Photo Courtesy: IBTimes India

ಯಾವುದೇ ಕೋವಿಡ್ ಲಸಿಕೆಗಳನ್ನು ಪಡೆದ ಜನರಿಗೆ ಬದುಕುಳಿಯುವ ಅವಕಾಶವಿಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ ಹೇಳಿದ್ದಾರೆ ಎಂಬ ವಾಟ್ಸಾಪ್ ಸಂದೇಶವೊದು ವೈರಲ್ ಆಗಿದೆ. ಆ ಸಂದೇಶದಲ್ಲಿ ಅವರು ಹೀಗೆ ಹೇಳಿದ್ದಾರೆ, ಹಾಗೆ ಹೇಳಿದ್ದಾರೆ ಎಂದು ವಿವಿಧ ಉಲ್ಲೇಖಗಳನ್ನು ಪ್ರಸ್ತಾಪಿಸಿದೆ. ಈ ಸುಳ್ಳು ಸಮರ್ಥನೆಯನ್ನು ಬೆಂಬಲಿಸಲು ಅವರ ಲೇಖನಕ್ಕೆ ಲೈಫ್‌ಸೈಟ್‌ನ್ಯೂಸ್‌.ಕಾಂ ಎಂಬ ಲಿಂಕ್ ಅನ್ನು ಹಂಚಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಮೊಂಟಾಗ್ನಿಯರ್ ಅವರ ವಿಕಿಪೀಡಿಯಾ ಪುಟಕ್ಕೆ ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದೆ.

ಬಹುದೊಡ್ಡ ಸುಳ್ಳು

ನೊಬೆಲ್ ಪ್ರಶಸ್ತಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, 2008 ರಲ್ಲಿ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್‌ಐವಿ) ಆವಿಷ್ಕಾರಕ್ಕೆ ನೀಡಿದ ಕೊಡುಗೆಗಾಗಿ ಫ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಅಂದಿನಿಂದ ಅವರು ಹುಸಿ ವೈಜ್ಞಾನಿಕ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಸುದ್ದಿಯಲ್ಲಿದ್ದಾರೆ. ಕೊರೋನಾ ವೈರಸ್ ಮಾನವ ನಿರ್ಮಿತವಾಗಿದೆ ಮತ್ತು ಎಚ್‌ಐವಿಯಿಂದ ಆನುವಂಶಿಕ ವಸ್ತುಗಳನ್ನು ಒಳಗೊಂಡಿದೆ ಎಂದು ಮೊಂಟಾಗ್ನಿಯರ್ ತಪ್ಪಾಗಿ ಹೇಳಿಕೊಂಡಿದ್ದಾರೆ ಎಂದು ಫ್ರೆಂಚ್ ಮ್ಯಾಗಝೀನ್ ‘ಸೈನ್ಸ್ ಫೀಡ್‌ಬ್ಯಾಕ್’ ಕಳೆದ ವರ್ಷ ವರದಿ ಮಾಡಿದೆ.

ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್, ಸಾಮೂಹಿಕ ಕೋವಿಡ್ ಲಸಿಕಾ ಕಾರ್ಯಕ್ರಮ ‘ಸ್ವೀಕಾರಾರ್ಹವಲ್ಲ, ಅದು ತಪ್ಪು’ ಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸುವ ‘ಲೈಫ್ ಸೈಟ್ ನ್ಯೂಸ್’ ಲೇಖನವನ್ನು ಅಲ್ಟ್ ನ್ಯೂಸ್ ಗಮನಿಸಿದೆ ಮತ್ತು ಅದರಲ್ಲಿ ಅಂತಹ ವಿವರಣೆ ಇಲ್ಲವೇ ಇಲ್ಲ ಎಂಬುದನ್ನು ಕಂಡುಕೊಂಡಿದೆ. ಲೈಫ್ ಸೈಟ್ ನ್ಯೂಸ್ ಲೇಖನವು ಯುಎಸ್ ಮೂಲದ ಎನ್‌ಜಿಒ ರೇರ್ ಫೌಂಡೇಶನ್ ಮೇ 18 ರಂದು ಪ್ರಕಟಿಸಿದ ಲೇಖನವನ್ನು ಆಧರಿಸಿದೆ. ಈ ಲೇಖನವು ಮೊಂಟಾಗ್ನಿಯರ್ ಅವರ ಸಂದರ್ಶನದ ಎರಡು ನಿಮಿಷಗಳ ಕ್ಲಿಪ್ ಅನ್ನು ಒಳಗೊಂಡಿದೆ. ಈ ಸಂದರ್ಶನದ ಸಂಪೂರ್ಣ 11 ನಿಮಿಷಗಳ ಆವೃತ್ತಿಯನ್ನು ಫ್ರೆಂಚ್ ವೆಬ್‌ಸೈಟ್ ಪ್ಲಾನೆಟ್ 360 ಗೆ ಅಪ್‌ಲೋಡ್ ಮಾಡಲಾಗಿದೆ. ಲಸಿಕೆಗಳ ಕಾರಣದಿಂದಾಗಿ ಹೊಸ ಕೋವಿಡ್ ರೂಪಾಂತರಗಳನ್ನು ರಚಿಸಲಾಗಿದೆ ಎಂದು ಮೊಂಟಾಗ್ನಿಯರ್ ನಂಬಿದ್ದಾರೆ. ಎರಡು ನಿಮಿಷಗಳ ಕ್ಲಿಪ್‌ನಲ್ಲಿ, “ಸಾಮೂಹಿಕ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನೀವು ಹೇಗೆ ನೋಡುತ್ತೀರಿ?” ಎಂಬ ಪ್ರಶ್ನೆಗೆ ಉತ್ತರಿಸುತ್ತ ಮಾಂಟಾಗ್ನಿಯರ್ “ಇದು ಅಪಾರ ತಪ್ಪು, ಅಲ್ಲವೇ? ವೈಜ್ಞಾನಿಕ ದೋಷ ಮತ್ತು ವೈದ್ಯಕೀಯ ದೋಷ. ಇದು ಸ್ವೀಕಾರಾರ್ಹವಲ್ಲದ ತಪ್ಪು. ವ್ಯಾಕ್ಸಿನೇಷನ್‌ನಿಂದಾಗಿ ಇದು ರೂಪಾಂತರಗಳನ್ನು ರಚಿಸುತ್ತಿದೆ ಎಂದು ಇತಿಹಾಸ ಪುಸ್ತಕಗಳು ತೋರಿಸುತ್ತವೆ” ಎನ್ನುತ್ತಾರೆ. (ಬೋಲ್ಡ್ ಆಗಿರುವ ವಿಭಾಗವನ್ನು ವಾಟ್ಸಾಪ್ ಸಂದೇಶದಲ್ಲಿ ಸೇರಿಸಲಾಗಿದೆ.)

ಮಾಂಟಾಗ್ನಿಯರ್ ಲಸಿಕೆ ವಿರೋಧಿ ನಿಲುವಿಗೆ ಹೆಸರುವಾಸಿಯಾಗಿದ್ದಾರೆ ಎಂಬುದನ್ನು ಓದುಗರು ಗಮನಿಸಬೇಕು. ಆಲ್ಟ್ ನ್ಯೂಸ್ ಸೈನ್ಸ್‌ನ ಸಂಸ್ಥಾಪಕ ಸಂಪಾದಕರಾದ ಡಾ. ಸುಮಯ್ಯ ಶೇಖ್ ಅವರು, “ಇದು ಮೊಂಟಾಗ್ನಿಯರ್ ಹೇಳಿದ್ದಕ್ಕೆ ವಿರುದ್ಧವಾಗಿದೆ. ಲಸಿಕೆಗಳೊಂದಿಗೆ ವೈರಸ್ ಹರಡುವಿಕೆಯು ಕಡಿಮೆಯಾಗುತ್ತದೆ. ಹೀಗಾಗಿ, ಲಸಿಕೆ ಹಾಕುವ ಮೂಲಕ ಮತ್ತು ಸೋಂಕಿನ ಹರಡುವಿಕೆಯನ್ನು ತಡೆಯುವ ಮೂಲಕ, ವೈರಸ್ ಹರಡುವುದನ್ನು ನಿಲ್ಲಿಸಲಾಗುತ್ತದೆ ಮತ್ತು ಆ ಮೂಲಕ, ಹೊಸ ರೂಪಾಂತರಗಳು ಸಮುದಾಯದಲ್ಲಿ ಹರಡಲು ಕಡಿಮೆ ಅವಕಾಶಗಳನ್ನು ಹೊಂದಿರುತ್ತವೆ. ಲಸಿಕೆಗಳು ದೊಡ್ಡ ಜನಸಂಖ್ಯೆಯಲ್ಲಿ ವ್ಯಾಪಕವಾದ ಪುನರಾವರ್ತನೆಯನ್ನು ತಡೆಯುತ್ತವೆ, ಇದು ಅಂತಿಮವಾಗಿ ಹೊಸ ರೂಪಾಂತರಗಳ ರಚನೆಯನ್ನು ಕಡಿಮೆ ಮಾಡುತ್ತದೆ” ಎಂದಿದ್ದಾರೆ.

ತಪ್ಪುದಾರಿಗೆಳೆಯುವ ವಾಟ್ಸಾಪ್ ಸಂದೇಶದ ಬಗ್ಗೆ ಅಸ್ಸಾಂ ಪೊಲೀಸರು ಫೇಸ್‌ಬುಕ್‌ನಲ್ಲಿ ಎಚ್ಚರಿಕೆಯನ್ನು ಪೋಸ್ಟ್ ಮಾಡಿದ್ದಾರೆ.

ಫ್ರೆಂಚ್ ವೈರಾಲಜಿಸ್ಟ್ ಲುಕ್ ಮೊಂಟಾಗ್ನಿಯರ್ “ಈಗಾಗಲೇ ಲಸಿಕೆ ಹಾಕಿದವರಿಗೆ ಯಾವುದೇ ಭರವಸೆ ಇಲ್ಲ ಮತ್ತು ಸಂಭವನೀಯ ಚಿಕಿತ್ಸೆ ಇಲ್ಲ. ದೇಹಗಳನ್ನು ಸುಡಲು ನಾವು ಸಿದ್ಧರಾಗಿರಬೇಕು. ಲಸಿಕೆ ಹಾಕಿದ ಜನರು ಎರಡು ವರ್ಷಗಳಲ್ಲಿ ಸಾಯುತ್ತಾರೆ” ಎಂದು ಅವರು ಹೇಳಿಕೊಂಡಿಲ್ಲ. ಆದಾಗ್ಯೂ, ಅವರು ಈ ಹಿಂದೆ ಲಸಿಕೆ ವಿರೋಧಿ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

2010 ರಲ್ಲಿ, ಜರ್ಮನಿಯಲ್ಲಿ ನಡೆದ ಲಿಂಡೌ ನೊಬೆಲ್ ಪ್ರಶಸ್ತಿ ವಿಜೇತ ಸಭೆಯಲ್ಲಿ ಮೊಂಟಾಗ್ನಿಯರ್ ಆಘಾತಕಾರಿ ಭಾಷಣ ಮಾಡಿದರು. ವೈರಸ್ ಸೋಂಕುಗಳನ್ನು ಪತ್ತೆಹಚ್ಚಲು ಅವರು ಹೊಸ ವಿಧಾನವನ್ನು ಪ್ರಸ್ತುತಪಡಿಸಿದರು, ಅದು ಹೋಮಿಯೋಪತಿಯ ಮೂಲ ಸಿದ್ಧಾಂತಗಳಿಗೆ ಹೋಲುತ್ತದೆ. ಇದನ್ನು ದಿ ಆಸ್ಟ್ರೇಲಿಯಾ ನ್ಯೂಸ್ ವರದಿ ಮಾಡಿದೆ.
ಆಲ್ಟ್ ನ್ಯೂಸ್ ಸೈನ್ಸ್ 2018 ರಲ್ಲಿ ‘ಹೋಮಿಯೋಪತಿ ಚಿಕಿತ್ಸೆ ಪರಿಣಾಮಕಾರಿ ರೂಪವೇ?’ ಎಂಬ ಲೇಖನವನ್ನು ಪ್ರಕಟಿಸಿತ್ತು, ಇದು ಆಧುನಿಕ ವೈಜ್ಞಾನಿಕ ವಿವರಣೆಯ ಪ್ರಕಾರ ಹೋಮಿಯೋಪತಿ ಔಷಧಿಗಳನ್ನು ಅವುಗಳ ಪ್ಲಾಸಿಬೊ ಪರಿಣಾಮಕ್ಕೆ ಮಾತ್ರ ಸಿಮೀತ ಎಂದು ತೀರ್ಮಾನಿಸಿದೆ.

ಒಟ್ಟಿನಲ್ಲಿ, ಲಸಿಕೆ ಕುರಿತು ಭಯ ಬೀಳಿಸುವ ವ್ಯಾಟ್ಸಾಪ್ ಸಂದೇಶ ನಂಬಬೇಡಿ, ಲಸಿಕೆ ಹಾಕಿಸಿಕೊಳ್ಳಿ, ಪ್ರತಿರೋಧಕ ಶಕ್ತಿ ಪಡೆದುಕೊಳ್ಳಿ…. ವ್ಯಾಕ್ಸಿನ್ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಬೆಂಗಳೂರಿನ ಬಿಎಂಸಿ 92 ಸಾಲಿನ ವೈದ್ಯರು ಉತ್ತರಿಸಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.


ಇದನ್ನೂ ಓದಿ; 2021 ರ ಅಂತ್ಯಕ್ಕೆ ಸಂಪೂರ್ಣ ಭಾರತಕ್ಕೆ ವ್ಯಾಕ್ಸಿನ್‌: ಕೇಂದ್ರ ಸರ್ಕಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here