Homeಮುಖಪುಟ2021 ರ ಅಂತ್ಯಕ್ಕೆ ಸಂಪೂರ್ಣ ಭಾರತಕ್ಕೆ ವ್ಯಾಕ್ಸಿನ್‌: ಕೇಂದ್ರ ಸರ್ಕಾರ

2021 ರ ಅಂತ್ಯಕ್ಕೆ ಸಂಪೂರ್ಣ ಭಾರತಕ್ಕೆ ವ್ಯಾಕ್ಸಿನ್‌: ಕೇಂದ್ರ ಸರ್ಕಾರ

- Advertisement -
- Advertisement -

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರದ ಕೊರೊನಾ ಲಸಿಕೆಯ ತಂತ್ರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಕೆಲವೇ ಗಂಟೆಗಳ ನಂತರ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು 2021 ರ ಅಂತ್ಯದ ವೇಳೆಗೆ ಸಂಪೂರ್ಣ ಭಾರತಕ್ಕೆ ಲಸಿಕೆ ನೀಡಲಾಗವುದು ಎಂದು ಹೇಳಿದ್ದಾರೆ. “ಆರೋಗ್ಯ ಸಚಿವಾಲಯವು 216 ಕೋಟಿ ಕೊರೊನಾ ಲಸಿಕೆಯನ್ನು ಆ ಹೊತ್ತಿಗೆ ಉತ್ಪಾದಿಸಲು ಮಾರ್ಗಸೂಚಿಯನ್ನು ನೀಡಿದೆ” ಎಂದು ಅವರು ತಿಳಿಸಿದ್ದಾರೆ.

ಇದಕ್ಕಿಂತ ತುಸು ಗಂಟೆಗಳ ಮುಂಚೆಯೆ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ರೂಪಾಂತರಗೊಳ್ಳುತ್ತಿರುವ ವೈರಸ್‌‌ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಆದರೆ ಕೇಂದ್ರ ಸರ್ಕಾರದ ಅಜ್ಞಾನವು ವೈರಸ್ ಬೆಳೆಯಲು ಮತ್ತು ಹರಡಲು ದಾರಿ ಮಾಡಿಕೊಡುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ತಮಿಳುನಾಡಿನ ಹೊಸ ಸರ್ಕಾರದ ಆರಂಭಿಕ ಹೆಜ್ಜೆಗಳು ಮೂಡಿಸಿರುವ ಭರವಸೆಗಳು 

ವೈರಸ್ ವಿರುದ್ಧ ಹೋರಾಟಕ್ಕೆ “ಶಾಶ್ವತ” ಪರಿಹಾರ ವ್ಯಾಕ್ಸಿನೇಷನ್‌ ಮಾತ್ರವಾಗಿದೆ. ಆದರೆ ಭಾರತದ ಕಳಪೆ ಕೊರೊನಾ ನಿರ್ವಹಣೆ ವಿಫಲತೆಗೆ ಕಾರಣವೇನೆಂದರೆ ಕೇಂದ್ರಕ್ಕೆ “ವ್ಯಾಕ್ಸಿನೇಷನ್ ತಂತ್ರವಿಲ್ಲ” ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಭಾರತವು ಶುಕ್ರವಾರ ಬೆಳಗ್ಗೆ ಒಂದು ದಿನದಲ್ಲಿ 1.86 ಲಕ್ಷ ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಇದು ಕಳೆದ 44 ದಿನಗಳಲ್ಲಿ ದೈನಂದಿನ ಸೋಂಕುಗಳ ಕಡಿಮೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 23.43 ಲಕ್ಷಕ್ಕೆ ಇಳಿದಿದ್ದರೆ, 2.48 ಕೋಟಿಗೂ ಹೆಚ್ಚು ಜನರು ಈ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. 3,660 ಜನರು ಒಂದು ದಿನದಲ್ಲಿ ಸೋಂಕಿನಿಂದಾಗಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಈಗ 3.18 ಲಕ್ಷಕ್ಕಿಂತ ಹೆಚ್ಚಾಗಿದೆ.

ಮತ್ತೊಂದು ಬೆಳವಣಿಗೆಯಲ್ಲಿ, ಕೊರೊನಾ ವೈರಸ್‌ನ ಮೂಲದ ಬಗ್ಗೆ ಎರಡನೇ ಹಂತದ ತನಿಖೆಯನ್ನು ನಡೆಸುವಂತೆ ಅಮೆರಿಕಾವು ವಿಶ್ವ ಆರೋಗ್ಯ ಸಂಸ್ಥೆಯನ್ನು ಕೇಳಿದ ಒಂದು ದಿನದ ನಂತರ, ಭಾರತವು ಈ ತನಿಖೆಗೆ ಬೆಂಬಲ ನೀಡಿದ್ದು, ಇದನ್ನು “ಪ್ರಮುಖ ಹೆಜ್ಜೆ” ಎಂದು ಕರೆದಿದೆ.

ಇದನ್ನೂ ಓದಿ: ‘ನಾರದ’: ಸುವೆಂಧು ಅಧಿಕಾರಿ ಬಂಧನ ಯಾಕಿಲ್ಲ?- ಪ್ರಕರಣದ ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...