Homeಮುಖಪುಟಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!

ಭಾರತೀಯ ಗಣತಂತ್ರದ ಬಹುದೊಡ್ಡ ಹಬ್ಬಕ್ಕೆ ಸ್ತ್ರೀ ದ್ವೇಷಿ, ಮತಾಂಧ, ಸರ್ವಾಧಿಕಾರಿ ಪ್ರವೃತ್ತಿಯ ಮುಖ್ಯ ಅತಿಥಿ!

1999ರಲ್ಲಿ ಬೊಲ್ಸೊನಾರೊ, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಫೆರ್ನಾಂಡೊ ಹೆನ್ರಿಕ್ ಕಾರ್ದೋಸೊ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು.

- Advertisement -
- Advertisement -

ನಾನು ನಿನ್ನನ್ನು ಅತ್ಯಾಚಾರ ಮಾಡುವುದಿಲ್ಲ. ನೀನು ಅದಕ್ಕೂ ತಕ್ಕವಳಲ್ಲದ ಕುರೂಪಿ.” ಹೀಗೆಂದು ತನ್ನ ಸಹೋದ್ಯೋಗಿ ಮಹಿಳೆ, ಅದೂ ಸಂಸತ್ ಸದಸ್ಯೆಗೆ ಬಹಿರಂಗವಾಗಿ ಹೇಳಿದ ವ್ಯಕ್ತಿಯನ್ನು ಏನೆಂದು ಕರೆಯುತ್ತೀರಿ? ಸ್ತ್ರೀ ದ್ವೇಷಿ ಎಂದೇ? ವಿಕೃತನೆಂದೆ?

“ಪೊಲೀಸನೊಬ್ಬನಿಗೆ ಜನರನ್ನು ಕೊಲ್ಲಲು ಆಗದಿದ್ದರೆ, ಅವನು ಪೊಲೀಸನೇ ಅಲ್ಲ!” ಈ ರೀತಿಯಾಗಿ ಒಬ್ಬ ರಾಜಕಾರಣಿ, ರಾಷ್ಟ್ರ ನಾಯಕ ಹೇಳಿದರೆ ಏನೆಂದು ಕರೆಯುತ್ತೀರಿ? ಸರ್ವಾಧಿಕಾರಿ ಪ್ರವೃತ್ತಿಯ ನಿರ್ದಯಿ ಎಂದೇ?

“ಕರಿಯರು ಪ್ರಾಣಿಗಳಿಗೆ ಸಮ. ಅವರು ಮೃಗಾಲಯದಲ್ಲಿ ಇರಬೇಕಾದವರು. ಗುಲಾಮಿಗಷ್ಟೇ ಅರ್ಹರು” ಎಂದು ಯಾರಾದರೂ ಹೇಳಿದರೆ, ಬಹುತೇಕ ಕರಿಯರು ಅಥವಾ ಕಂದು ಬಣ್ಣದವರಾದ ನಾವು ಹೇಗೆ ಪ್ರತಿಕ್ರಿಯಿಸಬಹುದು? ಜನಾಂಗೀಯವಾದಿ ಎಂದೇ?

ಇದನ್ನು ಹೇಳಿದ್ದು ಬೇರಾರೂ ಅಲ್ಲ! ಭಾರತದಂತಹಾ ಮಹಾನ್ ಪ್ರಜಾಪ್ರಭುತ್ವದ ಅತಿದೊಡ್ಡ ಸಾರ್ವಜನಿಕ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕೆ ನರೇಂದ್ರ ಮೋದಿ ಸರಕಾರ ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಆಗಮಿಸಿರುವ ಬ್ರೆಜಿಲ್‌ನ ಬಾಯಿಬಡುಕ, ತೀವ್ರ ಬಲಪಂಥೀಯ ಅಧ್ಯಕ್ಷ ಜೈರ್ ಬೊಲ್ಸೊನಾರೊ!

ಇದನ್ನೂ ಓದಿ: ಬ್ರೆಜಿಲ್ ಮೋದಿಯ ಕುರಿತ ಕಡೆಯ ಕಂತು

ಕಾಶ್ಮೀರದಲ್ಲಿ ನಡೆಯುತ್ತಿರುವ ದಮನವನ್ನು ಮುಚ್ಚಿಹಾಕುವ ಸಾರ್ವಜನಿಕ ಸಂಪರ್ಕ ಪ್ರಹಸನಕ್ಕೆ ತೆರಿಗೆದಾರರ ಖರ್ಚಿನಲ್ಲಿ ಐರೋಪ್ಯ ಒಕ್ಕೂಟದ ಬಲಪಂಥೀಯ ಸಂಸದರನ್ನು ಆಹ್ವಾನಿಸಿ, ಪ್ರಪಂಚದ ಕಣ್ಣಿಗೆ ತೆರೆ ಎಳೆಯಲು ಯತ್ನಿಸಿ, ಮೋದಿ ಸರಕಾರ ಟೀಕೆಗೆ ಗುರಿಯಾಗಿತ್ತು. ಅದು ಈಗ ಒಂದು ಹೆಜ್ಜೆ ಮುಂದೆ ಹೋಗಿ, ಭಾರತದ 71ನೇ ಗಣರಾಜ್ಯೋತ್ಸವಕ್ಕೆ ಈತನನ್ನು ಆಹ್ವಾನಿಸಿರುವುದು ಮತ್ತೊಮ್ಮೆ ಅರ್ಹವಾಗಿಯೇ ಟೀಕೆಗೆ ಕಾರಣವಾಗಿದೆ. ಜೊತೆಗೆ ಯುಎಸ್ಎಯ ಬಂಡವಾಳಿಗರ ಕೈಗೊಂಬೆಯಂತೆ ವರ್ತಿಸುತ್ತಿರುವ ಬ್ರೆಜಿಲ್‌ನ ಹಾದಿಯಲ್ಲಿಯೇ ಭಾರತವೂ ಸಾಗಲಿರುವ ಸೂಚನೆಯೇ ಇದು ಎಂಬ ಸಂಶಯವನ್ನೂ ಮೂಡಿಸಿದೆ.

ಮೇಲೆ ಮಾಡಲಾದ ಟೀಕೆಗಳಿಗೆ ಸ್ಪಷ್ಟ ಮತ್ತು ಬಹಿರಂಗವಾದ ಆಧಾರಗಳಿವೆ. 1999ರಲ್ಲಿ ಬೊಲ್ಸೊನಾರೊ, ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಫೆರ್ನಾಂಡೊ ಹೆನ್ರಿಕ್ ಕಾರ್ದೋಸೊ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು. 2002ರಲ್ಲಿ ಅವರು ಸಂಸದೆ ಮರಿಯಾ ದೊ ರೊಸಾರಿಯೊ ಅವರಿಗೆ, ತಾನವಳನ್ನು ಅತ್ಯಾಚಾರ ಮಾಡುವುದಿಲ್ಲ. ಆಕೆ ಅದಕ್ಕೂ ಅರ್ಹಳಲ್ಲದ ಕುರೂಪಿ ಎಂದು ಹೇಳಿದ್ದರು. 2011ರಲ್ಲಿ ತನ್ನ ಮಗ ಸಲಿಂಗಕಾಮಿ ಎಂದು ಕರೆಸಿಕೊಳ್ಳುವುದಕ್ಕಿಂತ ಅಪಘಾತದಲ್ಲಿ ಸಾಯುವುದು ಮೇಲು ಎಂದು ಸಲಿಂಗ ಕಾಮಿಗಳನ್ನು ಹೀಗೆಳೆದಿದ್ದರು. 2017ರಲ್ಲಿ ಜನರನ್ನು ಕೊಲ್ಲಲಾಗದ ಪೊಲೀಸ್, ಒಬ್ಬ ಪೊಲೀಸನೇ ಅಲ್ಲ ಎಂದಿದ್ದರು. ಇವೆಲ್ಲವೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟ, ಪ್ರಚಾರವಾಗಿವೆ. ಇಂತಹಾ ವಿವಾದಾತ್ಮಕ, ತೀವ್ರವಾದಿ ಹೇಳಿಕೆಗಳಿಂದಲೇ ಅವರು ವಿಶ್ವದಾದ್ಯಂತದ ತೀವ್ರ ಬಲಪಂಥೀಯ ನಾಯಕರ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅವರು ಭಾರತದಲ್ಲಿ ಯದ್ವಾತದ್ವಾ, ಅಸಂಬದ್ಧ ಹೇಳಿಕೆಗಳನ್ನು ನೀಡುವ ಬಲಪಂಥೀಯ ಪುಢಾರಿ, ಸಾಧು, ಸಂತೆಗಳನ್ನು ನೆನೆಪಿಸುತ್ತಾರೆ!

ಬ್ರೆಜಿಲ್‌ ಅಧ್ಯಕ್ಷರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಿ.

ಇಲ್ಲಿ ಜೈರ್ ಬೊಲ್ಸೊನಾರೊ ಜೀವನ ಕಥನವನ್ನು ನೀಡುವುದು ಈ ಲೇಖನದ  ಉದ್ದೇಶವಲ್ಲ. ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವೆನಿಸಿದ ನಾವು ನಮ್ಮ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವಕ್ಕೆ ಹೋಗಿಹೋಗಿ ಎಂತವರನ್ನು ಮುಖ್ಯ ಅತಿಥಿಯನ್ನು ಆಹ್ವಾನಿಸಿ, ಜಗತ್ತಿನ ಕುಚೋದ್ಯದ ದೃಷ್ಟಿಗೆ ಬಿದ್ದಿದ್ದೇವೆ ಮತ್ತು ನಮ್ಮ ನಾಯಕರು ಯಾಕಾಗಿ ಹೀಗೆ ಮಾಡಿದ್ದಾರೆ; ಅವರ ಬ್ರೆಜಿಲ್ ಮತ್ತು ಬೊಲ್ಸೊನಾರೊ ಪ್ರೇಮಕ್ಕೆ ಕಾರಣವೇನೆಂದು ಓದುಗರ ಗಮನಕ್ಕೆ ತಂದು ಯೋಚಿಸಲು ಪ್ರೇರೇಪಿಸುವುದಷ್ಟೇ ಆಗಿದೆ.

ಬೊಲ್ಸೊನಾರೊ 1973ರಲ್ಲಿ ಸೈನ್ಯ ಸೇರಿ ಮೇಲಿನ ಹಂತಕ್ಕೆ ಏರಿದರು. ಆತನ ಕಮಾಂಡಿಂಗ್ ಆಫೀಸರ್ ಒಬ್ಬರು ಹೀಗೆ ಹೇಳಿದ್ದರು- “ಆತ ಅತಿಯಾದ ಹಣಕಾಸಿನ ಮಹತ್ವಾಕಾಂಕ್ಷೆ ಹೊಂದಿದ ಮನುಷ್ಯ… ಆತನಲ್ಲಿ ತರ್ಕ, ವಿವೇಚನಾಶೀಲತೆ ಮತ್ತು ಸಮತೋಲನವಿಲ್ಲ”. ಆದರೆ, ಆತ ಸಾಮಾನ್ಯ ಮನುಷ್ಯನಂತೆ ಚಿಂತಿಸುತ್ತಾರೆ ಎಂಬ ಜನರ ಭ್ರಮೆಯು ಆತನಿಗೆ ಅಪಾರ ರಾಜಕೀಯ ಲಾಭವನ್ನು ತಂದುಕೊಟ್ಟಿದೆ.

1986ರಲ್ಲಿ ಮಿಲಿಟರಿ ಸೇರಿ ಒಂದು ದಶಕದ ಬಳಿಕ ಆತ ಸೇನೆಯ ಕಡಿಮೆ ಸಂಬಳದ ಬಗ್ಗೆ ದೇಶದ ಪ್ರತಿಷ್ಟಿತ ಪತ್ರಿಕೆ “ವೆಜಾ’ದಲ್ಲಿ ಲೇಖನವೊಂದನ್ನು ಬರೆದರು. ಅದಕ್ಕಾಗಿ ಆತನಿಗೆ 15 ದಿನಗಳ ಸೆರೆವಾಸ ವಿಧಿಸಲಾಯಿತು. ಆದರೆ, ಅದು ಆತನಿಗೆ ದೇಶಪ್ರೇಮಿ ಎಂಬ ಹೆಸರು ತಂದು ಕೊಟ್ಟು, ಆತನ ರಾಜಕೀಯ ಪ್ರವೇಶಕ್ಕೆ ಭಾರೀ ಚಾಲನೆ ನೀಡಿತು.‌

1986ರಲ್ಲಿ ಈತ ರಾಜಧಾನಿ ರಿಯೋ ಡಿ’ಜನೈರೋದ ನಗರ ಸಭೆಯ ಸದಸ್ಯನಾಗಿ ಆಯ್ಕೆಯಾದರು. 1991ರ ಹೊತ್ತಿಗೆ ಸಂಸದರೂ ಆದರು. ನಂತರದ ಎರಡೂವರೆ ದಶಕಗಳ ಕಾಲ ರಾಜಕೀಯವಾಗಿ ಹಿನ್ನೆಲೆಯಲ್ಲಿಯೇ ಇದ್ದರು. ಆಗಾಗ, ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದರೂ, ಬ್ರೆಜಿಲ್‌ನ ರಾಜಕೀಯದಲ್ಲಿ ನಗಣ್ಯರಾಗಿದ್ದರು.

2017ರಲ್ಲಷ್ಷೇ ಆತ ಬ್ರೆಜಿಲ್ ಸಂಸತ್ತಿನ ಕೆಳಮನೆಯ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದಾಗ ಕೇವಲ ನಾಲ್ಕೇ ನಾಲ್ಕು ಮತಗಳು ಬಿದ್ದಿದ್ದವು. ಆದರೆ, ಜನವರಿ 2019ರ ಚುನಾವಣೆಯಲ್ಲಿ ಏಕಾಏಕಿಯಾಗಿ ಉಲ್ಕೆಯಂತೆ ಬ್ರೆಜಿಲ್‌ನ ಅಧ್ಯಕ್ಷರಾಗಿ ಚುನಾಯಿತರಾದರು.

ರಾಜ್‌ಘಾಟ್‌ನಲ್ಲಿರುವ ಗಾಂಧಿ ಸ್ಮಾರಕಕ್ಕೆ ನಮಿಸುತ್ತಿರುವುದು. ಚಿತ್ರಕೃಪೆ: ANI

2008ರ ಆರ್ಥಿಕ ಬಿಕ್ಕಟ್ಟು ಎಲ್ಲಾ ದೇಶಗಳಂತೆ ಬ್ರೆಜಿಲನ್ನೂ ತಟ್ಟಿತ್ತು. 2014ರ ತೈಲ ದೈತ್ಯ ಪೆಟ್ರೋಬ್ರಾಸ್ ಕಂಪೆನಿಯನ್ನು ಒಳಗೊಂಡ ಭಾರೀ ಹಗರಣ ಬೊಲ್ಸೊನಾರೊಗೆ ಭಾರಿ ಲಾಭವನ್ನೇ ತಂದುಕೊಟ್ಟಿತ್ತು. ಹಣದುಬ್ಬರ ಏರಿ, ತಲಾದಾಯದಲ್ಲಿ ಭಾರೀ ಕುಸಿತವಾಗುವುದರ ಜೊತೆಗೆ, ಅಪರಾಧ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಯಿತು. ಅಪರಾಧ ಅತ್ಯಂತ ಹೆಚ್ಚಿರುವ ಪ್ರಪಂಚದ 50 ನಗರಗಳಲ್ಲಿ ಬ್ರೆಜಿಲ್‌ 19ನೇ ಸ್ಥಾನದಲ್ಲಿತ್ತು. ಪ್ರತೀ ವರ್ಷ ಸುಮಾರು 60,000 ಮಂದಿ ಆತ್ಮಹತ್ಯೆ ಮಾಡಿಕೊಂಡರು.

ತನಿಖೆ ನಡೆದು ಮಾಜಿ ಅಧ್ಯಕ್ಷ ದಿಲ್ಮಾ ರೌಸೆಫ್ ಸೇರಿದಂತೆ ಅನೇಕ ರಾಜಕಾರಣಿಗಳು, ಅಧಿಕಾರಿಗಳ ಭ್ರಷ್ಟಾಚಾರ ಬಯಲಾಗಿತ್ತು. ರೌಸೆಫ್ ನಂತರ ಬಂದ ಮೈಕೆಲ್ ಟರ್ನರ್‌ಗೂ ಅದೇ ಗತಿಯಾಯಿತು.  ಜನರು ರೋಸಿ ಹೋಗಿದ್ದರು. ಇಂತಹಾ ಸಂದರ್ಭದಲ್ಲಿ ತಾನು ಪ್ರಾಮಾಣಿಕನಾಗಿದ್ದು, ಭ್ರಷ್ಟಾಚಾರ ನಿಲ್ಲಿಸುವ ಭರವಸೆ ನೀಡಿದ ಬೊಲ್ಸೊನಾರೊರನ್ನು ಜನರು ಬೆಂಬಲಿಸಿದರು. ಆತನ ಪ್ರಚಾರದ ವೇಳೆ ಒಂದು ಪೋಸ್ಟರ್ ಹೀಗಿತ್ತು- ಬ್ರೆಜಿಲ್ ಧ್ವಜದ ಮುಂದೆ ಬೊಲ್ಸೊನಾರೊ ನಿಂತಿದ್ದಾರೆ; “ಇವರನ್ನು ಹಿಟ್ಲರ್, ಮುಸ್ಸೋಲಿನಿ ಎಂದೆಲ್ಲಾ ಕರೆಯುತ್ತಾರೆ. ಭ್ರಷ್ಟ ಎಂದಲ್ಲ!” ಜನರಿಗೆ ಭ್ರಷ್ಟಾಚಾರಕ್ಕಿಂತ ಸರ್ವಾಧಿಕಾರ ಉತ್ತಮ ಅನಿಸಿತು; ಬೊಲ್ಸೊನಾರೊ ಗೆದ್ದರು.

ಅಯ್ಕೆಯಾದ ಬಳಿಕ ಬೊಲ್ಸೊನಾರೊ, ಬಂಡವಾಳಶಾಹಿ ಮತ್ತು ಯುಎಸ್‌ಎ ನಿರ್ದೇಶಿತ ‘ಸುಧಾರಣಾ’ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಭಾರತದಲ್ಲಿ ಆಗುತ್ತಿರುವಂತೆಯೇ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಮಾರುತ್ತಿದ್ದಾರೆ. ಅವರು ಕೂಡಾ ತಮ್ಮ ದೇಶದಲ್ಲಿ ಜನಾಂಗೀಯವಾಗಿ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ವಿವಿಧ ಸಾಮಾಜಿಕ ಗುಂಪುಗಳ ನಡುವೆ ಅಸ್ಮಿತೆಯ ರಾಜಕೀಯ ಮುಂದುವರಿಸಿದ್ದಾರೆ. ಜನಮರುಳು ಘೋಷಣೆಗಳನ್ನು ಹಾಕುತ್ತಿದ್ದಾರೆ. ಬ್ರೆಜಿಲ್‌ನ ಪರಿಸ್ಥಿತಿ, ಅದು ಹಿಡಿದಿರುವ ರಾಜಕೀಯ, ಆರ್ಥಿಕ ಹಾದಿ, ಅಲ್ಲಿನ ಮತ್ತು ಇಲ್ಲಿನ ರಾಜಕೀಯ ಹಿನ್ನೆಲೆ, ರಾಜಕಾರಣಿಗಳ ದಿಢೀರ್ ಜನಪ್ರಿಯತೆ, ಅವರ ಕಾರ್ಯತಂತ್ರ ಇತ್ಯಾದಿಗಳಲ್ಲಿ ಅನೇಕ ಸಾಮ್ಯಗಳಿದ್ದು, ಆ ಬಗ್ಗೆಯೇ ಒಂದು ಪ್ರತ್ಯೇಕ ಲೇಖನ ಬರೆಯಬಹುದು!

ಹೀಗಿದ್ದೂ, ಇಂತಹಾ ಆಕ್ಷೇಪಾರ್ಹ ಹಿನ್ನೆಲೆ ಇರುವ ಸರ್ವಾಧಿಕಾರಿ ಪ್ರವೃತ್ತಿಯ, ತೀವ್ರ ಬಲಪಂಥೀಯ ನಾಯಕನನ್ನು ನಮ್ಮ ದೇಶದ ನಾಯಕರು ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಯಾಕೆ ಆರಿಸಿ, ಆಹ್ವಾನಿಸಿದರು? ಅವರು ಬ್ರೆಜಿಲ್‌ನಲ್ಲಿ ತಮ್ಮ ಹಾದಿಯನ್ನು ಕಂಡರೇ, ಅಥವಾ ಅದುವೇ ತಮ್ಮ ಹಾದಿಯನ್ನು ಅನುಸರಿಸುತ್ತಿದೆ ಎಂಬ ಅಭಿಮಾನದಿಂದ ಕರೆದರೆ? ನಾವು ಈ ಕ್ರಮದ ಹಿನ್ನೆಲೆಯಲ್ಲಿ ಭಾರತ ಮುಂದೆ ಸಾಗಬಹುದಾದ ದಿಕ್ಕನ್ನು ಊಹಿಸಬಹುದಾಗಿದೆ. ಅಲ್ಲದೆ, ನಮ್ಮ ಮತ್ತು ಬ್ರೆಜಿಲ್‌ನ ಬಲಪಂಥೀಯ ನಡೆಗಳು, ಗುಲಾಮಿ ಬಂಡವಾಳಪರ ಆರ್ಥಿಕ ನಡೆಗಳನ್ನು ಒಟ್ಟಾಗಿಯೇ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.

(ಪೂರಕ ಮಾಹಿತಿ: ದಿ ಕ್ವಿಂಟ್ ಮತ್ತು ಇತರ ಸಾಮಾಜಿಕ ಜಾಲತಾಣಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಇವರ ಚಿಂತನೆಗಳಿಗೆ ತುಕ್ಕು ಹಿಡಿದಿದೆ.ಅದಕ್ಕೆ ಹೀಗಾಗಿದೆ. ಮುಂದಿನ ದಿನಗಳಲ್ಲಿ ಇವರ ಅಂತ್ಯಕ್ಕೆ ಇವರೇ ನಾಂದಿ ಹಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...