Homeಮುಖಪುಟನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ

ನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ

- Advertisement -
- Advertisement -

ದೇಶದ್ರೋಹ, ರಾಷ್ಟ್ರದ್ರೋಹ ಇದು ನಿತ್ಯ ಕೇಳುತ್ತಿರುವಂತಹ ಸುದ್ದಿ. ದೇಶದ್ರೋಹ ಅಂದರೇನು? ದೇಶದ್ರೋಹ ಎನ್ನುವಂತಹದ್ದು ಮೊದಲು ರಾಜದ್ರೋಹ ಎಂದಿತ್ತು. ದೇಶದೆಲ್ಲೆಡೆ ವ್ಯತಿರಿಕ್ತವಾಗಿ ಬೆಳೆಯುತ್ತಿದ್ದ ಚಳವಳಿಗಳನ್ನು ಹತ್ತಿಕ್ಕಲು ಬ್ರಿಟಿಷರು 1879ರಲ್ಲಿ ತಂದ ಕಾನೂನೇ ರಾಜದ್ರೋಹದ ಕಾನೂನು. ಅದರಡಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಎಲ್ಲಾ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗೆ ಹಾಕಿದರು.. ಬ್ರಿಟಿಷರ ರಾಜದ್ರೋಹದ ಕಾನೂನಿನಡಿಯಲ್ಲಿ ಚರ್ಚಿತವಾದ 2 ಪ್ರಕರಣಗಳೆಂದರೆ ಒಂದು ಬಾಲಗಂಗಾಧರ ತಿಲಕರ ಪ್ರಕರಣ, ಇನ್ನೊಂದು ಮಹಾತ್ಮ ಗಾಂಧಿಯವರ ಪ್ರಕರಣಗಳು.

ಮಹಾತ್ಮ ಗಾಂಧೀಜಿಯವರ ಪ್ರಕರಣ, ಅವರು ಬರೆದು ಪ್ರಕಟಿಸಿದ ಮೂರು ಲೇಖನಗಳ ವಿರುದ್ಧ ಬ್ರಿಟಿಷ್ ಸರ್ಕಾರ ರಾಜದ್ರೋಹದ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಗಾಂಧೀಜಿ, ನ್ಯಾಯಾಧೀಶರಾಗಿ ನಿಮಗೆ 2 ಅವಕಾಶವಿದೆ. ನೀವು ನ್ಯಾಯ ನೀಡುತ್ತೀರೋ, ಕಾನೂನು ಮಾತನಾಡುತ್ತೀರೋ? ನೀವು ಕಾನೂನು ಬಗ್ಗೆ ಮಾತನಾಡುತ್ತೀರಿ ಅಂತಾದರೆ ನಿಮ್ಮ ಕಾನೂನಿನ ಕೆಳಗೆ ನಾನು ಅಪರಾಧಿ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಬ್ರಿಟಿಷ್ ಸರ್ಕಾರ ತೊಲಗಲೇಬೇಕು ಎಂದು ನಾನು ಬರೆದ ಪ್ರತಿಯೊಂದು ಅಕ್ಷರ ಸಹ ಸತ್ಯ. ಅದನ್ನು ತಪ್ಪು ಎಂದು ಹೇಳಲು ನಾನು ತಯಾರಿಲ್ಲ. ನೀವು ಅದಕ್ಕೆ ಅತ್ಯುಗ್ರವಾದ ಶಿಕ್ಷೆ ನೀಡಿ. ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ ಎಂದಾದರೆ ನೀವು ಈ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೋಗಿ. ಯಾಕೆಂದರೆ ನ್ಯಾಯ ಮತ್ತು ರಾಜದ್ರೋಹ ಜೊತೆಜೊತೆಗೆ ಹೋಗಲು ಸಾಧ್ಯವಿಲ್ಲ್ಲ ಎಂದು ಹೇಳುತ್ತಾರೆ.. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕಾನೂನೇ ರಾಜದ್ರೋಹದ ಕಾನೂನು..

ನಮಗೆ ಸ್ವಾತಂತ್ರ್ಯ ಸಿಕ್ಕಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಮೇಲೆ ರಾಜದ್ರೋಹ ಉಳಿಯಲು ಸಾಧ್ಯವಿಲ್ಲ ಎನ್ನುವ ಚರ್ಚೆ ಬಂತು. ಇಂತಹ ಘಟನೆಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮೊದಲುಗೊಂಡು ಬಾಂಬೆ ಹೈಕೋರ್ಟ್ ಆದಿಯಾಗಿ ಎಲ್ಲಾ ಕೋರ್ಟ್‍ಗಳು ಕೂಡಾ ರಾಜದ್ರೋಹದ ಕಾನೂನು ಉಳಿಯಲು ಸಾಧ್ಯವಿಲ್ಲ, ಅದು ಹೋಗಲೇಬೇಕು. ಯಾಕೆಂದರೆ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಲ್ಲಿ ರಾಜದ್ರೋಹದ ಕಾನೂನಿಗೆ ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟವು.. ಎಲ್ಲಾ ತೀರ್ಪುಗಳ ನಡುವೆಯೂ ಸೆಡಿಷನ್ ಕಾನೂನು ಉಳಿದುಕೊಂಡುಬರಲು ಕಾರಣವೇನೆಂದರೆ ಆಗಿದ್ದಂತಹ ರಾಜಕೀಯ ತಳಮಳದ ಸ್ಥಿತಿ, ವಿಭಜನೆ. ದೇಶದಲ್ಲಿ ಇದ್ದ ಅತಂತ್ರ ಸ್ಥಿತಿಯಿಂದ ಅದನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು.

ದೇಶದ್ರೋಹ ಕಾನೂನಿನಲ್ಲಿ ಎರಡು ಭಾಗವಿದೆ. ಒಂದು ರಾಷ್ಟ್ರದ ಬಗ್ಗೆ ದ್ವೇಷ ಇರುವಂತಹದ್ದು ಎರಡನೇಯದ್ದು ರಾಷ್ಟ್ರದ ಸರ್ಕಾರದ ನೀತಿಯನ್ನು ವಿರೋಧಿಸುವಂತಹದ್ದು. ಈ ಕಾನೂನಿಗೆ ಸಂಬಂಧಿಸಿದಂತೆ ಮುಖ್ಯವಾದ ತೀರ್ಪು ಬಂದಿದ್ದು ಕೇದಾರನಾಥ ಪ್ರಕರಣದಲ್ಲಿ. 1962 ರಲ್ಲಿ ಬಂದ ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠ ಹೇಳಿದ್ದು ‘ಸರ್ಕಾರವನ್ನು ಇಲ್ಲದಾಗಿಸುವಾಗ, ಈ ದೇಶದ ಐಕ್ಯತೆ ಮತ್ತು ಸಾರ್ವಭೌಮತೆಯ ಪ್ರಶ್ನೆ ಬಂದಾಗ ಅದು ದೇಶದ್ರೋಹ ಆಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ಒಂದು ಮಿತಿಯಿದೆ. ಈ ಸಂದರ್ಭದಲ್ಲಿ ರಾಷ್ಟ್ರದ್ರೋಹದ ಕಾನೂನು ಸಿಂಧುವಾಗುತ್ತದೆ’.

2ನೇ ಭಾಗದಲ್ಲಿ ಸರ್ಕಾರದ ನೀತಿಯ ವಿರುದ್ಧ ಯಾವುದೇ ಪ್ರತಿರೋಧ, ವಿಮರ್ಶೆ, ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ದೇಶದ್ರೋಹ ಆಗುವುದಿಲ್ಲ. ದೇಶದ ವ್ಯವಸ್ಥೆಯನ್ನೇ ಕಿತ್ತೊಗೆಯುವ ಹೇಳಿಕೆ ಬಂದಾಗ ಮಾತ್ರ ದೇಶದ್ರೋಹ ಆಗುತ್ತದೆ. ಇದರ ನಂತರ ಸಾಕಷ್ಟು ತೀರ್ಪುಗಳು ಬಂದಿದೆ. ಅದರಲ್ಲಿ ಮುಖ್ಯವಾದುದು “ಬಲವಂತ್ ಸಿಂಗ್” ತೀರ್ಪು. ಇದರಲ್ಲಿ ಖಾಲಿಸ್ಥಾನ್ ಜಿಂದಾಬಾದ್ ಎನ್ನುವ ಹೇಳಿಕೆಯನ್ನಿಟ್ಟುಕೊಂಡು ಹೊಸ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಲಾಯಿತು. ಆದರೆ ಸುಪ್ರೀಂ ಇದು ದೇಶದ್ರೋಹ ಆಗುವುದಿಲ್ಲ ಎಂದು ತೀರ್ಪು ನೀಡಿತು.

ದೇಶದ ವ್ಯವಸ್ಥೆ ಬದಲಾಯಿಸುವ ಬಗ್ಗೆ ಹೇಳುವುದಿಲ್ಲವೊ ಅದು ದೇಶದ್ರೋಹವಲ್ಲ. ದುರಂತವೆಂದರೆ 1962ರ ನಂತರ ಬಂದ ಎಲ್ಲಾ ರಾಜಕೀಯ ಪಕ್ಷಗಳು ಈ ಕಾನೂನನ್ನು ದುರುಪಯೋಗಪಡಿಸಿಕೊಂಡಿವೆ. ತಮ್ಮ ವಿರುದ್ಧ ಯಾರು ಮಾತನಾಡಿದರೂ ದೇಶದ್ರೋಹದ ಕಾನೂನು ಉಪಯೋಗಿಸಿ ಮೊಕದ್ದಮೆ ದಾಖಲುಮಾಡಿ ಅವರನ್ನು ಜೈಲಿಗೆ ಹಾಕಲಾಗುತ್ತಿದೆ. ಈ ಪ್ರವೃತ್ತಿ ಈಗ ಇನ್ನು ಹೆಚ್ಚಾಗಿದೆ.

ದುರಂತವೆಂದರೆ ಒಂದು ಚಿಕ್ಕ ನಾಟಕದಲ್ಲಿ ಬರೆದ “ಚಪ್ಪಲಿಯಲ್ಲಿ ಹೊಡೆಯಿರಿ” ಎಂಬ ವಾಕ್ಯದ ಕಾರಣಕ್ಕೆ ದೇಶದ್ರೋಹದ ಪ್ರಕರಣ ಬೀದರಿನಲ್ಲಿ ತಾಯಿ ಮತ್ತು ಶಿಕ್ಷಕಿಯ ಮೇಲೆ ದಾಖಲಾಗಿರುತ್ತದೆ. “ಫ್ರೀ ಕಾಶ್ಮೀರ” ಎಂಬ ಪೋಸ್ಟರ್ ಹಿಡಿದ ಹುಡುಗಿಯ ಮೇಲೆ ಮೊಕದ್ದಮೆ ದಾಖಲಾಗುತ್ತದೆ. ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಾರೆ ಎಂದು ಹುಡುಗಿಯನ್ನು ದೇಶದ್ರೋಹದ ಮೇಲೆ ಜೈಲಿಗೆ ಅಟ್ಟಲಾಗುತ್ತದೆ. ಈ ದೇಶದ್ರೋಹದ ಕಲ್ಪನೆಯನ್ನು ತುಂಬಾ ಜಾಳಾಗಿ ಸರ್ಕಾರ ತನ್ನ ವಿರುದ್ಧ ಮಾತನಾಡುವ ಪ್ರತಿಯೊಬ್ಬರ ವಿರುದ್ಧ ಪ್ರಯೋಗ ಮಾಡುತ್ತಿದೆ. ಇದು ಕಳೆದ ಐವತ್ತೇಳು ವರ್ಷದ ಇತಿಹಾಸದಲ್ಲಿ ಬಂದಿರುವ ತೀರ್ಪುಗಳಿಗೆ ತೀರಾ ವ್ಯತಿರಿಕ್ತವಾಗಿದೆ.

ದೇಶದ್ರೋಹದ ಕಾನೂನನ್ನು ವಿಮರ್ಶೆ ಅಂದರೆ ಪ್ರಸ್ತುತತೆಯನ್ನು ನೋಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಜೊತೆಗೆ ಪ್ರಪಂಚದ ಸಾಕಷ್ಟು ದೇಶಗಳಲ್ಲಿ ದೇಶದ್ರೋಹದ ಕಾನೂನನ್ನು ತೆಗೆದುಹಾಕಲಾಗಿದೆ ಅನ್ನುವುದನ್ನು ನಾವು ಮರೆಯಬಾರದು..
ನಮಗೆ ಎಪ್ಪತ್ತು ವರ್ಷದಲ್ಲಿ ಪ್ರಜಾಪ್ರಭುತ್ವದ ಭದ್ರವಾದ ತಳಹದಿಯನ್ನು ಪಡೆಯಲು ಸಾಧ್ಯವಾಗಿದೆ. ಈ ಬಗ್ಗೆ ಅನುಮಾನಗಳು ಇಲ್ಲ. ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ, ನಮ್ಮಲ್ಲಿ ಪ್ರತಿರೋಧ ಇದೆ. ಚುನಾಯಿತ ಸರ್ಕಾರಗಳೇ ಅಧಿಕಾರ ನಡೆಸುತ್ತಿವೆ ಇದು ಇರಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಪ್ರಮುಖವಾಗಿದೆ. ಸರ್ಕಾರದ ಕಾನೂನನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ವಿರೋಧಿಸುವ ಹಕ್ಕಿರುತ್ತದೆ ಅಲ್ಲಿ ದೇಶದ್ರೋಹದ ಕಾನೂನಿಗೆ ಅವಕಾಶ ಇರುವುದಿಲ್ಲ. ದೇಶದ್ರೋಹವನ್ನು ಹೊರತುಪಡಿಸಿ ಸಾಕಷ್ಟು ಕಾನೂನು ನಮ್ಮ ಭಾರತೀಯ ದಂಡ ಸಂಹಿತೆಯಲ್ಲಿ ಇದೆ ಅದರ್ರ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬಹುದು.

ನಮ್ಮಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಂಡಿದೆ ಎಂದು ಒಪ್ಪುವುದೇ ಆದರೆ ಅಲ್ಲಿ ದೇಶದ್ರೋಹದ ಕಾನೂನು ಇರಲು ಅವಕಾಶವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...