂಘರ್ಷದಲ್ಲಿ ಭಾರತ ಒಂಟಿಯಾಗಿ ನಿಂತಿದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...