Homeಮುಖಪುಟಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಘೋಷಣೆ ಮಾತ್ರ ಸಾಲದು, ಕಾರ್ಯಗತದ ಹಾಗೂ ರೈತರ ಬಗ್ಗೆ ಅಷ್ಟೇ ಮುತುವರ್ಜಿ ಅಗತ್ಯ

ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

- Advertisement -
- Advertisement -

ಪ್ರಧಾನಮಂತ್ರಿಗಳ ಬೃಹತ್ 20 ಲಕ್ಷ ಕೋಟಿ “ಆತ್ಮ ನಿರ್ಭರ ಭಾರತ” ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಮೂರನೇ ಹಂತದ ಪ್ಯಾಕೇಜ್ ಮೂಲಕ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಕೃಷಿ ವಲಯಕ್ಕೆ ನೀಡಿರುವ ನೆರವು, ಮಾಡಿರುವ ಘೋಷಣೆ ದೊಡ್ಡ ಪ್ರಮಾಣದಲ್ಲಿದೆ.

ಹಾಗಿದ್ದರೂ ಈ ಬಗ್ಗೆ ಪರಸ್ಪರ ಪ್ರಬಲ ವಿರೋಧಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಉತ್ಪಾದನಾ ವಲಯವಾಗಿ ಕೃಷಿ ಹಾಗೆ ಅದರಲ್ಲಿ ತೊಡಗಿರುವ ರೈತಾಪಿ ವರ್ಗ ಈ ಎರಡನ್ನು ಪ್ರತ್ಯೇಕವಾಗಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸದಿರುವುದು ಇದಕ್ಕೆ ಕಾರಣವಾಗಿದೆ.

ಕೃಷಿ ವಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವುದು, ಕರ್ನಾಟಕದ ರಾಗಿ, ಕಾಶ್ಮೀರದ ಕೇಸರಿವರೆಗೆ ಆಯಾ ರಾಜ್ಯದ ಹೆಗ್ಗಳಿಕೆಯ ಕಿರುಉತ್ಪನ್ನಗಳ ಪ್ರೋತ್ಸಾಹದಿಂದ ಜೇನು, ಗಿಡಮೂಲಿಕೆ ಕೃಷಿಗೆ ಪ್ರೋತ್ಸಾಹಿಸುವ ಸುಮಾರು 1.5 ಲಕ್ಷ ಕೋಟಿ ರೂಗಳ ಮೂರನೇ ಹಂತದ ಪ್ಯಾಕೇಜು ಹೊರ ಬಂದಿರುತ್ತದೆ. ಜೊತೆಗೆ 53 ಕೋಟಿ ಜಾನುವಾರುಗಳ ಆರೋಗ್ಯ ರಕ್ಷಣೆ, ಮತ್ಸ್ಯೋದ್ಯಮ ಸದೃಢಗೊಳಿಸುವ ಹಾಗೂ ಕ್ಷೀರ ವಲಯ ಎದುರಿಸುತ್ತಿರುವ ಪ್ರಮುಖ ಮೇವಿನ ಸಮಸ್ಯೆ ಪರಿಹಾರಕ್ಕೂ ಸಹಸ್ರಾರು ಕೋಟಿರೂಗಳನ್ನು ಘೋಷಿಸಲಾಗಿದೆ.

ಕೃಷಿ ವಲಯದ ಪುನಶ್ಚೇತನಕ್ಕೆ ಈ ಕಾರ್ಯಕ್ರಮಗಳು ಉಪಯುಕ್ತ ಎಂದು ತಜ್ಞರು ಸಂತಸ ವ್ಯಕ್ತಪಡಿಸಿದ್ದರೆ, 50 ದಿನಗಳಿಂದ ಸಂಪೂರ್ಣ ಬಳಲಿ ಬೆಂದು ಬೇಸತ್ತಿರುವ ರೈತಾಪಿ ವರ್ಗದ ನೆರವಿಗೆ ಧಾವಿಸಿ ಆತ್ಮಸ್ಥೈರ್ಯ ತುಂಬಲು ಪ್ರಾಮಾಣಿಕ ಪ್ರಯತ್ನವಿಲ್ಲ ಎಂಬ ತೀವ್ರ ಅಸಮಧಾನ ಇನ್ನೊಂದೆಡೆಯೆಂದ ಕೇಳಿಬಂದಿದೆ.

ಕಳೆದ ಸಾಲಿನಲ್ಲಿ ರೈತರು ಮಾಡಿರುವ ಉತ್ಪಾದನೆಯಲ್ಲಿ ಅಬ್ಬಬ್ಬಾ ಅಂದರೆ ಅರ್ಧಭಾಗ ಸದುಪಯೋಗವಾಗಿರಬಹುದು. ಒಂದು ಲೆಕ್ಕಚಾರದ ಪ್ರಕಾರ ತರಕಾರಿ ಬೆಳೆಗಾರರು ಕನಿಷ್ಠ 25 ಸಾವಿರ ಕೋಟಿ ರೂಪಾಯಿ, ಹಾಲು ಉತ್ಪಾದಕರು 10 ಸಾವಿರ ಕೋಟಿ ರೂಪಾಯಿಗಳು, ಕುಕ್ಕುಟ ಉದ್ದಿಮೆಯಲ್ಲಿ ತೊಡಗಿರುವವರು 20 ಸಾವಿರ ಕೋಟಿ ರೂ ನಷ್ಟ ಅನುಭವಿಸಿರುವುಗಾಗಿ ಹಾಗೂ ಕಬ್ಬಿನ ಬೆಳೆಗಾರರಿಗೆ ಕೊಡಬೇಕಾಗಿರುವ ಹಣದಲ್ಲಿ 18 ಸಾವಿರ ಕೋಟಿ ರೂಪಾಯಿ ಇನ್ನೂ ಬಾಕಿ ಇರುವುದಾಗಿ ತಿಳಿದು ಬಂದಿರುತ್ತದೆ.

ಇನ್ನು ಹಣ್ಣು, ಹೂವು ಬೆಳೆದಂತ ರೈತರು, ಮೀನುಗಾರರು ಅನುಭವಿಸಿರುವ ನಷ್ಟದ ಪ್ರಮಾಣವೂ ಅತಿಯಾಗಿರುತ್ತದೆ. ರೈತ ಕಷ್ಟಪಟ್ಟು ಬೆಳದು ಹಾಳಾದ ಪ್ರತಿ ಕಾಳು ಆಹಾರ, ಹಣ್ಣು, ತರಕಾರಿ ದೇಶಕ್ಕಾದ ನಷ್ಟ. ಈ ನಷ್ಟಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದ ಪರಿಹಾರ ಹಣ ತಕ್ಷಣ ರೈತನ ಜೇಬು ತಲುಪಬೇಕಿತ್ತು. ಜೊತೆಗೆ, ಮುಂದಿನ ಮುಂಗಾರಿಗೆ ಬಿತ್ತನೆಗೆ ಮಾಡಲು ಬೀಜ, ಗೊಬ್ಬರ ಹಣಕಾಸು ನೀಡಿ ರೈತನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ನೇರ ಹಣ ಪಾವತಿ ಪ್ರಥಮ ಆದ್ಯತೆಯಾಗಬೇಕಾಗಿತ್ತು.

ಉತ್ಪಾದನೆಯ ಹೊರತಾಗಿ ಬೇರೇನು ಮಾಡಲು ಅಶಕ್ತನಾಗಿರುವ ರೈತನಿಗಿಂದು ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ “ಕೊಯಿಲೋತ್ತರ ಸೇವೆ’’ಗಳನ್ನು ಸರ್ಕಾರವೇ ನೇರವಾಗಿ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನೂ ನೀರೀಕ್ಷಿಸಲಾಗಿತ್ತು. ಸ್ವಾಮಿನಾಥನ್ ವರದಿ ಪ್ರಕಾರ ರೈತನಿಗೆ ಕನಿಷ್ಠ ಶೇಕಡ 50ರಷ್ಟು ಲಾಭ ನೀಡುವ ಬೆಂಬಲ ಬೆಲೆ ಘೋಷಣೆ ಇದು ಅತ್ಯಂತ ಸಕಾಲವಾಗಿದೆ. ಆ ಮೂಲಕವಾದರೂ ಆತನ ಜೇಬಿಗೆ ಸ್ವಲ್ಪ ಹಣ ತುಂಬುತ್ತಿತ್ತು. ಬದಲಿಗೆ ಎರಡನೇ ಕಂತಿನಲ್ಲಿ ಖರೀದಿಗೆ ನೀಡಿರುವ ರೂ 6,000 ಕೋಟಿ ಅತ್ಯಲ್ಪವಾಗಿದೆ.

ಕರ್ನಾಟಕ ರಾಜ್ಯ ಒಂದೇ ತೊಗರಿ ಖರೀದಿಗೆ ಸಾವಿರ ಕೋಟಿ ಕೇಳುತ್ತದೆ. ಹಾಗೆ ಬೇಗನೆ ಹಾಳಾಗುವ ಟೊಮೋಟೊ ಈರುಳ್ಳಿ ಆಲೂಗೆಡ್ಡೆ ಮುಂತಾದವುಗಳ ಖರೀದಿ, ಸರಬರಾಜಿಗೆ ರಾಷ್ಟ್ರಮಟ್ಟದಲ್ಲಿ 500ಕೋಟಿ ರೂಗಳು ನೀಡುತ್ತಿರುವುದು ಮೂಸಿ ನೋಡಲು ಸಾಲದು. ರೈತಾಪಿ ವರ್ಗಕ್ಕೆ ಆರ್ಥಿಕ ಭರವಸೆ ನೀಡುವ ಬಗ್ಗೆ ಗಮನ ಇಲ್ಲದಿರುವುದು ಸ್ಪಷ್ಟವಾಗಿದೆ.

ರೈತರ ಉತ್ಪನ್ನವನ್ನು ಆಕರ್ಷಕ ಧಾರಣೆಯಲ್ಲಿ ಮಾರಾಟಮಾಡಲು ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂಬ ಆಶ್ಚರ್ಯಕರ ಪ್ರಸ್ತಾವನೆ ಹೊರ ಬಂದಿರುತ್ತವೆ. ಇದು ‘ಕೃಷಿ ಬೆಲೆ ಆಯೋಗ’ ಪ್ರಸ್ತಾಪಿಸಿರುವಂತೆ ರೈತರ ಉತ್ಪನ್ನಗಳ ಧಾರಣೆ ಮತ್ತು ಖರೀದಿ ಪ್ರಕ್ರಿಯೆಗಳನ್ನು ಕಾಯಿದೆ ವ್ಯಾಪ್ತಿಗೆ ತಂದು ಯೋಗ್ಯ ಧಾರಣೆಯನ್ನು ಖಾತರಿಗೊಳಿಸುವ ದಿಕ್ಕಿನಲ್ಲಿದೆಯೇ ಎಂದು ಕಾದು ನೋಡಬೇಕಾಗಿದೆ. ಹಾಗೆ, ಸಂಪೂರ್ಣ ರಾಜ್ಯಗಳ ಹಿಡಿತದಲ್ಲಿರುವ ಕೃಷಿ ಮಾರುಕಟ್ಟೆಯನ್ನು ಕೇಂದ್ರದ ಹತೋಟಿಗೆ ತಂದು ಉತ್ಪನ್ನಗಳ ದೇಶದಾದ್ಯಂತ ಸುಗಮ ಸಾಗಾಣಿಕೆಗೆ ಅನುವುಮಾಡಿಕೊಡುವ ವಿಚಾರವನ್ನು ವಿರೋಧ ಪಕ್ಷಗಳ ಹಿಡಿತದಲ್ಲಿರುವ ರಾಜ್ಯ ಸರ್ಕಾರಗಳು ಹೇಗೆ ನೋಡುತ್ತವೆಂದು ತಿಳಿಯದಾಗಿದೆ.

ವಲಸೆ ಕಾರ್ಮಿಕರಲ್ಲಿ ಬಹುತೇಕ ಸಣ್ಣ, ಅತಿಸಣ್ಣ ಬಡ ರೈತರಾಗಿದ್ದು ಹಳ್ಳಿಗಳ ಕಡೆ ಮುಖ ಮಾಡಿರುತ್ತಾರೆ. ಈಗ ಹಿಂತಿರುಗಿದ ವಲಸೆ ಕಾರ್ಮಿಕರನ್ನು ಹಳ್ಳಿಯಲ್ಲಿ ಕೃಷಿ ಯಾಂತ್ರೀಕರಣ, ಸಂಸ್ಕರಣೆಯಿಂದ, ಗ್ರಾಮೀಣ ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲು ಇದು ಸದಾವಕಾಶ. ಈ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗ ಸೃಷ್ಟಿ “ನರೇಗ” ಯೋಜನೆಗೆ ಅಧಿಕವಾಗಿ 40 ಸಾವಿರ ಕೋಟಿ ನೀಡಿರುವುದು ಸಮಯೋಚಿತ.

‘ಕರ್ನಾಟಕ ಜನಶಕ್ತಿ ಸಂಘಟನೆ’ ನಡೆಸಿರುವ ಅಧ್ಯಯನದಂತೆ ದಿನಗೂಲಿಯನ್ನು ರೂ 375 ಏರಿಸಬೇಕು ಹಾಗೂ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ಹಾಗೆ, ಪಟ್ಟಣಗಳಲ್ಲಿ ಉನ್ನತ ಹುದ್ದೆಯಲ್ಲಿದ ಕೆಲ ಯುವಕರಾದರೂ ಹಳ್ಳಿಗಳಲ್ಲಿ ವಾಸಿಸಿ ಅರ್ಥಪೂರ್ಣ ಬದುಕು ಕಂಡುಕೊಳ್ಳಲು ಸಿದ್ಧರಿದ್ದು ಗ್ರಾಮೀಣ ಪುನಶ್ಚೇತನಕ್ಕೆ ಪೂರಕವಾದ ನವೋದ್ಯಮದಲ್ಲಿ ಇವರನ್ನು ತೊಡಗಿಸಿಕೊಳ್ಳಲು ಇದು ಒಳ್ಳೆಯ ಅವಕಾಶ. ರೈತರ ಹೊಲದ ಸಮೀಪ ಮತ್ತು ಉತ್ಪನ್ನಗಳ ಸಂಗ್ರಹಿಸುವ ಸ್ಥಳಗಳಲ್ಲಿ ಹಣವನ್ನು ಕೃಷಿ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಮತ್ತು ಆ ರೀತಿಯ ನವೋದ್ಯಮಿಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಯೋಜನೆ ತುಸು ಸ್ವಾಗತಾರ್ಹ.

ಸಾಧಾರಣ ಸಮಯದಲ್ಲೂ ಸರ್ಕಾರದ ಘೋಷಣೆ ಮತ್ತು ನೆರವು ಕಾರ್ಯರೂಪಕ್ಕೆ ಬಂದು ತೃಪ್ತಿದಾಯಕವಾಗಿ ಉಪಯೋಗವಾಗಿರುವುದು ಅಪರೂಪ. ಆಡಳಿತ ಯಂತ್ರ ನಿಷ್ಕ್ರಿಯವಾಗಿರುವ ಈಗಿನ ಲಾಕ್‌ಡೌನ್ ಸಂದರ್ಭದಲ್ಲಂತೂ ದೊಡ್ಡ ಘೋಷಣೆ, ಬೃಹತ್ ನೆರವುಗಳಿಗೆ ಅರ್ಥವೇ ಇಲ್ಲ. ನೀತಿ, ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡುವುದು ಸೂಕ್ತವಾಗಿದ್ದರೂ ಇದು ದೀರ್ಘಾವದಿಯದ್ದು. ಘೋಷಿಸಿರುವ ಹಣ ಶೀಘ್ರ ಬಳಕೆಯಾಗಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ‘ನೀಲಿ ನಕ್ಷೆ’, ಸ್ಪಷ್ಟ ಕಾರ್ಯಯೋಜನೆ ಕಂಡು ಬಂದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಇಂದು ದೇಶದಲ್ಲಿ ಹಸಿವು, ಅಪೌಷ್ಟಿಕತೆಗಳು ಒಂದು ಕಡೆ ತಾಂಡವಾಡುತ್ತಿದ್ದರೆ ಇನ್ನೊಂದೆಡೆ ಆಹಾರ ಉತ್ಪನ್ನಗಳು ಬೇಡಿಕೆ ಇಲ್ಲದೆ ಕೊಳೆಯುವಂತಾಗಿದೆ. ಬೆಲೆ ಇಲ್ಲದೆ ರೈತರು ಹಣ್ಣು-ತರಕಾರಿ, ಹಾಲನ್ನು ರಸ್ತೆಗೆ ತಂದು ಸುರಿಯುವ ಪರಿಸ್ಥಿತಿ ಬಂದಿದೆ. ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಈ ವೈರುಧ್ಯ ಹಂಚಿಕೆ ಬಗೆಗಿನ ನಿರ್ಲಕ್ಷವನ್ನು ಮರುಚಿಂತನೆಗೆ ಒಳಪಡಿಸಬೇಕಾಗಿತ್ತು.

ಈಗಂತೂ ಕರೋನ ಮಹಾಮಾರಿಗೆ ಜಗತ್ತೇ ನಡುಗಿ ಜನ ಬದುಕುಳಿಯಲು ಹರಸಾಹಸ ಪಡುತ್ತಿರುವಾಗ ಆಹಾರ ಉತ್ಪನ್ನಗಳ ಸಮರ್ಪಕ ವಿತರಣೆ ಮಾಡಿ ಆ ಮೂಲಕ ಜನಸಾಮಾನ್ಯರ, ಬಡಬಗ್ಗರ ಆರೋಗ್ಯದ ಜವಾಬ್ದಾರಿ ಪೂರ್ತಿ ಸರ್ಕಾರದ ಮೇಲಿದ್ದು, ಇದು ದೇಶದ ಪ್ರಥಮ ಆದ್ಯತೆಯಾಗಬೇಕಾಗಿತ್ತು. ಹಂಚಿಕೆಯನ್ನು ಒಂದು ಸಮಗ್ರ ಆಶಯವಾಗಿ ಅನುಷ್ಠಾನಗೊಳಿಸಲು ಕಾಲ ಈಗ ಪಕ್ವವಾಗಿದ್ದರೂ ಈನಿಟ್ಟಿನಲ್ಲಿ ಚಿಂತನಯೇ ಇಲ್ಲವಾಗಿರುವುದು ಅತ್ಯಂತ ದುರದೃಷ್ಟಕರ.

ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯಾಗಲಿ ಅಥವಾ ಖಾಸಗಿ ವಲಯವಾಗಲಿ ರೈತ ಬೆಳೆದ ಆಹಾರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸಮಾನ ಹಂಚಿಕೆಯ ಬಗ್ಗೆ ಗಮನಹರಿಸಲು ಅಸಾಧ್ಯ ಎಂಬುದನ್ನು ಸದ್ಯದ ಪರಿಸ್ಥಿತಿ ಸಾಬೀತುಪಡಿಸುತ್ತಿದೆ. ಇಂದಿನ ನಿಯಂತ್ರಿತ ಮಾರುಕಟ್ಟೆ (ಎಪಿಎಂಸಿ) ವ್ಯವಸ್ಥೆಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಡಿಸಿ ಮತ್ತಷ್ಟು ಸ್ಪರ್ಧಾತ್ಮಕವೂ ರೈತಪರವು ಮಾಡುವ ಬದಲಿಗೆ ಸರ್ಕಾರದ ವ್ಯಾಪ್ತಿಯ ಈ ಜನಪ್ರತಿನಿಧಿ ಸಂಸ್ಥೆಗೆ ತಿಲಾಂಜಲಿ ಕೊಡ ಹೊರಟಿರುವುದು ಮೂರ್ಖತನವಾಗಿರುತ್ತದೆ.

ರೈತಾಪಿ ವರ್ಗ ಆಹಾರ ಉತ್ಪಾದನೆಯ ಮಹತ್ಕಾರ್ಯದಿಂದ ಹಿಂಜರಿಯದಂತೆ ನೋಡಿಕೊಳ್ಳುವ ಗಂಭೀರ ಸವಾಲು ಈಗ ಸರ್ಕಾರದ ಮುಂದಿದೆ. ಈ ಬಗ್ಗೆ ಸಮರೋಪಾದಿಯಲ್ಲಿ ಸ್ಪಷ್ಟ ಕಾರ್ಯಯೋಜನೆ ಕೃಷಿ ವಲಯಕ್ಕೆ ಅತ್ಯಗತ್ಯವಾಗಿದ್ದು ಕೇಂದ್ರದ ಘೋಷಣೆ ನಿರಾಶಾದಾಯಕವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...