ಯುವಜನರಿಗೆ ಉದ್ಯೋಗಗಳನ್ನು ಕೊಡಿಸುವ ನಿಟ್ಟಿನಲ್ಲಿ QUESS ಸಂಸ್ಥೆಯು ಸ್ಫೂರ್ತಿಧಾಮ ಟ್ರಸ್ಟ್ ಸಹಯೋಗದಲ್ಲಿ ಜುಲೈ 23 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಉದ್ಯೋಗ ಮೇಳವು ಸುಮಾರು 7,000 ದಷ್ಟು ಉದ್ಯೋಗಾಕಾಂಕ್ಷಿಗಳಿಗೆ ವ್ಯಾಪಕವಾದ ವೃತ್ತಿ ಅವಕಾಶಗಳನ್ನು ಮತ್ತು ನೇರ ನೇಮಕಾತಿ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.
ಫೆಸಿಲಿಟಿ ಮ್ಯಾನೇಜ್‌ಮೆಂಟ್ ಸ್ಟಾಫ್, ಸೆಕ್ಯೂರಿಟಿ ಸ್ಟಾಫ್, ಇಂಜಿನಿಯರಿಂಗ್ ಸ್ಟಾಫ್, ಸಪೋರ್ಟ್ ಸ್ಟಾಫ್, ಫುಡ್ ಸರ್ವೀಸ್ ಸ್ಟಾಫ್, ಫೀನಾನ್ಸ್/ಹೆಚ್.ಆರ್/ಪ್ರೊಕ್ಯೂರ್‌ಮೆಂಟ್ಸ್ ಫ್ರಾಂಟ್ ಆಫೀಸ್ ಸ್ಟಾಫ್ ಉದ್ಯೋಗಗಳು ಲಭ್ಯವಿವೆ ಎನ್ನಲಾಗಿದೆ.
ವಿದ್ಯಾರ್ಹತೆ: ಪದವಿ/ಡಿಪ್ಲೊಮಾ 10 ಮತ್ತು 12 ನೇ ತರಗತಿ ಅಥವಾ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರಬೇಕು. ಮೊದಲ ಬಾರಿಗೆ ಕೆಲಸಕ್ಕೆ ಸೇರುವವರು ಮತ್ತು ಅನುಭವವುಳ್ಳವವರು ಇಬ್ಬರಿಗೂ ಅವಕಾಶಗಳಿದ್ದು, ಒಳ್ಳೆ ಸಂವಹನ ಕೌಶಲ್ಯವಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನಾಂಕ: 23ನೇ ಜುಲೈ, ಭಾನುವಾರ, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಸ್ಪೂರ್ತಿಧಾಮ, 2ನೇ ಇ ಮುಖ್ಯ ರಸ್ತೆ, BEL ಲೇಔಟ್, ಹಂತ 2, ಬೇಡರಹಳ್ಳಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9535368657 ಅಥವಾ 9900773406 ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಬಹುದು.
ಇದನ್ನೂ ಓದಿ; ದಲಿತರಿಗೆ ಭೂಮಿ ಪರಬಾರೆ ಆಗಲೇಬೇಕು, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುತ್ತೇವೆ: ಸಿಎಂ ಸಿದ್ದರಾಮಯ್ಯ



Teaching my abisione
Office boy
Supervisior