ರೈತ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರಗಳನ್ನು ತಲುಪಿ, ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ತನ್ನ ಕಾರ್ಯಕರ್ತರಿಗೆ ಮನವಿ ಮಾಡಿರುವ ಪಂಜಾಬಿನ ಶಿರೋಮಣಿ ಅಕಾಲಿ ದಳ ಪಕ್ಷವು, ಸರ್ಕಾರವು ದಮನಕಾರಿ ಮಾರ್ಗದಲ್ಲಿ ಹೋರಾಟವನ್ನು ಹತ್ತಿಕ್ಕಲು ನೋಡುತ್ತಿದೆ ಎಂದು ಆರೋಪಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಕುರಿತು ಹೇಳಿಕೆ ನೀಡಿರುವ ಅಕಾಲಿ ದಳದ ನಾಯಕ ಬಿಕ್ರಮ್‌ಸಿಂಗ್ ಮಜಿಥಿಯಾ, ‘ನನಗೆ ಗೊತ್ತು, ನೀವು ಅನೇಕರು (ಅಕಾಲಿ ದಳ ಕಾರ್ಯಕರ್ತರು) ಎರಡು ತಿಂಗಳಿಂದ ದೆಹಲಿ ಗಡಿಯ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದೀರಿ ಎಂದು. ಉತ್ತರಪ್ರದೇಶ, ಹರಿಯಾಣದ ಬಿಜೆಪಿ ಸರ್ಕಾರಗಳ ಜೊತೆ ಸೇರಿ ಕೇಂದ್ರ ಸರ್ಕಾರವು ಈ ರೈತ ಅಂದೋಲನವನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಅನ್ನದಾತನ ಧ್ವನಿ ಅಡಗಿಸುವ ಮತ್ತು 80 ಹುತಾತ್ಮರನ್ನು ಅವಮಾನಿಸುವ ಈ ಅಸಹ್ಯ ಕೃತ್ಯ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನಾವು ತೋರಿಸಿ ಕೊಡಬೇಕಿದೆ’ ಎಂದು ತಿಳಿಸಿದ್ದಾರೆ.
ಇನ್ನು ಮುಜಾಫರ್ ನಗರದಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ರೈತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ ನೀಡಲಾಗಿದ್ದು ಸಾವಿರಾರು ಜನರು ಗಾಜಿಪುರ್ ಗಡಿಗೆ ಧಾವಿಸುತ್ತಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆ: ಯುಪಿ ಸರ್ಕಾರದ ಕ್ರಮಕ್ಕೆ ಖಂಡನೆ – ಬಿಜೆಪಿ ನಾಯಕರಲ್ಲಿ ಅಸಮಾಧಾನ


