ಜಮ್ಮು ಕಾಶ್ಮೀರಕ್ಕೆ ಕಾಲಮಿತಿಯೊಳಗೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಜಮ್ಮು ಕಾಶ್ಮೀರದಲ್ಲಿ ಶಿಕ್ಷಣ ತಜ್ಞ ಜಹೂರ್ ಅಹ್ಮದ್ ಭಟ್ ಮತ್ತು ಸಾಮಾಜಿಕ-ರಾಜಕೀಯ ಹೋರಾಟಗಾರ ಖುರ್ಷೈದ್ ಅಹ್ಮದ್ ಮಲಿಕ್ ಅವರು ಈ ಬಗ್ಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ಮನವಿ ಸಲ್ಲಿಸಿದ್ದು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
“ರಾಜ್ಯ ಸ್ಥಾನಮಾನವನ್ನು ನೀಡುವ ಬಗ್ಗೆ ಸಲ್ಲಿಕೆಯಾದ ಎಂಎ (ವಿವಿಧ ಅರ್ಜಿ) ಇದೆ. ಈ ಬಗ್ಗೆ (ಕಳೆದ ವರ್ಷದ ತೀರ್ಪಿನಲ್ಲಿ) ಸಮಯಕ್ಕೆ ಬದ್ಧವಾಗಿರಬೇಕು ಎಂದು ಹೇಳಲಾಗಿದೆ” ಎಂದು ಹಿರಿಯ ವಕೀಲರು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸಿಜೆಐ, ನಾನು ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ
2023ರ ಡಿಸೆಂಬರ್ 11 ರಂದು, ಹಿಂದಿನ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು ಮತ್ತು ಸೆಪ್ಟೆಂಬರ್ 2024 ರೊಳಗೆ ಅಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವಂತೆ ಆದೇಶಿಸಿತು. ಅದೇ ವೇಲೆ ಜಮ್ಮು ಕಾಶ್ಮೀರದ ರಾಜ್ಯತ್ವವನ್ನು “ಆದಷ್ಟು ಬೇಗ” ಮರುಸ್ಥಾಪಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.
ಇದನ್ನೂ ಓದಿ: ‘ಕಣ್ಣು ತೆರೆದ ನ್ಯಾಯ..’: ಲೇಡಿ ಜಸ್ಟಿಸ್ ನೂತನ ಪ್ರತಿಮೆ ಅನಾವರಣಗೊಳಿಸಿದ ಸುಪ್ರೀಂ ಕೋರ್ಟ್, ಕತ್ತಿ ಬದಲಿಗೆ ಸಂವಿಧಾನ
‘ಕಣ್ಣು ತೆರೆದ ನ್ಯಾಯ..’: ಲೇಡಿ ಜಸ್ಟಿಸ್ ನೂತನ ಪ್ರತಿಮೆ ಅನಾವರಣಗೊಳಿಸಿದ ಸುಪ್ರೀಂ ಕೋರ್ಟ್, ಕತ್ತಿ ಬದಲಿಗೆ ಸಂವಿಧಾನ


