Homeಮುಖಪುಟತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?

ಅಷ್ಟು ಎತ್ತರದ ವ್ಯಕ್ತಿ, ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ..

- Advertisement -
- Advertisement -

ಹೋರಾಟದ ಸ್ವೂರ್ತಿ, ಕರ್ನಾಟಕದ ಎಲ್ಲಾ ಚಳವಳಿಗಳ ಬೆನ್ನೆಲುಬು ಆಗಿದ್ದ ನಮ್ಮೆಲ್ಲರ ಚೇತನ ದೊರೆಸ್ವಾಮಿ ತಾತಾ ಇನ್ನಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರೊಂದಿಗಿನ ನನ್ನ ಒಡನಾಟ, 20 ವರ್ಷದು ಎಂದು ಹೇಳಬಹುದಾದರೂ ಅದು ವೇದಿಕೆಯ ಮೇಲೆ, ಕಾರ್ಯಕ್ರಮಗಳಲ್ಲಿ ಬಿಟ್ಟರೆ, ಅವರನ್ನ ಇನ್ನೂ ಹತ್ತಿರದಿಂದ ನೋಡುವ ಅವಕಾಶ ದೊರೆಕಿದ್ದು 2020ರ ಮೊದಲ ಕರೋನಾ ಲಾಕ್ ಡೌನ್ ಸಮಯದಲ್ಲಿ.

ಆಗ ತಾತನನ್ನು ನೋಡಿಕೊಳ್ಳಲು ಯಾರು ಸಿಗದ ಸಂದರ್ಭ. ನರ್ಸ್ ಒಬ್ಬರನ್ನು ನೇಮಿಸುವ ಚರ್ಚೆ ಬಂದಾಗ ಅದಕ್ಕೆ ತಾತಾ ಒಪ್ಪುತ್ತಿರಲಿಲ್ಲ. ಅವರೊಂದಿಗೆ ರಾಜಕೀಯ ಚರ್ಚೆ ಮಾಡಬೇಕಾದ್ದರಿಂದ ಸಾಮಾಜಿಕ ಕಾರ್ಯಕರ್ತರು ಅವರನ್ನು ನೋಡಿಕೊಂಡರೆ ಅವರಿಗೆ ಸಮಾಧಾನ. ಕೊನೆಗೆ ನಾನು ನನ್ನ ಬಾಳ ಸಂಗಾತಿ ಕುಮಾರ್ ಹೊರಡಲು ಸಿದ್ದರಾದೆವು. ಮೊದಲು ಹೇಗೆ ನೋಡಿಕೊಳ್ಳಬೇಕು ಅವರ ಪದ್ದತಿಗಳು ಎಲ್ಲಾ ಭಿನ್ನವಾಗಿ ಇರುತ್ತದೆ ಅದಕ್ಕೆ ನಾವು ಸರಿ ಹೊಂದುತ್ತೇವೊ ಇಲ್ಲವೊ ಎಂಬ ಸಣ್ಣ ಅಳುಕಿತ್ತು, ನಾವು ಹೋಗಿದ್ದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದಷ್ಟೆ. ಆದರೆ ಹೋದ ಒಂದು ದಿನಕ್ಕೆ ತಾತನದು ನಮ್ಮದು ಎಷ್ಟೋ ವರ್ಷದ ಸಂಬಂಧ ಎನಿಸುವಷ್ಟು ಹತ್ತಿರವಾದೆವು.

ಇದು ಬಹುಶಃ ಸಮಾಜದ ಬದಲಾಣೆಯ ಬಗೆಗಿರುವ ಸಮಾನ ನಂಟಿರಬೇಕು ಅನಿಸಿತ್ತು. ನನಗೊ ಬಹಳಷ್ಟು ಕುತೂಹಲದ ಪ್ರಶ್ನೆಗಳಿದ್ದವು. ಆ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಗಳು ಹೇಗೆ ನಡೆಯುತ್ತಿತ್ತು? ಅದರಲ್ಲಿ ತಾತನ ಪಾತ್ರ ಏನಾಗಿತ್ತು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಿದೆ? ಎಲ್ಲದ್ದಕ್ಕೂ ಉತ್ಸಾಹದಿಂದ ಉತ್ತರಿಸುತ್ತಿದ್ದರು. ಅವರ ಮದುವೆಯ ಬಗ್ಗೆ, ಪ್ರೀತಿಯ ಬಗ್ಗೆ ಹೀಗೆ ಮಾತನಾಡುತ್ತಿದ್ದರೆ ನಮಗೆ ಸಮಯ ಹೋಗುತ್ತಿದ್ದದೆ ಗೊತ್ತಾಗುತ್ತಿರಲಿಲ್ಲ. ಒಂದು ಸಲ ನಾನು, “ತಾತ ನೀವು ಅಜ್ಜಿನ, ಮಕ್ಕಳನ ನೋಡೋಕೆ ವರ್ಷವಾದರೂ ಮನೆಗೆ ಬರುತ್ತಿರಲಿಲ್ಲವಂತೆ, ಪಾಪ ಅಜ್ಜಿ ಎಷ್ಟು ಕಷ್ಟ ಪಟ್ಟಿರಬೇಕು” ಎಂದೆ. ಸಡನ್ನಾಗಿ ತಾತ ನನ್ನ ಕಡೆ ನೋಡಿದರು, ನನಗೆ ಕೇಳಬಾರದ ಪ್ರಶ್ನೆ ಏನಾದರು ಕೇಳಿದೆನಾ ಅಂತ ಒಂದು ಕ್ಷಣ ಗಲಿಬಿಲಿಗೊಂಡೆ, ಅದಕ್ಕೆ ತಾತ ಶಾಂತವಾಗಿ “ಹೌದಮ್ಮ ಅವಳಿಗೆ ನನ್ನ ಮದುವೆ ಮಾಡಿಕೊಂಡು ಏನು ಸಿಕ್ಕಿಲ್ಲ, ಕಷ್ಟಗಳ ಹೊರತು” ಎಂದು ಎರಡು ನಿಮಿಷ ಮೌನಕ್ಕೆ ಜಾರಿದರು. ಅಷ್ಟು ಎತ್ತರದ ವ್ಯಕ್ತಿ ನನ್ನಂತ ಚಿಕ್ಕವಳ ಮುಂದೆ ತನ್ನನ್ನು ತಾನೇ ಈ ರೀತಿ ಆತ್ಮಾವಲೋಕನ ಮಾಡಿಕೊಳ್ಳುವುದು ಎಂದರೆ ಅದು ಸಲಭದ ಮಾತಲ್ಲ. ಅದೇ ನಾವೆಲ್ಲರೂ ಅವರಿಂದ ಅಳವಡಿಸಿಕೊಳ್ಳಬೇಕಾದ ನಡೆ ಎನಿಸಿತ್ತು.

ನಮಗೇ ಕೆಲವು ಸಲ ತಾತನನ್ನ ಜಾಸ್ತಿ ಆಯಾಸ ಮಾಡಿಸಿದೆವಾ ಅನ್ನಿಸುತ್ತಿತ್ತು. ಆದರೆ ತಾತ ಮಾತ್ರ ವಿಷಯ ತೆಗೆದಷ್ಟು ಜ್ಞಾನದ ಭಂಡಾರವೆ ಬಿಚ್ಚಿಕೊಳ್ಳುತ್ತಿತ್ತು. ಈಗ ನೆನಸಿಕೊಂಡರೆ ಬಹುರ್ಶ ಆ ಲಾಕ್ ಡೌನ್ ಸಮಯದಲ್ಲಿ ಹೊರಗೆ ಹೋಗಲು ಆಗದೆ, ಚಳವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಾಗದೆ ಅವರು ಚಡಪಡಿಸುತ್ತಿದ್ದರು ಎನಿಸುತ್ತದೆ. ಆಗ ನಡೆದ ಕೆಲವು ಘಟನೆಗಳನ್ನು ವಿಡಿಯೊ ಮಾಡಿ ಕೆಲ ಸಮಾನ ಮನಸ್ಕ ಸ್ನೇಹಿತರಿಗೆ ಕಳಿಸುತ್ತಿದ್ದೆವು. ಓದುಗರ ಮೆಚ್ಚುಗೆಯ ಮಾತುಗಳು ತಾತನಿಗೆ ಖುಷಿ ತರುತ್ತಿತು. ನನ್ನ ಕುಮಾರ್ ಬಗ್ಗೆಯೂ ಕೇಳಿ ಬೇಷ್ ಎಂದರು. ಜೊತೆಗೆ ಇದಷ್ಟು ದಿನ ಅವರ ಮಗುವಿನಂತ ಮನಸ್ಸಿನಿಂದ ತಾತನ ಹತ್ತಿರ ಏನು ಪ್ರಶ್ನೆ ಬೇಕಾದರೂ ಕೇಳಬಹುದು ಎಂಬ ಸಲುಗೆಯೂ ಬೆಳೆಯಿತು.

ಇನ್ನೊಂದು ಸಲ ನಾನು ತಾತನಿಗೆ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಅಂತ ಕೇಳಿದೆ? “ಒಮ್ಮೆ ನನ್ನ ಯೂತ್ ಲೀಡರ್ ಆಗಿ ಕಾರವಾರಕ್ಕೆ ಕಳಿಸಿದ್ದರು. ಆಗ ನಾವು ಹಲವು ಗೆಳೆಯರು ಸೇರಿ ಮನೆಮನೆಗೆ ಪ್ರಚಾರ ಮಾಡಿ ಬಂದಾಗ ತುಂಬಾ ಹಸಿವಾಗಿತ್ತು. ಬಂದ ಎಲ್ಲಾ ಕಾರ್ಯಕರ್ತರಿಗೆ ಒಂದೇ ಕಡೆ ಊಟದ ವ್ಯವಸ್ಥೆ ಮಾಡಿದ್ದರು. ನಾನು ಅವರ ಪಂಕ್ತಿಯಲ್ಲಿ ಕುಳಿತೆ. ಊಟಕ್ಕೊ ಬಡಿಸಿದರು ನಾನು ಊಟನು ಮಾಡಿದೆ. ಅಲ್ಲಿ ನಮಗೆ ಮಾಂಸಾಹಾರ ಬಡಿಸಿದ್ದರು. ನಾನು ನಾಲ್ಕು- ಐದು ತುತ್ತು ತಿಂದಿದ್ದೆ. ಆಮೇಲೆ ಸ್ನೇಹಿತರು ನೋಡಿ ನಿಮಗೆ ಇಲ್ಲಿ ಒಳಗೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದು ಮಾಂಸಹಾರಿಗಳಿಗೆ ಎಂದು ನನ್ನ ಕರೆದುಕೊಂಡು ಒಳ ಹೋದರು” ಅಂತ ಹೇಳಿದರು. ಅಷ್ಟರಲ್ಲಿ ನಾನು ಗೊತ್ತಿಲ್ಲದೆ ಐದು ತುತ್ತು ತಿಂದಿದ್ದೆ. ಆ ರುಚಿ ನನಗೆ ಅಭ್ಯಾಸವಿಲ್ಲದಿದ್ದರಿಂದ ನನಗೇನೂ ಅನಿಲಿಲ್ಲ. ಅವರವರ ಆಹಾರ ಅವರಿಗೆ ಹೆಚ್ಚು, ಎಲ್ಲರ ಆಹಾರವನ್ನು ಗೌರವಿಸಬೇಕು. ಯಾರ ಆಹಾರವೂ ಇಲ್ಲಿ ಮೇಲೂ ಇಲ್ಲ ಕೀಳು ಇಲ್ಲ ಅಂದರು ಸಾಮಾಧಾನದಿಂದ. ಇಷ್ಟು ಸರಳವಾಗಿ ಉತ್ತರಿಸುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಮನಸ್ಸಿನಲ್ಲೆ ಹ್ಯಾಟ್ಸ್‌ಆಫ್‌ ತಾತ ಎಂದು ಅವರ ಕೈಕುಲುಕಿದೆ.

ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪ ಮಾಡಲೇಬೇಕು. ಅವರ ಹೋರಾಟದ ಬೆಳವಣಿಗೆಗೆ ಅವರ ಬಾಳ ಸಂಗಾತಿಯಾದ ಲಲಿತಮ್ಮನವರ ಬೆಂಬಲವು ಬಹಳ ಮುಖ್ಯ. ಮನೆಯ ಮಕ್ಕಳ ಎಲ್ಲಾ ಜವಾಬ್ದಾರಿಯನ್ನ ಲಲಿತಮ್ಮನವರು ಏಕಾಂಗಿಯಾಗಿಯೇ ನಿರ್ವಹಿಸಿದ್ದಾರೆ. ಈ ಹಿಂದೆ ಅವರೊಂದಿಗೆ ಸಹ ಆಸ್ಪತ್ರೆಯಲ್ಲಿ ಎರಡು ದಿನ ಇದ್ದು ಅವರ ಜೀವನದ ಸಂಗತಿಗಳನ್ನ ಕೇಳಿದ್ದೇನೆ. ಅವರು ಕೂಡಾ ತಾತನ ಬಗ್ಗೆ ಒಂದು ಸಣ್ಣ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. ಹೀಗೆ ಸಾರ್ಥಕ ಜೀವನ ಇಬ್ಬರದು. ಹೋಗಿ ಬನ್ನಿ ತಾತ. ಧಣಿವರಿಯದ ನಿಮ್ಮ ಹೋರಾಟದಿಂದ ವಿಶ್ರಾಂತಿ ಪಡೆಯುತ್ತಾ, ನಮ್ಮಂಥವರನ್ನ ಸದಾ ಕಾಲ ಎಚ್ಚರಿಸುತ್ತಿರಿ.

  • ಗೌರಿ, (ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷರು. ಮಹಿಳಾ ಹೋರಾಟಗಾರರು)

ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿಯವರ ಜೊತೆಗಿನ ನೆನಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...