Homeಹಿಂದೂ ಯುವತಿ ಮುಸ್ಲಿಂ ಉಗ್ರನನ್ನು ಕೊಂದಳೇ? ಇಲ್ಲ, ವೆಬ್‍ ಸೀರಿಸ್ ಪಾತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಹಿಂದೂ ಯುವತಿ ಮುಸ್ಲಿಂ ಉಗ್ರನನ್ನು ಕೊಂದಳೇ? ಇಲ್ಲ, ವೆಬ್‍ ಸೀರಿಸ್ ಪಾತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

- Advertisement -
- Advertisement -

ಒಂದು ಸಂಗತಿ ಈಗ ಕನ್ನಡದಲ್ಲೂ ವೈರಲ್‍ ಆಗಿದೆ. ಅದರ ಪ್ರಕಾರ, ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರಂತೆ. ಏಕೆ ಅಂದರೆ, ತಾನು ಹಿಂದೂ ಎಂದು ನಂಬಿಸಿದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಒಬ್ಬಳನ್ನು ಉಗ್ರರಿಗೆ ಮಾರಲು ಹೊರಟಿದ್ದ, ಸತ್ಯ ತಿಳಿದ ಯುವತಿ ಆತನನ್ನು ಕೊಂದೇ ಬಿಟ್ಟಳು. ಹಿಂದೂ ಯುವತಿಯರು ಎಚ್ಚೆತ್ತುಕೊಳ್ಳುತ್ತಿದ್ದಾರೆ ಎಂಬುದು ಈ ಸಂದೇಶದ ಸಾರಾಂಶ..

ಇದನ್ನು ಕೆಲವರು ಸುಳ್ಳು ಅಂತ ಗೊತ್ತಿದ್ದರೂ ವೈರಲ್‍ ಮಾಡುತ್ತಿದ್ದರೆ, ಅವರನ್ನು ಫಾಲೋ ಮಾಡುವವರು ಕಣ್ಣುಮುಚ್ಚಿ ಷೇರ್ ಮಾಡುತ್ತಿದ್ದಾರೆ.

ವಾಸ್ತವ ಏನು?

ಈ ಸಂದೇಶದಲ್ಲಿ ಹಾಕಿರುವ ಫೋಟೋ ಒಂದು ವೆಬ್‍ ಸೀರೀಸ್‍ ಪಾತ್ರದ್ದು! ಫ್ಯಾಮಿಲಿ ಮ್ಯಾನ್‍ ಸಿರೀಸ್‍-2ನಲ್ಲಿ ಈ ಪಾತ್ರವಿದೆ. ಈ ಪಾತ್ರಕ್ಕೆ ಎರಡು ಹೆಸರುಗಳಿವೆ. ಕಲ್ಯಾಣ್‍ ಮತ್ತು ಸಲ್ಮಾನ್‍. ಇದು ಬ್ರೇನ್‍ವಾಶ್‍ಗೆ ಒಳಗಾದ ಮುಸ್ಲಿಂ ಯುವಕನ ಪಾತ್ರ. ಈ ಪಾತ್ರದ ಫೋಟೊವನ್ನೇ ಪೋಸ್ಟರ್ ಮಾಡಿ ಈ ಸಂದೇಶ ಹರಡಲಾಗಿದೆ. ಅಂದರೆ ರೀಲ್‍ ಲೈಫ್‍ ಪಾತ್ರವನ್ನು ರಿಯಲ್‍ ಲೈಫ್‍ಗೆ ತರಲು ತಿಣುಕಾಡಿದ್ದಾರೆ.

ಅಮೆಜಾನ್‍ ಪ್ರೈಂನಲ್ಲಿ ಪ್ರಸಾರವಾಗುವ ಈ ಸಿರೀಸ್‍ ತಕ್ಕಮಟ್ಟಿಗೆ ಜನಪ್ರಿಯವೂ ಆಗಿದೆ. ಇದು ಥ್ರಿಲ್ಲರ್ ಸ್ಟೋರಿಯಾಗಿದ್ದು, ಬಾಲಿವುಡ್‍ನ ಪ್ರತಿಭಾವಂತ ನಟ ಮನೋಜ್‍ ಬಾಜಪೈ ಇದರ ಹೀರೊ. ಶ್ರೀಕಾಂತ್‍ ತಿವಾರಿ (ಮನೋಜ್‍ ಬಾಜಪೈ) ಎನ್‍ಐಎನಲ್ಲಿ ಸ್ಪೇಷಲ್‍ ತನಿಖಾ ಆಫೀಸರ್. ಈ ಸಿರಿಯಲ್‍ನಲ್ಲಿ ಮೇಲೆ ತಿಳಿಸಿದ ಪೋಸ್ಟರ್‌ನಲ್ಲಿರುವ ಕಲ್ಯಾಣ್ ಅಲಿಯಾಸ್‍ ಸಲ್ಮಾನ್‍ (ಬ್ರೇನ್‍ವಾಶ್‍ಗೆ ಒಳಗಾದ ಮುಸ್ಲಿಂ ಯುವಕನ ಪಾತ್ರ) ಹೀರೊ ಶ್ರೀಕಾಂತ್‍ನ ಪುತ್ರಿಯನ್ನು ಅಪಹರಿಸುತ್ತಾನೆ. ಇದಿಷ್ಟು ಕತೆ.

ಅಭಯ ವರ್ಮಾ ಎನ್ನುವ ನಟ  ಕಲ್ಯಾಣ್‍/ಸಲ್ಮಾನ್‍ ಪಾತ್ರ ಮಾಡಿದ್ದಾರೆ. ಅವರ ಫೋಟೊ ಹಾಕಿ, ರೀಲ್‍ ಘಟನೆ ರಿಯಲ್‍ ಎಂಬಂತೆ ಬಿಂಬಿಸಿ ಪೋಸ್ಟರ್ ಮಾಡಲಾಗಿದೆ.

ನೂರಾರು ಭಕ್ತರು ಇದು ನೈಜ ಘಟನೆ ಎಂದು ಭಾವಿಸಿ ಈ ಫೇಕ್‍ ಸಂದೇಶವನ್ನು ವೈರಲ್‍ ಮಾಡುತ್ತಿದ್ದಾರೆ!


ಇದನ್ನೂ ಓದಿ: ಲಸಿಕೆ ಪಡೆದ ಎಲ್ಲರೂ 2 ವರ್ಷಗಳಲ್ಲಿ ಸಾಯುತ್ತಾರೆ: ಈ ವ್ಯಾಟ್ಸಾಪ್ ವದಂತಿ ನಂಬಬೇಡಿ – ಲಸಿಕೆ ಹಾಕಿಸಿಕೊಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...