ರಾಜ್ಯದ ಜನರಿಗೆ ಅತಂತ್ರ ವಿಧಾನಸಭಾ ಪರಿಸ್ಥಿತಿ ತಪ್ಪಿಸುವ ಆಯ್ಕೆಯಾಗಿ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ ಎಂದು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ. ಪಕ್ಷದ ಝಾದಿಬಲ್ ಅಭ್ಯರ್ಥಿ ತನ್ವಿರ್ ಸಾದಿಕ್ ಅವರನ್ನು ಬೆಂಬಲಿಸಿ ದಾಲ್ ಸರೋವರದಲ್ಲಿ ಶಿಕಾರಾ ರ್ಯಾಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸೀಟು ಹಂಚಿಕೆ ಒಪ್ಪಂದದ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್ 51, ಕಾಂಗ್ರೆಸ್ 32 ಮತ್ತು ಸಿಪಿಐ(ಎಂ) ಒಂದರಲ್ಲಿ ಸ್ಪರ್ಧಿಸಲಿವೆ. ಉಳಿದ ಆರು ಸ್ಥಾನಗಳು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವೆ “ಸೌಹಾರ್ದ ಸ್ಪರ್ಧೆ” ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂಓದಿ:‘ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆ’ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಬೆಂಗಳೂರಿನ IIScಗೆ ಪತ್ರ
“ಈವಿಎಮ್ ಯಂತ್ರದಲ್ಲಿ ಏನಿದೆಯೊ ಗೊತ್ತಿಲ್ಲ. ಆದರೆ ಅತಂತ್ರ ಚುನಾವಣೆಯ ಇದು ಆಗಿರುವುದಿಲ್ಲ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. “ನಾವು ಜಮ್ಮು ಕಾಶ್ಮೀರ ಚುನಾವಣೋತ್ತರ ಮೈತ್ರಿಗೆ ಹೋಗಬಹುದಿತ್ತು ಆದರೆ ಜನರಿಗೆ ಒಂದು ಆಯ್ಕೆಯನ್ನು ನೀಡಲು (ಚುನಾವಣೆಯ ಮೊದಲು) ಮೈತ್ರಿಯನ್ನು ರಚಿಸಲಾಗಿದೆ. ಇದರಿಂದದಾಗಿ, ಅತಂತ್ರ ವಿಧಾನಸಭೆ ಇರುವುದಿಲ್ಲ ಮತ್ತು ಸರ್ಕಾರ ರಚನೆಯಾಗುವುದಿಲ್ಲ ಎಂಬ ಅನುಮಾನ ಜನರಿಗೆ ಇರುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಯನ್ನು ವಿಸ್ತರಿಸಲು ಬಿಜೆಪಿಯು ಅತಂತ್ರ ವಿಧಾನಸಭಾ ಫಲಿತಾಂಶ ಬಯಸುತ್ತದೆ ಎಂದು ಅಬ್ದುಲ್ಲಾ ಹೇಳಿದ್ದಾರೆ. “ಬಿಜೆಪಿಯು ಹಂಗ್ ಅಸೆಂಬ್ಲಿಯನ್ನು ಫಲಿತಾಂಶಕ್ಕಾಗಿ ಬಯಸುತ್ತದೆ., ಇದರಿಂದಾಗಿ ಅವರು (ಲೆಫ್ಟಿನೆಂಟ್) ರಾಜ್ಯಪಾಲರ ಆಳ್ವಿಕೆಯನ್ನು ವಿಸ್ತಬಹುದು. ಆದರೆ ಜನರು ಅದನ್ನು ಸಂಭವಿಸಲು ಬಿಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಉನ್ನತ ನಾಯಕರು ಜಮ್ಮುವಿನಲ್ಲಿ ಮಾಡುವಂತೆ ಕಾಶ್ಮೀರದಲ್ಲಿ ಏಕೆ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಕಣಿವೆಯಲ್ಲಿ ಅವರಿಗೆ ಏನೂ ದಕ್ಕುವುದಿಲ್ಲ ಎಂದು ಬಿಜೆಪಿಗೆ ತಿಳಿದಿದೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂಓದಿ:ಅರ್ಕಾವತಿ ಬಡಾವಣೆ | ಸಿದ್ದಾಮಯ್ಯ v/s ತಾವರ್‌ಚಂದ್ ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧ!
“ಬಿಜೆಪಿಗೆ ಕಾಶ್ಮೀರದಲ್ಲಿ ಏನೂ ದಕ್ಕುವುದಿಲ್ಲ. ಮುಸ್ಲಿಮರ ಬಗ್ಗೆ ಬಿಜೆಪಿಯ ಧೋರಣೆ ನಮಗೆ ಚೆನ್ನಾಗಿ ತಿಳಿದಿದೆ. ದೇಶದ ಹದಿನಾರು ಪ್ರತಿಶತದಷ್ಟು ಜನಸಂಖ್ಯೆಯ ಮುಸ್ಲಿಮಲ್ಲಿ, ಅವರಿಗೆ (ಬಿಜೆಪಿ ನಾಯಕರಿಗೆ) ಒಬ್ಬರನ್ನೂ ಹುಡುಕಲಾಗಲಿಲ್ಲ. ಈ ಜನಸಂಖ್ಯೆಗೆ ಯಾವುದೇ ಪ್ರಾತಿನಿಧ್ಯವಿಲ್ಲದಿರುವಾಗ, ಅವರು ಮುಸ್ಲಿಮರ ಬಗ್ಗೆ ಯಾವ ರೀತಿಯ ಚಿಂತನೆಯನ್ನು ಹೊಂದಿದ್ದಾರೆಂದು ನಮಗೆ ತಿಳಿದಿದೆ” ಎಂದು ಅಬ್ದುಲ್ಲಾ ಹೇಳಿದ್ದಾರೆ.
ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಜಮ್ಮು ಕಾಶ್ಮೀರದಲ್ಲಿ “ಮೂರು ಕುಟುಂಬಗಳ ಆಡಳಿತ” ನಡೆಯುತ್ತಿದೆ ಎಂದು ಪ್ರಚಾರ ಮಾಡುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಆರೋಪಿಸಿದ್ದಾರೆ.
“ಕಳೆದ ಐದು ವರ್ಷಗಳಲ್ಲಿ ಜಮ್ಮು ಕಾಶ್ಮೀರಕ್ಕೆ ಏನೂ ಸಿಕ್ಕಿಲ್ಲ. ಬಿಜೆಪಿಗೆ ತೋರಿಸಲು ಏನೂ ಇಲ್ಲ. ಆದ್ದರಿಂದ ಪ್ರಧಾನಿ ಮತ್ತು ಗೃಹ ಸಚಿವರು ಮೂರು ಕುಟುಂಬಗಳನ್ನು ಗುರಿಯಾಗಿಸುತ್ತಿದ್ದಾರೆ. ಅವರು ಏನಾದರೂ ಮಾಡಿದ್ದರೆ ಅವರು ಇದನ್ನು ಮಾಡಬೇಕಾಗಿರಲಿಲ್ಲ” ಅವರು ಹೇಳಿದ್ದಾರೆ.
ಇದನ್ನೂಓದಿ: ಅಲ್-ಜಝೀರಾ ಕಚೇರಿಗೆ ದಾಳಿ ನಡೆಸಿದ ಇಸ್ರೇಲಿ ಪಡೆ : 45 ದಿನಗಳೊಳಗೆ ಮುಚ್ಚುವಂತೆ ಆದೇಶ
ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ 2014 ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷ ಕಡಿಮೆ ಮತದಾನದ ಆಗರುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
“2014 ಕ್ಕಿಂತ ಕಡಿಮೆ ಮತದಾನ ನಡೆದ ಕೆಲವು ಕ್ಷೇತ್ರಗಳಿವೆ. ಉದಾಹರಣೆಗೆ, ನೂರಾಬಾದ್ (ಈಗ ಡಿ ಎಚ್ ಪೋರಾ) ಭಾಗದಲ್ಲಿ 2014 ರಲ್ಲಿ ಶೇಕಡಾ 80 ರಷ್ಟು ಮತದಾನವಾಗಿತ್ತು ಆದರೆ ಈ ಬಾರಿ ಅದು ಶೇಕಡಾ 20 ರಷ್ಟು ಕಡಿಮೆಯಾಗಿದೆ (ಶೇ 68). ಈ ಬಾರಿ ಬಹಿಷ್ಕಾರ ಇಲ್ಲದಿದ್ದರೂ ಅವರ ಪ್ರಕಾರ ಎಲ್ಲವೂ ಸಹಜವಾಗಿದ್ದರೂ ಈ ಬಾರಿ ಏಕೆ ಹೀಗಾಯಿತು ಎಂಬುದನ್ನು ಈಗಿನ ಸರಕಾರ ಯೋಚಿಸಬೇಕಿದೆ” ಎಂದಿದ್ದಾರೆ.
ಸೋಮವಾರ ರಾಹುಲ್ ಗಾಂಧಿಯವರ ಕಾಶ್ಮೀರ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯನ್ನು ಎದುರಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಇನ್ನೂ ಒಂದೆರಡು ಭೇಟಿ ನೀಡುವಂತೆ ಸಲಹೆ ನೀಡಿದ್ದೇನೆ. ಇದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ದಲಿತರಿಗೆ ಅಧಿಕಾರ ಸಿಕ್ಕಾಗ ಕೇಳುವಷ್ಟು ಪ್ರಶ್ನೆಗಳನ್ನು ಬೇರೆಯವರಿಗೆ ಸಿಕ್ಕಾಗ ಕೇಳಲ್ಲ: ಹೆಚ್.ಡಿ. ಉಮಾಶಂಕರ


