Homeಮುಖಪುಟಬಾಬರಿ ಮಸೀದಿ ಒಡೆದ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಯುಪಿ ಉಪಲೋಕಾಯುಕ್ತರಾಗಿ ನೇಮಕ

ಬಾಬರಿ ಮಸೀದಿ ಒಡೆದ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಯುಪಿ ಉಪಲೋಕಾಯುಕ್ತರಾಗಿ ನೇಮಕ

- Advertisement -

2020 ರಲ್ಲಿ ಬಾಬರಿ ಮಸೀದಿ ಒಡೆದ ಪ್ರಕರಣದ ತೀರ್ಪು ನೀಡಿದ್ದ ನಿವೃತ್ತ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ಸೋಮವಾರದಂದು ಉತ್ತರಪ್ರದೇಶಲ್ಲಿ ಉಪ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ಆಗ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುರೇಂದ್ರ ಕುಮಾರ್‌ ಯಾದವ್ ಅವರು 2020 ರ ಸೆಪ್ಟೆಂಬರ್ 30 ರಂದು ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದರು.

ಇದನ್ನೂ ಓದಿ: ಬಂಗಾಳ: ‘ಬಿಜೆಪಿ ಸೆಂಚುರಿ ಹೊಡೆದಿದೆ; ಮಮತಾ ಕ್ಲೀನ್ ಬೌಲ್ಡ್‌’ – ನರೇಂದ್ರ ಮೋದಿ

“ಸುರೇಂದ್ರ ಯಾದವ್‌ ಅವರನ್ನು ಏಪ್ರಿಲ್‌ 6 ರಂದು ರಾಜ್ಯಪಾಲರು ಮೂರನೇ ಉಪ-ಲೋಕಾಯುಕ್ತರಾಗಿ ನೇಮಕ ಮಾಡಿದರು. ಸೋಮವಾರ ಅವರಿಗೆ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಲೋಕಾಯುಕ್ತ ಸಂಜಯ್ ಮಿಶ್ರಾ ಪ್ರಮಾಣ ವಚನ ಬೋಧಿಸಿದರು” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಉತ್ತರ ಪ್ರದೇಶ ಲೋಕಾಯುಕ್ತವು, ಮೂವರು ಉಪ ಲೋಕಾಯುಕ್ತರನ್ನು ಹೊಂದಿದೆ. ಇದು ಭ್ರಷ್ಟಾಚಾರ, ಸರ್ಕಾರದ ನಿರ್ವಹಣೆ ಮತ್ತು ಸಾರ್ವಜನಿಕ ಸೇವಕರು ಅಥವಾ ಮಂತ್ರಿಗಳಿಂದ ಅಧಿಕಾರ ದುರುಪಯೋಗದ ಪ್ರಕರಣಗಳನ್ನು ತನಿಖೆ ಮಾಡುವ ಶಾಸನಬದ್ಧ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಉಪ ಲೋಕಾಯುಕ್ತರಿಗೆ ಎಂಟು ವರ್ಷಗಳ ಅಧಿಕಾರಾವಧಿ ಇದೆ.

ಇದನ್ನೂ ಓದಿ: ಭಾರತದ ಫ್ಯಾಸಿಸ್ಟ್ ಪ್ರಜಾಪ್ರಭುತ್ವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial