Homeಕರೋನಾ ತಲ್ಲಣಕೊರೊನಾ ಉಲ್ಬಣ: ಕಳೆದ ಒಂದು ದಿನದಲ್ಲಿ ಹಲವು ದಾಖಲೆ ಮಾಡಿದ ಭಾರತ!

ಕೊರೊನಾ ಉಲ್ಬಣ: ಕಳೆದ ಒಂದು ದಿನದಲ್ಲಿ ಹಲವು ದಾಖಲೆ ಮಾಡಿದ ಭಾರತ!

ಈ ನಡುವೆ 40 ಲಕ್ಷ ಜನರು ಭಾಗವಹಿಸುವ ಹರಿದ್ವಾರದ ಕುಂಭಮೇಳ ಪ್ರಾರಂಭವಾಗಿದೆ.

- Advertisement -
- Advertisement -

ಕೊರೊನಾ ಸೋಂಕು ಪ್ರಕರಣದಲ್ಲಿ ಭಾರತವು ಸೋಮವಾರದಂದು ಬ್ರೆಜಿಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ತಲುಪಿದೆ. ಜನಸಂದಣಿಯ ಚುನಾವಣಾ ರ್‍ಯಾಲಿಗಳು, ಧಾರ್ಮಿಕ ಉತ್ಸವಗಳ ಕಾರಣಕ್ಕೆ ದೇಶದಲ್ಲಿ ಸೋಂಕು ತೀವ್ರ ರೀತಿಯಲ್ಲಿ ಹರಡುತ್ತಿದೆ.

ಕೊರೊನಾ ಸೋಂಕಿನ ವಿಷಯದಲ್ಲಿ ಕಳೆದ ಒಂದು ದಿನದಲ್ಲಿ ಭಾರತವು ಹಲವು ದಾಖಲೆಯನ್ನು ಮಾಡಿದೆ.

ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣದಲ್ಲಿ ಹೊಸ ದಾಖಲೆಯನ್ನು ವರದಿ ಮಾಡಿದ್ದು, ಸೋಮವಾರ  1.68 ಲಕ್ಷ ಪ್ರಕರಣಗಳು ವರದಿಯಾಗಿದೆ.

ಇದನ್ನೂ ಓದಿ: ಕೊರೊನಾ ರಾತ್ರಿ ವೇಳೆ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದ: ಡಿ.ಕೆ. ಶಿವಕುಮಾರ್‌‌ ಆಕ್ರೋಶ

ದೇಶದಲ್ಲಿ ಇದುವರೆಗೆ 1.35 ಕೋಟಿ ಕೊರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ, ಬ್ರೆಜಿಲ್‌ನನ್ನು ಹಿಂದಿಕ್ಕಿ ಎರದನೆ ಸ್ಥಾನಕ್ಕೆ ಏರಿದೆ. ಅಲ್ಲಿ 1.34 ಕೋಟಿ ಪ್ರಕರಣದಗಳು ವರದಿಯಾಗಿದೆ. ಆದರೆ ಅಮೆರಿಕದಲ್ಲಿ 3.12 ಕೋಟಿ ಪ್ರಕರಣಗಳಿದ್ದು ಅದು ಮೊದಲನೇ ಸ್ಥಾನದಲ್ಲಿ ಮುಂದುವರೆದಿದೆ.

ಭಾರತದಲ್ಲಿ ಕೊರೊನಾ ಕಾರಣದಿಂದಾಗಿ ಒಟ್ಟು ಸಾವುಗಳು 1.7 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳು ಮೊದಲ ಬಾರಿಗೆ 12 ಲಕ್ಷವನ್ನು ಮುಟ್ಟಿದವು. ಜೊತೆಗೆ ಸತತ ಮೂರನೇ ದಿನಕ್ಕೆ ಒಂದು ಲಕ್ಷ ಹೊಸ ಸಕ್ರಿಯ ಪ್ರಕರಣಗಳು ವರದಿಯಾಗಿದೆ.

ದೇಶದ ಎಂಟು ರಾಜ್ಯಗಳಲ್ಲಿ ದೈನಂದಿನ ಸೋಂಕುಗಳಲ್ಲಿ ಸಾರ್ವಕಾಲಿಕ ಪ್ರಕರಣಗಳು ವರದಿಯಾಗಿದೆ.

ಪುಣೆಯಲ್ಲಿ ಸಕ್ರಿಯ ಪ್ರಕರಣಗಳು 1 ಲಕ್ಷ ದಾಟಿದ್ದು; ಮುಂಬೈ ಸುಮಾರು 1 ಲಕ್ಷ ಮತ್ತು ಬೆಂಗಳೂರು 50,000 ದಾಟಿದೆ.

ಚುನಾವಣೆಗಳ ನಡೆದ ಎಲ್ಲಾ ಐದು ರಾಜ್ಯಗಳಲ್ಲಿ ಕಳೆದ ಎರಡು ವಾರಗಳಲ್ಲಿ ದಾಖಲಾದ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಕೊರೊನಾ ಪ್ರಕರಣದಲ್ಲಿ 16% ದಷ್ಟು ಕುಸಿತವನ್ನು ವರದಿ ಮಾಡಿದ್ದ ಕೇರಳದಲ್ಲಿ ಈಗ 84% ಬೆಳವಣಿಗೆಯಾಗಿದೆ ಎಂದು ವರದಿಯಾಗಿದೆ.

ಈ ನಡುವೆ 40 ಲಕ್ಷ ಜನರು ಭಾಗವಹಿಸುವ ಹರಿದ್ವಾರದ ಕುಂಭಮೇಳ ಪ್ರಾರಂಭವಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಕೇಂದ್ರದ ಜಾಣ ಕುರುಡು, ನೂರಾರು ಲಸಿಕಾ ಕೇಂದ್ರಗಳಿಗೆ ಬೀಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...