Homeಚಳವಳಿಜನಾಗ್ರಹ ಆಂದೋಲನ: ನಾಳೆ ವಸತಿ ಸಚಿವರ ಮನೆ ಮುಂದೆ ಖಾಲಿ ಚೀಲ ಸುಟ್ಟು ಪ್ರತಿಭಟನೆ

ಜನಾಗ್ರಹ ಆಂದೋಲನ: ನಾಳೆ ವಸತಿ ಸಚಿವರ ಮನೆ ಮುಂದೆ ಖಾಲಿ ಚೀಲ ಸುಟ್ಟು ಪ್ರತಿಭಟನೆ

- Advertisement -

ಕೊರೊನಾ ಪರಿಹಾರವಾಗಿ ಸಮಗ್ರ ಪ್ಯಾಕೇಜ್‌‌ ನೀಡಬೇಕು ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಜೂನ್‌ 22 ರ ಮಂಗಳವಾರ (ನಾಳೆ) ದಂದು ವಸತಿ ಸಚಿವ ವಿ.ಸೋಮಣ್ಣ ಅವರ ನಿವಾಸದ ಎದುರು ಖಾಲಿ ಚೀಲಗಳನ್ನು ಸುಟ್ಟು ಪ್ರತಿಭಟನೆ ನಡೆಯಲಿದೆ.

ಪ್ರತಿಭಟನೆಯು ಬೆಂಗಳೂರಿನಲ್ಲಿ ಮಾತ್ರವಲ್ಲದೆ, ರಾಜ್ಯದ ಇತರ ಕಡೆಗಳಲ್ಲೂ ಜಿಲ್ಲೆಗಳ ಉಸ್ತುವಾರಿ ಮಂತ್ರಿ ಹಾಗೂ ಶಾಸಕರುಗಳ ಕಛೇರಿಯ ಮುಂದೆಯು ನಡೆಯಲಿದೆ. ಅದರಂತೆ ಬೆಂಗಳೂರಿನ ಹೋರಾಟವು ಸಚಿವ ಸೋಮಣ್ಣ ಅವರ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸ ಮುಂದೆ ನಡೆಯಲಿದೆ ಎಂದು ‘ಜನಾಗ್ರಹ ಆಂದೋಲನ’ದ ಸಂಚಾಲಕಿಯಾದ ಬಿ.ಟಿ ಲಲಿತ ನಾಯಕ್ ಹೇಳಿದ್ದಾರೆ.

ಇದನ್ನೂ ಓದಿ: ಸಂಪೂರ್ಣ ಪ್ಯಾಕೇಜ್‌ಗಾಗಿ ಆಗ್ರಹ: ಮುಖ್ಯಮಂತ್ರಿಯವರ ಮನೆಯಡೆಗೆ ಜನಾಗ್ರಹ ನಡಿಗೆ

“ಕೊರೊನಾ ಎರಡನೇ ಅಲೆ ಅಪ್ಪಳಿಸಿದಾಗಿನಿಂದ ಅದನ್ನು ಎದುರಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುವ ಜನಸಾಮಾನ್ಯರ ದನಿಯಾಗಿ ಜನಾಗ್ರಹ ಆಂದೋಲನವು ರೂಪತಳೆದಿದೆ. ರಾಜ್ಯದ ನೂರಾರು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ ಮತ್ತು ಎರಡು ಸುತ್ತಿನ ರಾಜ್ಯವ್ಯಾಪಿ ಪ್ರತಿಭಟನೆಗಳೂ ನಡೆದಿವೆ. ಜನಾಗ್ರಹ, ಜನಪರ ಸಂಘಟನೆಗಳು ಹಾಗೂ ಮಾಧ್ಯಮಗಳು ಮಾಡಿದ ಒತ್ತಡಗಳಿಂದಾಗಿ ಎರಡು ಪ್ಯಾಕೇಜುಗಳನ್ನು ಸರ್ಕಾರ ಘೋಷಿಸಿದೆ, ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇವು ಏನಕ್ಕೂ ಸಾಲದ ಅರೆಮನಸ್ಸಿನ ಅರೆಬರೆ ಕ್ರಮಗಳಾಗಿವೆ” ಎಂದು ಜನಾಗ್ರಹ ಆಂದೋಲನವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

“ಕುಟುಂಬಗಳು ಕುಸಿದು ಕೂತಿದ್ದು, ಬಂಧುಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಮುಳುಗಿವೆ. ಆರ್ಥಿಕತೆ ನೆಲಕಚ್ಚಿದ್ದು ಇನ್ನೂ ಅನೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುತ್ತಿದೆ. ಇದರಿಂದಾಗಿ ದುಡಿಮೆ ಪ್ರಾರಂಭವಾಗುವ, ಪರಿಸ್ಥಿತಿ ಸುಧಾರಿಸುವ ಆಶಾಭಾವನೆಯು ದೂರವಿದೆ. ಅಲ್ಲದೆ ಮೂರನೇ ಅಲೆಯ ಕತ್ತಿ ನೆತ್ತಿಯ ಮೇಲೆ ತೂಗುತ್ತಿದೆ. ಇದೊಂದು ಅಸಮಾನ್ಯ ಪರಿಸ್ಥಿತಿ ಆಗಿದೆ” ಎಂದು ಹೇಳಿಕೆ ತಿಳಿಸಿದೆ.

“ಈ ಅಸಮಾನ್ಯ ಪರಿಸ್ಥಿತಿಯು ಅಸಮಾನ್ಯ ಕ್ರಮಗಳನ್ನು ಕೇಳುತ್ತಿದ್ದು, ಆದರೆ ಸರ್ಕಾರ ಅದನ್ನು ದಿಟ್ಟವಾಗಿ ಎದುರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಇಡೀ ರಾಜ್ಯ ಒಕ್ಕೊರಲಿನೊಂದಿಗೆ ಸರ್ಕಾರಕ್ಕೆ ಕೇಳಿಸುವಂತೆ, ಸರ್ಕಾರ ಕಾರ್ಯಪ್ರವೃತ್ತವಾಗುವಂತೆ ಮಾಡಬೇಕಿದೆ. ಇದರಲ್ಲಿ ಜನ ಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ. ಜನಸಾಮಾನ್ಯರು ಮಾತ್ರವಲ್ಲ ಜನಪ್ರತಿನಿಧಿಗಳಾಗಿ ಅವರೂ ಸಹ ಸರ್ಕಾರವನ್ನು ಒತ್ತಾಯಿಸಬೇಕಿದೆ. ಹಾಗಾಗಿ ರಾಜ್ಯವ್ಯಾಪಿಯಾಗಿ ಉಸ್ತುವಾರಿ ಸಚಿವರು ಮತ್ತು ಬಿಜೆಪಿ ಶಾಸಕರ ಕಛೇರಿಗಳ ಮುಂದೆ ಜನಾಗ್ರಹ ನಡೆಸುತ್ತಿದ್ದೇವೆ” ಎಂದು ಜನಾಗ್ರಹ ಆಂದೋಲನ ಸಂಚಾಲನಾ ಸಮಿತಿ ತಿಳಿಸಿದೆ.

ಇದನ್ನೂ ಓದಿ: ಸಮಗ್ರ ಪ್ಯಾಕೇಜ್ ನೀಡದಿದ್ದರೆ ಸಿಎಂ ನಿವಾಸದ ಮುಂದೆ ಖಾಲಿ ಚೀಲ ಹಿಡಿದು ಪ್ರತಿಭಟನೆ: ಜನಾಗ್ರಹ ಆಂದೋಲನ ಎಚ್ಚರಿಕೆ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial