Homeಮುಖಪುಟಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ಜಾರ್ಖಂಡ್‌ನಲ್ಲಿ ಹುಲ್ ಜೋಹಾರ್! ಬಿರ್ಸಾ ನೆಲ ಆಯ್ದುಕೊಂಡಿದ್ದು ಜಲ್ ಜಂಗಲ್ ಜಮೀನ್..

ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ

- Advertisement -
- Advertisement -

ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರಕಾರವು ಜಾರ್ಖಂಡ್‌ನಲ್ಲಿ ಸೋಲು ಕಂಡಿದೆ. ಇದನ್ನು ಆರ್‌ಎಸ್‌ಎಸ್‌ನ ಹಿಂದುತ್ವ ಪ್ರಯೋಗಶಾಲೆಗಳಲ್ಲಿ ಒಂದೆಂದೂ ಕರೆಯಲಾಗಿತ್ತು. ಹಾಗಾಗಿ ಈ ಚುನಾವಣೆ ಕೇವಲ ರಾಜ್ಯದ ಆದಿವಾಸಿ ವರ್ಗಕ್ಕೆ ಸೇರದ ಮೊದಲ ಮುಖ್ಯಮಂತ್ರಿಯ ನಿರ್ಗಮನವಷ್ಟೇ ಅಲ್ಲದೇ, ಬಿಜೆಪಿಯ ಸಾಮಾಜಿಕ ಸಮೀಕರಣದ ವಿನ್ಯಾಸಗಳಿಗೂ ಸೋಲು ಎನ್ನಬಹುದಾಗಿದೆ. ಇದು ಕೇವಲ ಬಿಜೆಪಿಯ ಬೆಂಬಲಿಗರಿಗೆ ಮಾತ್ರವಲ್ಲ, ಮೋದಿ ಮತ್ತು ಅಮಿತ್ ಶಾರ ಚಾಣಕ್ಯ ನೀತಿ ಮತ್ತು ಅವರ ಸೋಲಲಾರರು ಎಂದು ನಂಬಿದವರಿಗೂ ಆಘಾತ ತಂದುಕೊಟ್ಟಿದೆ.

ಆಡಳಿತವಿರೋಧಿ ಅಲೆ, ಆದಿವಾಸಿ ಸಮುದಾಯಕ್ಕೆ ಸೇರದ ಮುಖ್ಯಮಂತ್ರಿ ಮತ್ತು ಬುಡಕಟ್ಟು ನೀತಿಗಳು

ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯಗಳ ಅನುಪಾತ 26-30%ರಷ್ಟು. ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ 28 ಕ್ಷೇತ್ರಗಳಲ್ಲಿ ಜೆಎಮ್‌ಎಮ್-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು 25ರಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ ಬಿಜೆಪಿಯು 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.

ಅಲ್ಲಿ ಆಗಿದ್ದೇನು?

ಆದಿವಾಸಿಗಳ ಭೂಮಿಯನ್ನು ಕಬಳಿಸಲು ಸುಲಭವಾಗುವಂತೆ ಮಾಡಿದ ರಘುಬರ್ ದಾಸ್ ಅವರ ಕ್ರಮಗಳಿಂದ ಸಿಟ್ಟು ಮತ್ತು ತೀವ್ರ ಅಸಮಾಧಾನ ಉಂಟಾಗಿತ್ತು. ಪರಿಶಿಷ್ಟ ಸಮುದಾಯಗಳ ಭೂಕಬಳಿಕೆಯನ್ನು ತಡೆಯಲು ಇದ್ದ ಬುಡಕಟ್ಟು ಟೆನನ್ಸಿ ಕಾಯಿದೆಗೆ 2017ರಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಿದರು. ಇದರಿಂದ ಬುಡಕಟ್ಟು ಸಮುದಾಯಗಳ ವಿಶ್ವಾಸವನ್ನು ಕಳೆದುಕೊಳ್ಳವಂತಾಯಿತು. ಈ ಕಾಯಿದೆಯನ್ನು ಬದಲಿಸಿ, ಆದಿವಾಸಿ ಭೂಮಿಯ ವಾಣಿಜ್ಯ ಬಳಕೆಗಾಗಿ ಛೋಟಾನಾಗಪುರ್ ಟೆನನ್ಸಿ ಕಾಯಿದೆ (ಸಿಎನ್‌ಟಿಏ) ಮತ್ತು ಸಂಥಲ್ ಪರಗನಾಸ್ ಟೆನನ್ಸಿ ಕಾಯಿದೆ (ಎಸ್‌ಪಿಟಿಏ)ಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಿದರು. ಈ ಕ್ರಮವನ್ನು ಕಾರ್ಪೋರೇಟ್ ಪರ ಮತ್ತು ಆದಿವಾಸಿ ವಿರೋಧಿ ಎಂದು ನೋಡಲಾಯಿತು. ಕಾಂಗ್ರೆಸ್-ಜೆಮ್‌ಎಮ್ಎಮ್‌ ಪಕ್ಷಗಳು ಅಲ್ಲಿಯ ಚರ್ಚಿನೊಂದಿಗೆ ಸೇರಿಕೊಂಡು ಈ ತಿದ್ದುಪಡಿಗಳನ್ನು ವಿರೋಧಿಸಿದವು. ಆದಿವಾಸಿ ಸಮುದಾಯಗಳ ವಿರೋಧ ಮತ್ತು ಸಿಟ್ಟನ್ನು ನೋಡಿ ಲೋಕಸಭೆ ಚುನಾವಣೆಗೆ ಮುನ್ನ ಈ ತಿದ್ದುಪಡಿಗಳನ್ನು ಕೈಬಿಡಲಾಯಿತು. ಆದರೆ ಅಷ್ಟರಲ್ಲಿ ಅಲೆ ತಿರುಗಿತ್ತು.

ಹೇಮಂತ್‌ ಸೊರೆನ್‌ ಮತ್ತು ಶಿಬು ಸೊರೆನ್‌

ಈ ತಿದ್ದುಪಡಿಗಳು ಸೃಷ್ಟಿಸಿದ ಆತಂಕಗಳು ‘ಪಥಾಲ್‌ರ‍್ಹಿ ಆಂದೋಲನ’ ಎಂಬ ಚಳವಳಿ (ಹುಲ್ ಜೋಹಾರ್ ಎಂಬುದು ಅವರ ಘೋಷವಾಕ್ಯ) ಹುಟ್ಟಲು ಕಾರಣವಾದವು. ಈ ಚಳವಳಿಯನ್ನು ಹತ್ತಿಕ್ಕಲು ದಾಸ್ ಸರಕಾರವು ಕನಿಷ್ಠ 10,000 ಜನರ ಮೇಲೆ ಪ್ರಕರಣ ದಾಖಲಿಸಿತು; ಅವರಲ್ಲಿ ಅನೇಕರು ಇನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಹೋರಾಟಗಾರ್ತಿ ದಯಾಮಣಿ ಬಾರ್ಲಾ ಚುನಾವಣೆಗೆ ಸ್ಪರ್ಧಿಸಿದ ಕ್ಷೇತ್ರದ ಜಿಲ್ಲೆ ಖುಂಟಿಯಲ್ಲಿಯೇ 26 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ ದೇಶದ್ರೋಹ, ಅಪಹರಣ, ಬಲಾತ್ಕಾರ ಮತ್ತು ಇತರ ಗಂಭೀರ ಆರೋಪಗಳನ್ನು ಆದಿವಾಸಿ ಮುಖಂಡರ ವಿರುದ್ಧ ದಾಖಲಿಸಲಾಗಿದೆ. ಪೊಲೀಸ್ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುತ್ತ ತಮ್ಮ ಆಧಾರ್ ಕಾರ್ಡಗಳನ್ನು ನೆಲದಲ್ಲಿ ಹೂತು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಮೀಸಲು ಕ್ಷೇತ್ರದಿಂದಲೇ ಬಿಜೆಪಿಯ ರಾಜ್ಯ ಅಧ್ಯಕ್ಷ ಲಕ್ಷ್ಮಣ ಗಿಲುವಾ ಸೋತಿರುವುದು ಆದಿವಾಸಿಗಳ ಸಿಟ್ಟಿನ ಪ್ರಮಾಣವನ್ನು ತೋರಿಸುತ್ತದೆ. ಪಥಾಲ್‌ರ‍್ಹಿ ಆಂದೋಲನದಲ್ಲಿ ಪಾಲ್ಗೊಂಡ ಜನರ ಮೇಲೆ ಪೊಲೀಸರು ಕೈಗೊಂಡ ಕ್ರಮಕ್ಕೆ ಅವರು ಗಟ್ಟಿಯಾಗಿ ಸಮರ್ಥಕರಾಗಿದ್ದರು.

ದಯಾಮಣಿ ಬಾರ್ಲಾ

ದೇಶದಲ್ಲೇ ಅತಿ ಹೆಚ್ಚು ಗುಂಪು ಹಲ್ಲೆ (ಮಾಬ್ ಲಿಂಚಿಂಗ್)ಗಳು ಆದ ರಾಜ್ಯ ಝಾರ್ಖಂಡ್; 20 ಇಂತಹ ಪ್ರಕರಣಗಳು ದಾಖಲಾಗಿವೆ. ಮತಾಂತರ ಮತ್ತು ಗೋ ಸಂಬಂಧಿತ ವಿಷಯಗಳ ಬಗ್ಗೆ ಮುಖ್ಯಮಂತ್ರಿ ತೋರಿದ ಸೈದ್ಧಾಂತಿಕ ಪ್ರತಿಪಾದನೆಯೂ ಅಲ್ಲಿಯ ಹಿಂದು, ಕ್ರಿಶ್ಚಿಯನ್ ಮತ್ತು ಆದಿವಾಸಿ ಸಮುದಾಯಗಳಿಗೆ ಒಪ್ಪಿಗೆಯಾಗಲಿಲ್ಲ.

ಮೋದಿ ಅಲೆ ಕಣ್ಮರೆಯಾಗುತ್ತಿದೆಯೇ?

ಇದು ಕೇವಲ ಜನಪ್ರಿಯತೆ ಕಳೆದುಕೊಂಡ ಮುಖ್ಯಮಂತ್ರಿಯ ಸೋಲೇ ಹೊರತು ಮೋದಿ ಅಲೆಯ ಬಗ್ಗೆ ಇದು ಏನನ್ನೂ ಹೇಳುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪ್ರಚಾರವನ್ನು ನೋಡಿದಾಗ, ಮೋದಿ ಮತ್ತು ಶಾ ಇಬ್ಬರೂ ಪ್ರತ್ಯೇಕವಾಗಿ 9 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಮ ಮಂದಿರದ ಬಗ್ಗೆ, ಆರ್ಟಿಕಲ್ 370ಅನ್ನು ಹಿಂಪಡೆದ ಬಗ್ಗೆ ತಮ್ಮ ಸಾಧನೆಗಳ ಬಗ್ಗೆ ಮತ್ತು ಕಾಂಗ್ರೆಸ್‌ನ ವಿಫಲತೆಗಳ ಬಗ್ಗೆ ಭಾಷಣ ಬಿಗಿದರು. ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗಲೇ ಕೆಲವು ರ‍್ಯಾಲಿಗಳಾದವು. ‘ಗಲಭೆ ಮಾಡುವವರನ್ನು ಅವರ ಬಟ್ಟೆ ನೋಡಿ ಗುರುತಿಸಬಹುದು’ ಎಂದು ಮೋದಿ ಧಾರ್ಮಿಕ ನೆಲೆಯ ಮೇಲೆ ವಿಭಜನಾ ತಂತ್ರವನ್ನೂ ಬಳಸಿದರು. ಈ ರ‍್ಯಾಲಿಗಳಲ್ಲಿ ಇವರು ತಲುಪಿದ 16 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಲ್ಲಿ ಸೋಲನ್ನು ಕಂಡಿದ್ದಾರೆ.

ಇದರೊಂದಿಗೆ ದೇಶಾದ್ಯಂತ ಪೌರತ್ವ ಕಾಯಿದೆ(ಸಿಏಏ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ವಿರುದ್ಧ ಆಗುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಫಲಿತಾಂಶಗಳು ಬಂದಿವೆ. ಹಾಗಾಗಿ ಈ ಪ್ರಯೋಗದ ರೂವಾರಿಗಳಾದ ಮೋದಿ-ಶಾ ಜೋಡಿಗೆ ಇದು ಡಬಲ್ ಹಿನ್ನಡೆಯಾಗಿದೆ.

ಇದರೊಂದಿಗೆ, ಅಸೆಂಬ್ಲಿ ಚುನಾವಣೆಗಳಲ್ಲಿ ಸ್ಥಳೀಯ ವಿಷಯಗಳ ಮೇಲೆಯೇ ಜನರು ಮತ ಚಲಾಯಿಸುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಭೂಮಿ ಹಕ್ಕುಗಳು ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ನಿರ್ಲಕ್ಷಿಸಿ ಆರ್ಟಿಕಲ್ 370, ರಾಮಮಂದಿರದಂತಹ ವಿಷಯಗಳನ್ನಿಟ್ಟುಕೊಂಡು ಪ್ರಚಾರ ಮಾಡಿದ ಬಿಜೆಪಿಗೆ ಇದು ಉತ್ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಅಂತಿಮವಾಗಿ ಒಂದಂತೂ ಸತ್ಯ; ರಾಜ್ಯಗಳಿಗೆ ಒಂದು ರೀತಿಯಲ್ಲಿ, ಲೋಕಸಭೆಗೆ ಇನ್ನೊಂದು ರೀತಿಯಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...