ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮದಲ್ಲಿ 17 ಜನರು ನಿಗೂಢವಾಗಿ ಸಾವನ್ನಪ್ಪಿದ ನಂತರ ರಾಜ್ಯದ ಅಧಿಕಾರಿಗಳು ಬುಧವಾರ ಅದನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಡಿಸೆಂಬರ್ 7 ರಿಂದ, ನಾಲ್ಕು ಹಂತಗಳಲ್ಲಿ ಗ್ರಾಮ ಮೂರು ಪರಸ್ಪರ ಸಂಬಂಧ ಹೊಂದಿರುವ ಕುಟುಂಬಗಳ ಸದಸ್ಯರು ಸಾವಿಗೀಡಾಗಿದ್ದು, ಇದರಲ್ಲಿ 13 ಮಂದಿ ಮಕ್ಕಳಾಗಿದ್ದಾರೆ. ಜಮ್ಮು ಕಾಶ್ಮೀರ
ಈ ನಡುವೆ, ಇಜಾಜ್ ಅಹ್ಮದ್ ಎಂದು ಗುರುತಿಸಲಾದ 24 ವರ್ಷದ ವ್ಯಕ್ತಿಯನ್ನು ಮಂಗಳವಾರ ಸಂಜೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಬುಧವಾರದಂದು ಅಧಿಕಾರಿಗಳು ಬಾಧಾಲ್ ಅನ್ನು ಮೂರು ಕಂಟೈನ್ಮೆಂಟ್ ವಲಯಗಳಾಗಿ ವಿಂಗಡಿಸಿದ್ದು, ಮೊದಲನೆ ವಲಯದಲ್ಲಿ ಸಾವುಗಳು ಸಂಭವಿಸಿದ ಎಲ್ಲಾ ಕುಟುಂಬಗಳನ್ನು ಒಳಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ.
ನರಮಂಡಲದ ಮೇಲೆ ಕಾರ್ಯನಿರ್ವಹಿಸುವ ವಿಷದಿಂದಾಗಿ (Neurotoxin) ಸಾವುಗಳು ಸಂಭವಿಸಿವೆ ಎಂದು ವೈದ್ಯರು ಹೇಳಿದ್ದಾರೆ. ಆದರೂ, ವ್ಯಾಪಕ ಪರೀಕ್ಷೆಯ ಹೊರತಾಗಿಯೂ ಇದಕ್ಕೆ ಸ್ಪಷ್ಟ ಕಾರಣವನ್ನು ತಜ್ಞರು ನೀಡಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಪೀಡಿತ ಕುಟುಂಬಗಳ ಮನೆಗಳನ್ನು ಮುಚ್ಚಲಾಗುತ್ತದೆ ಮತ್ತು ಗೊತ್ತುಪಡಿಸಿದ ಅಧಿಕಾರಿಗಳಿಂದ ಅನುಮತಿ ಪಡೆಯದ ಹೊರತು, ಅವರ ಕುಟುಂಬ ಸದಸ್ಯರು ಸೇರಿದಂತೆ ಎಲ್ಲಾ ವ್ಯಕ್ತಿಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ” ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ರಾಜೌರಿ) ರಾಜೀವ್ ಕುಮಾರ್ ಖಜುರಿಯಾ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಎರಡನೇ ವಲಯವನ್ನು ಸತ್ತವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ನಿವಾಸಿಗಳ ಮನೆಗಳನ್ನು ಒಳಗೊಂಡಿದೆ. ಅವರ ಮೇಲ್ವಿಚಾರಣೆಗಾಗಿ ರಾಜೌರಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುವುದು ಎಂದು ವರದಿ ಹೇಳಿದೆ. ಮೂರನೇ ವಲಯವು ಇತರ ಎಲ್ಲಾ ಮನೆಗಳನ್ನು ಒಳಗೊಂಡಿದೆ.
CM @OmarAbdullah visited Badhaal village to offer condolences to the grieving families of 17 victims. He assured full support from the government and promised justice. A thorough investigation is underway, with an SIT and a central team working to uncover the cause of this… pic.twitter.com/pL4p425068
— Information & PR, J&K (@diprjk) January 21, 2025
ಕಂಟೈನ್ಮೆಂಟ್ ವಲಯಗಳೊಳಗಿನ ಕುಟುಂಬಗಳಿಗೆ ನೀಡಲಾಗುವ ಎಲ್ಲಾ ಊಟಗಳನ್ನು ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಪ್ರೋಟೋಕಾಲ್‌ಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುತ್ತದೆ. “ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈ ಕಂಟೈನ್ಮೆಂಟ್ ವಲಯಗಳ ವ್ಯಾಪ್ತಿಯಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಕೂಟಗಳನ್ನು ಇಲ್ಲಿ ನಿಷೇಧಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಪೀಡಿತ ಕುಟುಂಬಗಳು ಮತ್ತು ಅವರ ನಿಕಟ ಸಂಪರ್ಕದಲ್ಲಿರುವವರು ಜಿಲ್ಲಾಡಳಿತ ಒದಗಿಸಿದ ಆಹಾರ ಮತ್ತು ನೀರನ್ನು ಮಾತ್ರ ಸೇವಿಸುವುದು ಕಡ್ಡಾಯವಾಗಿದೆ. ಮನೆಗಳಲ್ಲಿ ಲಭ್ಯವಿರುವ ಯಾವುದೇ ಇತರ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.” ಎಂದು ಆದೇಶಿಸಲಾಗಿದೆ. ಜಮ್ಮು ಕಾಶ್ಮೀರ
ಜಿಲ್ಲಾ ಅಧಿಕಾರಿಗಳು ಎಲ್ಲಾ ಆಹಾರ ಮತ್ತು ನೀರಿನ ಸರಬರಾಜುಗಳನ್ನು ತಕ್ಷಣ ಬದಲಾಯಿಸಲು ಆದೇಶಿಸಿದ್ದಾರೆ. ಸಾವುಗಳು ನಡೆದ ಮನೆಗಳಲ್ಲಿರುವ ಎಲ್ಲಾ ಖಾದ್ಯ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮಂಗಳವಾರದಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗ್ರಾಮಕ್ಕೆ ಭೇಟಿ ನೀಡಿ ತನಿಖೆ ನಡೆಯುತ್ತಿದೆ ಎಂದು ನಿವಾಸಿಗಳಿಗೆ ಭರವಸೆ ನೀಡಿದ್ದಾರೆ. “ಕೇಂದ್ರವು ಮಾದರಿಗಳನ್ನು ಸಂಗ್ರಹಿಸಿದ್ದು, ತನಿಖೆಗಾಗಿ ತಂಡವನ್ನು ಸಹ ನಿಯೋಜಿಸಿದೆ” ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
“ನಾಗರಿಕ ಆಡಳಿತ, ಪೊಲೀಸ್ ಮತ್ತು ಭಾರತ ಸರ್ಕಾರದ ಜಂಟಿ ಪ್ರಯತ್ನಗಳು ಏನಾಯಿತು ಎಂಬುದರ ಕುರಿತು ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತವೆ ಎಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ.” ಎಂದು ಸಿಎಂ ಹೇಳಿದ್ದಾರೆ.
ಘಟನೆಯು ಮೊದಲ ಬಾರಿಗೆ ಡಿಸೆಂಬರ್ 7 ರಂದು ಸಮುದಾಯಿಕ ಭೋಜನದ ನಂತರ ಒಂದೇ ಕುಟುಂಬದ ಏಳು ಸದಸ್ಯರು ಅಸ್ವಸ್ಥರಾಗಿದ್ದರು. ಇದರ ನಂತರ ಈ ವಿಷಯ ಬೆಳಕಿಗೆ ಬಂದಿದ್ದು, ಈ ವೇಳೆ ಅವರಲ್ಲಿ ಐದು ಮಂದಿ ಸಾವನ್ನಪ್ಪಿದ್ದರು.
ಡಿಸೆಂಬರ್ 2 ರಂದು ಫಜಲ್ ಹುಸೇನ್ ಎಂಬ ನಿವಾಸಿಯ ಮನೆಯಲ್ಲಿ ಮದುವೆಯ ಹಬ್ಬದ ಭಾಗವಾಗಿ ಸಮುದಾಯಿಕ ಭೋಜನವನ್ನು ಸಹ ನೀಡಲಾಗಿತ್ತು. ಫಜಲ್ ಮತ್ತು ಅವರ ಮೂವರು ಮಕ್ಕಳು ದಿನಗಳ ನಂತರ ನಿಧನರಾಗಿದ್ದರು. ಜಮ್ಮು ಕಾಶ್ಮೀರ
ಜನವರಿ 9 ರಂದು, ನಿವಾಸಿಗಳು ಶೋಕ ಆಚರಿಸುವ ವೇಳೆ ಫಜಲ್ ಅವರ ಮನೆಯಲ್ಲಿ ಮತ್ತೊಂದು ಸಮುದಾಯಿಕ ಭೋಜನವನ್ನು ನೀಡಲಾಗಿತ್ತು. ಈ ವೇಳೆ ಹಲವಾರು ಗ್ರಾಮಸ್ಥರು ಈ ಕೂಟಗಳಲ್ಲಿ ಭಾಗವಹಿಸಿದ್ದರು, ಆದರೆ ಕೇವಲ ಮೂರು ಕುಟುಂಬಗಳ ಸದಸ್ಯರು ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ.
ಜನವರಿ 15 ರಂದು, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಈ ವಿಷಯದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಕೀಯ ತಜ್ಞರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.
ಇದನ್ನೂಓದಿ: ಮಂಗಳೂರು | ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ಮೂವರ ಬಂಧನ


