Homeಮುಖಪುಟನ್ಯೂಸ್‌ಕ್ಲಿಕ್ ಮತ್ತು ನ್ಯೂಸ್‌ಲಾಂಡ್ರಿ ವೆಬ್‌ ಪೋರ್ಟಲ್‌‌ ಕಚೇರಿಯಲ್ಲಿ ಐಟಿ ಅಧಿಕಾರಿಗಳ ‘ಕಾರ್ಯಾಚರಣೆ’!

ನ್ಯೂಸ್‌ಕ್ಲಿಕ್ ಮತ್ತು ನ್ಯೂಸ್‌ಲಾಂಡ್ರಿ ವೆಬ್‌ ಪೋರ್ಟಲ್‌‌ ಕಚೇರಿಯಲ್ಲಿ ಐಟಿ ಅಧಿಕಾರಿಗಳ ‘ಕಾರ್ಯಾಚರಣೆ’!

ಎರಡು ಪೋರ್ಟಲ್‌ಗಳು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿರುವ ಜನಪರ ಸುದ್ದಿ ಸಂಸ್ಥೆಗಳಾಗಿವೆ

- Advertisement -
- Advertisement -

ವೆಬ್‌ ಪೋರ್ಟಲ್‌ಗಳಾದ ನ್ಯೂಸ್‌ಕ್ಲಿಕ್ ಮತ್ತು ನ್ಯೂಸ್‌ಲಾಂಡ್ರಿ ಕಚೇರಿಗೆ ಶುಕ್ರವಾದಂದು ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳು ಇದನ್ನು “ಸರ್ವೆ” ಎಂದು ಕರೆದಿದ್ದು, “ದಾಳಿ” ಅಲ್ಲ ಎಂದು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆದಾಯ ತೆರಿಗೆ ಇಲಾಖೆಯು, ತನ್ನ ಅಧಿಕಾರಿಗಳು ದಕ್ಷಿಣ ದೆಹಲಿಯಲ್ಲಿ ಇರುವ ನ್ಯೂಸ್ ಪೋರ್ಟಲ್‌ಗಳ ಕಚೇರಿಗಳಿಗೆ “ಸರ್ವೇಗಳನ್ನು ನಡೆಸಲು” ಹೋಗಿದ್ದಾರೆ ಎಂದು ದೃಡಪಡಿಸಿದೆ.

ಸರ್ವೇಗಳು ತೆರಿಗೆ ವಂಚನೆಯ ಆರೋಪಗಳಿಗೆ ಸಂಬಂಧಿಸಿದ್ದು, ಅಧಿಕಾರಿಗಳು ಪೋರ್ಟಲ್‌ಗಳ ಖಾತೆ ಪುಸ್ತಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಲವ್ಲಿನಾಗೆ ಶುಭಕೋರಿದ ಬ್ಯಾನರ್‌ನಲ್ಲಿ ಅವರ ಫೋಟೊನೇ ಇಲ್ಲ: ವರದಿ ಮಾಡಿದ ವೆಬ್‌ಸೈಟ್‌ ಮೇಲೆ FIR!

ಈ ಕಾರ್ಯಾಚರಣೆಯು ಕೆಲವು ತೆರಿಗೆ ಪಾವತಿ ವಿವರಗಳನ್ನು ಮತ್ತು ಸಂಸ್ಥೆಗಳಿಂದ ರವಾನೆಯಾದ ಹಣವನ್ನು ಪರಿಶೀಲಿಸುವುದರ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

“ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 11.30 ರ ಸುಮಾರಿಗೆ ಬಂದರು ಮತ್ತು ಇನ್ನೂ ಹೊರಟಿಲ್ಲ. ಅಲ್ಲದೆ ಕಚೇರಿಯಲ್ಲಿರುವ ನೌಕರರು ತಮ್ಮ ಸೆಲ್ ಫೋನ್‌ಗಳನ್ನು ಬಳಸದಂತೆ ಕೇಳಿಕೊಂಡರು” ಎಂದು ನ್ಯೂಸ್‌ಲಾಂಡ್ರಿ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ ಕ್ಲಿಕ್ ವೆ‌ಬ್ ಪೋರ್ಟಲ್‌ 2018-19 ರ ಹಣಕಾಸು ವರ್ಷದಲ್ಲಿ ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್ ಎಲ್‌ಎಲ್‌ಸಿ ಯುಎಸ್‌ಎಯಿಂದ 9.59 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಪಡೆದಿದೆ ಎಂದು ಆರೋಪಿಸಿದ್ದ ದೆಹಲಿ ಪೊಲೀಸರು ನ್ಯೂಸ್‌ ಕ್ಲಿಕ್‌ ಮೇಲೆ ಫೆಬ್ರವರಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದರ ನಂತರ ನ್ಯೂಸ್‌ಕ್ಲಿಕ್ ಮತ್ತು ಅದರ ಸಂಸ್ಥಾಪಕರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.

ನ್ಯೂಸ್‌ ಲಾಂಡ್ರಿ ಮಾಧ್ಯಮಗಳು ಮತ್ತು ಅವುಗಳ ಸುದ್ದಿಗಳನ್ನು ವಿಶ್ಲೇಷಿಸುವ ವೆಬ್‌ಪೋರ್ಟಲ್‌ ಆಗಿದೆ. ನ್ಯೂಸ್‌ ಕ್ಲಿಕ್ ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸುವ ಜನಪರ ಸುದ್ದಿಗಳನ್ನು ಪ್ರಕಟ ಮಾಡುವ ವೆಬ್‌ ಪೋರ್ಟಲ್‌ ಆಗಿದೆ. ಎರಡು ಪೋರ್ಟಲ್‌ಗಳು ಕೂಡಾ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿರುವ ಜನಪರ ಸುದ್ದಿ ಸಂಸ್ಥೆಗಳಾಗಿವೆ.

ಇದನ್ನೂ ಓದಿ: ಹಿಂದೂ ಯುವತಿ ಮುಸ್ಲಿಂ ಉಗ್ರನನ್ನು ಕೊಂದಳೇ? ಇಲ್ಲ, ವೆಬ್‍ ಸೀರಿಸ್ ಪಾತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...