Homeಮುಖಪುಟಕನಕಪುರದಲ್ಲಿ ಯೇಸುಕ್ತಿಸ್ತನ ಪ್ರತಿಮೆ ವಿವಾದ: ರಾಜಕೀಯ ಅಥವಾ ಅಧಿಕಾರಕ್ಕಾಗಿ ಅಲ್ಲ, ಆತ್ಮತೃಪ್ತಿಗಾಗಿ - ಡಿ.ಕೆ ಶಿವಕುಮಾರ್‌

ಕನಕಪುರದಲ್ಲಿ ಯೇಸುಕ್ತಿಸ್ತನ ಪ್ರತಿಮೆ ವಿವಾದ: ರಾಜಕೀಯ ಅಥವಾ ಅಧಿಕಾರಕ್ಕಾಗಿ ಅಲ್ಲ, ಆತ್ಮತೃಪ್ತಿಗಾಗಿ – ಡಿ.ಕೆ ಶಿವಕುಮಾರ್‌

- Advertisement -
- Advertisement -

ತಮ್ಮ ಕ್ಷೇತ್ರದಲ್ಲಿ ಜೀಸಸ್ ಪ್ರತಿಮೆಗೆ ಪ್ರಾಯೋಜಕತ್ವ ನೀಡಿದ ವಿಚಾರದಲ್ಲಿನ ಹಲವಾರು ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ಡಿ.ಕೆ.ಶಿವಕುಮಾರ್ “ಸ್ಥಳೀಯರಿಗೆ ನೀಡಿದ ಭರವಸೆಯನ್ನು ಈಡೇರಿಸುತ್ತಿದ್ದೇನೆ ಅಷ್ಟೇ ಎಂದಿದ್ದಾರೆ”.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವದಲ್ಲಿಯೇ ಅತಿ ಎತ್ತರದ 114 ಅಡಿಯ ಏಕಶಿಲೆ ಯೇಸುಕ್ರಿಸ್ತರ ಪ್ರತಿಮೆ ನಿರ್ಮಾಣದ ಶಿಲಾನ್ಯಾಸವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕ್ರಿಸ್ಮಸ್ ಶುಭದಿನವಾದ ಬುಧವಾರ ನೆರವೇರಿಸಿದ್ದರು.

ಯೇಸುಕ್ರಿಸ್ತ ಪ್ರತಿಮೆ ನಿರ್ಮಾಣವಾಗುತ್ತಿರುವ ಕಪಾಲಿಬೆಟ್ಟದ ಹತ್ತು ಎಕರೆ ಜಾಗವನ್ನು ಕೊಂಡುಕೊಂಡು ಪ್ರತಿಮೆ ನಿರ್ಮಾಣ ಟ್ರಸ್ಟ್ ನವರಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದ್ದರು.

ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದು, ಈ ಪ್ರದೇಶದಲ್ಲಿ ಕ್ರಿಸ್ತನ ಪ್ರತಿಮೆ ಇಲ್ಲದಿರುವುದರಿಂದ ಜನರು ಹಾರೋಬೆಲೆಯಲ್ಲಿ ಯೇಸುಕ್ರಿಸ್ತನ ಪ್ರತಿಮೆ ಬೇಕು ಎಂದು ಕೇಳಿದ್ದರು. ನಾನು ಸಹಾಯ ಮಾಡುತ್ತೇನೆ ಎಂದು ನಾನು ಭರವಸೆ ನೀಡಿದ್ದೆ ಮತ್ತು ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಅದು ರಾಜಕೀಯ ಅಥವಾ ಅಧಿಕಾರಕ್ಕಾಗಿ ಅಲ್ಲ ಜೀವನದಲ್ಲಿ ಆತ್ಮ ತೃಪ್ತಿಗಾಗಿ ಕೆಲವು ಕೆಲಸಗಳನ್ನು ಮಾಡುತ್ತೇನೆ ಎಂದು ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೇ ಭೂಮಿ ಅವರಿಗೆ ಸೇರದ ಹೊರತು ಯಾವುದೇ ಪ್ರತಿಮೆಯನ್ನು ನಿರ್ಮಿಸದಂತೆ ಸ್ಥಳೀಯರಿಗೆ ತಿಳಿಸಿದ್ದೇನೆ ಎಂದು ಸಹ ಹೇಳಿದ್ದಾರೆ.

“ನಾನು ಗ್ರಾಮೀಣ ಕ್ಷೇತ್ರದಿಂದ ಬಂದಿದ್ದೇನೆ, ಅಲ್ಲಿ ಜನರು ನನಗೆ ಪ್ರೀತಿ ಮತ್ತು ಶಕ್ತಿಯನ್ನು ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ನೂರಾರು ದೇವಾಲಯಗಳನ್ನು ನಿರ್ಮಿಸಿದ್ದೇನೆ. ಮೂರು ಸ್ಥಳಗಳಲ್ಲಿ 30 ಎಕರೆಗೂ ಹೆಚ್ಚು ಆಸ್ತಿಯನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ. ನಾನು ಖರೀದಿಸಿದ ಆಸ್ತಿಗಳಲ್ಲಿ ಕೆಲವನ್ನು ವಿವಿಧ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಪ್ರತಿಮೆ ನಿರ್ಮಾಣದ ಬಗ್ಗೆ ಕುರಿತು ಡಿ.ಕೆ ಶಿವಕುಮಾರ್‌ ನಡೆಯನ್ನು ಆಡಳಿತಾರೂಢ BJP ಬಿಜೆಪಿ ಟೀಕಿಸಿದೆ. ಪ್ರತಿಮೆಗೆ ಸಂಬಂಧಿಸಿದ ಜಮೀನು ಶಿವಕುಮಾರ್‌ ಒಡೆತನದಲ್ಲಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ. ಆ ಭೂಮಿ ಸಮುದಾಯದ ಬಳಕೆಗಾಗಿ ಹುಲ್ಲುಗಾವಲು ಭೂಮಿಯಾಗಿರಬೇಕು ಇದು ರಾಜ್ಯ ಸರ್ಕಾರದ ಒಡೆತನದಲ್ಲಿದೆ ಎಂದು ಅವರು ಹೇಳಿದರು.

“ಇದು ಶಿವಕುಮಾರ್ ಅವರ ಆಸ್ತಿಯಲ್ಲ. ಇದು ಸರ್ಕಾರಿ ಗೋಮಾಳ ಭೂಮಿ. ಅವರು (ಶಿವಕುಮಾರ್) ಅವರು ಯಾವ ಅರ್ಥದಲ್ಲಿ ಖರೀದಿಸಿ ಕೊಟ್ಟಿದ್ದಾರೆಂದು ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ಅದನ್ನು ಯಾರಿಗೂ ದಾನ ಮಾಡಲು ಸಾಧ್ಯವಿಲ್ಲ. ನಾನು ರಾಮನಗರ ಜಿಲ್ಲಾಧಿಕಾರಿಗಳ ವರದಿ ಕೇಳಿದ್ದೇನೆ” ಎಂದು ಆರ್‌ ಅಶೋಕ್‌ ಹೇಳಿದ್ದಾರೆ.

ಮೈಸೂರಿನ ಮತ್ತೊಬ್ಬ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಪ್ರತಿಮೆ ನಿರ್ಮಾಣದ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಸಿದ್ದಗಂಗ, ಸುತ್ತೂರು ಮತ್ತು ಆದಿಚುಂಚನಗಿರಿ ಮುಂತಾದ ಮಠಗಳ ದರ್ಶಕರನ್ನು ಮರೆತಿದ್ದೀರಾ ಎಂದು ಅವರು ಟ್ವೀಟ್ ನಲ್ಲಿ ಶಿವಕುಮಾರ್ ಅವರನ್ನು ಕೇಳಿದ್ದಾರೆ. “ಶಿವಕುಮಾರ ಸ್ವಾಮೀಜಿ (ಸಿದ್ದಗಂಗ ಮಠ) ಅವರ ಶಾಸನವನ್ನು ನಿರ್ಮಿಸುವುದು ಕಪಲಿಬೆಟ್ಟದ ಕಿರೀಟದಂತೆಯೇ ಇರುತ್ತಿತ್ತು ಅಲ್ಲವೇ?”. ಎಂದು ವ್ಯಂಗ್ಯವಾಡಿದ್ದಾರೆ.

ತನ್ನ ವಿರುದ್ಧದ ಟೀಕೆಗಳು ನನ್ನ ಜಾತ್ಯತೀತ ದೃಷ್ಟಿಕೋನದ ಬಗ್ಗೆ ಅವರಿಗಿರುವ ಅಸೂಯೆಯನ್ನು ತೋರಿಸುತ್ತದೆ ಎಂದು ಶಿವಕುಮಾರ್ ಹೇಳಿದ್ದಾರೆ. “ಎಚ್‌.ಡಿ ಕುಮಾರಸ್ವಾಮಿ ಸರ್ಕಾರವು ಭೂಮಿಯನ್ನು ನೀಡಿದ್ದು ಮತ್ತು ಅದಕ್ಕಾಗಿ ನಾನು ಹಣವನ್ನು ಪಾವತಿಸಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...