ವಿಶ್ವವಿದ್ಯಾಲಯದ ಆಕ್ಷೇಪದ ನಡುವೆಯೂ ಜೆಎನ್‌ಯು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಕುರಿತು ಬಿಬಿಸಿ ತಯಾರಿಸಿರುವ ‘ಇಂಡಿಯಾ – ದ ಮೋದಿ ಕ್ವಸ್ಚನ್’ ಸಾಕ್ಷ್ಯಚಿತ್ರವನ್ನು ಮಂಗಳವಾರ ರಾತ್ರಿ ಪ್ರದರ್ಶನ ಮಾಡಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದಿಂದ ಕ್ಯಾಂಪಸ್‌ನ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟಾಗಬಹುದು, ಆದ್ದರಿಂದ ಪ್ರದರ್ಶನವನ್ನು ರದ್ದುಗೊಳಿಸಬೇಕು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರು ಸೂಚನೆ ನೀಡಿದ್ದರು.
ವಿದ್ಯಾರ್ಥಿ ಸಂಘವು ರಾತ್ರಿ ಒಂಬತ್ತು ಗಂಟೆಗೆ ಸಾಕ್ಷ್ಯಚಿತ್ರದ ಪ್ರದರ್ಶನ ಎಂದು ಹೇಳಿಕೊಂಡಿತ್ತು. ಅದಕ್ಕಾಗಿ ವಿದ್ಯಾರ್ಥಿಗಳು ತಯಾರಿ ಕೂಡಾ ನಡೆಸಿದ್ದರು. ಆದರೆ, ಸುಮಾರು 8:30 ಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಶ್ವವಿದ್ಯಾಲಯದ ವಿದ್ಯುತ್ ಕಡಿತ ಮಾಡಿತ್ತು. ಹೀಗಾಗಿ ನೆರೆದಿದ್ದ ವಿದ್ಯಾರ್ಥಿಗಳು ತಮ್ಮ ತಮ್ಮ ಲ್ಯಾಪ್‌ಟಾಪ್ ಮೂಲಕ ಸ್ಥಳದಲ್ಲೇ ತಮ್ಮ ಸ್ನೇಹಿತರ ಗುಂಪಿನೊಂದಿಗೆ ಬಿಬಿಸಿ ಸಾಕ್ಷ್ಯಚಿತ್ರವನ್ನು ನೋಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಾಕ್ಷ್ಯಚಿತ್ರ ಪ್ರದರ್ಶನಕ್ಕೂ ಮೊದಲು ಮಾತನಾಡಿದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್, “ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರ ಭಾರತದ ಯಾವ ಪ್ರದೇಶದಲ್ಲೂ ನಿಷೇಧವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ನೋಡಬಾರದು ಎಂದು ತಡೆಹಿಡಿದಿದ್ದು ಮಾತ್ರವಾಗಿದೆ. ಇದರರ್ಥ ಅದನ್ನು ನಿಷೇಧ ಎಂದಲ್ಲ. ಹೀಗಿರುವಾಗ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲು ಅನುಮತಿ ಯಾಕೆ ಪಡೆಯಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
.@aishe_ghosh at JNU tonight, after the power went off at the campus. She alleges that the JNU admin cut off the power and internet to stop the BBC documentary from being screened @DeccanHerald pic.twitter.com/D4L9KayXQ7
— amrita madhukalya (@visually_kei) January 24, 2023
“ಪ್ರಜಾಪ್ರಭುತ್ವ ದೇಶದಲ್ಲಿ ಇರುವ ನಮಗೆ ಸಾಕ್ಷ್ಯಚಿತ್ರವೊಂದನ್ನು ನೋಡುವ ಹಕ್ಕಿಲ್ಲವೆ? ಪ್ರಜಾಪ್ರಭುತ್ವದ ಮೂಲವೇ ಜೆಎನ್‌ಯು ವಿಶ್ವವಿದ್ಯಾಲಯದಂತಹ ಸ್ಥಳವಾಗಿದೆ. ಇಲ್ಲೇ ಪ್ರಜಾಪ್ರಭುತ್ವವನ್ನು ಯಾಕೆ ತುಳಿಯುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ನೋಡುತ್ತಿದ್ದ ವೇಳೆ ಬಿಜೆಪಿಯ ವಿದ್ಯಾರ್ಥಿಯ ಸಂಘಟನೆಯಾದ ಎಬಿವಿಪಿ ಗೂಂಡಗಳು ಕಲ್ಲೆಸತ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ನಡೆದಿದೆ ಎಂದು ವರದಿಯಾಗಿದೆ.
#JNU में #BBCDocumentary की स्क्रीनिंग के दौरान छात्रों में झड़प#ABVP के छात्रों ने चलाए पत्थर#themodiquestion pic.twitter.com/8WCdNhRcsA
— Newslaundry Hindi (@nlhindi) January 24, 2023
ವಿದ್ಯಾರ್ಥಿ ಸಂಘವು ಸಾಕ್ಷ್ಯಚಿತ್ರದ ಪ್ರದರ್ಶನ ನಡೆಸುತ್ತಿದೆ ಎಂದು ಘೋಷಿಸುತ್ತಿದ್ದಂತೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಜೆಎನ್‌ಯು ಆಡಳಿತ, “ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕರಪತ್ರವನ್ನು ಬಿಡುಗಡೆ ಮಾಡಿರುವುದು ಆಡಳಿತದ ಗಮನಕ್ಕೆ ಬಂದಿದೆ. ಈ ಕಾರ್ಯಕ್ರಮಕ್ಕೆ ಆಡಳಿತದಿಂದ ಯಾವುದೇ ಪೂರ್ವಾನುಮತಿ ಪಡೆದಿಲ್ಲ. ಇಂತಹ ಅನಧಿಕೃತ ಚಟುವಟಿಕೆಯು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಶಾಂತಿ ಮತ್ತು ಸಾಮರಸ್ಯವನ್ನು ಕದಡಬಹುದು. ಹೀಗಾಗಿ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು. ಅದು ವಿಫಲವಾದರೆ ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಕಟ್ಟುನಿಟ್ಟಾದ ಶಿಸ್ತು ಕ್ರಮವನ್ನು ಪ್ರಾರಂಭಿಸಬಹುದು” ಎಂದು ಎಚ್ಚರಿಸಿತ್ತು.
ಆದರೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯು ಅದನ್ನು ಪರಿಗಣಿಸದೆ ಅಧ್ಯಕ್ಷೆ ಐಷೆ ಘೋಷ್ ಅವರು,“ಅತಿದೊಡ್ಡ ‘ಪ್ರಜಾಪ್ರಭುತ್ವ’ದ ‘ಚುನಾಯಿತ ಸರ್ಕಾರ’ವು ‘ನಿಷೇಧಿಸಿದ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ನಮ್ಮೊಂದಿಗೆ ಸೇರಿ.” ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರೆ.
2002 ರ ಗುಜರಾತ್ ಗಲಭೆಗಳು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಡಿಯಲ್ಲಿ ಕೇಂದ್ರದ CAA ನಂತಹ ಕೆಲವು ನೀತಿಗಳನ್ನು ಒಳಗೊಂಡಿರುವ ಬಗ್ಗೆ “ಭಾರತ: ಮೋದಿ ಪ್ರಶ್ನೆ” ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರವು ಚರ್ಚಿಸಿದೆ. ಸಾಕ್ಷ್ಯಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, “ಸಾಕ್ಷ್ಯಚಿತ್ರವು ಪಕ್ಷಪಾತದಿಂದ ಕೂಡಿದ್ದು, ವಸ್ತುನಿಷ್ಠತೆಯ ಕೊರತೆ ಮತ್ತು ಇನ್ನೂ ಮುಂದುವರಿದ ವಸಾಹತುಶಾಹಿ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳಿತ್ತು.
#JNU #BBCDocumentary pic.twitter.com/UfXXeEUiip
— Komal Behl (@KomalBehl4) January 24, 2023
JNSU president #aishe_ghosh circulated QR code 🤔#BBCDocumentary #JNU #JNUCAMPUS pic.twitter.com/aUtKOmTxbt
— Rahul Sisodia (@Sisodia19Rahul) January 24, 2023
ಇದನ್ನೂ ಓದಿ: ಜೆಎನ್‌ಯು ವಿದ್ಯಾರ್ಥಿ ಸಂಘದಿಂದ ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ; ರದ್ದು ಮಾಡಿ ಎಂದ ವಿಶ್ವವಿದ್ಯಾಲಯ


